Bhagyalakshmi: ತನ್ನ ಇರುವಿಕೆಯನ್ನೇ ಮರೆತ ಭಾಗ್ಯಾಗೆ ಅತ್ತೆಯ ಕೋಪ ಕಾಣಿಸುತ್ತಿಲ್ಲ..!

By ಎಸ್ ಸುಮಂತ್

ಭಾಗ್ಯಾಳಿಗೆ ಗಂಡನ ಮನೆ ಬಿಟ್ಟರೆ ಪ್ರಪಂಚವೇ ಗೊತ್ತಿಲ್ಲ. ಹಾಗಂತ ಬದುಕು ಕಷ್ಟ ಅಂತಲ್ಲ. ಮಕ್ಕಳ ಭವಿಷ್ಯ ಮುಖ್ಯ, ಅತ್ತೆ ಮಾವನ ಕಾಳಜಿ ಮುಖ್ಯ. ಅದಕ್ಕಾಗಿ ತನ್ನೆಲ್ಲಾ ಜೀವನವನ್ನು ತ್ಯಾಗ ಮಾಡಿದ್ದಾಳೆ. ಎಷ್ಟೇ ಅವಮಾನಗಳಾದರೂ ಮನಸ್ಸಿನಲ್ಲಿಯೇ ನುಂಗಿಕೊಂಡು ಸಹಿಸಿಕೊಳ್ಳುತ್ತಿದ್ದಾಳೆ.

ಆ ಕಡೆ ತಾಂಡವ್ ಮಾತ್ರ ಭಾಗ್ಯಾಳೆಂಬ ಮುತ್ತನ್ನು ಬಿಟ್ಟು ಶ್ರೇಷ್ಠಾಳ ಹಿಂದೆ ಬಿದ್ದಿದ್ದಾನೆ. ಶ್ರೇಷ್ಠಾಳ ಮನೆಯಲ್ಲಿಯೇ ಇರುತ್ತೀನಿ ಅಂತ ಹೊರಟಿದ್ದಾನೆ. ಈ ಕಡೆ ನನ್ನ ಸೊಸೆ ನನ್ನ ಸೊಸೆ ಅಂತ ಹೊತ್ತು ಮೆರೆಸುವ ಕುಸುಮಾಗೆ ತನ್ನ ಸೊಸೆಯ ಸ್ಥಿತಿ ಕಾಣದೆ ಇರುವುದು ಮಾತ್ರ ವಿಪರ್ಯಾಸವೇ ಸರಿ.

Bhagyalakshmi serial Written Update on May 11th episode

ಗಂಡನಿಗಾಗಿ ಬದಲಾವಣೆಯ ನಡುವೆ ಕಣ್ಣೀರು

ಹೇಗಾದರೂ ಮಾಡಿ ತನ್ನ ಗಂಡನ‌ನ್ನು ಮೆಚ್ಚಿಸಲೇಬೇಕೆಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಅದರಂತೆ ಅವರ ಆಫೀಸಲ್ಲಿ ಜನ ಹೇಗೆಲ್ಲಾ ಇರ್ತಾರೆ ಎಂಬುದನ್ನು ನೆನಪಿಸಿಕೊಂಡಿದ್ದಾಳೆ. ತನ್ನಲ್ಲಿಯೇ ಇದ್ದ ಹಳೆಯ ಚೂಡಿದಾರ್ ಒಂದನ್ನು ಧರಿಸಿದ್ದಾಳೆ. ಅದಕ್ಕೆ ಮ್ಯಾಚ್ ಆಗುವಂತ ಬಿಂದಿಯನ್ನು ಹಾಕಿದ್ದಾಳೆ. ಯಾವಾಗಲೂ ಕೂದಲು ಹೆಣೆದಿರುತ್ತೀಯಾ ಎನ್ನುವ ಗಂಡನ ಮಾತು ನೆನಪಿಗೆ ಬಂದು, ಕೂದಲನ್ನು ಬಿಟ್ಟಿದ್ದಾಳೆ. ಹುಚ್ಚಿಯಂತೆ ಯೋಚನೆ ಮಾಡುವುದಕ್ಕೆ ಶುರು ಮಾಡಿದ್ದಾಳೆ.

ಬಂದವರ ಮುಂದೆ ಸೊಸೆ ಬಗ್ಗೆ ಹೊಗಳಿಕೆ

ಕುಸುಮಾ ಏನೇ ಹೇಳಿದರೂ, ಬೈದರೂ ಬೇರೆಯವರ ಮುಂದೆ ತನ್ನ ಸೊಸೆಯನ್ನು ಬಿಟ್ಟುಕೊಡುವ ಮಾತೇ ಇಲ್ಲ. ಈಗಲೂ ಅಷ್ಟೇ ಮನೆಗೆ ಪಕ್ಕದ ಮನೆಯಾಕೆ ಬಂದಿದ್ದಳು. ನೈಟಿ ಹಾಕಿಕೊಂಡಯ ಬಂದಿದ್ದಳು. ಅದನ್ನು ನೋಡಿ ತನ್ನ ಸೊಸೆ, ನೈಟಿ ಇರಲಿ ಚೂಡಿದಾರ್ ಕೂಡ ಹಾಕಲ್ಲ ಎಂದು ಬಡಾಯಿ ಕೊಚ್ಚಿಕೊಂಡಳು. ಆದರೆ ಭಾಗ್ಯಾ ತಾನಿದ್ದ ಮನಸ್ಥಿತಿಯಿಂದ ಅತ್ತೆಯ ಮಾನ ಉಳಿಸುವಾಗ ಎಡವಿದ್ದಾಳೆ. ಕಾರ್ಯಕ್ರಮಕ್ಕೆ ಕರೆಯಲು ಬಂದಾಕೆಗೆ ಟೀ ಕೊಡು ಅಂತ ಕೂಗಿದರೂ ಭಾಗ್ಯಾ ಬರಲೇ ಇಲ್ಲ. ಆಗ ಕುಸುಮಾಗೆ ಸ್ವಲ್ಪ ಇರಿಸು ಮುರಿಸು ಆಗಿದೆ.

