Bhagyalakshmi: ಶ್ರೇಷ್ಠಾಳಿಂದಲೇ ಬೀದಿಗೆ ಬಂದಿದ್ದು ಅನ್ನೋದು ಭಾಗ್ಯಾಗೇ ಗೊತ್ತೇ ಇಲ್ಲ.. ಮುಂದೇನು?
ತಾಂಡವ್ ಸದ್ಯ ತನ್ನ ಹಠ ಸಾಧಿಸಿದ್ದಾನೆ. ಭಾಗ್ಯಾಳನ್ನು ಮನೆಯಿಂದ ದೂರ ಮಾಡಿದ್ದಾನೆ. ಮನೆಗೆ ಬಾರದಂತೆ ತಡೆದಿದ್ದಾನೆ ಪ್ರೀತಿಯ ಮಾತುಗಳನ್ನ ಆಡುತ್ತಲೇ ಭಾಗ್ಯಾಳ ಮನಸ್ಸಿಗೆ ನೋವು ಮಾಡಿದ್ದಾನೆ. ಹಿಂದೆ ಮುಂದೆ ನೋಡದೆ ಬಿಟ್ಟು ಹೋಗಿಯೇ ಬಿಟ್ಟಿದ್ದಾನೆ. ಭಾಗ್ಯಾಳಿಗೋ ಏನು ಮಾಡುವುದು ಎಂಬುದು ಅರ್ಥವಾಗದೇ ಮಳೆಯಲ್ಲಿಯೇ ಕುಳಿತು ಬಿಟ್ಟಿದ್ದಾಳೆ.
ಅಷ್ಟೇ ಅಲ್ಲ, ಯೋಚನೆ ಮಾಡುತ್ತಾ ಕುಳಿತಿದ್ದವಳಿಗೆ ಮನೆಯ ನೆನಪಾಗಿದೆ. ಮಕ್ಕಳ ನೆನಪಾಗಿದೆ. ಅತ್ತೆ ಮಾವನ ನೆನಪಾಗಿದೆ. ಅಡುಗೆಯ ವಿಚಾರ ನೆನಪಾಗಿದೆ. ಇದೆಲ್ಲವನ್ನು ಅಲ್ಲಿಂದ ಹೊರಟ ಭಾಗ್ಯಾ, ದಾರಿಯಲ್ಲಿ ತಲೆ ಸುತ್ತಿ ಬಿದ್ದಿದ್ದಾಳೆ. ಅದು ಶ್ರೇಷ್ಠಾಳ ಅಮ್ಮನ ಕಾರಿಗೆ ಬಿದ್ದಿದ್ದಾಳೆ.

