Bhagyalakshmi: ಶ್ರೇಷ್ಠಾ ಜೈಲಿಗೆ ಕಳಿಸೋ ಪ್ರಯತ್ನ ಮಾಡ್ತಿದ್ರೆ.. ಭಾಗ್ಯಾ ಅದಾಗಲೇ ಬಿಡಿಸಿದ್ದಾಯ್ತು!
ಮನೆಯವರು ಸಂಕಷ್ಟಕ್ಕೆ ಸಿಲುಕಿದಾಗ ಹೆಂಡತಿ, ಸೊಸೆಯಾದವಳು ಒದ್ದಾಡುವ ರೀತಿಯೇ ಬೇರೆ. ಪ್ರಿಯತಮೆ ಇದ್ದಾಗ ಒದ್ದಾಡುವ ರೀತಿಯೇ ಬೇರೆ ಅಂತ ಹಿರಿಯರು ಹೇಳ್ತಾರೆ. ಈಗ ಭಾಗ್ಯ ಕೂಡ ಆ ಮಾತಿಗೆ ತಕ್ಕಂತೆಯೇ ನಡೆದುಕೊಂಡಿದ್ದಾಳೆ. ತಾಂಡವ್ ತಪ್ಪೇ ಮಾಡದೆ ಸ್ಟೇಷನ್‌ನಲ್ಲಿ ಕಂಬಿ ಎಣಿಸುವಾಗ, ಭಾಗ್ಯ ಪಟ್ಟ ಪ್ರಯತ್ನಕ್ಕೂ, ಶ್ರೇಷ್ಠಾ ಪಟ್ಟ ಪ್ರಯತ್ನಕ್ಕೂ ಬಹಳ ವ್ಯತ್ಯಾಸವಿದೆ. ಸದ್ಯ ಸ್ಟೇಷನ್‌ನಿಂದ ಹೊರಗೆ ಬಂದಿದ್ದಾನೆ.
ಮನೆಯಲ್ಲೆಲ್ಲಾ ತಾಂಡವ್‌ಗೆ ಏನು ಆಯಿತೋ..? ಭಾಗ್ಯ ಬೇರೆ ಇನ್ನು ಬಂದಿಲ್ಲ. ಅವಳಿಗೇನಾಯ್ತೋ ಅಂತ ಆತಂಕದಲ್ಲಿ ಕುಳಿತಿದ್ದಾರೆ. ಮೊಮ್ಮಗ ಕೂಡ ಆ ಆತಂಕದಲ್ಲಿ ನಿದ್ದೆ ಮಾಡುತ್ತಿಲ್ಲ. ಭಾಗ್ಯಾ ಒಬ್ಬಳೆ ನಿಂತು ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಬಿಡುತ್ತಾಳೆ. ಅಷ್ಟು ತಾಳ್ಮೆಯ ಸ್ವರೂಪಿ ಅವಳು.

ಸತ್ಯ ಗೊತ್ತಾದಾಗ ಗರಂ ಆದ ಕಾರ್ಪೊರೇಟರ್
ತಾಂಡವ್ ಸ್ವಲ್ಪ ಸಮಾಧಾನದಿಂದ ಇದ್ದರೆ ಎಲ್ಲವೂ ಸರಿಯಾಗುತ್ತೆ. ಆದರೆ ತಾಂಡವ್‌ಗೆ ಕೋಪ ಮುಗಿದ ತುದಿ ಮೇಲೆ ಇರುತ್ತೆ. ಭಾಗ್ಯಾ ಹಣ ತೆಗೆದುಕೊಂಡಿರುವುದು ಗೊತ್ತಿಲ್ಲದೆ, ಕಾರ್ಪೋರೇಟರ್‌ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಅದಕ್ಕೆ ಸಿಟ್ಟಾದ ಕಾರ್ಪೊರೇಟರ್, ತಾಂಡವ್‌ನನ್ನು ಸ್ಟೇಷನ್‌ನಲ್ಲಿರುವಂತೆ ಮಾಡಿದ್ದಾನೆ. ಈಗ ಭಾಗ್ಯಾ ಕಾರ್ಪೋರೇಟರ್ ನನ್ನು ನೋಡಲು ಹಣ ತಂದಿದ್ದೀನಿ ಅಂತ ಸುಳ್ಳು ಹೇಳಿ, ಒಳಗೆ ಹೋಗಿದ್ದಾಳೆ. ಬಳಿಕ ತಂದಿಲ್ಲ ಎಂಬುದು ಗೊತ್ತಾದ ಕೂಡಲೇ ಕಾರ್ಪೊರೇಟರ್ ಹಾಗೂ ಆತನ ಹೆಂಡತಿ ಶಾಕ್ ಆಗಿದ್ದಾರೆ.
ಒಡವೆಯೆಲ್ಲಾ ಕೊಟ್ಟ ಭಾಗ್ಯಾ
ಗಂಡ ಹೆಂಡತಿ ನನ್ನ ಹತ್ರಾನೇ ಆಟ ಆಡ್ತೀರ ಎಂದು ಕಾರ್ಪೊರೇಟರ್ ರೇಗಿದಾಗ ಭಾಗ್ಯಾ, ಭಯದಿಂದಾನೇ ಉತ್ತರಿಸಿದ್ದಾಳೆ. ಮೊದಲಿಗೆ ಮೈಮೇಲಿದ್ದ ಒಡವೆಯನ್ನೆಲ್ಲಾ ಬಿಚ್ಚಿ, ಆತನ ಹೆಂಡತಿ ಕೈಗೆ ನೀಡಿದ್ದಾಳೆ. "ಹಣ ತೆಗೆದುಕೊಂಡಿದ್ದು ನಾನು. ಮಾವನವರಿಗೆ ಎದೆನೋವು ಕಾಣಿಸಿಕೊಂಡಿತ್ತು." ಅಂತ ಭಾಗ್ಯಾ ಹೇಳಿದಾಗ ಆ ವ್ಯಕ್ತಿ ಅನುಮಾನಿಸಿದ. ಬಳಿಕ ಕಣ್ಣೀರು ಹಾಕಿದಾಗ ಆ ಒಡವೆಯನ್ನೆಲ್ಲಾ ವಾಪಾಸ್ ಕೊಟ್ಟು ತೊಟ್ಟುಕೊಳ್ಳುವಂತೆ ಹೇಳಿದ್ದ.