ರೂಮಲ್ಲೆಲ್ಲಾ ಬಟ್ಟೆ ಹರಡಿದ್ದ ಭಾಗ್ಯಾ

ಆ ಕಡೆ ಭಾಗ್ಯಾ ಗಂಡನಿಗೆ ಹೇಗಿದ್ದರೆ ಇಷ್ಟ ಎಂದು ಅಲ್ಲಿ ರೆಡಿಯಾಗುತ್ತಾ ನಿಂತಿದ್ದಳು. ಕೆಳಗಡೆ ಇದ್ದ ಕುಸುಮಾ ಸೊಸೆ ಬಗ್ಗೆ ಕೋಪ ಮಾಡಿಕೊಂಡಿದ್ದಳು. ಆಗ ಬಂದ ಗಂಡ, ಕುಸುಮಾಗೆ ಬೈದಿದ್ದಾರೆ. ಸೊಸೆ ಏನೋ ಬೇಸರದಲ್ಲಿದ್ದಾಳೆ ಎಂದು ಗಂಡನನ್ನು ಗದರಿ ಭಾಗ್ಯಾಳ ರೂಮಿಗೆ ಹೋದ ಕುಸುಮಾಗೆ ಬಟ್ಟೆಯೆಲ್ಲಾ ಹರಡಿದ್ದು ಕಂಡು ಬಂದಿತ್ತು. ಅಷ್ಟೇ ಅಲ್ಲ ಭಾಗ್ಯಾ ಚೂಡಿದಾರ್ ಹಾಕಿದ್ದನ್ನು ಕಂಡು ಶಾಕ್ ಆಗಿದ್ದಾಳೆ. ಕುಸುಮಾಗೆ, ಭಾಗ್ಯಾಳಾ ಚೂಡಿದಾರ್ ಕಾಣಿಸಿತೇ ವಿನಃ ಅವಳ ಕಣ್ಣೀರು ಕಾಣಲೇ ಇಲ್ಲ.

Bhagyalakshmi serial Written Update on May 11th episode

ಮತ್ತೆ ಹಳೇ ಭಾಗ್ಯಾ ಆಗ್ತಾಳಾ..?

ಕುಸುಮಾ ಇನ್ನು ತಪ್ಪಾಗಿನೇ ಅರ್ಥ ಮಾಡಿಕೊಂಡಿದ್ದಾಳೆ‌. ಗಂಡನ ಗುಂಗಲ್ಲಿದ್ದಾಳೆ ಭಾಗ್ಯಾ. ಅದಕ್ಕೆ ನಮ್ಮ ಮಾತು ಕೇಳಿಸುತ್ತಿಲ್ಲ ಅಂತ. ಅದರಲ್ಲೂ ಸೊಸೆ ಚೂಡಿದಾರ್ ಬೇರೆ ಹಾಕಿದ್ದನ್ನು ನೋಡಿ, "ಓ ಎಲ್ಲೋ ಹೊರಗಡೆ ಹೊರಡುವ ಫ್ಲ್ಯಾನ್" ಅಂತ ಬೈದಿದ್ದಾಳೆ. ಆಗ ಭಾಗ್ಯಾ , ಚೆನ್ನಾಗಿದ್ಯಾ ಅತ್ತೆ. ಹಾಗಾದ್ರೆ, ಇನ್ಮುಂದೆ ಹೀಗೆ ಇರ್ತೀನಿ. ಅವರಿಗೆ ಹೀಗೆ ಇದ್ರೇನೆ ಇಷ್ಟ. ಇದೇ ಥರ ರೆಡಿಯಾಗ್ತೀನಿ ಅಂದಿದ್ದಾಳೆ. ಇದನ್ನು ಕೇಳಿಸಿಕೊಂಡ ಕುಸುಮಾಗೆ ಇನ್ನಷ್ಟು ಕೋಪ ಬಂದಿದೆ. ಸೀರೆ ಕೈಗಿಟ್ಟು ಇದನ್ನೇ ಹಾಕು ಎಂದಾಗಲೇ ಭಾಗ್ಯಾ ತಾನೂ ವಾಸ್ತವಕ್ಕಿಂತ ದೂರ ಇದ್ದೀನಿ ಎಂಬುದನ್ನು ಅರಿತುಕೊಂಡಿದ್ದು. ಅತ್ತೆಯ ಜೊತೆ ಹೇಗೇಗೋ ನಡೆದುಕೊಂಡೆ ಎಂಬುದು ಗೊತ್ತಾಗಿದ್ದು.

More from Filmibeat

English summary
Colors Kannada Bhagyalakshmi serial Written Update on May 11th episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X