Bhagyalakshmi: ಸತ್ಯ ಹೇಳಿಯೇ ಬಿಟ್ಲು ಭಾಗ್ಯಾ.. ತಾಂಡವ್‌ಗಿರೋ ಮುಂದಿನ ದಾರಿ ಏನು?
ತಾಂಡವ್ ಅದೆಷ್ಟು ಮುಂಗೋಪಿ ಅಂದ್ರೆ ಯಾವ ವಿಚಾರವನ್ನು ಶಾಂತವಾಗಿ ತೆಗೆದುಕೊಳ್ಳುವುದಿಲ್ಲ. ಅಮ್ಮನ ಮುಂದೆ ಮಾತನಾಡದ ತಾಂಡವ್, ಭಾಗ್ಯಾ ಅಂದ್ರೆ ಉರಿದು ಬೀಳುತ್ತಾನೆ. ಭಾಗ್ಯಾ ಏನೇ ಮಾಡಿದರೂ ಅದು ಅವನ ಕಣ್ಣಿಗೆ ತಪ್ಪಾಗಿಯೇ ಕಾಣುತ್ತದೆ. ಈಗ ತಂದೆಯ ಆರೋಗ್ಯ ಕಾಪಾಡಿದ ವಿಚಾರಕ್ಕಷ್ಟೇ ಉರಿದುರಿದು ಬೀಳುತ್ತಿದ್ದಾನೆ. ಶ್ರೇಷ್ಠಾಳ ಜೊತೆಗಿದ್ದ ತಾಂಡವ್‌ನಿಂದ ತಂದೆಯ ಕಷ್ಟಗಾಲಕ್ಕೆ ನೆರವಾಗಲೂ ಸಾಧ್ಯವೇ ಆಗಲಿಲ್ಲ.
ಭಾಗ್ಯಾ ಎಲ್ಲಾ ಕೆಲಸ ಮಾಡಿದಳು ಎಂದಾಕ್ಷಣಾ ತಾಂಡವ್ ಮುಖದ ಲಕ್ಷಣವೇ ಬದಲಾಗಿದೆ. ಶ್ರೇಷ್ಠಾಳಿಂದಾನೇ ಈ ಎಲ್ಲಾ ಅವಾಂತರ ಆಗಿದ್ದು ಅಂತ ಗೊಣಗಿಕೊಳ್ಳುತ್ತಿದ್ದಾನೆ. ಆದ್ರೀಗ, ಹೊಸ ನಾಟಕವನ್ನು ಶುರು ಮಾಡಿದ್ದಾನೆ.

ಪೊಲೀಸ್ ಠಾಣೆಯಲ್ಲಿ ತಾಂಡವ್
ತಾಂಡವ್ ಸಮಾಧಾನವಾಗಿ ಮಾತನಾಡದೆ ಇದ್ದಿದ್ದಕ್ಕೆ ಪೊಲೀಸರಿಂದ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಪೋರೆಟರ್ ಒಬ್ಬನ ಹಣವನ್ನು ತಾಂಡವ್ ಕೊಡುವಾಗ ಮಿಸ್ಟೇಕ್ ಆಗಿದೆ. ಆ ಹಣವನ್ನು ಧೈರ್ಯವಾಗಿ ಏನು ಆಗಿಲ್ಲ ಅಂತ ವಾಪಾಸ್ ಕೊಟ್ಟು ಬಂದಿದ್ದಾನೆ. ಆದರೆ, ಅದರಲ್ಲಿ ಹಣ ಕಡಿಮೆ ಇತ್ತು. ಚೀಟಿ ನೋಡಿ ಹಣ ವಾಪಾಸ್ ತಂದು ಕೊಡಲು ಹೇಳಿದ್ದಾನೆ. ಆದರೂ, ತಾಂಡವ್ ಒಪ್ಪಿಕೊಳ್ಳಲೇ ಇಲ್ಲ. ಈಗ ಪೊಲೀಸ್ ದೂರು ನೀಡಿದ್ದಾನೆ.
ಭಾಗ್ಯಾಳಿಗೆ ಟೆನ್ಶನ್ ಅಂದ್ರೆ ಟೆನ್ಶನ್
ತಾಂಡವ್‌ನನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಬಂದಿದ್ದಾರೆ. ಪೊಲೀಸರ ಬಳಿಯೂ ಜೋರು ಜೋರು ಮಾತನಾಡಿದ್ದಾನೆ. ಕಾರ್ಪೋರೇಟರ್‌ನನ್ನೇ ಸಿಕ್ಕಾಪಟ್ಟೆ ಕೆಟ್ಟದಾಗಿ ಮಾತನಾಡಿದ್ದಾನೆ. ಇದನ್ನು ಕಂಡ ಪೊಲೀಸರು ನೇರವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಕಂಡ ಭಾಗ್ಯಾ ಕಂಗಲಾಗಿದ್ದಾಳೆ. ಮನೆಯಲ್ಲಿ ಏನು ನಡೆಯಿತು? ಪೊಲೀಸರು ಮತ್ತು ತಾಂಡವ್ ನಡುವೆ ಏನಾಯ್ತು? ಎಂಬುದು ಅರ್ಥವಾಗದೆ ನೋಡುತ್ತಾ ನಿಂತಿದ್ದಳು. ತಾಂಡವ್‌ನನ್ನು ಕೇಳುವುದಕ್ಕೆ ಹೋದರೂ, ಯಾವುದನ್ನೂ ಹೇಳಲ್ಲ. ಹೀಗಾಗಿಯೇ ಭಾಗ್ಯಾಳಿಗೆ ಏನು ಮಾಡುವುದಕ್ಕೆ ಆಗಿಲ್ಲ.

