Bhagyalakshmi: ಈಗ ಅಕ್ಕ -ತಂಗಿಯರ ಬದುಕು ಬೇರೆ ಬೇರೆ.. ಇವರ ಸಂಸಾರವೀಗ ಸುಲಭವಲ್ಲ

By ಎಸ್ ಸುಮಂತ್

ಅಕ್ಕಮ್ಮನ ಕನಸು, ದೊಡ್ಡತ್ತೆ - ಚಿಕ್ಕತ್ತೆಯ ಕನಸಿನಂತೆ ಲಕ್ಷ್ಮೀ ಮತ್ತು ವೈಷ್ವವ್ ಮದುವೆಯಾಗಿದೆ. ಮದುವೆಯಾಗಿ ಇಂದಿನಿಂದ ಗಂಡನ ಮನೆಯಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಹೊರಟಿದ್ದಾಳೆ. ಅಲ್ಲಿ ವೈಷ್ಣವ್‌ಗೂ ಕ್ಲಾರಿಟಿ ಇಲ್ಲ. ಲಕ್ಷ್ಮೀಗೂ ಗ್ಯಾರಂಟಿ ಇಲ್ಲ. ಮದುವೆ ಬೇಡ ಎಂದು ಹೋಗಿದ್ದ ಇಬ್ಬರ ಮನಸ್ಸು ಬದಲಾಗಿದೆ. ಇದೊಂದು ಸಂಪೂರ್ಣ ಅರೇಂಜ್ಡ್ ಮ್ಯಾರೇಜ್ ರೀತಿಯೇ ಫೀಲ್ ಮಾಡೋಣಾ ಅಂತ ಇಬ್ಬರು ಮಾತನಾಡಿಕೊಂಡು ಮದುವೆಯಾಗಿದ್ದಾರೆ.

ಲಕ್ಷ್ಮೀ ಮತ್ತು ವೈಷ್ಣವ್ ಮದುವೆಯಲ್ಲಿ ಬಂದ ವಿಘ್ನಗಳು ನೂರೆಂಟು. ಆದರೂ ಅದೆಲ್ಲವನ್ನು ದಾಟಿ ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೆಯವರ ಕನಸ್ಸನ್ನು ನನಸು ಮಾಡುವುದಕ್ಕೆ ಹೊರಟಿದ್ದಾರೆ. ಆದರೆ, ಇಲ್ಲಿ ಸ್ವತಂತ್ರ ಬದುಕು ಅಷ್ಟು ಸುಲಭವಲ್ಲ. ಮಗನಿಗೆ ಹೆಂಡತಿಗಿಂತ ನನಗೆ ಸೊಸೆ ಬೇಕು ಎಂದು ಮಗನ ಪ್ರೀತಿಯನ್ನೇ ಮುರಿದ ಕಾವೇರಿ, ಲಕ್ಷ್ಮೀಯನ್ನು ಅವಳಿಷ್ಟದಂತೆ ಬಿಡುತ್ತಾಳಾ..? ಅನ್ನೋ ಪ್ರಶ್ನೆ ವೀಕ್ಷಕರ ಮುಂದಿದೆ.

ಅಕ್ಕ-ತಂಗಿಯರ ಕಥೆ ಇಂದಿನಿಂದ ಆರಂಭ

ಅಕ್ಕ-ತಂಗಿಯರ ಕಥೆ ಇಂದಿನಿಂದ ಆರಂಭ

ಕಲರ್ಸ್ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಹೊಸ ಪ್ರಯೋಗವನ್ನೆನೋ ಮಾಡಲು ಹೊರಟಿದ್ದಾರೆ. ಭಾಗ್ಯಲಕ್ಷ್ಮೀಯಾಗಿ ಶುರುವಾದ ಧಾರಾವಾಹಿ ಈಗ ಪ್ರತಿ ದಿನ ಎರಡು ಧಾರಾವಾಹಿಯಾಗಿ ಬರಲಿದೆ. ಅದರಲ್ಲಿ ಮೊದಲು ಅಕ್ಕನ ಸಂಸಾರದ ಕಥೆಯಾದ್ರೆ, ಎರಡನೆಯದು ತಂಗಿಯ ಸಂಸಾರದ ಕಥೆಯಾಗಿರಲಿದೆ. ಇಂದಿನಿಂದ ಆ ಎರಡು ಕಥೆಗಳನ್ನು ನೋಡುವುದಕ್ಕೆ ಜನ ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.

