Bhagyalakshmi: ವೈಷ್ಣವ್ ಮನಸ್ಸಲ್ಲಿ ಲಕ್ಷ್ಮೀ ಜಾಗ ಪಡೆದಾಯ್ತು.. ಇನ್ನೆಲ್ಲಿ ಕೀರ್ತಿಯ ಎಂಟ್ರಿ..?
ವೈಷ್ಣವ್ ಮತ್ತು ಲಕ್ಷ್ಮೀಯ ಮದುವೆ ಅಂದುಕೊಂಡಂತೆ ನಡೆದಿದೆ. ಲಡ್ಡುಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಹುಡುಗ ಬೇಕು ಅಂತ ಬಯಸುತ್ತಿದ್ದ ಭಾಗ್ಯಳ ಆಸೆ ಈಡೇರಿದೆ. ಇನ್ನು ಕಾವೇರಿಗೆ ತಕ್ಕ ಸೊಸೆಯೂ ಬಂದಾಗಿದೆ. ಲಕ್ಷ್ಮೀಯ ಮನಸ್ಸಲ್ಲಿ ಗೊಂದಲವಿದ್ದರೂ, ವೈಷ್ಣವ್ ಮನಸ್ಸಲ್ಲಿ ಪ್ರೀತಿ ಚಿಗುರುತ್ತೆ ಎಂಬ ನಂಬಿಕೆ ಹುಟ್ಟಿದೆ. ಆದರೆ ಇದರ ನಡುವೆ ಕೀರ್ತಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾಳೆ. ಆ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗೋದಕ್ಕೆ ಬೇಕಾಗಿರುವ ವೈಷ್ಣವ್ ಕೈ ತಪ್ಪಿ ಹೋಗಿದ್ದಾನೆ.
ವೈಷ್ಣವ್ ಸಾಕಷ್ಟು ಪ್ರಯತ್ನ ಪಟ್ಟ. ಈ ಕಡೆ ಲಕ್ಷ್ಮೀಗೂ ಎಲ್ಲಾ ವಿಚಾರಗಳನ್ನು ಹೇಳುವುದಕ್ಕೆ ಪ್ರಯತ್ನ ಪಟ್ಟು ಸೋತಿದ್ದಾನೆ. ಆ ಕಡೆ ಕೀರ್ತಿ ತನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೆ ಏನೇನೋ ಕಂಡೀಷನ್ ಹಾಕಿದಳು. ಈ ಕಡೆ ಅತ್ತೆ ಸುಪ್ರೀತಾ ಕೂಡ ಗೇಮ್ ಆಡಿ ಲಕ್ಷ್ಮೀ ಮೇಲೆ ಕಳಂಕ ಬರುವಂತೆ ಮಾಡಿದಳು. ಈ ಎಲ್ಲಾ ಬೆಳವಣಿಗೆ ವೈಷ್ಣವ್ ಬದಲಾಗುವಂತೆ ಮಾಡಿದೆ.

ಲಕ್ಷ್ಮೀ ಖುಷಿ ಬಯಸುತ್ತಿರುವ ವೈಷ್ಣವ್
ಲಕ್ಷ್ಮೀಯ ಗುಣ, ನಡವಳಿಕೆ, ಯಾರಿಗೂ ನೋವು ಮಾಡದ ರೀತಿ ನೀತಿಗೆ ವೈಷ್ಣವ್ ಅದ್ಯಾವಾಗಲೋ ಫಿದಾ ಆಗಿದ್ದಾನೆ. ಲಕ್ಷ್ಮೀಯನ್ನು ಅಂದಿನಿಂದಾನು ಮಹಾಲಕ್ಷ್ಮೀ ಎಂದೇ ಕರೆಯುತ್ತಾನೆ. ಈಗ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿರುವ ವೈಷ್ಣವ್, ಲಕ್ಷ್ಮೀಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾನೆ. ಫಾರ್ಮಾಲಿಟಿಯಾಗಿ ಮಾತನಾಡಬೇಕಾ, ಮೊದಲಿನ ರೀತಿಯಲ್ಲಿ ಮಾತನಾಡಬೇಕಾ ಎಂಬುದು ವೈಷ್ಣವ್‌ಗೆ ಗೊಂದಲ. ಆದರೆ ಅದಕ್ಕೆಲ್ಲಾ ಲಕ್ಷ್ಮೀಯೇ ತೆರೆ ಎಳೆದಿದ್ದಾಳೆ. ಮನಸ್ಸಿಗೆ ಹೇಗೆ ಅನ್ಸುತ್ತೆ ಅದೇ ಥರ ಇರಿ. ಸಿಂಪತಿ ಬೇಡ ಎಂದಿದ್ದಾಳೆ.

