Bhagyalakshmi: ಶುರುವಾಯ್ತು ಸಂಸಾರದಲ್ಲಿ ತಾಪತ್ರಯ: ಭಾಗ್ಯಾಗೆ ಶ್ರೇಷ್ಠಾ.. ಲಕ್ಷ್ಮೀಗೆ ಕೀರ್ತಿ ಕಾಟ!
ಅಕ್ಕ ಪಕ್ಕದಲ್ಲಿ ಅಕ್ಕತಂಗಿಯರ ಕಥೆ ಶುರುವಾಗಿದೆ. ಲಕ್ಷ್ಮೀಗೆ ಮದುವೆ ಮಾಡಿ ಭಾಗ್ಯಾ ದೊಡ್ಡ ಜವಾಬ್ದಾರಿಯನ್ನು ಕಳೆದುಕೊಂಡಿದ್ದಾಳೆ. ಆದರೆ ವೈಷ್ಣವ್ ಬೇಡವೇ ಬೇಡ ಎಂದು ಬಿಟ್ಟು ಹೋಗಿದ್ದ ಕೀರ್ತಿ, ಲಕ್ಷ್ಮೀಯ ಸಂಸಾರಕ್ಕೆ ಬಂದಿದ್ದಾಳೆ. ಅತ್ತ ಭಾಗ್ಯಳ ಗಮನಕ್ಕೆ ಬಾರದಂತೆ ಶ್ರೇಷ್ಠಾ ಕೂಡ ಸ್ಕೆಚ್ ಹಾಕ್ತಾ ಇದ್ದಾಳೆ. ಅಕ್ಕ ತಂಗಿಯರು ಈಗ ಸ್ಟ್ರಾಂಗ್ ಆಗಲೇಬೇಕಾಗಿದೆ.
ಲಕ್ಷ್ಮೀಯ ಕನಸುಗಳು ಸಾವಿರಾರಿದೆ. ಸದಾ ಮನೆ ಕೆಲಸ ಮಾಡಿಕೊಂಡು, ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ ಹುಡುಗಿಗೆ ಈಗ ಕೈ ಕಟ್ಟಿ ಹಾಕಿದ ರೀತಿ ಆಗಿದೆ. ಗಂಡನ ಮನೆಯಲ್ಲಿ ಕೆಲಸಕ್ಕೇನೆ ಜನರಿದ್ದಾರೆ. ಲಕ್ಷ್ಮೀಗೇನೆ ಕೆಲಸ ಇರಲ್ಲ. ಆದರೂ ಹಾಗೊಂದು, ಈಗೊಂದು ಕೆಲಸ ಹುಡುಕಿಕೊಂಡು ಮಾಡುತ್ತಾ ಇರುತ್ತಾಳೆ. ಜೊತೆಗೆ ಅತ್ತೆಯ ಕೈಯಿಂದ ಆಗಾಗ ಬೈಸಿಕೊಳ್ಳುತ್ತಾ ಹೊಸ ಜೀವನ ಸಾಗಿಸುತ್ತಾ ಇದ್ದಾಳೆ.

ಬಟ್ಟೆ ಆಯ್ತು.. ಈಗ ಫೋನ್ ಬಿಸಾಡಿದ ವೈಷ್ಣವ್
ವೈಷ್ಣವ್ ಈಗಲೂ ಚಿಕ್ಕ ಹುಡುಗನೇ. ಆತನ ಕೆಲಸಗಳ ವಿಚಾರದಲ್ಲಿ ಆತನಿಗೆ ಜವಾಬ್ದಾರಿ ಇಲ್ಲ. ಹಾಗಂತ ತಲೆಗೆ ತುಂಬಿ ತುಂಬಿ ಕಾವೇರಿ ತನ್ನ ಮಗನನ್ನು ಬೆಳೆಸಿಬಿಟ್ಟಿದ್ದಾಳೆ. ಅದನ್ನೇ ತಲೆಗೆ ತುಂಬಿಕೊಂಡ ವೈಷ್ಣವ್ ಈಗಲೂ ಅದೇ ರೀತಿ ನಡೆದುಕೊಳ್ಳುತ್ತಾನೆ. ಅದಕ್ಕೆ ಬಟ್ಟೆಗಳನ್ನೆಲ್ಲಾ ನೆಲ ಎನ್ನದೇ, ಮಂಚ ಎನ್ನದೇ ಎಲ್ಲೆಂದರಲ್ಲಿ ಬಿಸಾಡುತ್ತಾನೆ. ಈಗ ಕೋಪ ಬಂತು ಅಂತ ಮೊಬೈಲ್ ಬಿಸಾಡಲು ಹೋಗಿದ್ದ. ಅಷ್ಟರಲ್ಲಿ ಅದು ಲಕ್ಷ್ಮೀ ಕೈಗೆ ಸಿಕ್ತು.
ವೈಷ್ಣವ್, ಕೀರ್ತಿಯನ್ನು ಮರೆಯುವ ಹಾದಿಯಲ್ಲಿದ್ದಾನೆ. ಆಗಾಗ ಅವಳು ನೆನಪಾದರೂ ಆ ನೆನಪುಗಳಿಂದ ದೂರ ಉಳಿಯುವ ಪ್ರಯತ್ನ ಮಾಡುತ್ತಾನೆ. ಆದರೆ ವೈಷ್ಣವ್‌ನನ್ನು ಕಾಡುತ್ತಿರುವ ಕೀರ್ತಿಯ ನೆನಪುಗಳು, ಈಗ ಕಾವೇರಿ ಕಡೆಗೆ ತಿರುಗಿದೆ. ಅದು ನೆನಪುಗಳಲ್ಲ ರಿಯಲ್ ಆಗಿ. ಕೀರ್ತಿ ಡಿವೋರ್ಸ್ ಪೇಪರ್ ಹಿಡಿದು ಕಾವೇರಿ ಬಳಿ ಬಂದಿದ್ದಾಳೆ. ಆಗಲೂ ಸಮಾಧಾನ ಮಾಡಿ ಕಳುಹಿಸಿದ ಕಾವೇರಿ, ಹರಿದು ಬಿಸಾಕಿದ್ದಾಳೆ. ಇದಕ್ಕಾ ನಾನು ಕಷ್ಟಪಟ್ಟಿದ್ದಿ ಎಂದು ವ್ಯಂಗ್ಯವಾಡಿದ್ದಾಳೆ. ಅಷ್ಟರಲ್ಲಿ ಬಂದು ಹರಿದ ಪೇಪರ್ ನೋಡಿದ ಲಕ್ಷ್ಮೀಗೂ ಸಮಾಧಾನ ಮಾಡಿ ಕಳುಹಿಸಿದ್ದಾಳೆ.

