Bhagyalakshmi: ಮಗ ಹೇಳಿದ್ರೆ ಕೇಳದ ಕುಸುಮಾ ಬೀಗಿತ್ತಿ ಸುನಂದಾ ಹೇಳಿದ್ರೆ ಕೇಳ್ತಾಳಾ..?
ತಾಂಡವ್‌ಗೆ ಈಗ ಭಾಗ್ಯಾಳ ವಿಚಾರವೇ ದೊಡ್ಡ ತಲೆ ನೋವಾಗಿದೆ. ತನ್ವಿ ಅದ್ಯಾವಾಗ ಭಾಗ್ಯಾಳನ್ನು ಓದಿಲ್ಲ ಬರೆದಿಲ್ಲ ಅಂತ ಹಂಗಿಸಿದಳೋ ಅಂದಿನಿಂದಾನೇ ಕುಸುಮಾ ನಿರ್ಧಾರ ಮಾಡಿ ಆಗಿದೆ. ಸೊಸೆಯನ್ನು ಓದಿಸಲೇಬೇಕು, ಎಸ್ಎಸ್ಎಲ್‌ಸಿ ಪಾಸ್ ಮಾಡಿಸಲೇಬೇಕೆಂದು ಹೊರಟಿದ್ದಾಳೆ.
ಅದರಲ್ಲೂ ಈ ಬಾರಿ ತನ್ವಿ ಕೂಡ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಮಗಳ ಜೊತೆಗೆ ಅಮ್ಮ ಕೂಡ ಎಕ್ಸಾಂ ಬರೆಯುತ್ತಾಳೆ ಎಂದಾಗ ತನ್ವಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಕುಸುಮಾ, ಮಾವ, ಗುಂಡನಿಗೆ ಭಲೇ ಖುಷಿಯಾಗಿದೆ. ತಾಂಡವ್ ಹರಸಾಹಸ ಪಟ್ಟರೂ, ಸೊಸೆಯ ಪರವಾಗಿ ಕುಸುಮಾ ಇರುವಾಗ ಯಾವುದಕ್ಕೂ ಅಡ್ಡಿಯೂ ಇಲ್ಲ ಆತಂಕವೂ ಇಲ್ಲ.

ಸುನಂದಾಗೆ ಹೇಳಿಕೊಟ್ಟ ತಾಂಡವ್
ಭಾಗ್ಯಾ ಓದುವುದು ಬೇಡ ಅಂತ ತಾಂಡವ್ ಸಾಕಷ್ಟು ಸಲ ಹೇಳಿದ್ದಾನೆ. ಮನೆಯಲ್ಲಿ ತಂದಾಕಿದ್ದನ್ನು ತಿಂದುಕೊಂಡು ಇರಲಿ ಎಂದಿದ್ದಾನೆ. ಆದರೆ ಕುಸುಮಾಗೆ ತನ್ನ ಸೊಸೆಯನ್ನು ಓದಿಸುವುದು ಬಹಳ ಮುಖ್ಯವಾಗಿದೆ. ಎಲ್ಲರನ್ನು ಎದುರಾಕಿಕೊಂಡು ಓದಿಸಲು ಮುಂದಾಗಿದ್ದಾಳೆ. ಮನೆಯಲ್ಲಂತೂ ಅಮ್ಮ ತನ್ನ ಮಾತು ಕೇಳುತ್ತಿಲ್ಲ ಎಂದು ಅರಿತ ತಾಂಡವ್, ಸುನಂದಾಳಿಗೆ ಬಲೆ ಬೀಸಿದ್ದಾನೆ. ಅತ್ತೆಗೆ ಕಾಲ್ ಮಾಡಿ, ಭಾಗ್ಯಾಳನ್ನು ಓದದಂತೆ ತಡೆಯಲು ಸೂಚಿಸಿದ್ದಾನೆ. ಓದುವುದಕ್ಕೆ ಅಂತ ಹೊರಟರೆ ಸಂಸಾರ ಇರುವುದಿಲ್ಲ ಅಂತ ಹೆದರಿಸಿದ್ದಾನೆ.
