Bhagyalakshmi: ಅತ್ತೆ ಮಾವನಿಂದ ವಿದ್ಯಾವಂತೆಯಾಗ್ತಾಳಾ ಭಾಗ್ಯಾ? ಪ್ರೇಕ್ಷಕರು ಫುಲ್ ಹ್ಯಾಪಿ..!
ಭಾಗ್ಯಾಳ ಮುಗ್ಧತೆಯನ್ನು ಹಲವರು ಅಸಹಾಯಕತೆ ಎಂದೇ ಭಾವಿಸಿದ್ದರು. ಕೊಂಕು ಮಾತುಗಳಿಂದಾನೇ ಭಾಗ್ಯಾಳನ್ನು ಮತ್ತಷ್ಟು ವೀಕ್ ಮಾಡಿ ಇಟ್ಟಿದ್ದರು. ಭಾಗ್ಯಾಳಿಗೆ ಸ್ವಂತ ಮಗಳನ್ನೇ ಸಂಭಾಳಿಸುವಷ್ಟು ಧೈರ್ಯ ಇರಲಿಲ್ಲ. ಸ್ವಂತ ಮಗಳು ಅವಮಾನ ಮಾಡುತ್ತಿದ್ದರೆ ಕಣ್ಣಲ್ಲಿ ನೀರು ಹಾಕಿಕೊಂಡು ಕೂರುತ್ತಿದ್ದಳು.
ಭಾಗ್ಯಾ ಅದ್ಯಾವಾಗ ಬದಲಾಗುತ್ತಾಳೆ ಅಂತ ಅತ್ತೆ ಮತ್ತು ಮಾವ ಕಾಯುತ್ತಿದ್ದಳು. ಭಾಗ್ಯಾಳ ವೀಕ್ನೆಸ್, ಭಾಗ್ಯಾಳ ಮಗಳ ನಿರೀಕ್ಷೆ ಎಲ್ಲವೂ ಶ್ರೇಷ್ಠಾಳಿಗೆ ತಿಳಿದಿದೆ. ಅದಕ್ಕೆ ಈಗ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾಳೆ. ಭಾಗ್ಯಾಳನ್ನು ಮಗಳಿಂದ ಹಾಗೂ ಗಂಡನಿಂದ ಮತ್ತಷ್ಟು ದೂರ ಮಾಡ್ತಾ ಇದ್ದಾಳೆ.

ಅತ್ತೆ ಮಾವನಿಂದ ವಿದ್ಯಾವಂತೆಯಾಗ್ತಾಳಾ ಭಾಗ್ಯಾ?
ಮಗಳಿಂದ ಒಂದೇ ಸಮನೆ ನಿಂದನೆ, ಗಂಡನಿಂದ ದಡ್ಡಿ ದಡ್ಡಿ ಎಂಬ ಮಾತು ಭಾಗ್ಯಾಳ ಮನಸ್ಸನ್ನು ಮಾತ್ರವಲ್ಲ, ಅತ್ತೆ ಮಾವನ ಮನಸ್ಸನ್ನು ಕದಡಿದೆ. ಸೊಸೆಯನ್ನು ಸದಾ ಬೈದರೂ ಕುಸುಮಾಗೆ ತನ್ನ ಸೊಸೆಯೇ ಗ್ರೇಟ್. ಸೊಸೆ ಏನೇ ಒಳ್ಳೆಯ ಕೆಲಸ ಮಾಡಿದರೂ ಅದು ತನ್ನಿಂದ ಕಲಿತಾ ಪಾಠವೇ ಆಗಿರುತ್ತದೆ ಎಂಬ ನಂಬಿಕೆ ಕುಸುಮಾದ್ದು. ಹೀಗಾಗಿ ತನ್ನ ಸೊಸೆಯಂತೆ ಮತ್ತ್ಯಾರು ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಆತ್ಮ ವಿಶ್ವಾಸ. ಈಗ ಸೊಸೆ ಸಂಕಷ್ಟದಲ್ಲಿದ್ದಾಳೆ ಎಂದರೆ ಸುಮ್ಮನೆ ಬಿಡುತ್ತಾರಾ. ಅದಕ್ಕೆ ವಿದ್ಯಾಭ್ಯಾಸ ಕಲಿಸುವುದಕ್ಕೆ ನಿರ್ಧಾರ ಮಾಡಿದ್ದಾರೆ. ಸೊಸೆಯನ್ನು ಓದಿಸಲು ನಿರ್ಧಾರ ಮಾಡಿದ್ದಾರೆ.
ತಾಂಡವ್ ಕನಸು ಎಂದಿಗೂ ನನಸಾಗುವುದೇ ಇಲ್ಲ
ತಾಂಡವ್‌ಗೆ ಇವತ್ತು ಅಂತಾನೇ ಅಲ್ಲ ಮೊದಲಿನಿಂದಾನೂ ಭಾಗ್ಯಾಳ ಮೇಲೆ ಸ್ವಲ್ಪ ಅಸಹನೆಯೇ ಸರಿ. ನನಗೆ ಮ್ಯಾಚ್ ಆಗುವ ಹೆಂಡತಿ ಅಲ್ಲ ಎಂಬ ಬೇಸರವಿದ್ದರೂ, ಹಾಗೋ ಹೀಗೋ ಸಂಸಾರದ ಗುಟ್ಟು ಹೊರಗೆ ಬರದಂತೆ ಇದ್ದ ತಾಂಡವ್, ಅದ್ಯಾವಾಗೋ ಶ್ರೇಷ್ಠಾಳ ಪರಿಚಯವಾಯ್ತೋ ಅಂದಿನಿಂದ ಭಾಗ್ಯಾಳ ಮೇಲಿನ ಬೇಸರವನ್ನು ಬಹಿರಂಗವಾಗಿಯೇ ಹೊರ ಹಾಕಲು ಶುರು ಮಾಡಿದ. ಈಗ ಭಾಗ್ಯಾ ಪ್ರೀತಿ ತೋರಿಸಲು ಹೋದರೂ ಡೋಂಟ್ ಕೇರ್ ಥರ ನಡೆದುಕೊಳ್ಳುತ್ತಿದ್ದಾನೆ.