ಭಾಗ್ಯಾಳ ಬಾಳಲ್ಲಿ ಮತ್ತೆ ಬಂದ್ಲು ಶ್ರೇಷ್ಠಾ
ತಾಂಡವ್‌ಗೆ ಸದಾ ಭಾಗ್ಯಾಳನ್ನು ನಿಂದಿಸುವುದೇ ಕೆಲಸ. ಸೀರೆಯುಟ್ಟು, ಮನೆಯ ಜವಾಬ್ದಾರಿಯನ್ನೆಲ್ಲಾ ತೆಗೆದುಕೊಂಡರು ತಾಂಡವ್‌ಗೆ ಅದೆಲ್ಲಾ ಇಷ್ಟವಿಲ್ಲ. ಮಾಡರ್ನ್ ಆಗಿ ಇರುವ ಶ್ರೇಷ್ಠಾಳ ಮುಂದೆ ಭಾಗ್ಯಾ ಎಂದರೆ ಅಸಡ್ಡೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಶ್ರೇಷ್ಠಾ, ಈಗ ಪದೇ ಪದೇ ಭಾಗ್ಯಾಳ ಮನೆಗೆ ಬರ್ತಿದ್ದಾಳೆ. ತಾಂಡವ್ ಜೀವನಕ್ಕೆ ಎಂಟ್ರಿಯಾಗಲೂ ನೋಡುತ್ತಿದ್ದಾಳೆ.
ತಾಂಡವ್ ಒಮ್ಮೆ ತಿಳಿಸಿ ಹೇಳಿದ್ದ. ನಂದು ನಿಂದು ಬರೀ ಪ್ರೀತಿ ಪ್ರೇಮ ಅಷ್ಟೇ. ಮದುವೆ ಎಂಬುದು ಸಾಧ್ಯವಿಲ್ಲ ಎಂದು ಹೇಳಿದ್ದ. ಅದನ್ನೇ ಹಠವಾಗಿ ತೆಗೆದುಕೊಂಡಿರುವ ಶ್ರೇಷ್ಠಾ, ಈಗ ತಾಂಡವ್‌ನನ್ನು ಆಟವಾಡಿಸಲು ಶುರು ಮಾಡಿದ್ದಾಳೆ. ಮದುವೆಯಾಗುವ ಹುನ್ನಾರ ರೂಪಿಸಿದ್ದಾಳೆ. ಈಗ ಅದರ ಭಾಗವಾಗಿಯೇ ಮಾರುಕಟ್ಟೆ, ಅಲ್ಲಿ ಇಲ್ಲಿ ಅಂತ ತಾಂಡವ್ ಜೊತೆಗೇನೆ ಓಡಾಡುತ್ತಿದ್ದಾಳೆ. ಮನೆಗೂ ಬಂದು ಭಾಗ್ಯಾಳಿಗೆ ತಾಂಡವ್ ತಾಳಿ ಕಟ್ಟಿದಾಗ ಅಕ್ಷತೆ ಹಾಕಿ ಉರಿದುಕೊಂಡಿದ್ದಾಳೆ. ಅದೇ ಸಮಯಕ್ಕೇನೆ ಭಾಗ್ಯಾಳ ಕೈ ರುಚಿ ತಿಂದು ನಿನ್ನ ಗಂಡನನ್ನ ನಾನು ಎಸ್ಕೇಪ್ ಮಾಡಿಕೊಂಡು ಹೋಗ್ತೇನೆ ಅಂತ ಯೋಚನೆ ಮಾಡ್ತಾ ಇದ್ದಾಳೆ.


Click it and Unblock the Notifications











