Bhagyalakshmi: ಶ್ರೇಷ್ಠಾಳಿಗೆ ಮಿಸ್ ಆಯ್ತು ಜಿಮ್ ಪಾಟ್ನರ್.. ಭಾಗ್ಯಾಳಿಗೆ ಸಿಕ್ಕ ಹೊಸ ಟೀಚರ್..!
ತಾಂಡವ್ ಏನೇ ಮಾಡಿದರೂ ಹಾಕಿರುವ ಮೂರು ಗಂಟಿನ ಬಂಧ ಕಿತ್ತು ಹೋಗುವುದಕ್ಕೆ ಸಾಧ್ಯವಾಗ್ತಾ ಇಲ್ಲ. ತಾಂಡವ್ ಪ್ರಯತ್ನ ಪಟ್ಟಷ್ಟು ಆ ಬಂಧ ಇನ್ನು ಗಟ್ಟಿ ಆಗ್ತಾನೆ ಇದೆ. ಯಾವ ಕಾರಣವನ್ನಿಟ್ಟುಕೊಂಡು ತಾಂಡವ್, ಭಾಗ್ಯಾಳನ್ನು ನಡು ರಸ್ತೆಯಲ್ಲಿ ಬಿಟ್ಟು ಬಂದನೋ, ಈಗ ಕುಸುಮಾ ಅದರಲ್ಲೇ ಭಾಗ್ಯಾಳನ್ನು ಬುದ್ಧಿವಂತೆ ಮಾಡುವುದಕ್ಕೆ ಹೊರಟಿದ್ದಾಳೆ.
ತಾಂಡವ್ ಯಾವತ್ತಿಗೂ ಬದಲಾಗದ ಮನಸ್ಥಿತಿ ಇರುವವನು. ಹೆಂಡತಿಯ ವಿಚಾರದಲ್ಲಿ ಬೇಸರ, ದುಃಖ, ಅಸಮಾಧಾನವಿದ್ದರೂ, ಅಮ್ಮ ಅಪ್ಪನನ್ನು ಯಾವತ್ತಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಅಮ್ಮ ಎಂದರೆ ಭಯ ಭಕ್ತಿ ಸ್ವಲ್ಪ ಜಾಸ್ತಿಯೇ ಇದೆ. ಹೀಗಾಗಿಯೇ ಸಂಸಾರ ತಾಪತ್ರಯದಲ್ಲಿ ಸಿಲುಕಿದರೂ ಮತ್ತೆ ಸರಿ ದಾರಿಗೆ ತರುತ್ತಿದ್ದಾಳೆ ಕುಸುಮಾ.

ಕುಸುಮಾಳಿಂದ ಮಿಸ್ ಆಯ್ತು ಜಿಮ್ ಪಾಟ್ನರ್
ಇವತ್ತು ಶ್ರೇಷ್ಠಾ ಜೊತೆಗೆ ಜಿಮ್ ಜಾಯಿನ್ ಆಗಬೇಕು ಎಂಬ ಆಸೆಯಿಂದ ಕಾರು ಹತ್ತಿದ್ದ ತಾಂಡವ್.ಕುಸುಮಾ ಕಾರಿನಲ್ಲಿ ಬಂದು ಕೂತಳು. ತಿಂಡಿ ತಿಂದು, ಒಂದಷ್ಟು ಸುತ್ತಾಡಿ, ಭಾಗ್ಯಾಳಿ್ಗೆ ಪುಸ್ತಕವನ್ನು ತಂದಳು. ಆ ಕಡೆ ಇಬ್ವರು ಒಟ್ಟಾಗಿ ಜಿಮ್ ಸೇರೋಣಾ ಎಂದು ಕಾಯುತ್ತಿದ್ದ ಶ್ರೇಷ್ಠಾಳ ಫೋನ್‌ಗೂ ತಾಂಡವ್ ನೋ ರೆಸ್ಪಾನ್ಸ್. ಜಿಮ್‌ನಲ್ಲಿ ಪಾಟ್ನರ್ ಇಲ್ಲದೆ ಮೆಂಬರ್‌ಶಿಪ್ ಕೊಡುವುದಕ್ಕೆ ಒಪ್ಪಿಗೆಯೇ ಇಲ್ಲ. ಕೋಪ ಮಾಡಿಕೊಂಡು ಶ್ರೇಷ್ಠಾ ಹೊರಟೇ ಬಿಟ್ಟಳು.
ಅಮ್ಮ - ಮಗಳು ಒಟ್ಟಿಗೆ ಪರೀಕ್ಷೆ
ಕುಸುಮಾ ಸೊಸೆಗೆ ಓದುವುದನ್ನು ಸಪ್ರೈಸ್ ಆಗಿ ಇಟ್ಟಿದ್ದಳು. ತನ್ವಿಯ ಪುಸ್ತಕವನ್ನು ಪೂಜೆ ಮಾಡಲು ಹೊರಟಾಗ, ತನ್ನ ಪುಸ್ತಕವನ್ನು ಇಟ್ಟು ಪೂಜೆ ಮಾಡಲು ಕುಸುಮಾ ತಿಳಿಸಿದಳು. ಈ ಸಲ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಮೊಮ್ಮಗಳು ಸೊಸೆ ಒಟ್ಟಾಗಿ ಬರೆಯುತ್ತಾರೆ ಎಂದಾಗ ತನ್ವಿಗೆ ಶಾಕ್. ಅಜ್ಜಿ ಹೇಳಿದ ಮೇಲೆ ಮುಗೀತು. ತಾಂಡವ್‌ಗೆ ಮಾತು ಬರಲ್ಲ. ಇನ್ನು ತನ್ವಿಗೆ ಮಾತನಾಡಲು ಬಿಡುತ್ತಾಳಾ?
ತಾಂಡವ್‌ನಿಂದ ಶತ ಪ್ರಯತ್ನ
ತಾಂಡವ್‌ಗೆ ಭಾಗ್ಯಾಳನ್ನು ಓದಿಸುವುದು ಸುತರಾಂ ಇಷ್ಟವಿಲ್ಲ. ಹೀಗಾಗಿಯೇ ಅಮ್ಮನ ಬಳಿ ಸಾಕಷ್ಟು ಪೂಸಿ ಹೊಡೆದ. ನೆಂಟರು ಏನಂತಾರೆ? ಅಕ್ಕ ಪಕ್ಕದವರು ಏನಂತಾರೆ? ಹೀಗೆ ಹೇಳಿದ್ದೆಲ್ಲವನ್ನು ಹೇಳಿದ ಮೇಲೂ ಅಮ್ಮ ಒಪ್ಪಲೇ ಇಲ್ಲ. ಕಡೆಗೆ ಭಾಗ್ಯಳನ್ನೇ ಕುಗ್ಗಿಸಲು ಪ್ರಯತ್ನಿಸಿದ. ತನ್ವಿಯ ಪುಸ್ತಕ ತರುವಂತೆ ಹೇಳಿ ಓದು ಎಂದ. ಆಗ ಬೇರೆ ಓದು, ಈಗ ಬೇರೆ ಓದು. ನಿನ್ನಿಂದ ಆಗಲ್ಲ ಎಂದು ಹೆದರಿಸಿದ.

