Bhagyalakshmi: ಕಾವೇರಿಗೆ ಇನ್ನು ಕೆಲಸವಿಲ್ಲ.. ಸೊಸೆ ಕೆಲಸ ಮಾಡ್ತಾಳೆ.. ಮಗ ಬುದ್ದಿ ಹೇಳ್ತಾನೆ!

By ಎಸ್ ಸುಮಂತ್

ಕಾವೇರಿ ಬಯಸಿ ಬಯಸಿ ತಂದ ಸೊಸೆಯಿಂದ ಈಗ ಕಿರಿಕಿರಿ ಅನುಭವಿಸುತ್ತಿದ್ದಾಳೆ. ಮಗನ ಎಲ್ಲಾ ಜವಾಬ್ದಾರಿಯನ್ನು ತಾನೇ ನಿಭಾಯಿಸಬೇಕು ಎಂಬ ಕಾವೇರಿಯ ಕನಸಿಗೆ ಲಕ್ಷ್ಮೀ ಕೊಳ್ಳಿ ಇಡುತ್ತಿದ್ದಾಳೆ. ಕೆಟ್ಟ ಅತ್ತೆ ಎಂದು ಪ್ರೂವ್ ಮಾಡಿಕೊಳ್ಳುವ ಹಾಗೂ ಇಲ್ಲ. ವೈಷ್ಣವ್ ಮುಂದೆ ಜೋರು ಮಾಡುವಂತೆಯೂ ಇಲ್ಲ. ಒಟ್ನಲ್ಲಿ ಕಾವೇರಿ ತನ್ನ ಸಿಟ್ಟನ್ನು ತಾನೇ ನುಂಗಿಕೊಳ್ಳುತ್ತಿದ್ದಾಳೆ.

ಲಕ್ಷ್ಮೀ ತಾನೇ ಆರಿಸಿದ ಸೊಸೆ. ಆದರೆ, ಏನು ಮಾಡುವುದು ಯಾವ ಕಾರಣಕ್ಕೆ ವೈಷ್ಣವ್‌ನಿಂದ ಕೀರ್ತಿಯನ್ನು ದೂರ ಮಾಡಿದಳೋ ಈಗ ಲಕ್ಷ್ಮೀಯಿಂದ ಅದೇ ನಡೆಯುತ್ತಿದೆ. ತನ್ನ ಮನದೊಳಗೆ ಕೊತ ಕೊತ ಅಂತ ಕಾವೇರಿ ಕುದಿಯಲು ಶುರು ಮಾಡಿದ್ದಾಳೆ. ಮುಂದೆ ಇನ್ಯಾವ ರೀತಿಯಲ್ಲಿ ಲಕ್ಷ್ಮೀಗೆ ಇದು ಸಮಸ್ಯೆಯಾಗಿ ಬದಲಾಗುತ್ತೋ ತಿಳಿಯದು. ಮೊದಲೇ ಸುಪ್ರೀತಾ, ಕುಸುಮಾ ಬಳಿ ಹೇಳಿ ಕಳುಹಿಸಿದ್ದಾಳೆ‌ ಲಕ್ಷ್ಮೀಗೆ ಹೆಚ್ಚು ತೊಂದರೆಯಾಗುವುದು ತನ್ನಿಂದ ಅಲ್ಲ ನಿನ್ನ ತಂಗಿಯಿಂದ ಅಂತ.

Bhagyalakshmi serial Written Update on March 29th episode

ಕೀರ್ತಿ ಹೆಸರು ಕೇಳಲು ಬಯಸದ ವೈಷ್ಣವ್

ಮಗನ ಜಾತಕದಲ್ಲಿ ದೋಷ ಇದೆ. ಅವನಿಗೆ ಮೊದಲು ಒಂದು ಮದುವೆ ಮಾಡಬೇಕು ಎಂದು ನೆಪ ಹೊಡೆದು ವೈಷ್ಣವ್‌ನಿಂದ ಕೀರ್ತಿಯೇ ದೂರಾಗುವಂತೆ ಮಾಡಿದ್ದು ಕಾವೇರಿಯ ಚಾಲಕಿತನ. ಈಗ ಕೀರ್ತಿ ಅದನ್ನೇ ನಂಬಿಕೊಂಡು, ಡಿವೋರ್ಸ್ ಪೇಪರ್ ಕೈನಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾಳೆ. ಆದರೆ ಇದರಿಂದಾನೂ ಅವಳನ್ನು ದೂರವಿಡಲು ಕಾವೇರಿಯ ಬತ್ತಳಿಕೆಯಲ್ಲಿ ಬೇಜಾನ್ ಬಾಣಗಳಿವೆ. ಈಗ ಅದನ್ನು ಪ್ರಯೋಗಿಸಿದ್ದಾಳೆ. ಆದರೆ, ವೈಷ್ಣವ್ ಖಡಕ್ಕಾಗಿಯೇ ಉತ್ತರಿಸಿದ್ದಾನೆ. ಅವಳ ಹೆಸರು ನನ್ನ ಮುಂದೆ ಚರ್ಚೆಯಾಗುವುದು ಬೇಡ ಎಂದಿದ್ದಾನೆ.