ತನ್ವಿಗೆ ಕ್ಲಾಸ್ ತೆಗೆದುಕೊಂಡ ಭಾಗ್ಯಾ
ತನ್ವಿಗೆ ಅಮ್ಮ ಎಂದರೆ ಅಸಹನೆ ಎಂಬುದಕ್ಕಿಂತ ಹೆಚ್ಚಾಗಿ ಅಸಹ್ಯವೇ ಆಗಿ ಹೋಗಿದೆ. ಅದಕ್ಕೆಲ್ಲಾ ಕಾರಣ ತಾಂಡವ್. ಅಪ್ಪ ಆಡುವ ಒಂದೊಂದು ಮಾತುಗಳನ್ನು ತನ್ವಿ ಸರಿಯಾಗಿಯೇ ಅನುಕರಿಸುತ್ತಾಳೆ. ಅಮ್ಮ ಎಂಬ ಗೌರವವೂ ಇಲ್ಲದೇ ನಿಂಗೆ ಓದೋಕೆ ಬರೆಯೋಕೆ ಬರಲ್ಲ ಎಂದು ನಿಂದಿಸುತ್ತಾಳೆ. ಭಾಗ್ಯಾ ನೋಡುವ ತನಕ ನೋಡಿದಳು ಇವತ್ತು ಮತ್ತೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ನಾನಿಲ್ಲ ಅಂದ್ರೆ ಒಂದು ಶೂ ಹಾಕಿಕೊಳ್ಳುವುದಕ್ಕೆ ಬರಲ್ಲ, ನಂಗೆ ಎದುರು ವಾದಿಸುತ್ತೀಯಾ ಅಂತ ಉಸಿರು ಬಿಡದಂತೆ ಜಾಡಿಸಿದ್ದಾಳೆ.
ಅಮ್ಮನ ಮಾತಿಗೆ ಖುಷಿಯಾದ ಗುಂಡಣ್ಣ
ಭಾಗ್ಯಾ ಮತ್ತು ತಾಂಡವ್‌ಗೆ ಇಬ್ಬರು ಮಕ್ಕಳು. ಅದರಲ್ಲಿ ತನ್ವಿ ಅಪ್ಪನ ತದ್ರೂಪಿಯಾದರೆ, ಗುಂಡಾ ತಾತನ ತದ್ರೂಪಿ. ಅಮ್ಮನಿಗೆ ಗೌರವ ಕೊಡುತ್ತಾನೆ. ತನ್ವಿಗೂ ಆಗಾಗ ಬುದ್ದಿ ಹೇಳುತ್ತಾನೆ. ಈಗ ಅಮ್ಮ ತನ್ನ ಮುಂದೆಯೇ ಜಾಡಿಸಿದ್ದನ್ನು ನೋಡಿ ಫುಲ್ ಖುಷಿಯಾಗಿದ್ದಾನೆ. "ನಿನ್ನ ವಯಸ್ಸಲ್ಲಿ ಎಲ್ಲರಿಗೂ ಅಡುಗೆ ಮಾಡಿ ಬಡಿಸುತ್ತಿದ್ದೆ. ನೀನು ಚಿಕ್ಕವಳಿದ್ದಾಗ ನಿನ್ನ ಹೋಂ ವರ್ಕ್ ಎಲ್ಲಾ ಮಾಡಿದ್ದು ಯಾರು. ಅದು ನಾನೇ. ಹುಷಾರಿಲ್ಲ ಅಂದ್ರೆ, ಈಗಲೂ ಅಮ್ಮ ಹೆಗಲು ಬೇಕು ನಿಂಗೆ" ಅಂತೆಲ್ಲಾ ಬುದ್ದಿ ಹೇಳಿದಾಗ ಗುಂಡಣ್ಣನಿಗೆ ಆದ ಸಂತೋಷ ಅಷ್ಟಿಷ್ಟಲ್ಲ.
ಪ್ರೇಕ್ಷಕರು ಫುಲ್ ಖುಷ್
ಭಾಗ್ಯಾಳನ್ನು ತೋರಿಸುತ್ತಿದ್ದಂತ ರೀತಿ ಕೆಲವೊಮ್ಮೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿರಲಿಲ್ಲ. ಅದರಲ್ಲೂ ತನ್ವಿಯ ವರ್ತನೆಗೂ ಪ್ರೇಕ್ಷಕರು ಬೇಸರ ಹೊರ ಹಾಕಿದ್ದರು. ಆದರೆ, ಇಂದು ಭಾಗ್ಯಾಳ ಗಟ್ಟಿತನ ಕಂಡು ಖುಷಿಯಾಗಿದ್ದಾರೆ. ಭಾಗ್ಯಾ ಹೀಗೆ ಗಟ್ಟಿ ಧ್ವನಿಯಲ್ಲಿ ಮುಂದುವರೆಯಿರಿ ಎಂದು ಹಾರೈಸಿದ್ದಾರೆ.


Click it and Unblock the Notifications











