Bhagyalakshmi: ಅಕ್ಕಮ್ಮನ ಆಯ್ಕೆಗೆ ಖುಷಿ ಪಡ್ತಿದ್ದಾಳೆ ಲಕ್ಷ್ಮೀ : ಆದರೆ ಅಕ್ಕಮ್ಮನಿಗೆ ಖುಷಿ ಪಡುವ ಅದೃಷ್ಟವಿಲ್ಲ!
ಲಕ್ಷ್ಮೀ ಚಿಕ್ಕವಳಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡಳು. ಆದರೆ ಅಂದಿನಿಂದ ಇಂದಿನವರೆಗೂ ಭಾಗ್ಯಾಳ ಜವಾಬ್ದಾರಿಯನ್ನು ತೆಗೆದುಕೊಂಡಳು. ತನಗೆ ಗಂಡನ ಮನೆಯಲ್ಲಿ ಎಷ್ಟೇ ನೋವಿದ್ದರು, ಎಷ್ಟೇ ಕಷ್ಟವಿದ್ದರು ಅದನ್ನು ತೋರಿಸದೆಯೇ ತಂಗಿಯ ಕಷ್ಟಕ್ಕೆ ಮಿಡಿಯುತ್ತಿದ್ದಳು. ಹೆತ್ತಮ್ಮ ಎಂಬುದನ್ನು ನೋಡದೆ ಲಕ್ಷ್ಮೀಗೆ ಕಷ್ಟ ಕೊಡುವವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾ ಇದ್ದಳು.
ಈಗ ಒಂದೊಳ್ಳೆ ಮನೆಗೆ ಸೊಸೆಯಾಗಿ ಕಳುಹಿಸಿದ್ದೀನಿ ಎಂಬ ನಂಬಿಕೆ ಮೇಲೆ ಭಾಗ್ಯಾ ಸಮಾಧಾನದಿಂದ ಇದ್ದಾಳೆ. ಲಕ್ಷ್ಮೀ ಕೂಡ ಇನ್ಮುಂದೆ ಅಕ್ಕಮ್ಮನಿಗೆ ಯಾವುದೇ ತೊಂದರೆ ಕೊಡಬಾರದು ಎಂದೇ ನಿರ್ಧರಿಸಿದ್ದಾಳೆ. ಆದರೆ, ಭಾಗ್ಯ ಮಾತ್ರ ತನ್ನವರ ಸುಖಕ್ಕಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧಳಾಗಿಯೇ ಇದ್ದಾಳೆ. ಈಗ ತನಗೆ ಸಿಕ್ಕ ಸನ್ಮಾನ ಕಾರ್ಯಕ್ರಮ ಕ್ಯಾನ್ಸಲ್ ಮಾಡಿಕೊಂಡಿದ್ದು ಅದೇ ಕಾರಣಕ್ಕೇನೆ.

ಲಕ್ಷ್ಮೀಗೆ ಅಕ್ಕಮ್ಮನ ವಿಚಾರವೊಂದಿದ್ದರೆ ಸಾಕು
ಲಕ್ಷ್ಮೀಗೆ ಅಕ್ಕಮ್ಮ ಎಂದರೆ ಎಷ್ಟು ಪ್ರೀತಿ, ಕಾಳಜಿ ಎಂದು ಹೇಳುವ ಅವಶ್ಯಕತೆಯೇ ಇಲ್ಲ. ಯಾಕಂದ್ರೆ, ಅಕ್ಕಮ್ಮನನ್ನು ಅವಳಷ್ಟೇ ಪ್ರೀತಿ ಮಾಡುತ್ತಾಳೆ. ಮದುವೆಗೂ ಮುನ್ನ ಊಟ ಮಾಡ್ತಾ ಇದ್ದಿದ್ದು ಅಕ್ಕಮ್ಮನಿಗೆ ವಿಡಿಯೋ ಕಾಲ್ ಮಾಡಿಕೊಂಡೆ. ಆದರೆ ಈಗ ಅದನ್ನು ಅನುಸರಿಸುವುದಕ್ಕೆ ಆಗಲ್ಲ. ಸದ್ಯ ಅಕ್ಕಮ್ಮನಿಗೆ ಸನ್ಮಾನ ಕಾರ್ಯಕ್ರಮ ಇದೆ. ಆ ಕಾರ್ಯಕ್ರಮಕ್ಕೆ ವೈಷ್ಣವ್ ಜೊತೆಗೆ ಹೋಗುತ್ತಾ ಇದ್ದೀನಲ್ಲ ಎಂಬುದೇ ಲಕ್ಷ್ಮೀಗೆ ಆಗುತ್ತಿರುವ ಖುಷಿ.
ಲಕ್ಷ್ಮೀಯನ್ನು ವೈಷ್ಣವ್ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಸದಾ ಖುಷಿಯಲ್ಲಿಟ್ಟುಕೊಳ್ಳಲು ಯತ್ನಿಸುತ್ತಾನೆ. ಇದನ್ನೆಲ್ಲಾ ಯೋಚಿಸಿದ ಲಕ್ಷ್ಮೀಗೆ, ಅಕ್ಕಮ್ಮನ ಆಯ್ಕೆ ಸರಿಯಾಗಿದೆ. ವೈಷ್ಣವ್ ನನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದುಕೊಂಡ ಲಕ್ಷ್ಮೀ, ಅವರು ಖುಷಿಯಾಗಿದ್ದಾರಾ ಎಂದು ಪ್ರಶ್ನೆ ಮಾಡಿಕೊಂಡು ಗಂಡನಿಗೆ ಕಾಲ್ ಮಾಡಿ ವಿಚಾರಿಸಿಕೊಂಡಿದ್ದಾಳೆ.

