Bhagyalakshmi: ಮಗಳಿಗೆ ಬುದ್ದಿ ಕಲಿಸಲು ಮುಂದಾದ ಭಾಗ್ಯಾಳ ಮೇಲೆ ಕೈಎತ್ತಿದ ತಾಂಡವ್.. ಕುಸುಮಾ ಮಾಡಿದ್ದೇನು..?

By ಎಸ್ ಸುಮಂತ್

ಭಾಗ್ಯಾಳ ಮುಗ್ಧತೆಯಿಂದಾಗಿ ತನ್ವಿಯ ಅಹಂಕಾರ ಹೆಚ್ಚಾಗಿದೆ. ಮಗಳೇ ಅಮ್ಮನಿಗೆ ಬೆಲೆ ಕೊಡ್ತಾ ಇಲ್ಲ. ಅಪ್ಪನ ಬೆಂಬಲವೂ ಹೆಚ್ಚಾಗಿದೆ. ಭಾಗ್ಯಾಳಿಗೆ ಮಗಳದೊಂದೆ ನೋವಲ್ಲ. ಗಂಡನಿಂದಾನೂ ಅದಕ್ಕೆ ಹತ್ತರಷ್ಟು ನೋವಿದೆ. ಎಲ್ಲವನ್ನು ನುಂಗಿಕೊಂಡು ಸುಮ್ಮನೆ ಕೂತು ಬಿಟ್ಟಿದ್ದಾಳೆ. ಹುಚ್ಚಿಯಂತೆ ಆಡಲು ಶುರು ಮಾಡಿದ್ದ ಭಾಗ್ಯಾಳನ್ನ ಅವರ ಅತ್ತೆ ಇತ್ತೀಚೆಗಷ್ಟೇ ವಾಸ್ತವಕ್ಕೆ ಕರೆ ತಂದಿದ್ದಾಳೆ.

ಮಗಳನ್ನು ಎದುರಿಸುವ ಧೈರ್ಯ ಇಲ್ಲದಂತೆ ವೀಕ್ ಮಾಡಿರುವುದೇ ತಾಂಡವ್. ಓದೋಕೆ ಬರಲ್ಲ, ಬರೆಯೋಕೆ ಬರಲ್ಲ. ಶತ ದಡ್ಡಿ ಅಂತ ಹೇಳಿ ಹೇಳಿ ಈಗ ತನ್ವಿ ಕೂಡ ಅದನ್ನೇ‌ ಅನುಸರಿಸುತ್ತಿದ್ದಾಳೆ. ತಾಯಿ ಎಂದರೆ ಅಸಹ್ಯ ಫೀಲ್ ಮಾಡ್ತಿದ್ದಾಳೆ. ಶ್ರೇಷ್ಠಾಳನ್ನೇ ತಾಯಿಯೆಂದು ಒಪ್ಪಿಕೊಳ್ಳುವ ರೇಂಜಿಗೆ ಬದಲಾಗಿದ್ದಾಳೆ‌. ಆದರೆ ಭಾಗ್ಯಾ ಕೂಡ ಈಗ ಬದಲಾಗಿದ್ದಾಳೆ.

Bhagyalakshmi serial


ಶ್ರೇಷ್ಠಾಳನ್ನು ಕರೆದುಕೊಂಡು ಹೋಗಿದ್ದ ತನ್ವಿ

ತನ್ವಿ ಅದೆಷ್ಟು ಬದಲಾಗಿದ್ದಾಳೆ ಎಂದರೆ ಭಾಗ್ಯಾಳನ್ನು ಅಮ್ಮ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆ. ಆದರೆ, ಶ್ರೇಷ್ಠಾಳನ್ನು ಬೇಕಾದರೆ ಅಮ್ಮ ಎನ್ನುತ್ತಾಳೆ. ಅದೇ ಕಾರಣಕ್ಕೆ ಮನೆಯಲ್ಲಿ ಸ್ಕೂಲಿಗೆ ಅಮ್ಮನನ್ನೇ ಕರೆದುಕೊಂಡು ಹೋಗಬೇಕು ಎಂದು ಒತ್ತಾಯ ಮಾಡಿದ್ದಕ್ಕೆ ದೊಡ್ಡ ನಾಟಕವನ್ನೇ ಆಡಿದ್ದಾಳೆ. ಪ್ರಾಜೆಕ್ಟ್ ವರ್ಕ್ ಕ್ಯಾನ್ಸಲ್ ಆಗಿದೆ ಅಂತ ಭಾಗ್ಯಾಳ ಬಳಿ ಸುಳ್ಳು ಹೇಳಿ, ಶ್ರೇಷ್ಠಾಳನ್ನು ಕರೆಸಿಕೊಂಡಿದ್ದಾಳೆ. ಇದು ಭಾಗ್ಯಾಳಿಗೆ ತಿಳಿದಾಗ ನೋವಾಗಿದೆ. ಅದರಲ್ಲೂ ಅಮ್ಮ ಮಗಳ ನಡುವೆ ಶ್ರೇಷ್ಠಾ ಡಬಲ್ ಗೇಮ್ ಆಡುವುದಕ್ಕೆ ಶುರು ಮಾಡಿದ್ದಾಳೆ.

