Bhagyalakshmi: ಮನೆಯಿಲ್ಲದೆ ಬೀದಿಗೆ ಬಿದ್ದ ಶ್ರೇಷ್ಠಾ.. ಸಂಕಷ್ಟಕ್ಕೆ ಬರಲೇ ಇಲ್ಲ ತಾಂಡವ್..!
ತಾಂಡವ್ ಮತ್ತು ಶ್ರೇಷ್ಠಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸಂಪ್ರದಾಯವೇ ಗೊತ್ತಿಲ್ಲದ ಹುಡುಗಿ ಎಂದು ಕುಸುಮಾ ಯಾವಾಗಲೂ ನಿಂದಿಸುತ್ತಾನೇ ಇರುತ್ತಾಳೆ. ಈಗ ಶ್ರೇಷ್ಠಾ ತಾಂಡವ್‌ನನ್ನು ಪಡೆಯಬೇಕೆಂಬ ಹಠದ ಜೊತೆಗೆ ಕುಸುಮಾಳನ್ನು ಒಲಿಸಿಕೊಂಡು, ತಾಂಡವ್‌ನನ್ನು ಸಂಪೂರ್ಣ ತನ್ನವನನ್ನಾಗಿ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದಾಳೆ.
ಅದರ ಒಂದು ಭಾಗವಾಗಿ ತಾಂಡವ್ ತನ್ನ ಮನೆಯಲ್ಲಿರುವುದನ್ನು ಕುಸುಮಾಗೆ ತಿಳಿಸಿದ್ದಾಳೆ. ಮಗ ಬರದೆ ಕಂಗಲಾಗಿದ್ದ ಕುಸುಮಾ ಮತ್ತು ಭಾಗ್ಯಾ ಶ್ರೇಷ್ಠಾಳ ಮನೆಗೆ ಬಂದು ಏನೋ ಒಂದು ಮಾತನಾಡಿ ಕರೆದುಕೊಂಡು ಹೋಗಿದ್ದಾರೆ. ಆಗ ಕುಸುಮಾ, ಶ್ರೇಷ್ಠಾಗೆ ಶಬ್ಬಾಶ್ ಗಿರಿ ಕೊಟ್ಟು ಹೋಗಿದ್ದಾಳೆ.

ತಾಂಡವ್ ಯಾರೆಂದು ಸತ್ಯ ತಿಳಿದೇ ಹೋಯ್ತು
ಶ್ರೇಷ್ಠಾಗೆ ಕರ್ಮ ರಿಟರ್ನ್ ಅನ್ನೋ ಅನುಭವ ಬೇಗ ಆಗಿದೆ. ಭಾಗ್ಯಾಳನ್ನು ಮನೆಯ ಒಳಗೆ ಕರೆಯದೆ ಗೇಟ್ ಬಳಿಯೇ ನಿಲ್ಲಿಸಿದ್ದಳು. ಇದು ಶ್ರೇಷ್ಠಾಳಿಗೆ ಸಮಸ್ಯೆ ತಂದೊಡ್ಡಿದೆ. ಮನೆಯ ಓನರ್ ಭಾಗ್ಯಾಳನ್ನು ಕೇಳಿದಾಗ ನನ್ನ ಗಂಡ, ಅತ್ತೆ ಒಳಗಿದ್ದಾರೆ ಎಂದು ಹೇಳಿದ್ದಾಳೆ. ಮನೆಯಿಂದ ಭಾಗ್ಯಾಳ ಜೊತೆಗೆ ತಾಂಡವ್ ಹೋಗುವುದನ್ನು ನೋಡಿದಾಗ ಕನ್ಫರ್ಮ್ ಆಗಿದೆ. ಅಂದ್ರೆ ತಾಂಡವ್‌ಗೆ ಮದುವೆಯಾಗಿರುವುದು ಮನೆಯ ಮಾಲಕಿಗೆ ಗೊತ್ತಾಗಿದೆ.
ಭಾಗ್ಯಳಿಗೆ ಕಿರುಕುಳ ನೀಡುತ್ತಿರುವ ತಾಂಡವ್
ಮನೆಯವರೆಲ್ಲಾ ಭಾಗ್ಯಾಳನ್ನು ಹೊಗಳುತ್ತಿರುವುದು ತಾಂಡವ್‌ಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಅಮ್ಮನಿಗೂ ಕ್ಲಾಸ್ ತೆಗೆದುಕೊಂಡ. ಈಗ ಮನೆಗೆ ಬಂದಾಗ ಅಪ್ಪ ಕೂಡ ಭಾಗ್ಯಾಳನ್ನೇ ಹೊಗಳುತ್ತಿದ್ದಾರೆ. ತಾಂಡವ್‌ಗೆ ಭಾಗ್ಯಾ ಮಾಡಿದ್ದು ಸರಿ ಅಂತ ಅನ್ನಿಸುತ್ತಲೆ ಇಲ್ಲ. ಈಗ ರೂಮಿಗೆ ಹೋಗಿ, ಭಾಗ್ಯಾಳ ಬಟ್ಟೆಯನ್ನೆಲ್ಲಾ ಮಡಚಿ ಇಡುತ್ತಿದ್ದಾನೆ. ಇದು ಭಾಗ್ಯಾಳಿಗೆ ಸಹಿಸಲು ಆಗುತ್ತಿಲ್ಲ. ಮನವಿ ಮಾಡಿಕೊಳ್ಳುತ್ತಿದ್ದರು, ತಾಂಡವ್ ಕೇಳಿಸಿಕೊಳ್ಳುತ್ತಿಲ್ಲ. ಇಲ್ಲ ಭಾಗ್ಯಾ, ನೀನು ಮಹಾರಾಣಿಯಂತೆ ಕೂತಿರಬೇಕು ಎಂದು ಕೂರಿಸಿದ್ದಾನೆ. ಇದು ಭಾಗ್ಯಾಳಿಗೆ ಮತ್ತೆ ಮತ್ತಷ್ಟು ಕಿರುಕುಳದಂತೆ ಕಂಡಿದೆ.