ಗಂಡನಿಗೆ ಕ್ರೆಡಿಟ್ ಕೊಟ್ಟ ಭಾಗ್ಯಾ..!
ತಾಂಡವ್‌ಗೆ ಭಾಗ್ಯಾ ಏನೇ ಮಾಡಿದರು ಅದು ಗ್ರೇಟ್ ಅಂತ ಅನ್ನಿಸೋದೆ ಇಲ್ಲ. ಅಷ್ಟೇ ಯಾಕೆ ಅವಳ ಮೇಲೆ ಪ್ರೀತಿಯೂ ಇಲ್ಲ, ಹೊಗಳಿಕೆಯ ಮಾತುಗಳಂತು ಇಲ್ಲವೇ ಇಲ್ಲ. ಈಗ ಭಾಗ್ಯಾ ತಾಳಿಗಾಗಿ ಓಡಿ ಕಳ್ಳನನ್ನು ಹಿಡಿದ ಸಾಹಸಕ್ಕಾಗಿ ಸನ್ಮಾನ ಕಾರ್ಯಕ್ರಮವೊಂದಿದೆ. ಇದನ್ನು ಹೇಗಾದರೂ ತಪ್ಪಿಸಲೇಬೇಕೆಂದು ಕಾಯುತ್ತಿದ್ದ ತಾಂಡವ್‌ಗೆ ಒಳ್ಳೆ ದಾರಿ ಸಿಕ್ಕಿದೆ. ಆಫೀಸಲ್ಲಿ ಬಾಸ್ ಮತ್ತು ಬಾಸ್ ಹೆಂಡತಿ ಮನೆ ಊಟ ಸಿಗುವಂತ ರೆಸ್ಟೋರೆಂಟ್ ಹೇಳಿ ಎಂದು ಕೇಳಿದರೆ, ತಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆದಿದ್ದಾನೆ.
ಬಳಿಕ ಅಮ್ಮನಿಗೆ ಕರೆ ಮಾಡಿ, ನಮ್ಮ ಬಾಸ್ ಮತ್ತು ಅವರ ಹೆಂಡತಿ ಮನೆಗೆ ಊಟಕ್ಕೆ ಬರ್ತಾರೆ ತಯಾರಿ ಮಾಡುವುದಕ್ಕೆ ಹೇಳು ಎಂದಿದ್ದಾನೆ. ಈ ಮಾತು ಸ್ವತಃ ಕುಸುಮಾಗೂ ಇಷ್ಟವಿಲ್ಲ. ಆದರೆ, ಏನು ಮಾಡುವುದು ಮಗನ ಕೆಲಸ ಕೂಡ ಮುಖ್ಯ. ಅದಕ್ಕೆ ಸೊಸೆ ಹೋಗುವ ಪ್ರೋಗ್ರಾಂ ಕ್ಯಾನ್ಸಲ್ ಮಾಡಿಕೊಂಡು, ಮಗನ ಆಫೀಸಿಂದ ಬರುವವರಿಗೆ ಅಡುಗೆ ತಯಾರಿ ಮಾಡಿದ್ದಾರೆ. ಆಫೀಸಿಂದ ಊಟಕ್ಕೆ ಬಂದಾಗ, ಭಾಗ್ಯಾ ಚೆಂದವಾಗಿ ಸಿದ್ಧಳಾಗಿ, ಎಲ್ಲರಿಗೂ ಊಟ ಬಡಿಸಿದ್ದಾಳೆ. ಅದರ ಕ್ರೆಡಿಟ್ ಅನ್ನು ಗಂಡನಿಗೆ ನೀಡಿದ್ದಾಳೆ. ನಮ್ಮ ಯಜಮಾನರೇ ಎಲ್ಲಾ ಮುತುವರ್ಜಿವಹಿಸಿ, ಅಡುಗೆ ಮಾಡಿಸಿದ್ದಾರೆ ಎಂದು ಮನಸ್ಸಲ್ಲಿ ನೋವಿದ್ದರು, ಗಂಡನ ಹೆಸರನ್ನು ಉಳಿಸಿದ್ದಾಳೆ.


Click it and Unblock the Notifications