ಆಫೀಸಲ್ಲಿ ಶ್ರೇಷ್ಠಾಳಿಗೂ ಮಂಗಳಾರತಿ
ಈ ಕಡೆ ಜಿಮ್‌ನಲ್ಲಿ ಮೆಂಬರ್‌ಶಿಪ್ ತೆಗೆದುಕೊಳ್ಳಬೇಕು ಅಂತ ಕಾದು ಕಾದು ಆಫೀಸಿಗೆ ತಡವಾಗಿ ಬಂದ ಶ್ರೇಷ್ಠಾಳಿಗೆ ಬಾಸ್ ಎದುರಾಗಿದ್ದಾರೆ. ತಡವಾಗಿ ಬಂದಿದ್ದಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಪ್ರಾಜೆಕ್ಟ್ ಶುರುವಾಗಬೇಕಿದ್ದ ಸಮಯದಲ್ಲಿ ತಾಂಡವ್ ಬಂದಿಲ್ಲ. ಕಾಲ್ ಮಾಡಿದ್ರೆ ನೋ ರೆಸ್ಪಾನ್ಸ್. ಓಡೋಡಿ ಬಂದ ತಾಂಡವ್‌ಗೆ ಬಾಸ್ ಎಕ್ಸ್‌ಕ್ಯೂಸ್ ಕೊಟ್ಟಾಗಿದೆ. ಆದರೆ, ಪೆನ್ ಡ್ರೈವ್ ಬಿಟ್ಟು ಬಂದ ತಾಂಡವ್‌ಗೂ ಬಾಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ವೈಯಕ್ತಿಕ ಜೀವನ ಏನೇ ಇರಲಿ, ಆದರೆ ಅದು ನಮ್ಮ ಆಫೀಸಿನ ಕೆಲಸದ ಮೇಲೆ ಪರಿಣಾಮ ಬೀರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಭಾಗ್ಯಾಳಿಗೆ ಬುದ್ಧಿ ಹೇಳಲು ನಿಂತ ಸುನಂದಾ
ಭಾಗ್ಯಾ ಎಸ್ಎಸ್ಎಲ್‌ಸಿ ಎಕ್ಸಾಂ ಬರೆಯುವುದಕ್ಕೆ ಒಂಭತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್ ಬೇಕಾಗಿದೆ. ಅದನ್ನು ತರುವುದಕ್ಕೆ ಅಂತ ಅಮ್ಮನ ಮನೆಗೆ ಬಂದಿದ್ದಾಳೆ. ಅದಾಗಲೇ ತಾಂಡವ್, ಸುನಂದಾಳ ಕಿವಿಯನ್ನು ಊದಿದ್ದ ಕಾರಣಕ್ಕೆ ಈಗ ಭಾಗ್ಯಾ ಬಂದ ಕೂಡಲೇ ತರಾಟೆಗೆ ತೆಗೆದುಕೊಂಡಿದ್ದಾಳೆ. ಮಗಳು ಬಂದ ಖುಷಿಗಿಂತ, ಓದುವುದಕ್ಕೆ ಹೊರಟಿರುವ ದುಃಖವೇ ಸುನಂದಾಳಿಗೆ ಜಾಸ್ತಿಯಾಗಿದೆ. ನಿಮ್ಮ ಅತ್ತೆ ಇನ್ನು ಹತ್ತು ವರ್ಷವಷ್ಟೇ ಬದುಕಿರುತ್ತಾರೆ. ನೀನು ಓದು ಅಂತ ಹೋದ್ರೆ ನಿನ್ನ ಸಂಸಾರವೇ ಬೀದಿಗೆ ಬರೋದು ಅಂತೆಲ್ಲಾ ಭಾಗ್ಯಾಳ ಕೋಪಕ್ಕೆ ಗುರಿಯಾಗಿದ್ದಾಳೆ.
ಕುಸುಮಾ ಮುಂದೆ ಸುನಂದಾ ಲಾಕ್..!
ಕುಸುಮಾಳನ್ನು ಕಂಡರೆ ಸುನಂದಾ ಹೆದರುತ್ತಾಳೆ. ಯಾಕಂದ್ರೆ, ಸುನಂದಾ ಮಾಡುವ ಎಲ್ಲಾ ಕೆಲಸವನ್ನು ಕುಸುಮಾಗೆ ಗೊತ್ತು. ಕುಸುಮಾ ಮುಂದೆ ಇದ್ದರೆ ಬಾಯಿ ಬಿಡದ ಸುನಂದಾ ಈಗ ಮಗಳ ಮುಂದೆ, ನಿಮ್ಮ ಅತ್ತೆ ಬೀಗಿತ್ತಿ ಅಂತ ಸುಮ್ಮನೆ ಇದ್ದೀನಿ. ಇಲ್ಲ ಅಂದಿದ್ರೆ, ಅಂದಾಕ್ಷಣಾ ಕುಸುಮಾ ಎಂಟ್ರಿಯಾಗಿದೆ. ಇಲ್ಲ ಅಂದಿದ್ರೆ, ಏನು ಮಾಡ್ತಾ ಇದ್ರಿ ಹೇಳಿ ಎಂದಾಕ್ಷಣಾ ಸುನಂದಾ ಗಂಟಲು ಒಣಗಿ ಹೋಗಿದೆ.


Click it and Unblock the Notifications











