Bhagyalakshmi: ಕುಸುಮಾಳಿಗೆ ಒಳ್ಳೆಯವಳಾಗುವುದಕ್ಕೆ ಹೋಗಿ ತಾಂಡವ್ ದೃಷ್ಟಿಯಲ್ಲಿ ದುಷ್ಮನ್ ಆದಳಾ ಶ್ರೇಷ್ಠಾ?
ಶ್ರೇಷ್ಠಾಳ ಮೇಲಿನ ಮೋಹದಿಂದ ತಾಂಡವ್, ಭಾಗ್ಯಾಳನ್ನು ನಿಂದಿಸುವುದಕ್ಕೆ ಶುರು ಮಾಡಿದ್ದ. ಈ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ತಾಂಡವ್ ಮನಸ್ಸಿಗೆ ಹಿಡಿಸುವ ಎಲ್ಲಾ ಗುಣಗಳಿರುವ ಶ್ರೇಷ್ಠಾಳ ಪರಿಚಯ ಅದ್ಯಾವಾಗ ಆಯ್ತೋ ಆಗ ಎಲ್ಲವೂ ಉಲ್ಟಾ ಆಗೋಗಿದೆ. ಶ್ರೇಷ್ಠಾಳ ಬುದ್ದಿವಂತಿಕೆ ಮುಂದೆ ಭಾಗ್ಯಾಳ ಮುಗ್ಧತೆಯೇ ದಡ್ಡತನವೆಂದು ಹೀಯಾಳಿಸಲು ಶುರು ಮಾಡಿದ್ದಾನೆ.
ಒಮ್ಮೆ ಶ್ರೇಷ್ಠಾ ಬಲವಂತ ಮಾಡಿದ್ದಕ್ಕಾಗಿ ಮನೆ ಬಿಟ್ಟು ಬಂದಿದ್ದ. ಆಗ ಶುರುವಾದ ಸಮಸ್ಯೆಯಿಂದ ಜೈಲಿಗೂ ಹೋಗಿ ಬಂದಿದ್ದ. ಅದಕ್ಕೆ ಶ್ರೇಷ್ಠಾಳೇ ಕಾರಣ. ಆದರೆ, ಅದು ಕೂಡ ಭಾಗ್ಯಾಳ ದಡ್ಡತನ ಎಂದೇ ಬಿಂಬಿತವಾಗಿದೆ. ಅದರ ಹಿಂದಿನ ಒಳ್ಳೆಯದ್ದು ಮ್ಯಾಟರ್ ಆಗುತ್ತಿಲ್ಲ. ಈಗ ಶ್ರೇಷ್ಠಾ ಕುಸುಮಾಳ ಬಳಿ ಒಳ್ಳೆಯವಳಾಗಲೂ ಹೋಗಿ, ತಾಂಡವ್ ಮುಂದೆ ಕೆಟ್ಟವಳಾಗಿದ್ದಾಳೆ.

ಕುಸುಮಾ ಮುಂದೆ ಭಯ ಬಿದ್ದಳಾ ಶ್ರೇಷ್ಠಾ?
ತಾಂಡವ್ ಸ್ಟೇಷನ್ ಒಳಗೆ ಕೂತಿದ್ದಾಗ, ಕಾರ್ಪೋರೇಟರ್ ಕಾಲು, ಕೈ ಹಿಡಿದು ಬಿಡಿಸಿಕೊಂಡು ಬಂದಿದ್ದು ಭಾಗ್ಯಾ. ಆದರೆ, ಆ ಕ್ಷಣದಲ್ಲಿದ್ದ ತಾಂಡವ್ ನೋವನ್ನೇ ಬಂಡವಾಳ ಮಾಡಿಕೊಂಡ ಶ್ರೇಷ್ಠಾ ತಾನೇ ನಿನ್ನನ್ನು ಬಿಡಿಸಿದ್ದು ಎಂದಿದ್ದಳು. ಅದನ್ನು ನಂಬಿಕೊಂಡ ತಾಂಡವ್, ಅಮ್ಮನ ಮುಂದೆ ವಾದ ಮಾಡಿದ್ದಾಳೆ. ಕುಸುಮಾ ಮೊದಲೇ ಕೇಳಬೇಕಾ..? ಬುದ್ದಿವಂತೆ. ಮಕ್ಕಳ ತಪ್ಪನ್ನು ಮಕ್ಕಳ ಮುಂದೆನೇ ಸಾಬೀತುಪಡಿಸುವ ಜಾಣೆ. ಈಗ ಆಗಿದ್ದು ಅದೇ ತಾಂಡವ್‌ಗೆ ಸತ್ಯದ ದರ್ಶನವಾಗಬೇಕಿತ್ತು. ಭಾಗ್ಯಾ ಬಾಯಿ ಬಿಡಲಿಲ್ಲ. ಆದರೆ ಶ್ರೇಷ್ಠಾಳಿಂದಾನೇ ಕುಸುಮಾ ಬಾಯಿ ಬಿಡಿಸಿದ್ದಾಳೆ.
ಭಾಗ್ಯಾಳಿಗೆ ಬೈತಿದ್ರೆ ಶ್ರೇಷ್ಠಾಗೆ ಫುಲ್ ಖುಷಿ
ಕುಸುಮಾ ಶ್ರೇಷ್ಠಾಳನ್ನು ಗದರಿದ್ದೆ ತಡ, ಶ್ರೇಷ್ಠಾ ಸತ್ಯ ಒಪ್ಪಿಕೊಂಡಿದ್ದಾಳೆ. ತಾಂಡವ್‌ನನ್ನು ಜೈಲಿನಿಂದ ಬಿಡಿಸಿದ್ದು ನೀನಾ, ಎಂದು ಗದರಿದ್ದೇ ತಡ, ಭಾಗ್ಯಾ ಅಂತ ಸತ್ಯ ಹೇಳಿಯೇ ಬಿಟ್ಲು. ಶ್ರೇಷ್ಠಾಳ ಮಾತಿಗೆ ಒಂದು ಕ್ಷಣ ತಾಂಡವ್ ಶಾಕ್ ಆಗಿದ್ದ. ಆಗ ಕುಸುಮಾ ಕೇಳಿಸ್ಕೊಂಡೇನಪ್ಪ. ನಿನ್ನ ಬಿಡಿಸಿದ್ದು ಭಾಗ್ಯಾ ಎಂದಿದ್ದಾರೆ.

