Bhagyalakshmi: ಕೀರ್ತಿ ಬೇಡ ಅಂತ ಲಕ್ಷ್ಮೀ ತಂದ ಕಾವೇರಿಗೆ ಈಗ ಮೊದಲಿಗಿಂತ ಆತಂಕ ಹೆಚ್ಚಾಯ್ತು..!

By ಎಸ್ ಸುಮಂತ್

ಕಾವೇರಿಗೆ ಅಧಿಕಾರದ ದುರಾಸೆ. ಮನೆಯಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾರು ಅಧಿಕಾರ ನಡೆಸಬಾರದು. ಜೊತೆಗೆ ಮನೆಯಲ್ಲೂ ತಾನು ಹೇಳಿದಂತೆಯೇ ನಡೆಯಬೇಕು. ತಾನು ಹೇಳಿದ ಮಾತನ್ನೇ ಎಲ್ಲರೂ ಕೇಳಬೇಕು. ಮಗನಿಗೆ ಅಮ್ಮ ಅದೆಷ್ಟು ಪ್ರೀತಿ ಮಾಡ್ತಾಳೆ ಎನಿಸಬೇಕು. ಸೊಸೆ ಬಂದರೂ ಮಗನ ಜವಾಬ್ದಾರಿ ತಾನೇ ತೆಗೆದುಕೊಳ್ಳಬೇಕು ಎಂದು ಬಯಸಿದವಳು.

ಕೀರ್ತಿಯದ್ದು ಡಿಫರೆಂಟ್ ಕ್ಯಾರೆಕ್ಟರ್. ಅದರಲ್ಲೂ ವೈಷ್ಣವ್ ಮತ್ತು ಕೀರ್ತಿ ಲವ್ ಮಾಡುತ್ತಿದ್ದರು. ಇಬ್ಬರು ಒಬ್ಬರಿಗೊಬ್ಬರು ಬಿಟ್ಟು ಕೊಡುವ ಮಾತೇ ಇಲ್ಲ. ಇನ್ನು ಕಾವೇರಿ ಮಾತನ್ನ ಕೇಳುತ್ತಾರಾ..? ಜೊತೆಗೆ ಇರುವುದೇ ಅನುಮಾನ. ಹೀಗಾಗಿ ಕಾವೇರಿ ಮಾಸ್ಟರ್ ಪ್ಲ್ಯಾನ್ ಮಾಡಿ ವೈಷ್ಣವ್‌ನಿಂದ ಕೀರ್ತಿಯನ್ನು ದೂರ ಮಾಡಿದಳು. ಸಾಂಪ್ರದಾಯಿಕವಾಗಿರುವ ಹುಡುಗಿ ತಂದರೆ ನಾನು ಹೇಳಿದಂತೆ ಕುಣಿಯುತ್ತಾಳೆ ಎಂದುಕೊಂಡು ಲಕ್ಷ್ಮೀಯನ್ನು ತಂದಳು. ಈಗ ಒಂದೇ ದಿನಕ್ಕೆ ಲಕ್ಷ್ಮೀಯ ವರ್ತನೆಗೆ ಆತಂಕಗೊಂಡಿದ್ದಾಳೆ ಕಾವೇರಿ.

Bhagyalakshmi serial Written Update on March 23rd episode

ಲಕ್ಷ್ಮೀಗೆ ಫಿದಾ ಆದ ಅಜ್ಜಮ್ಮ..!

ಕೀರ್ತಿ ಮತ್ತು ವೈಷ್ಣವ್ ಒಬ್ಬರಿಗೊಬ್ಬರು ಬಿಟ್ಟಿರಲು ಆಗದಷ್ಟು ಹೆಚ್ಚಾಗಿ ಪ್ರೀತಿಸ್ತಾ ಇದ್ರು. ಕಾವೇರಿ ನಾಟಕಕ್ಕೆ ಬಲಿಯಾದ ಕೀರ್ತಿ, ವೈಷ್ಣವ್‌ನನ್ನು ದೂರ ಮಾಡಿಕೊಂಡಳು. ಸುಪ್ರಿತಾ ಮಾಡಿದ ಕೆಲಸಕ್ಕೆ ಡಿಸ್ಟರ್ಬ್ ಆಗಿ ಹೊರಗೆ ಹೋಗಿದ್ದ ವೈಷ್ಣವ್ ಬಳಿ ಬಂದ ಕೀರ್ತಿ, ನಾನು ನಿನಗಾಗಿ ಕಾಯ್ತಾ ಇದ್ದೀನಿ. ನಾನೇ ಈ ಮದುವೆ ಆಗುವಂತೆ ಮಾಡಿದ್ದು ಎಂಬೆಲ್ಲಾ ರೀತಿ ವಿಚಿತ್ರವಾಗಿ ಆಡಿ, ವೈಷ್ಣವ್ ಮನಸ್ಸನ್ನು ಗೊಂದಲ ಮಾಡಿಟ್ಟಿದ್ದಾಳೆ.

