Bhagyalakshmi: ಸೀರೆ ಹೋಗಿ ಚೂಡಿದಾರ್ ಬಂತು.. ತಾಂಡವ್‌ಗಾಗಿ ಬದಲಾಗಲು ಭಾಗ್ಯಾಗೆ ಸಾಧ್ಯವೇ?

By ಎಸ್ ಸುಮಂತ್

ತಾಂಡವ್ ಪರಿಸ್ಥಿತಿ ಏನೋ ಮಾಡಲು ಏನು ಮಾಡಿದೆ ನೀನು ಎಂಬಂತೆ ಆಗಿದೆ. ಯಾಕಂದ್ರೆ ಭಾಗ್ಯಾಳನ್ನು ತನಗೆ ಮ್ಯಾಚ್ ಆಗಲ್ಲ ಎಂಬ ಕಾರಣಕ್ಕೆ ಮನೆಗೂ ಕರೆ ತರದೆ ಬಿಟ್ಟು ಬಂದ ತಾಂಡವ್‌ಗೆ ಒಂದೊಂದೇ ಹೊಡೆತ ಬೀಳುತ್ತಾ ಇದೆ. ಮನೆಯಲ್ಲಂತೂ ಊಟ - ತಿಂಡಿಯೂ ಸರಿಯಾಗಿಲ್ಲ. ಇನ್ನು ಅಮ್ಮನ ಬೈಗುಳ ಬೇರೆ.

ಭಾಗ್ಯಾ, ತಂದೆಯ ಆರೋಗ್ಯಕ್ಕಾಗಿ ತೆಗೆದುಕೊಂಡ ಹಣದಿಂದ, ತಾಂಡವ್ ದುಡಿಕಿನ ಸ್ವಭಾವದಿಂದ ಹಣದ ವಿಚಾರಕ್ಕೆ ಆದ ಯಡವಟ್ಟಿನಿಂದ ತಾಂಡವ್ ಜೈಲು ಪಾಲಾಗಬೇಕಾಗಿ ಬಂತು. ಆದರೆ ಅದನ್ನೇ ನೆಪವಾಗಿಟ್ಟುಕೊಂಡ ತಾಂಡವ್, ಪ್ರೀತಿಯ ನಾಟಕವಾಡಿ ಭಾಗ್ಯಾಳನ್ನು ನಡು ದಾರಿಯಲ್ಲಿಯೇ ಕೈ ಬಿಟ್ಟು ಬಂದ. ಸದ್ಯ ಭಾಗ್ಯಾ ಮತ್ತೆ ವಾಪಾಸ್ಸಾಗಿದ್ದಾಳೆ. ಆದರೆ ಬದಲಾಗುವ ಪ್ರಯತ್ನದಲ್ಲಿದ್ದಾಳೆ.

Bhagyalakshmi serial Written Update on May 10th episode

ಕುಸುಮಾಗೆ ಸತ್ಯ ಗೊತ್ತಿಲ್ಲದೆ ಜಗಳ

ಭಾಗ್ಯಾ ಮನೆಗೆ ಬಂದಾಗ, ಹೊಸ್ತಿಲಲ್ಲಿಯೇ ನಿಲ್ಲಿಸಿಕೊಂಡು ಬೈದ ಕುಸುಮಾ, ಈಗ ಅಡುಗೆ ಮನೆಯಲ್ಲೂ ಅದೇ ಬೈಗುಳ. ಭಾಗ್ಯಾಳಿಗೋ ಗಂಡ ಹೇಳಿದ ಒಂದೊಂದು ಮಾತು ಚುಚ್ಚುತ್ತಾ ಇದೆ. ಅದೇ ಯೋಚನೆಯಲ್ಲಿ, ಪಾತ್ರೆಯನ್ನು ಬೀಳಿಸಿದ್ದಾಳೆ. ಇದೆ ಸಾಕು ಕುಸುಮಾಗೆ ಸೊಸೆಯನ್ನು ಬೈಯ್ಯಲು ಶುರು ಮಾಡಿದ್ದಾಳೆ. ಕೆಲಸ ಮಾಡುವುದೇ ಬೇಡ ಎಂದು ಕಳುಹಿಸಿ ಬಿಟ್ಟಿದ್ದಾಳೆ. ಗಂಡ ಹೇಳಿದರೂ ಕುಸುಮಾ ಕೇಳೋದಕ್ಕೇ ರೆಡಿ ಇಲ್ಲ. ಬೈಗುಳದ ನಡುವೆ ಭಾಗ್ಯಾ ಬೇಸರದಲ್ಲಿರುವುದು ಕಾಣಿಸುತ್ತಲೇ ಇಲ್ಲ.

