Bhagyalakshmi: ತಾಂಡವ್ ಮುಚ್ಚಿಟ್ಟಿದ್ದ ಸತ್ಯವೆಲ್ಲ ಕೇಳಿ ಅಮ್ಮನಿಗೆ ಶಾಕ್.. ಮಗನ ಕಪಾಳಕ್ಕೆ ಬಾರಿದ ಕುಸುಮಾ!
ತಾಂಡವ್ ಇಷ್ಟು ದಿನ ಕದ್ದು ಮುಚ್ಚಿ ಆಡುತ್ತಿದ್ದ ಆಟಗಳು ಈಗ ಬಟಾಬಯಲಾಗಿದೆ. ಶ್ರೇಷ್ಠಾಳನ್ನು ಪ್ರೀತಿ ಮಾಡ್ತಾ ಇದ್ದೀನಿ ಅಂತ ಹೇಳಿ, ಭಾಗ್ಯಾಳನ್ನು ಸಂಪೂರ್ಣವಾಗಿ ನೆಗ್ಲೆಕ್ಟ್ ಮಾಡಿದ್ದ. ಭಾಗ್ಯಾಳನ್ನು ತನ್ನ ಲೈಫ್‌ಗೆ ವಾಪಾಸ್ ಬರ್ಬೇಡ ಅಂತ ಹೇಳಿ, ಬಿಟ್ಟು ಬಂದಿದ್ದ. ಆದರೆ ಭಾಗ್ಯಾಳಿಗೆ ಮನೆಯ ನೆನಪಾಗಿ ಮತ್ತೆ ವಾಪಾಸ್ ಆಗಿದ್ದಾಳೆ.
ಭಾಗ್ಯಾ ಮನೆಗೆ ಬಂದಿದ್ದಾಳೆ ಎಂದು ಗೊತ್ತಾದ ಕೂಡಲೇ ತಾಂಡವ್‌ಗೆ ಆತಂಕ ಶುರುವಾಗಿದೆ. ಮನೆಗೂ ಹೋಗದೆ, ಜ್ವರ ಬರಿಸಿಕೊಂಡವ ಸೀದಾ ಬಂದು ಶ್ರೇಷ್ಠಾಳ ಮನೆಯಲ್ಲಿ ಮಲಗಿದ್ದಾನೆ. ಕುಸುಮಾಗೆ ಮೊದಲಿಂದಾನೇ ಶ್ರೇಷ್ಠಾಳ ಅನುಮಾನವಿತ್ತು. ಆ ಅನುಮಾನವನ್ನು ಸೊಸೆಯ ಮುಂದೆ ಆಗಲಿ, ಗಂಡನ ಮುಂದೆ ಆಗಲಿ ಯಾವತ್ತಿಗೂ ತೋರಿಸಿಕೊಂಡವಳಲ್ಲ. ಈಗ ತಾಂಡವ್ ಮತ್ತಷ್ಟು ಪ್ರೂವ್ ಮಾಡಿದ್ದಾನೆ.

ತಪ್ಪು ಮಾಡಿದರು ಸಮರ್ಥಿಸಿಕೊಂಡ ತಾಂಡವ್
ತಾಂಡವ್ ಸೀದಾ ಆಫೀಸಿನಿಂದ ಶ್ರೇಷ್ಠಾ ಮನೆಗೆ ಬಂದಿರುವುದು ಕುಸುಮಾಳಿಗೆ ಗೊತ್ತಾಗಿದೆ. ಅಲ್ಲಿಗೆ ಹುಡುಕಿಕೊಂಡು ಕುಸುಮಾ ಹಾಗೂ ಭಾಗ್ಯಾ ಇಬ್ಬರು ಬಂದಿದ್ದಾರೆ. ತಾಂಡವ್ ಬಳಿ ಮಾತನಾಡುವುದಕ್ಕೆ ಹೋದಾಗ ನೆಮ್ಮದಿ ಹುಡುಕಿಕೊಂಡು ಬಂದಿದ್ದೀನಿ ಎಂದಿದ್ದಾನೆ. ಮನೆಯಲ್ಲಿ ಯಾರೂ ನನ್ನ ಅರ್ಥ ಮಾಡಿಕೊಳ್ಳಲ್ಲ. ಎಲ್ಲಾ ಸೊಸೆ ಸೊಸೆ ಅಂತೀರಾ. ಅಲ್ಲಿ ನಂಗೆ ಒಂಟಿ ಅನ್ನೋ ಫೀಲ್ ಆಗುತ್ತೆ. ಇಲ್ಲಿ ಆದ್ರೆ ನನ್ನ ಯಾರೂ ಕೇಳಲ್ಲ ಅಂತಾನೆ ಹೇಳಿದ್ದಾನೆ. ಇದನ್ನ ಕೇಳಿ ಕುಸುಮಾಳ ಕೋಪ ನೆತ್ತಿಗೇರಿದೆ.
ಭಾಗ್ಯಾಳ ಬಗ್ಗೆ ಸತ್ಯ ಹೇಳಿದ ತಾಂಡವ್
ಮಾತನಾಡುತ್ತಾ ತಾಂಡವ್ ಸತ್ಯ ಬಾಯ್ಬಿಟ್ಟಿದ್ದಾನೆ. "ಅದಕ್ಕೆ ಅವಳನ್ನು ನಡು ರಸ್ತೆಯಲ್ಲಿ ಬಿಟ್ಟು ಬಂದಿದ್ದು. ಎಲ್ಲಿಂದ ಬಂದ್ಯೋ ಅಲ್ಲಿಗೆ ಹೋಗು ಅಂತ ಹೇಳಿದ್ದೆ. ಎಲ್ಲಾದ್ರೂ ಹೋಗಿ ಸತ್ತು ಹೋಗು ಅಂತ ಹೇಳಿದ್ದೆ. ಆದ್ರೆ ಮತ್ತೆ ನನ್ನ ಲೈಫ್‌ಗೆ ವಕ್ಕರಿಸಿಕೊಂಡಿದ್ದಾಳೆ. ಏನು ಮಾಡೋದು ನನ್ನ ಕರ್ಮ" ಎಂದಿದ್ದಾನೆ. ಇದನ್ನು ಕೇಳಿದ ಕುಸುಮಾಗೆ ಸತ್ಯಾಂಶ ತಿಳಿದಿದೆ.