ಕಣ್ಣೀರು ಹಾಕುತ್ತಿರುವ ಭಾಗ್ಯಾ
ಭಾಗ್ಯಾ ಜ್ಞಾನ ತಪ್ಪಿ ರಸ್ತೆಯಲ್ಲಿ ಬಿದ್ದಾಗ, ಅವಳನ್ನು ಕಾಪಾಡಿ ಮನೆಗೆ ಕರೆದುಕೊಂಡು ಬಂದಿದ್ದು, ಶ್ರೇಷ್ಠಾಳ ತಾಯಿ. ಮನೆಗೂ ಕರೆದುಕೊಂಡು ಬಂದು ಸತ್ಕಾರ ಮಾಡಿದ್ದರು. ಆದರೆ ಭಾಗ್ಯಾಳಿಗೆ ಎಚ್ಚರ ಆದಾಗ ತನ್ನ ಗಂಡನ ಮನೆಯ ನೆನಪಾಗಿದೆ. ಅಳುತ್ತಾ ಎಲ್ಲರೂ ನಿಂತಿದ್ದ ಜಾಗಕ್ಕೆ ಬಂದ ಭಾಗ್ಯಾ, ಗಂಡನ ಪ್ರೀತಿ ಇಲ್ಲದೆ ಹೋದರೆ ನರಕದಂತ ಜೀವನ ಅಂತೆಲ್ಲಾ ತಾಂಡವ್ ಹಂಗಿಸುತ್ತಿದ್ದನ್ನು ಒಬ್ಬಳೇ ಮಾತನಾಡುತ್ತಾ, ಕಣ್ಣೀರು ಹಾಕಿದ್ದಾಳೆ.
ಕುಸುಮಾ ಕೈ ಅಡುಗೆ ತಿನ್ನೋಕೆ ಕಷ್ಟ ಕಷ್ಟ
ಸೊಸೆಯಿದ್ದರೆ ರುಚಿ ರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದಳು. ಭಾಗ್ಯಾ ಕೈರುಚಿಯ ಮುಂದೆ ಬೇರೆ ಯಾವ ಹೊಟೇಲ್ ಊಟವೂ ರುಚಿಸುವುದಿಲ್ಲ. ಅದನ್ನು ತಾಂಡವ್ ಆಫೀಸ್‌ನ ಬಾಸ್ ಕೂಡ ಹೊಗಳಿದ್ದಾರೆ. ಈಗ ತಾಂಡವ್ ಮಾಡಿದ ಕೆಲಸಕ್ಕೆ ಭಾಗ್ಯಾ ಮನೆಗೆ ಬಂದಿಲ್ಲ. ಅಡುಗೆಯ ಕೆಲಸವೆಲ್ಲಾ ಕುಸುಮಾಳ ಮೇಲೆ ಬಿದ್ದಿದೆ. ಕುಸುಮಾ ಮಾಡಿದ ತಿಂಡಿ ತಿಂದು ಸುಸ್ತಾಗಿ , ಹೋಟೆಲ್ ತಿಂಡಿಯ ಸಹವಾಸಕ್ಕೆ ಮಾಡಿದ್ದಾರೆ. ಆದರೆ, ಈ ಸಮಯದಲ್ಲಿ ಭಾಗ್ಯಾಳ ಮಾವ ಕರೆ ಮಾಡೋದಕ್ಕೆ ಹೋದಾಗ, ಅದನ್ನು ಕುಸುಮಾಳೇ ತಡೆದಿದ್ದಾಳೆ. ಇದರಿಂದ ತಾಂಡವ್ ಬಚಾವ್ ಆಗಿದ್ದಾನೆ.
ಆಫೀಸ್‌ನಲ್ಲಿ ತಾಂಡವ್‌ಗೆ ಗಾಬರಿ
ಮನೆಯಲ್ಲಿ ರಾದ್ಧಾಂತ ಮುಗಿಸಿಕೊಂಡು ತಾಂಡವ್ ಬಾಕ್ಸ್ ಕೂಡ ತೆಗೆದುಕೊಂಡು ಹೋಗಿರಲಿಲ್ಲ. ಸ್ಟೇಷನ್‌ನಿಂದ ಮನೆಗೆ ಬಂದಾದ ಮೇಲೆ ಆಫೀಸಿಗೆ ಹೋದಾಗ, ಎಲ್ಲರೂ ತಾಂಡವ್‌ನನ್ನು ಬೇರೆ ತರದಲ್ಲಿಯೇ ನೋಡುವುದಕ್ಕೆ ಶುರು ಮಾಡಿದ್ದರು. ಅದಕ್ಕೆ ತಾಂಡವ್, ಪೊಲೀಸ್ ಠಾಣೆ ವಿಚಾರ ಅಂದುಕೊಂಡು ಎಲ್ಲರ ಮುಂದೆ ತಾನೇ ಸತ್ಯ ಹೇಳಿದ್ದಾನೆ. ಜೊತೆಗೆ ಅಮ್ಮ ಮತ್ತು ಹೆಂಡತಿ ಆಫೀಸಿಗೆ ಬಂದ ವಿಚಾರದ ಬಗ್ಗೆ ಮಾತನಾಡಲು ಬಾಸ್ ಕೂಡ ತಾಂಡವ್ ನನ್ನು ಚೆಂಬರಿಗೆ ಬರುವುದಕ್ಕೆ ಹೇಳಿದ್ದಾರೆ.

ಗೊತ್ತಿಲ್ಲದೆ ಶ್ರೇಷ್ಠಾಳಿಗೆ ಸಹಾಯ
ಭಾಗ್ಯಾಳಿಗೆ ತಾನೂ ಯಾರ ಮನೆಯಲ್ಲಿ ಇದ್ದೀನಿ ಎಂಬುದು ಗೊತ್ತಿಲ್ಲ. ಭಾಗ್ಯಾ ಕನವರಿಸುತ್ತಾ ಇದ್ದದ್ದನ್ನು ಕೇಳಿ, ಶ್ರೇಷ್ಠಾಳ ಅಮ್ಮ ಮತ್ತು ಮಾವನಿಗೆ ಅರ್ಥವಾಗಿದೆ. ಎಲ್ಲಿಗೆ ಹೋಗ್ತೀಯಾ ಎಂದು ಅವರು ಕೇಳಿದಾಗ ಭಾಗ್ಯಾಳ ಬಳಿ ಉತ್ತರವಿಲ್ಲ. ಕೊನೆಗೆ ಗಂಡನ ಮನೆಗೆ ಹೋಗುತ್ತೀನಿ ಎಂದಿದ್ದಾಳೆ. ಮಕ್ಕಳಿಗೋಸ್ಕರ ಎಲ್ಲಾ ಕಷ್ಟವನ್ನು ಸಹಿಸಿಕೊಳ್ಳಬೇಕು ಎಂದಿದ್ದಾಳೆ. ಈ ಕಡೆ ಶ್ರೇಷ್ಠಾಳಿಗೆ ಬಲವಂತದ ಮದುವೆ ಮಾಡಬೇಡಿ ಎಂದಿದ್ದಾಳೆ. ಅದು ಶ್ರೇಷ್ಠಾ ಎಂಬುದು ಭಾಗ್ಯಾಳಿಗೆ ಗೊತ್ತಿಲ್ಲ. ಶ್ರೇಷ್ಠಾಳಿಂದಾನೇ ತನ್ನ ಸಂಸಾರ ಹಾಳಾಗಿದ್ದು ಎಂಬುದು ಭಾಗ್ಯಾಳಿಗೆ ಗೊತ್ತಿಲ್ಲ.


Click it and Unblock the Notifications