ಭಾಗ್ಯಾ ಮನೆಗೆ ಬಂದಿದ್ದನ್ನು ಕೇಳಿ ಶಾಕ್

ಆ ಕಡೆ ತಾಂಡವ್‌ಗೆ ಆಫೀಸಲ್ಲಿ ಕೂತು ಕೂತು ಯೋಚನೆಯಾಗಿದೆ. ಬಾಸ್ ಹೇಳಿದ ಒಂದೊಂದು ಮಾತು ಉಸಿರು ಕಟ್ಟುವಂತೆ ಮಾಡಿದೆ. ನನ್ನ ವೈಯಕ್ತಿಕ ವಿಚಾರ ಇವನಿಗ್ಯಾಕೆ ಎಂದು ಗೊಣಕಿಕೊಂಡು ತನ್ನ ದೇಹವನ್ನೇ ಮುಟ್ಟಿಕೊಂಡಾಗ ಬಿಸಿಯಾಗಿದ್ದು ಕಾಣಿಸಿದೆ. ಜ್ವರ ಬಂದಿದೆಯೇನೋ ಎಂದುಕೊಂಡು, ಅಮ್ಮನಿಗೆ ಕಾಲ್ ಮಾಡ ಬಿಸಿ ಬಿಸಿಯಾಗಿ ಏನಾದರೂ ಅಡುಗೆ ಮಾಡುವಂತೆ ಹೇಳಿದ್ದಾನೆ. ಆಗ ಭಾಗ್ಯಾ ಮನೆಗೆ ಬಂದ ವಿಚಾರವೂ ಗೊತ್ತಾಗಿದೆ. ಇದನ್ನು ಕೇಳಿ ಅಕ್ಷರಶಃ ಶಾಕ್ ಆಗಿದ್ದಾನೆ.

ಬದಲಾಗುವ ದಾರಿಯಲ್ಲಿ ಭಾಗ್ಯಾ

ಆ ಕಡೆ ಮಗ ಮನೆಗೆ ಬರ್ತಾ ಇದ್ದಾನೆ ಅಂತ ಬಿಸಿ ಬಿಸಿ ಅಡುಗೆ ಮಾಡುವುದಕ್ಕೆ ಕುಸುಮಾ ಭಾಗ್ಯಾಳಿಗೆ ಹೇಳಿದ್ದಾಳೆ‌. ಆ ಕಡೆ ಭಾಗ್ಯಾ ಒಂದೇ ಸಮನೇ ಅಳುತ್ತಾ ಕೂತಿದ್ದಾಳೆ. ಅಡುಗೆಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ ಭಾಗ್ಯಾ, ಮೊದಲು ನನ್ನ ಸ್ಟೈಲ್ ಕೂಡ ಚೇಂಜ್ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾಳೆ. ಅವರಿಗೆ ಇಷ್ಟವಾಗುವಂತೆ ಇರಬೇಕು ಎಂದು ಬಯಸಿ, ಕಪಾಟಿನಲ್ಲಿ ಬಟ್ಟೆ ಹುಡುಕಿದಾಗ ಯಾವುದೇ ಹಳೆಯ ಚೂಡಿದಾರ್ ಸಿಕ್ಕಿದೆ. ಆ ಚೂಡಿದಾರ್ ಧರಿಸಿಕೊಂಡು, ಹೇರ್ ಸ್ಟೈಲ್ ಹೀಗೆ ಇದ್ರೆ ಹಾಗಲ್ಲ ಅಂತ ಹೇಳಿ ಅದನ್ನು ಬದಲು ಮಾಡಿಕೊಂಡಿದ್ದಾಳೆ.

Bhagyalakshmi serial Written Update on May 10th episode

ಶ್ರೇಷ್ಠಾ ಒಪ್ಪಿಕೊಳ್ಳುತ್ತಾಳಾ..?

ತಾಂಡವ್‌ಗೆ ಬಾಸ್ ಹೇಳಿದ ಒಂದೊಂದು ಮಾತು ತುಂಬಾನೇ ಹರ್ಟ್ ಮಾಡಿತ್ತು. ಅದರಲ್ಲೂ ಶ್ರೇಷ್ಠಾ ವಿಚಾರ. ಅದೇ ಯೋಚನೆಯಲ್ಲಿದ್ದ ತಾಂಡವ್ ಬಳಿ ಶ್ರೇಷ್ಠಾ ಬಂದಾಗ "ನಿನ್ನಿಂದ ನನ್ನ ಲೈಫ್ ಹಾಳಾಗ್ತಾ ಇದೆ. ನೀನು ಬೇಡ ಯಾರು ಬೇಡ. ಸುಮ್ಮನೆ ಹೋಗ್ಬಿಡು" ಅಂತ ರೇಗಿ ಕಳುಹಿಸಿದ್ದ. ಅದನ್ನೇ ಫ್ರೆಂಡ್ ಜೊತೆ ಮಾತಾಡಿಕೊಂಡು ಅವನು ನನ್ನ ಜೊತೆ ನಿಲ್ಲಲ್ಲ ಅಂತ, ಬೇರೊಂದು ನಿರ್ಧಾರಕ್ಕೆ ಬಂದಿದ್ದಳು ಶ್ರೇಷ್ಠಾ. ಆದರೆ ಆ ಕಡೆ ಮನೆಗೆ ಭಾಗ್ಯಾ ಬಂದಿದ್ದಾಳೆ ಅಂದ್ರೆ ಅಮ್ಮನಿಗೆ ಎಲ್ಲಾ ಹೇಳಿ ಬಿಟ್ಟಿರುತ್ತಾಳೆ ಅಂತ ಭಾವಿಸಿದ ತಾಂಡವ್, ಮನೆಗೆ ಹೋಗದೆ ಶ್ರೇಷ್ಠಾಳ ಬಳಿ ಅಂಗಲಾಚುತ್ತಿದ್ದಾನೆ. ನನ್ನ ಮನೆಗೆ ಕರೆದುಕೊಂಡು ಹೋಗು ಅಂತ. ಈಗ ಶ್ರೇಷ್ಠಾ ಯಾವ ನಿರ್ಧಾರಕ್ಕೆ ಬರ್ತಾಳೆ ಅನ್ನೋದೇ ಕುತೂಹಲ.

More from Filmibeat

English summary
Colors Kannada Bhagyalakshmi serial Written Update on May 10th episode. Here is the details Bhagya try to change.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X