ಮಗನ ಕಪಾಳಕ್ಕೆ ಹೊಡೆದ ಕುಸುಮಾ
ಸೊಸೆ ಮನೆಗೆ ಬಂದಾಗ ಸುಮ್ಮನೆ ಅಪಾರ್ಥ ಮಾಡಿಕೊಂಡೆ ಎಂದು ಕುಸುಮಾ ಕೊರಗಿದ್ದಾಳೆ. "ಏನೇನೋ ಅಂದರೂ ಅನ್ನಿಸಿಕೊಂಡು ಸುಮ್ಮನೆ ಇದ್ದಳು. ನಿನ್ನ ಮಗನೇ ನನ್ನನ್ನು ನಡು ರಸ್ತೆಯಲ್ಲಿ ಬಿಟ್ಟು ಬಂದಿದ್ದು ಅಂತ ಒಂದೇ ಒಂದು ಮಾತು ಕೂಡ ಹೇಳಲಿಲ್ಲ" ಎಂದು ಕುಸುಮಾ ಕಣ್ಣೀರು ಹಾಕಿದ್ದಾಳೆ. ಮತ್ತೆ ಮತ್ತೆ ತಾಂಡವ್, ಭಾಗ್ಯಾಳ ಬಗ್ಗೆಯೇ ಹೇಳಲು ಹೋದಾಗ ಕಪಾಳಕ್ಕೆ ಬಾರಿಸಿದ್ದಾಳೆ.
ಭಾಗ್ಯಾಳನ್ನು ಹೊರಗೆ ನಿಲ್ಲಿಸಿದ ಶ್ರೇಷ್ಠಾ
ಇತ್ತ ಶ್ರೇಷ್ಠಾ ಈ ಗಳಿಗೆಯನ್ನೇ ಬಂಡವಾಳ ಮಾಡಿಕೊಂಡಿದ್ದಾಳೆ. ಭಾಗ್ಯಾಳನ್ನು ಮನೆಯ ಒಳಗೆ ಬರದಂತೆ ತಡೆದು ಮಜಾ ನೋಡುತ್ತಿದ್ದಾಳೆ. ಅವತ್ತು ಕುಸುಮಾ ನನಗೆ ಮಾಡಿದ ಅನ್ಯಾಯಕ್ಕೆ ಇವತ್ತು ದಂಡ ಕಟ್ಟಬೇಕು ಎಂಬ ಹಠ ತೊಟ್ಟಿದ್ದಾಳೆ. ಇದರ ನಡುವೆ ತಾಂಡವ್, ಜೈಲಿನಿಂದ ಬಿಡಿಸಿಕೊಂಡು ಬಂದಿದ್ದು ಶ್ರೇಷ್ಠಾ ಎಂದೇ ಹೇಳಿದ್ದಾನೆ. ಇದನ್ನು ಕೇಳಿ ಕುಸುಮಾ ಪಿತ್ತ ನೆತ್ತಿಗೇರಿದೆ. ಬಹಳ ಬೇಗ ರಿಯಾಕ್ಟ್ ಮಾಡದೆ ಬಾರಪ್ಪ ಸತ್ಯಾಂಶ ಏನು ಅಂತ ತೋರಿಸ್ತೀನಿ ಅಂತ ಮಗನನ್ನು ಕರೆದುಕೊಂಡು ಹೊರಟಿದ್ದಾಳೆ. ಶ್ರೇಷ್ಠಾಳನ್ನು ಕೂಗಿದ್ದಾಳೆ. ಮೊದಲೇ ಕುಸುಮಾಗೆ ಶ್ರೇಷ್ಠಾಳಿಂದಾನೇ ಮಗನ ಸಂಸಾರ ಹಾಳಾಗ್ತಾ ಇದೆ ಅನ್ನೋ ಅನುಮಾನ ಇರುವಾಗ ಸುಮ್ಮನೆ ಬಿಡುತ್ತಾಳಾ..?


Click it and Unblock the Notifications