ಫಸ್ಟ್ ಟೈಮ್ ಪ್ರಶ್ನೆ ಮಾಡಿದ ಭಾಗ್ಯಾ

ಪ್ರಾಜೆಕ್ಟ್ ನಲ್ಲಿ ಬಹುಮಾನ ಬಂದಿದ್ದನ್ನು ಮನೆಯಲ್ಲಿ ಖುಷಿಯಾಗಿ ಹೇಳಿಕೊಳ್ಳುತ್ತಾ ಇದ್ದ ತನ್ವಿ, ಮಾಡಿದ ತಪ್ಪನ್ನು ಮುಚ್ಚಿಟ್ಟಿದ್ದಳು. ಭಾಗ್ಯಾ, ಎಲ್ಲವನ್ನು ಅಡುಗೆ ಮನೆಯಲ್ಲಿಯೇ ನಿಂತು ಕೇಳಿಸಿಕೊಳ್ಳುತ್ತಿದ್ದಳು. ತಾಳ್ಮೆ ಕೆಟ್ಟಾಗ ಅಲ್ಲಿಗೆ ಬಂದಳು. ಮಾಡಿದ ಎಲ್ಲಾ ತಪ್ಪನ್ನು ಮನೆಯವರ ಮುಂದೆ ಹೇಳಿದಳು. ತನ್ವಿಯ ದುರಹಂಕಾರ ಎಷ್ಟಾಗಿದೆ ಎಂದರೆ ತನ್ನ ತಪ್ಪಿಗೆ ಕ್ಷಮೆ ಕೇಳುವ ಬದಲು, ಸಮರ್ಥನೆ ಮಾಡಿಕೊಂಡಿದ್ದಳು.

Bhagyalakshmi serial

ಭಾಗ್ಯಾ ತಾಳ್ಮೆ ಕಳೆದುಕೊಂಡಾಗ

ಭಾಗ್ಯಾ ನೋಡುವ ತನಕ ನೋಡಿದಳು. ಹುಟ್ಟಿದಾಗಿನಿಂದ ಈಗಲೂ ನಿನ್ನ ಆರೋಗ್ಯ ಎಲ್ಲವನ್ನು ನೋಡಿಕೊಳ್ಳುತ್ತಿರುವುದು ನಾನೇ. ಅಮ್ಮ ಆದ ನನಗೆ ಏನು ಗೊತ್ತಾಗಲ್ವಾ. ಗೊತ್ತಾಗದೆ ನಿನ್ನ ಹೆತ್ತಿದ್ದೀನಾ ಅಂತ ಜೋರಾಗಿ ಬಾರಿಸಲು ಶುರು ಮಾಡಿದಳು. ಕಪಾಳಕ್ಕೆ ಬಾರಿಸಿದಳು. ಕುಸುಮಾ ಬಯಸಿದ್ದು ಅದನ್ನೇ. ತನ್ವಿಯ ದುರಹಂಕಾರವನ್ನು ಭಾಗ್ಯಾಳೇ ಇಳಿಸಬೇಕಾಗಿತ್ತು. ಈಗ ಮೊದಲ ಹೆಜ್ಜೆ ಶುರುವಾಗಿದೆ. ಅದಕ್ಕೆಲ್ಲ ಕಾರಣ ಲಕ್ಷ್ಮೀಯ ಧೈರ್ಯದ ಮಾತು.

ಭಾಗ್ಯಾಳ ಮೇಲೆ ಕೈ ಎತ್ತಿದ ತಾಂಡವ್

ಮಗಳಿಗೆ ಅಷ್ಟೆಲ್ಲಾ ಹೊಡೆದಿದ್ದಕ್ಕೆ ತಾಂಡವ್ ಮಧ್ಯೆ ಬಂದ. ನನ್ನ ಮಗಳಿಗೆ ಹೊಡೆಯಲು ಎಷ್ಟು ಧೈರ್ಯ ಅಂತ ಕೈ ಎತ್ತಲೂ ಹೋದಾಗ ಕುಸುಮಾ ತಡೆಹಿಡಿದು, ಬೈದಳು. "ನೀನು ನನ್ನ ಮಗನೇನಾ. ಹೆಣ್ಣಿನ ಮೇಲೆ ಕೈ ಎತ್ತುತ್ತೀಯಾ. ಅವಳು ಸರಿಯಾಗಿಯೇ ಮಾಡುತ್ತಿದ್ದಾಳೆ. ಹೆತ್ತಿದ್ದಾಳೆ ಅವಳಿಗೆ ಅಧಿಕಾರ ಇದೆ. ಹಾಗೆ ಬಿಟ್ರೆ ಮುಂದಕ್ಕೆ ಅಜ್ಜಿ - ತಾತ ಕೂಡ ಅವಳಿಗೆ ಅಸಹ್ಯವಾಗುತ್ತೆ. ನಿಂಗೆ ತಲೆ ಕೂದಲು ಬಿಳಿಯಾದ್ರೆ ನಿನ್ನನ್ನು ಅಸಹ್ಯ ಮಾಡಿಕೊಳ್ಳುತ್ತಾಳೆ" ಎಂದಾಗ ತಾಂಡವ್ ಮತ್ತೆ ಭಾಗ್ಯಾ ವಿರುದ್ಧವಾಗಿಯೇ ಮಾತನಾಡಿದ್ದಾನೆ. "ಅವಳಿಗೇ‌ನಮ್ಮ ಗೊತ್ತಾಗುತ್ತೆ. ಓದಿರೋದು ಒಂಭತ್ತನೇ ಕ್ಲಾಸು. ತನ್ವಿಗೆ ಅಸಹ್ಯ ಆಗಲ್ವಾ" ಎಂದಾಗ ಕುಸುಮಾ, "ನಾನು ಏಳನೇ ಕ್ಲಾಸು ಓದಿರೋದು. ನನ್ನ ಕಂಡ್ರೆ ನಿಂಗೆ ಎಷ್ಟು ಅಸಹ್ಯ ಆಗುತ್ತೆ" ಎಂದಾಗ ತಾಂಡವ್ ಗೆ ಉತ್ತರವಿಲ್ಲ.

More from Filmibeat

English summary
Colors Kannada Bhagyalakshmi serial Written Update on May 25th episode. Here is the details Bhagya class to Tanvi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X