ಕಾವೇರಿಗೆ ಮೊದಲು ತನ್ನ ಮಗನ ಮನಸ್ಸಲ್ಲಿ ಏನಿದೆ ಎಂಬುದು ಬೇಕಿತ್ತು. ಕೀರ್ತಿ ಬಗ್ಗೆ ಎಲ್ಲಿಯೂ ಚರ್ಚೆ ಬೇಡ. ಅವಳ ನಾಟಕಕ್ಕೆ ನೀನು ಕರಗಬೇಡ ಎಂದು ಅಮ್ಮನಿಗೆ ಬುದ್ದಿ ಹೇಳಿ ಅಲ್ಲಿಂದ ಹೊರಟಿದ್ದಾನೆ. ಇದು ಕಾವೇರಿಗೆ ಇನ್ನಿಲ್ಲದ ಮನಶಾಂತಿಯನ್ನು ನೀಡಿದೆ‌. ನಾನು ಬಯಸಿದ್ದು ಕೂಡ ಇದನ್ನೇ ಎಂದು ಮನಸ್ಸಲ್ಲಿಯೇ ಸಂತಸಪಟ್ಟಿದ್ದಾಳೆ.

Bhagyalakshmi serial Written Update on March 29th episode

ಲಕ್ಷ್ಮೀ ಕೆಲಸ ಕಲಿತು ಬಿಟ್ಟಳು

ಇದೆಲ್ಲಾ ಯೋಚನೆ ಮಾಡುತ್ತಾ ನಿಂತಿದ್ದ ಕಾವೇರಿಗೆ ಥಟ್ ಅಂತ ನೆನಪಾಗಿದ್ದು ವೈಷ್ಣವ್‌ಗೆ ಬಾಕ್ಸ್ ಪ್ಯಾಕ್ ಮಾಡಿ ಕೊಡೋದು. ಲಕ್ಷ್ಮೀಗೆ ನಿನ್ನೆ ತೆಗೆದುಕೊಂಡ ಕ್ಲಾಸ್‌ನಿಂದಾಗಿ‌ ಲಕ್ಷ್ಮೀ ಮುಟ್ಟಿಯೂ ಇರಲ್ಲ ಅಂದುಕೊಂಡ ಕಾವೇರಿ, ಕೆಳಗೆ ಇಳಿಯುತ್ತಿದ್ದಂತೆ ವೈಷ್ಣವ್ ಕೈಗೆ ಬಾಕ್ಸ್ ಇರುವ ಬ್ಯಾಗ್ ಕೊಟ್ಟಿದ್ದಾಳೆ ಲಕ್ಷ್ಮೀ‌. ಇದನ್ನು ಕಂಡು ಶಾಕ್ ಆದ ಕಾವೇರಿ, ಲಕ್ಷ್ಮೀ ಪ್ಯಾಕ್ ಮಾಡಿದ್ಯಾ ಅಂತ ಆಶ್ಚರ್ಯದಿಂದಾನೇ ಕೇಳಿದ್ದಾಳೆ.

ಇಷ್ಟೆಲ್ಲಾ ಮಾತುಕತೆ ನಡುವೆ ಮನೆ ಕೆಲಸದ ಶಾಂತ, ಲಕ್ಷ್ಮೀಯನ್ನು ಹಾಡಿ ಹೊಗಳಿದ್ದಾಳೆ. ಇದು ಕಾವೇರಿಯ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಾರಿ ಕಿತ್ತಳೆ ಹಣ್ಣಿನ ಸಿಪ್ಪೆ ಮಾತ್ರ ಅಲ್ಲ ಬೀಜ ಕೂಡ ತೆಗೆದು, ಉಳಿದ ಹಣ್ಣಿಗೆ ಉಪ್ಪು, ಮೆಣಸಿನ ಪುಡಿ ಹಾಕಿದ್ದೀನಿ, ನೀವೆನು ತಲೆ ಕೆಡಿಸಿಕೊಳ್ಳಬೇಡಿ. ನೀವೂ ಇನ್ಮುಂದೆ ವಿಶ್ರಾಂತಿ ತೆಗೆದುಕೊಳ್ಳಿ ಎಂದಿದ್ದಾಳೆ. ವೈಷ್ಣವ್‌ಗೆ ಕೂಡ ಲಕ್ಷ್ಮೀ, ತನ್ನ ಅಮ್ಮನ ತದ್ರೂಪಿ ಎನಿಸಿದೆ. ಅದಕ್ಕೆ ಅಮ್ಮನಿಗೆ ಇನ್ಮುಂದೆ ವಿಶ್ರಾಂತಿ ಪಡೆಯಮ್ಮ ಎಂದಿದ್ದಾನೆ. ಕೆಲಸದಾಕೆ ಕೂಡ, ಇನ್ಮುಂದೆ ನಿಮ್ಮ ಕೆಲಸವನ್ನೆಲ್ಲಾ ಲಕ್ಷ್ಮೀ ಅಕ್ಕಾನೆ ಮಾಡ್ತಾರೆ ಎಂದಿದ್ದಾಳೆ.

More from Filmibeat

English summary
Colors Kannada Bhagyalakshmi serial Written Update on March 29th episode. Here is the details about Kaveri shock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X