Bhagyalakshmi: ಗಂಡನಿಗೆ ನೋವು ಕೊಡಲು ಬಂದ ಅತ್ತಿಗೆಗೆ ಲಕ್ಷ್ಮೀ ಕ್ಲಾಸ್.. ಸುಪ್ರಿತಾ ಶಾಕ್!
ಸುಪ್ರಿತಾ ಬುದ್ದಿ ಎಂತದ್ದು ಎಂದು ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ಅವಳ ಹಗೆತನ ಯಾವಾಗಲೂ ತನ್ನ ಅತ್ತಿಗೆ ಮೇಲೆ. ಕಾವೇರಿಯನ್ನು ಕಂಡರೆ ಆಗುವುದೇ ಇಲ್ಲ. ಕಾವೇರಿಯ ನಡವಳಿಕೆಗೆ ಆಗಾಗ ತಿರುಗೇಟು ನೀಡುತ್ತಲೇ ಇರುತ್ತಾಳೆ. ವೈಷ್ಣವ್ ಕಂಡರೆ ಸುಪ್ರಿತಾಗೆ ತುಂಬಾ ಇಷ್ಟ ಇತ್ತು. ಅವನಿಗೆ ಹೆಂಡತಿಯಾಗಿ ಕೀರ್ತಿಯೇ ಬಂದರೆ ನಮ್ಮ ಟೀಂಗೆ ಮತ್ತೊಬ್ಬರು ಸೇರಿಕೊಳ್ಳುತ್ತಾರೆ ಎಂಬ ಖುಷಿಯೂ ಇತ್ತು. ಆದರೆ, ಅದೆಲ್ಲವೂ ಫೇಲ್ ಆಗಿದೆ.
ಅಮ್ಮನದ್ದು ಅತ್ತೆಯದ್ದು ಏನೇ ಇರಲಿ. ವೈಷ್ಣವ್ ಸುಪ್ರಿತಾಳನ್ನು ತುಂಬಾ ನಂಬುತ್ತಿದ್ದ. ಆದರೆ, ಲಕ್ಷ್ಮೀ ವಿಚಾರದಲ್ಲಿ ಆಡಿದ ಹುಡುಗಾಟ ವೈಷ್ಣವ್‌ಗೆ ಇಷ್ಟವಾಗಲೇ ಇಲ್ಲ. ಸುಪ್ರಿತಾಳನ್ನು ನಂಬುವುದನ್ನೇ ಬಿಟ್ಟ. ಮನೆಗೆ ಬಂದಾಗಲೂ ಗಾಜಿನ ಬಾಕ್ಸ್ ಹೊಡೆದು ಹಾಕಿ ಇನ್ನಷ್ಟು ದ್ವೇಷ ಹುಟ್ಟುವಂತೆ ಮಾಡಿಕೊಂಡಳು. ಈಗ ವೈಷ್ಣವ್ ಫೀಲಿಂಗ್ಸ್ ಜೊತೆಗೆ ಆಟ ಆಡುವ ಮೂಲಕ ಮತ್ತಷ್ಟು ಕೋಪ ತರಿಸುತ್ತಿದ್ದಾಳೆ.

ಅತ್ತೆ ಜೊತೆ ಜಗಳಕ್ಕೆ ನಿಂತ ವೈಷ್ಣವ್
ಸುಪ್ರಿತಾಗೆ ಕಿತಾಪತಿ ಮಾಡದೆ ಇದ್ದರೆ ನೆಮ್ಮದಿಯೇ ಇರುವುದಿಲ್ಲ ಎನಿಸುತ್ತೆ. ಸುಪ್ರಿತಾ ಜೊತೆಗೆ ವಿಧಿ ಕೂಡ ಜೊತೆಯಾಗಿದ್ದಾಳೆ. ಅದಕ್ಕೆ ಮರೆಯಲು ಹೊರಟ ವೈಷ್ಣವ್‌ಗೆ ಪದೇ ಪದೆ ನೋವು ಕೊಡುವ ಆಟಗಳನ್ನೇ ಆಡುತ್ತಿದ್ದಾರೆ ಸುಪ್ರೀತಾ ಮತ್ತು ವಿಧಿ. ರೂಮನ್ನೆಲ್ಲಾ ಕೀರ್ತಿ ಇಷ್ಟಪಟ್ಟಂತೆ ಡೆಕೋರೇಟ್ ಮಾಡಿ, ವೈಷ್ಣವ್‌ನನ್ನು ಡಿಸ್ಟರ್ಬ್ ಮಾಡಿದ್ದಾಳೆ. ಕೋಪಗೊಂಡ ವೈಷ್ಣವ್ ಅತ್ತೆಯನ್ನು ಹುಡುಕಿಕೊಂಡು ಬಂದು ಜಗಳವಾಡಿದ್ದಾನೆ. ಬೇರೆಯವರಿಗೆ ನೋವು ಕೊಟ್ಟು ಮಜಾ ತಗೋಳೋದೆ ಇವರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಗಂಡನ ಪರ ನಿಂತ ಲಕ್ಷ್ಮೀ
ವೈಷ್ಣವ್ ಕೋಪಗೊಂಡಾಗ ಸುಪ್ರಿತಾ, ನೀನು ಅಷ್ಟು ಸುಲಭವಾಗಿ ಹಳೆಯದ್ದನ್ನೆಲ್ಲಾ ಮರೆತು ಬಿಡ್ತೀಯಾ ಎಂದ ತಕ್ಷಣ ಲಕ್ಷ್ಮೀ ಎಂಟ್ರಿಯಾಗಿದ್ದಾಳೆ. "ಹೌದು ಇನ್ನು ಮನಸ್ಸಲ್ಲಿ ಇದ್ದಾಳೆ. ಅದೇಗೆ ಸಾಧ್ಯ ಇಷ್ಟು ಬೇಗ ಹಳೆಯದ್ದನ್ನೆಲ್ಲಾ ಮರೆಯೋದಕ್ಕೆ. ಅದನ್ನು ಯಾರಾದರೂ ಪ್ರೀತಿ ಅಂತಾರಾ..? ಸ್ವಲ್ಪ ಸಮಯ ಬೇಕಾಗುತ್ತೆ. ಆದರೆ, ಮರಿಬೇಕು ಅಂತಿರೋ ವಿಚಾರನ ಹೀಗೆ ಕೆರೆದು ಕೆರೆದು ಗಾಯ ಮಾಡೋದು ಯಾಕೆ?" ಅಂತ ಲಕ್ಷ್ಮೀ ಸುಪ್ರೀತಾಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ.