ತಾಂಡವ್ ಪ್ಲ್ಯಾನ್ ಕುಸುಮಾ ಮುಂದೆ ಠುಸ್ ಪಟಾಕಿ
ತಾಂಡವ್‌ಗಂತೂ ಅಮ್ಮನ ಬಳಿ ಹೇಳುವುದಕ್ಕೆ ಹೆದರಿಕೆ. ಹೀಗಾಗಿ ಭಾಗ್ಯಾಳನ್ನು ಮುಂದೆ ಬಿಟ್ಟ. ನೀನೆ ಬೇಡ ಅಂತ ಹೇಳು ಎಂದ. ಅದನ್ನು ಹೇಳುವುದಕ್ಕೆಂದೇ ಬಂದಿದ್ದ ಭಾಗ್ಯಾಳನ್ನು ಕುಸುಮಾನೇ ತಡೆದಿದ್ದಾಳೆ. ನನ್ನ ಸೊಸೆಯನ್ನು ಎಸ್ಎಸ್ಎಲ್‌ಸಿ ಓದಿಸುವುದು ನನ್ನ ಜವಾಬ್ದಾರಿ. ಇನ್ಮುಂದೆ, ರಾಜನೇ ಭಾಗ್ಯಾಳ ಓದಿನ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ. ಅವನೇ ಹೇಳಿ ಕೊಡಬೇಕು ಎಂದು ಮನೆಯಲ್ಲಿ ಆರ್ಡರ್ ಆಗಿದೆ. ತಾಂಡವ್ ಇನ್ಮುಂದೆ ತಪ್ಪಿಸಿಕೊಳ್ಳುವುದಕ್ಕೆ ಆಗಲ್ಲ. ಭಾಗ್ಯಾಳನ್ನು ಓದಬೇಡ ಎನ್ನುತ್ತಿದ್ದ ತಾಂಡವ್ ಈಗ ಭಾಗ್ಯಾಳಿಗೆ ಗುರುವಾಗಬೇಕಿದೆ. ಅವಳನ್ನು ಫೇಲ್ ಆಗದಂತೆ ನೋಡಿಕೊಳ್ಳಬೇಕಿದೆ. ಇನ್ನು ತಾಂಡವ್‌ಗೆ ಎಲ್ಲಿ ಮರ್ಯಾದೆ ಹೋಗುತ್ತೋ ಎಂಬ ಭಯ ಶುರುವಾಗಿದೆ. ಪಾಸ್ ಆಗದೆ ಫೇಲ್ ಆಗಿ ಬಿಟ್ಟರೆ ಎಂಬ ಆತಂಕ ಶುರುವಾಗಿದೆ.


Click it and Unblock the Notifications