ಬೀದಿಗೆ ಬಂದ ಶ್ರೇಷ್ಠಾ
ಶ್ರೇಷ್ಠಾಳನ್ನು ಕಂಡರೆ ಮನೆಯ ಓನರ್‌ಗೆ ಅಷ್ಟಕ್ಕೆ ಅಷ್ಟೇ. ತಾಂಡವ್ ವಿಚಾರವಾಗಿ ಮೊದಲೇ ಎಚ್ಚರಿಕೆ ಕೊಟ್ಟಿದ್ದಳು. ಸಂಪ್ರದಾಯ ಅಂತ ಮಾತನಾಡುವ ಮನೆ ಓನರ್‌ಗೆ ಶ್ರೇಷ್ಠಾಳ ಬಗ್ಗೆ ಸತ್ಯ ಗೊತ್ತಾದ ಮೇಲೆ ಹಿಂದೆ ಮುಂದೆ ನೋಡಲೇ ಇಲ್ಲ. ಮನೆಯಿಂದ ಎಳೆದು ತಂದು, ಹೊರಗೆ ಹಾಕಿದ್ದಾಳೆ. ಈಗ ಶ್ರೇಷ್ಠಾ ಯಾರು ಗತಿಯಿಲ್ಲದೆ ಮನೆಯಿಂದ ಹೊರಗೆ ಬಿದ್ದಿದ್ದಾಳೆ.
ಶ್ರೇಷ್ಠಾಳ ಹೊಸ ಶಪಥ ಏನು..?
ಕಾವ್ಯಾ ಬೆಸ್ಟ್ ಫ್ರೆಂಡ್. ಈಗ ಶ್ರೇಷ್ಠಾಳ ನಿಜವಾದ ಸ್ಥಿತಿಯನ್ನು ವಿವರಿಸಿದ್ದಾಳೆ. ನೋಡು ಕರ್ಮ ರಿಟರ್ನ್ಸ್ ಅನ್ನೋದು ಇದಕ್ಕೇನೆ. ನೀನು ಭಾಗ್ಯಾಳಿಗೆ ನೋವು ಕೊಟ್ಟೆ, ಅದಕ್ಕೆ ನೀನು ಬೀದಿಗೆ ಬಿದ್ದೆ. ಅದಕ್ಕೆ ಯಾರಿಗೂ ನೋವು ಕೊಡಬಾರದು ಎಂದಾಗ ಶ್ರೇಷ್ಠಾಗೆ ಸಹಿಸಲು ಆಗಿಲ್ಲ. ಇಷ್ಟೆಲ್ಲ ಹೇಳಿ ಹಂಗಿಸಬೇಡ ಎಂದಿದ್ದಾಳೆ. ಕಾವ್ಯಾ ವಾಪಾಸ್ ಊರಿಗೆ ಹೋಗು ಎಂದಾಗಲೂ ಅದಕ್ಕೆ ಶ್ರೇಷ್ಠಾ ಒಪ್ಪಿಕೊಂಡಿಲ್ಲ. ಮನೆಗೆ ಹೋದರೆ ಮದುವೆ ಮಾಡಿ ಬಿಡುತ್ತಾರೆ ಎಂಬ ವಾದ ಮಂಡಿಸಿದ್ದಾಳೆ. ಕಡೆಗೆ ಕಾವ್ಯಾ ತಮ್ಮ ಮನೆಗೆ ಕರೆದಿದ್ದಾಳೆ. ನಿಂಗೆ ಒಂದು ವ್ಯವಸ್ಥೆ ಆಗುವ ತನಕ ನಮ್ಮ ಮನೆಯಲ್ಲಿ ಇರು. ಆದರೆ, ಕಂಡಿಷನ್ ಮೇಲೆ ತಾಂಡವ್‌ನ ಮನೆ ಬಳಿ ಕರೆಯುವಂತಿಲ್ಲ. ಮೀಟ್ ಮಾಡುವಂತಿಲ್ಲ ಎಂದಿದ್ದಾಳೆ. ಅದಕ್ಕೆ ಆಯ್ತು ಎಂದು ಒಪ್ಪಿಕೊಂಡು ಹೊರಟ ಶ್ರೇಷ್ಠಾ. ನನ್ನನ್ನು ಈ ಸ್ಥಿತಿಗೆ ತಂದ ಕುಸುಮಾ ಮನೆಯ ನೆಮ್ಮದಿ ಹಾಳು ಮಾಡುವ ಶಪಥ ಮಾಡಿದ್ದಾಳೆ.


Click it and Unblock the Notifications











