Bhagyalakshmi: ಕಡೆಗೂ ಸಿಡಿದೆದ್ದ ಕಾವೇರಿ.. ತಪ್ಪೇನು ಅಂತ ತಿಳಿಯದೆ ಶಾಕ್ ಆದ ಲಕ್ಷ್ಮೀ..!
ಮಗನ ಬಗ್ಗೆ ಕಾವೇರಿ ಸಿಕ್ಕಾಪಟ್ಟೆ ಪೊಸೆಸಿವ್ ಹೊಂದಿದ್ದಾಳೆ. ಅದಕ್ಕೆ ಮಗ ಕೈಮೀರಿ ಹೋಗಬಾರದು ಎಂಬ ಕಾರಣಕ್ಕೇನೆ ಕೀರ್ತಿಯನ್ನು ರಿಜೆಕ್ಟ್ ಮಾಡಿ, ಲಕ್ಷ್ಮೀಯನ್ನು ಮದುವೆ ಮಾಡಿಕೊಂಡು ಬಂದಳು. ಆದರೆ ಲಕ್ಷ್ಮೀಗೆ ಇಲ್ಲಿಯದ್ದು ಏನು ತಿಳಿಯುತ್ತಿಲ್ಲ. ಕಾವೇರಿಗೆ ಮಗನ ಉಸಾಬರಿ ನೋಡಿಕೊಳ್ಳುವುದೇ ಕಾಯಕ, ಅದಕ್ಕೆ ಯಾರು ತಲೆ ಹಾಕಬಾರದು ಎಂಬ ಕಾರಣ ಪಾಪ ಲಕ್ಷ್ಮೀಗೆ ತಿಳಿಯುತ್ತಿಲ್ಲ. ಅದೇ ಕಾರಣಕ್ಕೆ ತಾನೇ ಎಲ್ಲಾ ಕೆಲಸ ಮಾಡಲು ಹೋಗಿ ಬೈಸಿಕೊಳ್ಳುತ್ತಿದ್ದಾಳೆ.
ಲಕ್ಷ್ಮೀಯದ್ದು ಇಲ್ಲಿ ಯಾವ ತಪ್ಪು ಇಲ್ಲ. ತವರು ಮನೆಯಲ್ಲಿ ಎಲ್ಲಾ ಕೆಲಸವನ್ನು ಅವಳೇ ಮಾಡುತ್ತಿದ್ದ ಕಾರಣಕ್ಕೆ ಇಲ್ಲಿಯೂ ಎಲ್ಲಾ ಕೆಲಸ ಮಾಡಲು ರೂಡಿ ಮಾಡಿಕೊಳ್ಳುತ್ತಿದ್ದಾಳೆ. ಬೇಗ ಏಳುತ್ತಾಳೆ. ಮನೆ ಕೆಲಸವನ್ನೆಲ್ಲಾ ಮಾಡುತ್ತಾಳೆ. ವೈಷ್ಣವ್‌ಗೆ ಬೇಕಾದದ್ದನ್ನೆಲ್ಲಾ ನೋಡಿಕೊಳ್ಳುತ್ತಾಳೆ. ಇದು ಕಾವೇರಿಯಿಂದ ಸಹಿಸಲು ಆಗುತ್ತಿಲ್ಲ.

ಲಕ್ಷ್ಮೀಯ ವಿರುದ್ಧ ಸಿಡಿದೆದ್ದ ಕಾವೇರಿ
ಕಾವೇರಿಗೆ ತಲೆ ಸುತ್ತಿ ಬಿದ್ದಿದ್ದರಿಂದ ಅವರನ್ನು ಮತ್ತೆ ಏಳಿಸುವುದು, ಆಯಾಸ ಮಾಡುವುದು ಲಕ್ಷ್ಮೀಗೆ ಇಷ್ಟವಿರಲಿಲ್ಲ. ಅದೇ ಕಾರಣಕ್ಕೇನೆ ವೈಷ್ಣವ್‌ಗೆ ಏನೆಲ್ಲಾ ಬೇಕು, ಅದನ್ನೆಲ್ಲಾ ಕೇಳಿ ಟಿಫನ್ ಪ್ಯಾಕ್ ಮಾಡಿ ಕಳುಹಿಸಿದ್ದಳು. ಜೊತೆಗೆ ಅತ್ತೆ ವಿಶ್ರಾಂತಿ ಪಡೆಯಲಿ ಎಂದುಕೊಂಡ ಲಕ್ಷ್ಮೀ, ವೈಷ್ಣವ್‌ಗೆ ಟಾಟಾ.. ಬೈ ಬೈ ಹೇಳಿ ಕಳುಹಿಸಿದ್ದಳು. ಲಕ್ಷ್ಮೀಯ ಮನಸ್ಸಲ್ಲಿ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಆದರೆ ಇದು ಕಾವೇರಿಯ ಕೆಂಗಣ್ಣಿಗೆ ಗುರಿಯಾಗಿ ಬಿಡ್ತು.
ಲಕ್ಷ್ಮೀ ಮನೆಗೆ ಬಂದಾಗಿನಿಂದ ಒಂದೊಂದೆ ಕೆಲಸಗಳನ್ನು ಹುಡಕಿಕೊಂಡು ಮಾಡುತ್ತಿದ್ದಾಳೆ. ಅತ್ತೆಗೆ ಈ ಕೆಲಸ ಮಾಡಬೇಕಾ..? ಬೇಡವಾ ಎಂಬ ಯಾವ ಸಲಹೆಯನ್ನು ಕೇಳುತ್ತಿಲ್ಲ. ಇದು ಕೂಡ ಒಂದು ಕಡೆ ಕಾವೇರಿಯ ಕೋಪಕ್ಕೆ ಕಾರಣವಾಗಿದೆ. ಮನೆಯ ವಿಚಾರವನ್ನು ಎಷ್ಟು ಬೇಕಾದರೂ ಸಹಿಸುವ ಕಾವೇರಿ, ಮಗನ ವಿಚಾರದಲ್ಲಿ ಎಳ್ಳಷ್ಟು ಸಹಿಸುವುದಿಲ್ಲ. ವೈಷ್ಣವ್‌ಗೆ ಏನು ಬೇಕು..? ಏನು ಬೇಡ ಎಲ್ಲದನ್ನು ನಾನೇ ನೋಡಿಕೊಳ್ಳಬೇಕು ಎಂಬ ಪೊಸೆಸಿವ್‌ನೆಸ್ ಕಾವೇರಿಯದ್ದು. ಹೀಗಾಗಿ ಲಕ್ಷ್ಮೀ ಮಾಡಿದ ಕೆಲಸಕ್ಕೆ ಉರಿದು ಬಿದ್ದಿದ್ದಾಳೆ.