ವೈಷ್ಣವ್‌ಗೆ ಮುಖ್ಯವಾದಳು ಲಕ್ಷ್ಮೀ
ಲಕ್ಷ್ಮೀಗೆ ಹಾಕಿದ್ದ ಮೊಗ್ಗಿನ ಜಡೆಯನ್ನು ಬಿಡಿಸುವುದಕ್ಕೆ ಹರಸಾಹಸ ಪಡುತ್ತಾ ಇದ್ದಳು. ಅತ್ತೆ ಸ್ವಲ್ಪ ಸಹಾಯ ಮಾಡಿ ಹೊರ ನಡೆದಿದ್ದರು. ಈಗ ವೈಷ್ಣವ್ ಅವಳ ಕಷ್ಟ ನೋಡದೆ ನಾನೇ ಬಿಡಿಸುತ್ತೀನಿ ಎಂದಾಗ ಲಕ್ಷ್ಮೀ ಬೇಡ ಎಂದಿದ್ದಾಳೆ. ಆಗ ನಿಮ್ಮ ಫ್ರೆಂಡ್ ಅಂದುಕೊಳ್ಳಿ, ನೀವೂ ನನ್ನ ಹೆಂಡತಿ ಅಂತೆಲ್ಲ ಹೇಳಿದಾಗ ಲಕ್ಷ್ಮೀ, ಏನೇ ಬಂದರೂ ಮನಸ್ಸಾರೆ ಬರಲಿ ಎಂದು ಕೇಳಿಕೊಂಡಿದ್ದಾಳೆ. ಅದಕ್ಕೆ ವೈಷ್ಣವ್ ಕೂಡ, ಇನ್ನು ಮುಂದೆ ಏನೆ ಮಾಡುವುದಿದ್ದರೂ ಅದು ಮನಸ್ಸು ಒಪ್ಪಿಯೇ ಎಂದು ಮಾತುಕೊಟ್ಟಿದ್ದಾನೆ. ಜೊತೆಗೆ ನನ್ನ ಜೀವನದಲ್ಲಿ ಇರ್ತೀರಾ ಅಲ್ವಾ ಎಂದು ಕೇಳಿಕೊಂಡಿದ್ದಾನೆ.

ಜನರ ಫೇವರಿಟ್ ಆಯ್ತು ಈ ಜೋಡಿ
ಲಕ್ಷ್ಮೀ ವೈಷ್ಣವ್ ಮದುವೆಯಾದ ಮೇಲಂತು ಸೋಶೀಯಲ್ ಮೀಡಿಯಾದಲ್ಲಿ ಕ್ರೇಜ್ ಬಲು ಜೋರಾಗಿದೆ. ಜೋಡಿ ಸೂಪರ್ ಆಗಿದೆ. ಅದು ಅತ್ತೆ ಆದರೂ ಮಾಡಿಸಿರಲಿ, ಯಾರಾದರೂ ಮಾಡಿಸಿರಲಿ ಜೋಡಿ ಸೂಪರ್. ಕೀರ್ತಿ ವೈಷ್ಣವ್ ಮನಸ್ಸಲ್ಲಿ ನಿನಗಿಲ್ಲ ಜಾಗ ಎಂದೆಲ್ಲಾ ಕಮೆಂಟ್ ಹಾಕುವುದಕ್ಕೆ ಶುರು ಮಾಡಿದ್ದಾರೆ. ಎಲ್ಲರಿಗೂ ಈ ಮುದ್ದು ಜೋಡಿ ತುಂಬಾ ಹಿಡಿಸಿದೆ.

ಕೀರ್ತಿಗೆ ಇನ್ನಿಲ್ಲ ಜಾಗ
ಕಾವೇರಿಯ ಆಟವನ್ನು ಬಲ್ಲವರ್ಯಾರು. ಮಗನನ್ನು ಬಗ್ಗಿಸುವ ಸೊಸೆ ಬೇಡ. ಅತ್ತೆ ಹೇಳಿದಂತೆ ಮನೆಯಲ್ಲಿ ಕೇಳಿಕೊಂಡು, ಅಡುಗೆ ಮಾಡಾಕಿಕೊಂಡು ಇರುವಂತ ಹುಡುಗಿ ಬೇಕೆಂದು ಲಕ್ಷ್ಮೀಯನ್ನು ಆಯ್ಕೆ ಮಾಡಿದಳು. ಆದರೆ, ಮಧ್ಯೆದಲ್ಲಿ ಉದ್ದಂತ ಕೀರ್ತಿ ಎಂಬ ಮುಳ್ಳನ್ನು ಕೀಳುವುದು ಸುಲಭವಾಗಿರಲಿಲ್ಲ. ದೋಷ ಅದು ಇದು ಅಂತ ಸುಳ್ಳು ಹೇಳಿ ಅವಳೇ ದೂರ ನಿಲ್ಲುವಂತೆ ಮಾಡಿದಳು. ಈಗ ಮತ್ತೆ ನಾಟಕ ಶುರು ಮಾಡಿದ್ದಾಳೆ. ಆದ್ರೆ ಕಾಲ ತುಂಬಾ ಮುಂದೆ ಹೋಗಿದೆ. ವೈಷ್ಣವ್ ಮಹಾಲಕ್ಷ್ಮೀ ಸಂತೋಷಕ್ಕಾಗಿ ಪ್ರಯತ್ನ ಪಡ್ತಾ ಇದ್ದಾನೆ.


Click it and Unblock the Notifications











