Bhagyalakshmi: ಕೈ ಹಿಡಿದು, ಕನಸುಗಳನ್ನು ಕೇಳಿದ ತಾಂಡವ್.. ಖುಷಿಯ ಅಲೆಯಲ್ಲಿ ತೇಲುತ್ತಿದ್ದ ಭಾಗ್ಯಳಿಗೆ ಆಘಾತ..!
ತಾಂಡವ್ ಸರಿಯಾಗ್ತಾನಾ..? ಭಾಗ್ಯಾಳನ್ನು ಪ್ರೀತಿಸುತ್ತಾನಾ..? ಭಾಗ್ಯಾಳ ತ್ಯಾಗವನ್ನು ಪರಿಗಣಿಸುತ್ತಾನಾ..? ಭಾಗ್ಯಾಳಾ ಕಾಳಜಿಯನ್ನು ಅರ್ಥ ಮಾಡಿಕೊಳ್ಳುತ್ತಾನಾ..? ಇದಕ್ಕಾಗಿಯೇ ವೀಕ್ಷಕರು ಕಾಯುತ್ತಿದ್ದಾರೆ. ಆದರೆ, ಇದೆಲ್ಲಾ ಆಗಬೇಕು ಅಂದ್ರೆ ಬರೀ ಜೈಲಿಗೆ ಹೋಗಿ ಬಂದ ಅದ್ಭುತ ಅಲ್ಲ.. ಅತ್ಯದ್ಭುತವೇ ನಡೆಯಬೇಕಾಗಿದೆ.
ರೌಡಿ ಶಿವಶಂಕರ್ ಬಳಿ ಸಿಕ್ಕಿ ಹಾಕಿಕೊಂಡಿದ್ದ ತಾಂಡವ್ ಕಡೆಗೆ ಜೈಲಿಗೆ ಹೋಗಿ ಕುಳಿತಿದ್ದ. ತಾಂಡವ್ ಆಡಿದ ಮಾತುಗಳು ಅವನನ್ನು ಅಲ್ಲಿಂದ ಹೊರ ಹೋಗದಂತೆ ಶಿವಶಂಕರ್ ತಡೆದಿದ್ದ. ಆ ಕಡೆ ತಾಂಡವ್‌ಗಾಗಿ ಮನೆಯವರೆಲ್ಲಾ ಸಿಕ್ಕಾಪಟ್ಟೆ ಆತಂಕದಲ್ಲಿದ್ರು. ಕಡೆಗೂ ಭಾಗ್ಯಾಳ ಬುದ್ಧಿವಂತಿಕೆಯಿಂದ ಎಲ್ಲವೂ ಸರಿಯಾಗಿದೆ. ಆದರೆ ತಾಂಡವ್ ಒಬ್ಬನನ್ನು ಬಿಟ್ಟು.

ಜೈಲಿನಿಂದ ರಿಲೀಸ್ ಆದ ತಾಂಡವ್
ಭಾಗ್ಯಾಳ ಮೊಂಡುತನ, ಒಳ್ಳೆಯತ ಎಲ್ಲವೂ ಶಿವಶಂಕರ್‌ಗೆ ಸತ್ಯ ಎನಿಸಿತು. ಗಂಡನ ಬಗ್ಗೆ ಅವಳಾಡಿದ ಮಾತುಗಳು, ತಪ್ಪಿನ ಬಗ್ಗೆ ಕೇಳಿದ ಕ್ಷಮೆ ಈ ಎಲ್ಲವೂ ಸತ್ಯ ಎನಿಸಿ, ತಾಂಡವ್ ನನ್ನು ಬಿಡಿಸುವುದಕ್ಕೆ ಒಪ್ಪಿದ. ಪೊಲೀಸೆಉ ಕೂಡ ತಾಂಡವ್‌ಗೆ ಇನ್ಮುಂದೆ ಕೋಪ ಮಾಡಿಕೊಳ್ಳುವಂತೆ ಸಲಹೆ ನೀಡಿ, ಸಹಿ ಹಾಕಿಸಿಕೊಂಡು ಕಳುಹಿಸಿದರು. ಕೊಟ್ಟ ಮಾತಿನಂತೆ ಭಾಗ್ಯಾ ಠಾಣೆ ಬಳಿ ಬರುವಷ್ಟರಲ್ಲಿ ಬಿಡುಗಡೆಯಾಗಿದ್ದ. ಭಾಗ್ಯಾ ಅದನ್ನು ಕಂಡು ಖುಷಿಯಾದಳು. ತಾಂಡವ್ ಜೈಲಿನಿಂದ ಹೊರಗಡೆ ಬಂದಾಕ್ಷಣ ನೋಡಿ ಭಾರವೇ ಇಳಿದಂತೆ ಖುಷಿ ಪಟ್ಟಳು.
ಭಾಗ್ಯಾಳ ಕೆಲಸದಲ್ಲಿ ಶ್ರೇಷ್ಠಾಗೆ ಕ್ರೆಡಿಟ್
ವಕೀಲರ ಬಳಿ ಕೇಳಿ ಕೇಳಿ ಸಾಕಾಗಿ ಕಡೆಗೆ ಶಿವಶಂಕರ್‌ಗೆ ಕರೆ ಮಾಡಿದಾಗ ತಾಂಡವ್ ರಿಲೀಸ್ ಆಗ್ತಾ ಇರುವ ವಿಚಾರ ಶ್ರೇಷ್ಠಾಗೆ ಗೊತ್ತಾಯ್ತು. ಅದು ಭಾಗ್ಯಾಳ ನಡವಳಿಕೆಯಿಂದ ಅನ್ನೋದು ಗೊತ್ತಾಗಿತ್ತು. ಆದ್ರೆ ಶ್ರೇಷ್ಠಾ ಅದನ್ನು ತನ್ನ ಬಂಡವಾಳ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಳು. ತಾಂಡವ್ ರಿಲೀಸ್ ಆಗುವುದಕ್ಕೂ ಮುನ್ನವೇ ಸ್ಟೇಷನ್ ಹತ್ರ ಬಂದು ನಾನೇ ಶಿವಶಂಕರ್ ಹತ್ರ ಹೇಳಿದ್ದು, ಇನ್ನು ಯಾವ ಸಮಸ್ಯೆ ಇಲ್ಲ ಅಂತ ಹೇಳಿದಳು. ತಾಂಡವ್ ಅದಕ್ಕೆ ಏನು ರಿಯಾಕ್ಟ್ ಮಾಡದೆ ಸುಮ್ಮನೆ ನಡಿ, ಮನೆಗೆ ಹೋಗೋಣಾ ಎಂದು ಹೊರಟ. ಹೊರಗೆ ಭಾಗ್ಯ ಓಡಿ ಬಂದು ತಬ್ಬಿಕೊಂಡಳು. ಶ್ರೇಷ್ಠಾಳ ಮುಂದೆಯೇ.

