Bhagyalakshmi: ಭಾಗ್ಯಾಳಿಗೆ ಸನ್ಮಾನ ತಪ್ಪಿಸಲು ಬಾಸ್ ಕರೆಸಿದ ತಾಂಡವ್: ವೈಷ್ಣವ್ ನಡೆಗೆ ಶಾಕ್!
ತಾಂಡವ್‌ಗೆ ಭಾಗ್ಯಾಳ ಯಾವ ಸಾಧನೆ ಕಂಡರೂ ಹೊಗಳುವ ಪರಿ ಇಷ್ಟವಾಗುವುದಿಲ್ಲ. ಸಾಧನೆಯನ್ನು ಹೊಗಳುವುದಿರಲಿ ಪ್ರೀತಿಯಿಂದ ಮಾತನಾಡಿಸುವುದಕ್ಕೂ ಹೋಗುವುದಿಲ್ಲ. ಹೆಂಡತಿ ಎಂಬುದನ್ನೇ ಮರೆತು, ಮನೆ ಕೆಲಸದವಳಂತೆ ಟ್ರೀಟ್ ಮಾಡ್ತಾನೆ ತಾಂಡವ್. ಇದಕ್ಕೆ ಮಗಳ ಬೆಂಬಲ ಇದೆ. ಆದರೆ ಮಗನ ಬೆಂಬಲವಿಲ್ಲ. ಈಗ ಭಾಗ್ಯಾಳಿಗೆ ಸಿಗಬೇಕಾದ ಸನ್ಮಾನ ಕಾರ್ಯಕ್ರಮ ತಪ್ಪಿಸಿ, ಗೆದ್ದ ಖುಷಿಯಲ್ಲಿದ್ದಾನೆ.
ಭಾಗ್ಯಾಳಿಗೆ ಸನ್ಮಾನ ಸಿಕ್ಕಿಬಿಟ್ಟರೆ ಅವಳನ್ನು ಹಿಡಿಯಲು ಆಗಲ್ಲ ಎಂಬುದು ತಾಂಡವ್‌ನ ಮನಸ್ಥಿತಿ. ಗಂಡನ ಹೆಸರು ಹಾಳಾಗಬಾರದೆಂದು ಸನ್ಮಾನ ಕಾರ್ಯಕ್ರಮವನ್ನೇ ಅಡುಗೆ ಮನೆ ಸೇರಿದ್ದಾಳೆ. ಅದಕ್ಕೊಂದು ಧನ್ಯವಾದವನ್ನು ತಿಳಿಸದೆ, ಅಣಗಿಸಿದ್ದಾನೆ. ಊಟ ತಿಂಡಿ ಬಗ್ಗೆ ಕಮೆಂಟ್ಸ್ ಹಾಕಿದ್ದಾನೆ.

ಭಾಗ್ಯಾಳಿಗೆ ಹೊಗಳಿಕೆಯ ಸುರಿಮಳೆ
ಭಾಗ್ಯಾಳ ಕೈರುಚಿಗೆ ಮಾರು ಹೋಗದವರೇ ಇಲ್ಲ. ಅಡುಗೆ ವಿಚಾರದಲ್ಲಿ ಭಾಗ್ಯಾಳನ್ನು ಮೀರಿಸುವವರಿಲ್ಲ. ತಾಂಡವ್, ಭಾಗ್ಯಾಳನ್ನು ಯಾವ ವಿಚಾರಕ್ಕೆ ಹೊಗಳುತ್ತಾನೋ ಬಿಡುತ್ತಾನೋ. ಆದರೆ ಅವಳು ಮಾಡುವ ಅಡುಗೆ ಮುಂದೆ ಯಾವ ಹೋಟೆಲ್ ಫುಡ್ ಇಲ್ಲ ಅಂತಾನೆ. ಶ್ರೇಷ್ಠಾ ಕೂಡ, ಭಾಗ್ಯಾಳ ಕೈರುಚಿಗೆ ಮಾರು ಹೋಗಿದ್ದಾಳೆ. ಈಗ ತಾಂಡವ್ ಬಾಸ್ ಮತ್ತು ಹೆಂಡತಿಯೂ ಹೊಗಳಿದ್ದಾರೆ.
ಅಕ್ಕಮ್ಮನನ್ನು ನೋಡುವ ಖುಷಿಯಲ್ಲಿ ಬೇಗ ರೆಡಿಯಾಗಿ ಕೂತಿದ್ದಳು ಲಕ್ಷ್ಮೀ. ಕಾವೇರಿಯ ಮನಸ್ಸಿನ ವಿರೋಧದ ನಡುವೆಯು ವೈಷ್ಣವ್ ಅವಳನ್ನು ಕರೆದುಕೊಂಡು ಹೊರಗೆ ಬಂದಿದ್ದಾನೆ. ಅಕ್ಕಮ್ಮನನ್ನು ನೋಡುವ ಖುಷಿಯಲ್ಲಿದ್ದ ಲಕ್ಷ್ಮೀಗೆ ಸ್ಟೇಜ್ ಮೇಲೆ ಅಕ್ಕಮ್ಮ ಕಾಣಲೇ ಇಲ್ಲ. ಸನ್ಮಾನ ಮಾಡಿಸಿಕೊಳ್ಳುತ್ತಾಳೆ ಅಂದ್ರೆ, ಅಲ್ಲಿ ಹಾಜರೆ ಇರಲಿಲ್ಲ.
ಭಾಗ್ಯಾಳ ಮನೆಗೆ ಬಂತು ಸನ್ಮಾನ
ಕಾರ್ಯಕ್ರಮದಲ್ಲಿ ಭಾಗ್ಯಾ ಇರಲಿಲ್ಲ. ಸನ್ಮಾನ ಮಾಡುವುದಕ್ಕೆ ವೇದಿಕೆ ಮೇಲೆ ಹೆಸರು ಕರೆದರು ಭಾಗ್ಯ ಬರಲೇ ಇಲ್ಲ. ಹೀಗಾಗಿ ವೈಷ್ಣವ್ ಮತ್ತು ಲಕ್ಷ್ಮೀ ಒಂದು ಪ್ಲ್ಯಾನ್ ಮಾಡಿದ್ದರು. ಆ ಸನ್ಮಾನ ಮಾಡಯವ ಎಲ್ಲಾ ವಸ್ತುವನ್ನು ತೆಗೆದುಕೊಂಡು ಮನೆಗೆ ಬಂದರು. ಕೈಯಲ್ಲಿದ್ದ ಸನ್ಮಾನವನ್ನು ನೋಡಿ ತಾಂಡವ್ ಶಾಕ್ ಆಗಿದ್ದ.