ತವರು ಮನೆಗೆ ಹರಸಿ ನಡೆದ ಲಕ್ಷ್ಮೀ

ತವರು ಮನೆಗೆ ಹರಸಿ ನಡೆದ ಲಕ್ಷ್ಮೀ

ಲಕ್ಷ್ಮೀ ಎಲ್ಲಾ ವಿಘ್ನಗಳನ್ನು ಮೀರಿ ಮದುವೆಯಾಗಿದ್ದಾಳೆ. ಈಗ ತವರು ಮನೆಯಲ್ಲಿ ಧಾನ್ಯ ಎರಚಿ, ತವರು ಉದ್ಧಾರ ಆಗಲೆಂದು ಅರಸುವ ಸಮಯ. ಮಗಳ ಮದುವೆಯಾಗಿದೆ. ಈಗ ಹೊರಡುವ ಸಮಯ. ಈಗಲೂ ಚಿಕ್ಕಮ್ಮ ಬದಲಾಗಲೇ ಇಲ್ಲ. ಮುಖದಲ್ಲಿ ನಗುವೇ ಇಲ್ಲ. ಅದೇ ಕೋಪ, ಅದೇ ಸಿಟ್ಟು. ನನ್ನ ಮಗಳಿಗೆ ಸಿಗಬೇಕಾದ ಬದುಕು ಇದು ಎಂದೇ ಕೌಸಲ್ಯಾಳ ಹೊಟ್ಟೆ ಉರಿ. ಆದರೆ, ತವರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು, ತವರು ಹಾಲುಕ್ಕಿದ್ದಷ್ಟೇ ಸಮೃದ್ಧವಾಗಿ ಉಕ್ಕಲಿ ಎಂದು ಹರಸಿ, ಧಾನ್ಯ ಎರಚಿ, ಎಲ್ಲರ ಆಶೀರ್ವಾದ ಪಡೆದು ಹೊರಟಳು.

ತಾಳಿ ವಿಚಾರದಲ್ಲಿಯೇ ಕಾವೇರಿಗೆ ಕೋಪ

ತಾಳಿ ವಿಚಾರದಲ್ಲಿಯೇ ಕಾವೇರಿಗೆ ಕೋಪ

ಲಕ್ಷ್ಮೀ ಮದುವೆಯಾಗುವ ಹುಡುಗನ ಬಗ್ಗೆ ಸಾಕಷ್ಟು ಕನಸು ಕಂಡಿದ್ದಳು. ವೈಷ್ಣವ್ ಆ ಜಾಗ ತುಂಬುತ್ತಾನೆ ಎಂದು ಭಾವಿಸಿದ್ದಳು. ಅದೇ ಖುಷಿಯಲ್ಲಿ ಮದುವೆಗೆ ಒಪ್ಪಿದ್ದಳು. ಆದರೆ ಬಳಿಕ ಆಗಿದ್ದೆಲ್ಲವೂ ಶಾಕಿಂಗ್ ಘಟನೆಗಳೇ. ಕಾವೇರಿ ಯಾವ ರೀತಿಯ ಸೊಸೆ ಬೇಕು ಎಂದು ನಿರ್ಧರಿಸಿದ್ದಳೋ, ಆ ಸೊಸೆ ಹಸೆಮಣೆ ಮೇಲೆ ಕೂತಿದ್ದಳು. ಹಾಗೋ ಹೀಗೋ ಮಾಡಿ ಮಗನಿಗೆ ತಾನಂದುಕೊಂಡ ಸೊಸೆಯನ್ನು ತಂದು ಮದುವೆ ಮಾಡಿ ಆಯಿತು. ಆದರೆ, ಅಮ್ಮನನ್ನು ಮೀರಿ ಲಕ್ಷ್ಮೀಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗಿದೆ. ಅದು ತಾಳಿ ವಿಚಾರದಲ್ಲಿಯೇ ಪ್ರೂವ್ ಆಗಿದೆ. ಲಕ್ಷ್ಮೀಯ ಭಾವನೆಗೆ ಬೆಲೆ ಕೊಡುತ್ತಾನೆ.

ಅಕ್ಕ ತಂಗಿಯರ ಸಂಸಾರ ಸುಲಭವಲ್ಲ

ಅಕ್ಕ ತಂಗಿಯರ ಸಂಸಾರ ಸುಲಭವಲ್ಲ

ಈಗ ಅಕ್ಕ ತಂಗಿಯರ ಸಂಸಾರದ ನೌಕೆ ಶುರುವಾಗಿದೆ ಭಾಗ್ಯಾಳದ್ದು ಶುರುವಾಗಿ ಹದಿನೈದು ವರ್ಷ. ಲಕ್ಷ್ಮೀಯದ್ದು ಇಂದಿನಿಂದ ಹೊಸ ಬದುಕು. ಆದರೆ, ಭಾಗ್ಯಳ ಲೈಫ್‌ನಲ್ಲಿ ಅದಾಗಲೇ ಶ್ರೇಷ್ಠಾ ಬಂದು ಭಾಗ್ಯಾಳಿಗೆ ಸಿಗಬೇಕಾದ ಪ್ರೀತಿಯನ್ನು ಕಸಿದಿದ್ದಾಳೆ. ವೈಷ್ಣವ್ ಬೇಕೆಂದು ಕೀರ್ತಿ ಬಂದರೆ ಆ ಮೃದು ಮನಸ್ಸಿನ ಅಕ್ಕ ತಂಗಿಯರು ನಿಭಾಯಿಸುವುದು ಹೇಗೆ..?

More from Filmibeat

English summary
Colors Kannada Serial Bhagyalakshmi Written Update on March 16th episode. Here is the details about Lakshmi new journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X