ಕಾಲಿಡಿದು ಕ್ಷಮೆ ಕೇಳಲು ಒತ್ತಾಯ
ಸ್ಟೇಷನ್‌ನಿಂದ ಬಿಡಿಸಿ ಅಂದಾಗ ಕಾರ್ಪೊರೇಟರ್ ಒಂದು ಡಿಮ್ಯಾಂಡ್ ಇಟ್ಟಿದ್ದಾನೆ. ಹಣ ಮುಖ್ಯ ಅಲ್ಲ ಅವನು ಬಂದು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾನೆ. ಅಷ್ಟೊಂತಿದ್ದ ತಾಳ್ಮೆಯಿಂದ, ಅಣ್ಣಾ ಕ್ಷಮಿಸಿ ಎಂದು ಕೇಳುತ್ತಿದ್ದ ಭಾಗ್ಯಾಳಿಗೆ ಆಗ ಕೋಪ ನೆತ್ತಿಗೇರಿದೆ. ನಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಆಗಿದೆ. ನನ್ನ ಗಂಡ ಕೂಡ ಬಂದು ಬಾಯಲ್ಲಿ ಕ್ಷಮೆ ಕೇಳೋದು ಸರಿ, ಕಾಲಿಗೆ ಬೀಳಲು ನಾನು ಬಿಡಲ್ಲ ಎಂದು ಜೋರಾಗಿಯೇ ಹೇಳಿದ್ದಾಳೆ.
ಭಾಗ್ಯಾಳ ಸಾಹಸ ಕೇಳಿ ಶ್ರೇಷ್ಠಾಗೆ ಕೋಪ
ಭಾಗ್ಯಾಳ ಮಾತು ಕೇಳಿದ ಕಾರ್ಪೊರೇಟರ್ ಸತ್ಯ ಎಂದು ನಂಬಿ, ಅವಳ ಮಾತಿಗೆ ಸೋತು ತಾಂಡವ್‌ನನ್ನು ಬಿಡಿಸಲು ಒಪ್ಪಿದ್ದಾನೆ. ಶ್ರೇಷ್ಠಾ ಕೂಡ ತಾಂಡವ್‌ನನ್ನು ಬಿಡಿಸಲು ಒದ್ದಾಡುತ್ತಿದ್ದಳು. ಇರೋ ಬರೋ ಲಾಯರ್‌ಗಳಿಗೆ ಕರೆ ಮಾಡಿದರೂ, ಯಾರು ರೆಸ್ಪಾನ್ಸ್ ಮಾಡುತ್ತಿರಲಿಲ್ಲ. ಕಡೆಗೆ ಕಾರ್ಪೊರೇಟರ್ ಶಿವಶಂಕರ್‌ಗೆ ಕರೆ ಮಾಡಿದಳು. ತಾಂಡವ್ ಏನು ತಪ್ಪು ಮಾಡಿಲ್ಲ, ಕೇಸ್ ವಾಪಸ್ ತೆಗೆದುಕೊಳ್ಳಿ ಎಂದಾಗಲೇ ಶಿವಶಂಕರ್, ಈಗಾಗಲೇ ಬಿಡಿಸಿದ ವಿಚಾರವನ್ನು ತಿಳಿಸಿದ್ದಾನೆ. ಭಾಗ್ಯಾಳ ಬಗ್ಗೆ ಹೊಗಳಿದ್ದಾನೆ. ಇದನ್ನು ಕೇಳಿ ಶ್ರೇಷ್ಠಾ ಒಳಗೊಳಗೆ ಕುದಿಯುತ್ತಿದ್ದಾಳೆ.


Click it and Unblock the Notifications