ತಾಂಡವ್ ಭಾಗ್ಯಾಳ ಸನ್ಮಾನ ಕಾರ್ಯಕ್ರಮ ತಪ್ಪಿಸಲೇಬೇಕೆಂದು ಆಫೀಸಲ್ಲಿ ಫ್ಲ್ಯಾನ್ ಮಾಡಿದ್ದ. ಅದಕ್ಕೆ ಬಾಸ್ ಮನೆ ಊಟ ಬೇಕು ಎಂದಾಕ್ಷಣ ನಮ್ಮ ಮನೆಗೆ ಬನ್ನಿ ಎಂದು ಕರೆದಿದ್ದ. ಮನೆಯಲ್ಲಿ ನಾಳೆ, ನಾಡಿದ್ದು ಕರೆ ಎಂದಾಗಲೂ ಇಲ್ಲ ಈಗಲೇ ಬರ್ತೀನಿ ಎಂದಿದ್ದಾರೆ ಎಂದು ತಾಂಡವ್ ಸುಳ್ಳು ಹೇಳಿರುತ್ತಾನೆ. ಆದರೆ ವೈಷ್ಣವ್, ಸನ್ಮಾನದ ಬಗ್ಗೆ ಹೇಳಿದಾಗ, ಬಾಸ್ ವೈಫ್, ನೀವೂ ನಾಳೆ ಬನ್ನಿ ಎಂದಿದ್ರು ಆಗ್ತಾ ಇತ್ತಲ್ಲ ಎಂದಿದ್ದಾರೆ. ಆಗ ತಾಂಡವ್ ವಿಚಾರ ಬಯಲಾಗಿದೆ.
ಸನ್ಮಾನ ಮಾಡಿದ ತಾಂಡವ್ ಬಾಸ್
ತಾಂಡವ್, ಹೇಳಿದ ಸುಳ್ಳು ಗೊತ್ತಾದ ಮೇಲೆ ಬಾಸ್ ಹೆಂಡತಿ ನಮಗೆ ಬೇಜಾರಾಯ್ತು ಎಂದಾಗ, ಭಾಗ್ಯಾ ಅದನ್ನು ಸಮಾಧಾನಿಸಿದ್ದಾಳೆ. ನನಗೆ ಯಾವುದೇ ತರದ ಬೇಜಾರಾಗಿಲ್ಲ ಅಂತ. ವಯುಷ್ಣವ್ ತಂದಿದ್ದ ಸನ್ಮಾನದ ವಸ್ತುವಿನಿಂದ, ಅಲ್ಲಿಯೇ ಇದ್ದ ಮಗ, ಮನೆಯಲ್ಲಿ ಅಮ್ಮನಿಗೆ ಸನ್ಮಾನ ಎಂದಾಗ ಎಲ್ಲರೂ ಖುಷಿ ಪಟ್ಟಿದ್ದಾರೆ.
ಭಾಗ್ಯಾಳ ಸನ್ಮಾನ ತಪ್ಪಿಸಲು ಯತ್ನಿಸಿದ ತಾಂಡವ್ ಗೆ ಮುಖಭಂಗವಾಗಿದೆ. ಅವರ ಬಾಸ್ ಕಡೆಯಿಂದಾನೆ ಸನ್ಮಾನ ಕಾರ್ಯಕ್ರಮ ಏರ್ಪಟ್ಟಿದೆ. ವೀಕೆಂಡ್ ವೇಳೆಗೆ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಹೀಗಾಗಿ ಮುಂದಿನ ವಾರ 'ಭಾಗ್ಯಲಕ್ಷ್ಮಿ' ಧಾರಾವಾಹಿ ಸಖತ್ ಇಂಟ್ರೆಸ್ಟಿಂಗ್ ಆಗಿರುತ್ತೆ.


Click it and Unblock the Notifications