ಸುಪ್ರಿತಾಳಿಂದಾನೇ ಅತ್ತೆ - ಸೊಸೆ ನಡುವೆ ಜಗಳ..!
ಅಡುಗೆ ಮನೆಯಲ್ಲಿದ್ದ ಲಕ್ಷ್ಮೀಯನ್ನು ಬಂದು ವೈಷ್ಣವ್ ಎಲ್ಲಿ ಎಂದು ಕೇಳಿದಾಗ, ಹೋದ್ರು ಎಂದು ಹೇಳಿದ್ದಾಳೆ. ನನಗೆ ಹೇಳದೆಯಾ ಹೋಗಿದ್ದಾನೆ ಎಂದು ಕೋಪಗೊಂಡ ಕಾವೇರಿ, ಹಣ್ಣಿಗೆ ಪೆಪ್ಪರ್, ಸಾಲ್ಟ್ ಹಾಕಿದ್ದೀಯಾ ಎಂದು ಕೇಳಿದ್ದಾಳೆ. ಅದಕ್ಕೆ ಇಲ್ಲ ಎಂಬ ಲಕ್ಷ್ಮೀ ಉತ್ತರ ಕೇಳಿದ ಕೂಡಲೇ, ಪಟ ಪಟ ಅಂತ ಅಲ್ಲಿಯೇ ಪಕ್ಕದಲ್ಲಿ ಇದ್ದಂತ ಹಣ್ಣುಗಳನ್ನು ಕಟ್ ಮಾಡಿ, ಮತ್ತೊಂದು ಬಾಕ್ಸ್ ಗೆ ಹಾಕಿ, ಬೇಕಾದ ಸಾಲ್ಟ್, ಪೆಪ್ಪರ್ ಹಾಕಿ ಮಗನಿಗೆ ಪಾರ್ಸಲ್ ಕಳುಹಿಸಿದ್ದಾಳೆ.
ಸುಪ್ರೀತಾಳಿಗೆ ಮೊದಲೇ ಲಕ್ಷ್ಮೀಯನ್ನು ಕಂಡರೆ ಇಷ್ಟವಿಲ್ಲ. ಹೀಗಾಗಿ ಒಂದಲ್ಲ ಒಂದು ಕಿತಾಪತಿ ಮಾಡುತ್ತಲೇ ಇರುತ್ತಾಳೆ. ಅದಕ್ಕೆ ತಕ್ಕಂತೆ ಈಗ ವೈಷ್ಣವ್ ಗೆ ಕೋಪ ಬರುವಂತೆ ಮಾಡಿದ್ದಾಳೆ. ಅಮ್ಮನಿಲ್ಲದೆ ಅವನಿಗೆ ಯಾವ ಕೆಲಸವೂ ಗೊತ್ತಾಗಲ್ಲ ಅಂತ ಹೇಳಿ ಹೇಳಿ ಕೋಪ ಬರುವಂತೆ ಮಾಡಿದ್ದಾಳೆ. ಅದೇ ಕಾರಣಕ್ಕೆ ಈಗ ವೈಷ್ಣವ್ ಅಮ್ಮನಿಗೆ ಹೇಳದೆ ಬಾಕ್ಸ್ ರೆಡಿ ಮಾಡಿಸಿಕೊಂಡು, ಅಮ್ಮನಿಗೆ ಹೇಳದೆಯೇ ನಡೆದಿದ್ದಾನೆ. ಇದು ಸಹಜವಾಗಿಯೇ ಲಕ್ಷ್ಮೀ ಮತ್ತು ಕಾವೇರಿ ನಡುವೆ ಜಗಳಕ್ಕೆ ಕಾರಣವಾಗಿದೆ. ಸುಪ್ರೀತಾ ಪ್ಲ್ಯಾನ್ ವರ್ಕೌಟ್ ಆಗಿದೆ.


Click it and Unblock the Notifications