ತಾಂಡವ್ ಬಳಿ ಸತ್ಯ ಹೇಳಿದ ಭಾಗ್ಯಾ
ಪೊಲೀಸ್ ಠಾಣೆಯಲ್ಲಿದ್ದ ತಾಂಡವ್‌ನನ್ನು ನೋಡಲು ಭಾಗ್ಯಾ ಓಡೋಡಿ ಬಂದಳು. ಹಣದ ವಿಚಾರ ಅರ್ಥವಾಗಿ, ಇದು ನಾನೇ ತೆಗೆದ ಹಣ ಎಂಬುದು ಗೊತ್ತಾಗಿದೆ. ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಈ ವೇಳೆ ತಾಂಡವ್‌ನನ್ನು ಠಾಣೆಯಿಂದ ಹೊರಗೆ ಕರೆದಿದ್ದಾಳೆ. ತಾಂಡವ್ ರೇಗಿದರೂ, ಸತ್ಯ ಹೇಳಿದ್ದಾಳೆ. ಆ ಹಣ ನಾನೇ ತೆಗೆದುಕೊಂಡಿದ್ದು ಎಂಬುದನ್ನು ಹೇಳಿದ್ದಾಳೆ. ಮಾವನ ಆರೋಗ್ಯ ಕೈಕೊಟ್ಟಾಗ, ಆಸ್ಪತ್ರೆಗೆ ಹಣ ಕೊಡಲು ಇರಲಿಲ್ಲ. ಅದಕ್ಕೆ ತೆಗೆದುಕೊಂಡೆ ಎಂದಾಗ, ತಾಂಡವ್ ಸೈಲೆಂಟ್ ಆಗಿದ್ದಾನೆ. ಮುಂದಕ್ಕೆ ಏನು ಮಾಡಬೇಕೆಂದು ಯೋಚನೆ ಮಾಡಿದ್ದಾನೆ.
ನಾಟಕ ಶುರು ಮಾಡಿದ ಶ್ರೇಷ್ಠಾ
ಶ್ರೇಷ್ಠಾಳ ಆಸೆಯನ್ನು ಒಂದು ಬಾರಿ ಈಡೇರಿಸುವುದಕ್ಕೆ ಹೋಗಿ, ತಾಂಡವ್ ಸಂಕಷ್ಟಕ್ಕೆ ಸಿಲುಕಿದ್ದಾನೆ. ತಂದೆಗೆ ಹುಷಾರಿಲ್ಲದ್ದು ತಿಳಿಯಲಿಲ್ಲ. ಶ್ರೇಷ್ಠಾಳ ಮನೆ ಓನರ್ ಕೈನಲ್ಲೂ ಸಿಕ್ಕಿ ಬಿದ್ದ. ಈಗ ಇಬ್ಬರು ನಾಟಕ ಶುರು ಮಾಡಿದ್ದಾರೆ. ಭಾಗ್ಯಾ ಮತ್ತು ಕುಸುಮಾ ಆಫೀಸಿಗೆ ಬಂದ ವಿಚಾರ ತಿಳಿದು, ವಾಯ್ಸ್ ಚೆಂಜರ್ ಆಪ್ ಮೂಲಕ ಮಾತನಾಡಿ, ಕುಸುಮಾಳನ್ನೇ ಯಾಮಾರಿಸಿದ್ದಾರೆ. ಮೊದಲೇ ವಿಷ ಸೇವಿಸಿದ ನಾಟಕವನ್ನು ಶುರು ಮಾಡಿದ್ದಾಳೆ. ಫ್ರೆಂಡ್‌ಗೆ ಈ ರೀತಿ ಆಗಿದೆ ಅಂತ ಹೇಳಿ, ಕುಸುಮಾಳನ್ನು ನಂಬಿಸಿದ್ದಾರೆ. ಕುಸುಮಾ ಈ ಬಾರಿ ನಂಬಿ ಸುಮ್ಮನೆ ಆಗಿದ್ದಾಳೆ.


Click it and Unblock the Notifications