ಲಕ್ಷ್ಮೀಯ ನಡವಳಿಕೆ ಎಲ್ಲರಿಗೂ ಇಷ್ಟವಾಗುತ್ತೆ. ಯಾರಿಗೂ ಕೆಡುಕು ಬಯಸಿದವಳಲ್ಲ. ಹಾಗೇ ಸ್ವಾಭಿಮಾನಕ್ಕೆ ಅಡ್ಡಿಯಾದರೆ ಸುಮ್ಮನೆ ಇರುವವಳು ಅಲ್ಲ. ಯಾರ ತಂಟೆಗೂ ಹೋಗಲ್ಲ. ತನ್ನ ತಂಟೆಗೆ ಬಂದರೆ, ಕ್ಲಾಸ್ ತೆಗೆದುಕೊಳ್ಳದೆ ಬಿಡುವವಳೂ ಅಲ್ಲ. ಈಗ ಮದುವೆಯಾಗಿ ಅತ್ತೆಯ ಮನೆಗೆ ಬಂದಿದ್ದಾಳೆ. ತವರು ಮನೆಯಲ್ಲಂತು ಚಿಕ್ಕಮ್ಮನ ಕಾಟಕ್ಕೆ ಬೆಳಗ್ಗೆ ಬೇಗ ಎದ್ದು, ಮನೆ ಕೆಲಸವನ್ನೆಲ್ಲಾ ಮಾಡುತ್ತಿದ್ದಳು. ಅತ್ತೆಯ ಮನೆಯಲ್ಲಿ ತಡವಾಗಿ ಎದ್ದರು ನಡೆಯುತ್ತೆ. ಗಂಡನೇ ಲೇಟ್ ಆಗಿ ಏಳುವಂತೆ ಹೇಳಿದರೂ ಕೇಳದ ಲಕ್ಷ್ಮೀ, ಬೆಳಗಿನ ಜಾವದಲ್ಲಿಯೇ ಎದ್ದು, ದೇವರ ಪೂಜೆ ಮಾಡಿ, ಎಲ್ಲರಿಂದ ಶಬ್ಬಾಶ್ ಗಿರಿ ತೆಗೆದುಕೊಂಡಿದ್ದಾಳೆ.

Bhagyalakshmi serial Written Update on March 23rd episode

ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಕಾವೇರಿ

ಪೂಜೆ ಮಾಡಿದ್ದಕ್ಕೇನೋ ಕಾವೇರಿ ಖುಷಿ ಪಟ್ಟಿದ್ದಾಳೆ. ಬಳಿಕ ಸೊಸೆಗೆ ನಗು ನಗುತ್ತಲೇ ಇಷ್ಟು ಬೇಗ ಯಾಕೆ ಏಳೋದಕ್ಕೆ ಹೋದೆ ಲಕ್ಷ್ಮೀ ಅಂತ ಪ್ರಶ್ನಿಸಿದ್ದಾಳೆ. ಅಲ್ಲಿಯೇ ಬಂದ ಶಾಂತಾಳಿಗೆ ಬೇಗ ಬೇಗ ತಿಂಡಿಗೆ ರೆಡಿ ಮಾಡು ಎಂದಿದ್ದಾಳೆ. ಆಗ ಶಾಂತ, ಲಕ್ಷ್ಮೀ ಅಕ್ಕನೇ ತಿಂಡಿ ಕೂಡ ಮಾಡಿ ಮುಗಿಸಿದ್ದಾರೆ ಎಂದ ಕೂಡಲೇ ಕಾವೇರಿಗೆ ಸ್ವಲ್ಪ ಮುಜುಗರವಾಗಿದೆ. ತನ್ನ ಸ್ಥಾನದ ಆತಂಕವಾಗಿದೆ.

ಲಕ್ಷ್ಮೀ ಇಷ್ಟೆಲ್ಲಾ ಮುತುವರ್ಜಿ ವಹಿಸಿಕೊಂಡು ಮನೆ ಕೆಲಸವನ್ನೆಲ್ಲಾ ಮಾಡುತ್ತಿರುವುದು ಅಜ್ಜಿಗೆ ಖುಷಿ ಕೊಟ್ಟಿದೆ. ಆದರೆ, ಕಾವೇರಿಗೆ ಆತಂಕ ಮೂಡಿಸಿದೆ. ಅದಕ್ಕಾಗಿಯೇ ಪುಟ್ಟನಿಗೆ ಯಾವುದ್ಯಾವುದೋ ಇಷ್ವಾಗಲ್ಲ ಅಂತ ನೆಪ ತೆಗೆದಿದ್ದಾಳೆ‌. ಟೀ ನಾನೇ ಮಾಡಿಕೊಡುತ್ತೇನೆ ಎಂದಾಗ ಕಾವೇರಿ ತಡೆದಿದ್ದಾಳೆ‌. ಪುಟ್ಟನಿಗೆ ನಾನು ಮಾಡಿದ ಟೀ ಅಷ್ಟೇ ಇಷ್ಟ ಆಗೋದು ಎಂದಿದ್ದಾಳೆ. ಅಷ್ಟರಲ್ಲಿ ಅಜ್ಜಿ ಕಾವೇರಿಯನ್ನು ಎಳೆದೊಯ್ದು, ಲಕ್ಷ್ಮೀಗೆ ಟೀ ಮಾಡಲು ಹೇಳಿದ್ದಾರೆ. ಇದು ಕಾವೇರಿಗೆ ತನ್ನ ಅಧಿಕಾರವನ್ನು ಲಕ್ಷ್ಮೀ ತೆಗೆದುಕೊಳ್ಳುವ ಮುನ್ಸೂಚನೆ ತೋರಿಸಿದೆ.

More from Filmibeat

English summary
Colors Kannada Serial Bhagyalakshmi serial Written Update on March 23rd episode. Here is the details about Kaveri in tension abou Lakshmi behaviour.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X