ಭಾಗ್ಯಾಳ ಕನಸಿಗೆ ದಾರಿ ಮಾಡಿದ
ತಾಂಡವ್ ಯಾವತ್ತು ಭಾಗ್ಯಾಳನ್ನು ತನ್ನ ಹೆಂಡತಿಯೆಂದು ಹೊತ್ತು ಮೆರೆಸಿದವನಲ್ಲ. ಅದರಲ್ಲೂ ಶ್ರೇಷ್ಠಾ ಮುಂದೆ ಹೆಚ್ಚು ಕಡಿಮೆ ಆಡೋದೆ ಇಲ್ಲ. ಆದರೆ ಇವತ್ತು ಸ್ಟೇಷನ್ ಮುಂದೆ, ಶ್ರೇಷ್ಠಾಳ ಎದುರೇ ಭಾಗ್ಯಾಳನ್ನು ನನ್ನ ಹೆಂಡತಿ ಅಂದ. ಕೈಹಿಡಿದು ಪಾರ್ಕ್‌ಗೆ ಕರೆದುಕೊಂಡು ಹೋದ. ಅಲ್ಲಿ ದೂರ ಕುಳಿತ ಭಾಗ್ಯಾಳನ್ನು ಹತ್ತಿರ ಕುಳಿತುಕೊಳ್ಳಲು ಹೇಳಿದ. ನಿನ್ನ ಕನಸುಗಳೇನು ಅಂತ ಕೇಳಿದ. ತಾಂಡವ್ ಆಡಿದ ಒಂದೊಂದು ಮಾತಿಗೂ ಭಾಗ್ಯಾ ತಾನೂ ಸ್ವರ್ಗದಲ್ಲಿಯೇ ಇರುವಂತೆ ಫೀಲ್ ಆದ್ಲೂ. ಆ ಖುಷಿ ಆ ಮಾತಿಗೆ ಮಾತ್ರ ಸೀಮಿತವಾಗಿತ್ತು.
ತಾಂಡವ್ ಮಾತು ಕೇಳಿ ಭಾಗ್ಯಾಳಿಗೆ ಆಘಾತ
ಭಾಗ್ಯಾಳಿಗೆ ಮತ್ತೆ ಕೇಳಿದ "ನಿಂಗೆ ಮದುವೆಯಾಗುವ ಹುಡುಗನ ಬಗ್ಗೆ ಏನಿತ್ತು ಕನಸು" ಎಂದ. ಭಾಗ್ಯಾ ಹೇಳುವಷ್ಟರಲ್ಲಿ "ನೀನು ಅದೃಷ್ಟವಂತೆ ಬಿಡು, ಸುತ್ತಾಡೋದಕ್ಕೆ ಕಾರು, ಅಮ್ಮನಂತ ಅತ್ತೆ, ಎರಡು ಪುಟಾಣಿ ಮಕ್ಕಳು, ಕೈತುಂಬಾ ದುಡಿಯುವ ಗಂಡ. ನೀನು ಅದೃಷ್ಟವಂತೆ ಭಾಗ್ಯಾ. ತಾಳಿ ಕಟ್ಟಿಸಿಕೊಂಡ ಕೂಡಲೇ ನಿಂಗೆ ಅದೃಷ್ಟ ಒಲಿಯಿತು. ಆದರೆ ನಂಗೆ ಆಗಲೇ ದುರಾದೃಷ್ಟ ಬಡಿಯಿತು" ಎಂದು ಖುಷಿಯಲ್ಲಿದ್ದ ಭಾಗ್ಯಾಳನ್ನು ನೋಯಿಸಿದ್ದಾನೆ.


Click it and Unblock the Notifications