ಗಂಡನನ್ನು ಕರೆದುಕೊಂಡು ಹೋದ ಲಕ್ಷ್ಮೀ
ಲಕ್ಷ್ಮೀ ಅಷ್ಟು ಮಾತಿಗೆ ವೈಷ್ಣವ್ ಎದುರು ಮಾತಾಡಲಿಲ್ಲ. ಅಷ್ಟೇ ಯಾಕೆ ಲಕ್ಷ್ಮೀ ಕೊಟ್ಟ ತಿರುಗೇಟಿಗೆ ಸುಪ್ರಿತಾಳಿಂದಾನೇ ಎದುರು ಮಾತು ಹೊರಡಲಿಲ್ಲ. ನೀವೂ ಏಟು ಕೊಟ್ಟಷ್ಟು ನಾನು ಇನ್ನು ಗಟ್ಟಿಯಾಗುತ್ತೇನೆ ಅಂತ ಹೇಳಿದ ವೈಷ್ಣವ್, ಲಕ್ಷ್ಮೀ ಜೊತೆಗೆ ಹೋಗುತ್ತಾನೆ. ಇದನ್ನು ಕಂಡು ಸುಪ್ರಿತಾ ಶಾಕ್ ಆಗಿದ್ದಾಳೆ. "ನಮ್ಮ ಅತ್ತಿಗೆ ಮುಗ್ಧೆ ಅಂತ ಕರೆದುಕೊಂಡು ಬಂದ ಸೊಸೆ ಇವಳೇನಾ? ಇವಳಲ್ಲಿ ಏನೋ ಒಂದು ಸ್ಪಾರ್ಕ್ ಇದೆ. ಬಂದ ಮೊದಲ ದಿನವೇ ಹೀಗೆ ಮುಂದೇಗೊ" ಎಂಬ ಚಿಂತೆಯಲ್ಲಿ ಸುಪ್ರಿತಾ ಮುಳುಗಿದ್ದಾಳೆ.

ವೈಷ್ಣವ್‌ಗೂ ಬುದ್ದಿ ಹೇಳಿದ ಲಕ್ಷ್ಮೀ
"ಸುಪ್ರಿತಾರಂತವರು ಸಾಕಷ್ಟು ಜನ ಇರ್ತಾರೆ. ಆದರೆ, ನಾವೂ ಹೇಗಿರಬೇಕು ಎಂಬುದು ನಮಗೆ ಬಿಟ್ಟಿರುತ್ತೆ. ನಮ್ಮ ಜೀವನ ನಮ್ಮ ಕೈನಲ್ಲಿರುತ್ತೆ" ಎಂದು ವೈಷ್ಣವ್‌ಗೆ ಬುದ್ದಿ ಹೇಳಿದ್ದಾಳೆ. ವೈಷ್ಣವ್ ಕೂಡ ಲಕ್ಷ್ಮೀಯ ಮಾತಿಗೆ ತಲೆಯಾಡಿಸಿ, ಸರಿ ಹೋಗುವ ಭರವಸೆ ನೀಡಿದ್ದಾನೆ. ತನ್ನ ಲವ್ ಸ್ಟೋರಿಯನ್ನು ಮತ್ತೊಮ್ಮೆ ಹೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾನೆ.


Click it and Unblock the Notifications