ತಾಂಡವ್‌ಗೆ ಅಪ್ಪ ಅಮ್ಮ ಸಿಗಲ್ಲ
ತನ್ನ ಸೆರಗೊಡ್ಡಿ ತನ್ನ ಗಂಡನದ್ದು ತಪ್ಪಿಲ್ಲ ಎಂದಿದ್ದಕ್ಕೆ ಆ ರೌಡಿ ನಿನ್ನ ಬಿಟ್ಟು ಕಳಿಸಿದ್ದಾನೆ ಎಂದಾಗ, ತಾಂಡವ್, ಭಾಗ್ಯಾ ಮೇಲೆನೂ ಗೌರವ ಹುಟ್ಟಲಿಲ್ಲ. ಬದಲಿಗೆ ಮತ್ತಷ್ಟು ಕೋಪ ಬಂದಿದೆ. "ಇವಳು ಸತಿ ಸಾವಿತ್ರಿ ಥರ ಅಲ್ಲಿ ಹೋಗಿ ಸೆರಗೊಡ್ಡಿ ಬಿಡಿಸಿಕೊಂಡು ಬರೋದು. ಈಗ ಅಲ್ಪಸ್ವಲ್ಪ ಉಳಿದಿದ್ದ ಮರ್ಯಾದೆಯೂ ಹೋಗಿದೆ. ತಾಂಡವ್ ಸೂರ್ಯವಂಶಿ ಹೆಂಡ್ತಿ, ಆ ರೌಡಿಯ ಮುಂದೆ ಅಂಗಲಾಚಿದ್ದಾಳೆ ಅಂತ" ಭಾಗ್ಯಾಳನ್ನು ಮತ್ತೆ ನಿಂದಿಸಿದ್ದಾನೆ. ಜೊತೆಗೆ ಯಾವುದೇ ಕಾಣರಕ್ಕೂ ನಾನು ಆ ಮನೆಗೆ ಬರಲ್ಲ ಎಂದಿದ್ದಾನೆ. ಕುಸುಮಾ ಎಷ್ಟೇ ಆದರೂ ಸೊಸೆ ಪರ. ಒಂದೇ ಮಾತು. ನಿಂಗೆ ಭಾಗ್ಯಾ ಬೇಡವಾದರೆ ಅಪ್ಪ- ಅಮ್ಮನನ್ನು ಮರೆತು ಬಿಡು ಎಂದಿದ್ದಾರೆ. ಅಪ್ಪ ಅಮ್ಮ ಬೇಕೆಂದಾದರೇ ಮನೆಗೆ ಬಾ ಎಂಬ ಆಯ್ಕೆ ನೀಡಿದ್ದಾಳೆ.
ಶ್ರೇಷ್ಠಾಳ ಮಾತು ಕೇಳಿ ಶಾಕ್ ಆದ ತಾಂಡವ್
ಶ್ರೇಷ್ಠಾ ಇದ್ದಕ್ಕಿದ್ದ ಹಾಗೇ ತಾಂಡವ್ ನೀನು ಮನೆಗೆ ಹೋಗು ಫ್ಯಾಮಿಲಿ ಮುಖ್ಯ ಎಂದಿದ್ದಾಳೆ. ಇದು ತಾಂಡವ್‌ಗೆ ಮೊದಲ ಶಾಕ್. ಅವರ ಅಮ್ಮ ನೀನು ಇಲ್ಲಿರೋದನ್ನು ಫೋನ್ ಮಾಡಿ ಹೇಳಿದ್ದಾಳೆ ಎಂದಾಗ ತಾಂಡವ್‌ಗೆ ಮತ್ತೊಂದು ಶಾಕ್ ಆಗಿದೆ. ನಂಬಿದ್ದ ಶ್ರೇಷ್ಠಾಳೇ ಈ ರೀತಿ ಮಾಡಿಬಿಟ್ಟಳಲ್ಲ ಅಂತ ತಾಂಡವ್ ಕೋಪ ಮಾಡಿಕೊಂಡು ಹೊರಟೆ ಬಿಟ್ಟಿದ್ದಾನೆ. ಶ್ರೇಷ್ಠಾ ಕುಸುಮಾಳ ಬಳಿ ಒಳ್ಳೆಯವಳಾಗುವುದಕ್ಕೆ ಹೋಗಿ ತಾಂಡವ್ ಎದುರು ಕೆಟ್ಟವಳಾಗಿದ್ದಾಳೆ.


Click it and Unblock the Notifications











