BhagyaLakshmi: ಅಪ್ಪನಿಂದ ಸುಳ್ಳು ಹೇಳೋದನ್ನ ಕಲಿತುಕೊಂಡಳಂತೆ ತನ್ವಿ..! ಮಗಳ ಮಾತಿಗೆ ಭಾಗ್ಯ ಶಾಕ್..!

By ಶೃತಿ ಹರೀಶ್ ಗೌಡ

ಅಪ್ಪನ ಮಾತುಗಳೆಲ್ಲಾ ತನ್ವಿ ಮೇಲೆ ಪರಿಣಾಮ ಬೀರಿದೆ. ಈಗ ಅಪ್ಪನ ಹಾದಿಯನ್ನೇ ತನ್ವಿ ತುಳಿದಿದ್ದಾಳೆ. ಬೇಕು ಎಂದು ಭಾಗ್ಯಾಗೆ ತೊಂದರೆ ಕೊಡುತ್ತಿದ್ದಾಳೆ. ಕಾಂಪಿಟೇಷನ್ ಇದ್ದಾಗ ಭಾಗ್ಯಳ ಹೆಸರನ್ನು ತನ್ವಿ ನೀಡಿದ್ದಾಳೆ. ಕನ್ನಿಕಾ ದಾರಿ ಸುಗಮವಾಗಿದೆ. ಸ್ಪರ್ಧೆಯಲ್ಲಿ ಗೆಲ್ಲದಿದ್ದರೆ ಭಾಗ್ಯ ಶಾಲೆ ಬಿಟ್ಟು ಹೋಗಬೇಕು ಎಂದು ಹೇಳಿದ್ದಾಳೆ. ಇದನ್ನು ಕೇಳಿ ಭಾಗ್ಯ ಹೊರ ಬಂದಿದ್ದಾಳೆ.ತನ್ವಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದಾಳೆ.

ಭಾಗ್ಯ, ತನ್ವಿಯನ್ನು ಹುಡುಕಿಕೊಂಡು ಹೋಗಿದ್ದಾಳೆ. ತನ್ವಿಗೆ ಈಗಾಗಲೇ ವಿಷಯ ಗೊತ್ತಾಗಿದೆ. ಕನ್ನಿಕಾ ಮೇಡಂ ಕರೆದು ಡ್ಯಾನ್ಸ್ ಮಾಡಲೇಬೇಕು ಪ್ರೈಸ್ ತರಲೇಬೇಕು ಎಂದು ಅಮ್ಮನಿಗೆ ಹೇಳಿದ್ದಾರೆ ಎಂದುಕೊಂಡು ಹೆದರಿಕೆಯಿಂದ ಇದ್ದಾಳೆ. ಭಾಗ್ಯ ಕೂಗಿದ ಕೂಡಲೇ ಓಡಿ ಹೋಗಿದ್ದಾಳೆ. ಭಾಗ್ಯ ಕೂಡ ತನ್ವಿಯ ಹಿಂದೆಯೇ ಓಡಿದ್ದಾಳೆ.

Bhagyalakshmi-kannada-serial

ಈ ಕಡೆ ತಾಂಡವ್‌ನನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಶ್ರೇಷ್ಠಾ ಹೊಸ ಮನೆ ನೋಡಲು ಹೋಗಿದ್ದಾಳೆ. ಮನೆಯ ಮಾಲೀಕರು ಗಂಡ ಹೆಂಡತಿ ಎಂದು ತಿಳಿದು ಒಳಗೆ ಕರೆದುಕೊಂಡಿದ್ದಾರೆ. ಇನ್ಮುಂದೆ ನಾವು ಇರುವ ಮನೆ ಇದೆ ಎಂದು ತಾಂಡವ್‌ಗೆ ಹೇಳಿದ್ದಾಳೆ. ಇದೊಂದು ಕೆಲಸ ಸಕ್ಸಸ್ ಆದರೆ ಇನ್ನೂ ಕೆಲವೇ ದಿನಗಳಲ್ಲಿ ನಾನು ನಿನ್ನನ್ನ ಮದುವೆ ಆಗುತ್ತೇನೆ ಎಂದು ಸಹ ತಾಂಡವ್‌ಗೆ ಶ್ರೇಷ್ಠಾ ತಿಳಿಸಿದ್ದಾಳೆ. ತನ್ನ ಕೆಲಸವನ್ನು ಸಾಧಿಸಿ ಕೊಳ್ಳಲು ತಾಂಡವ್‌ಗೆ ಬ್ಲಾಕ್ ಮೇಲ್ ಮಾಡುತ್ತಾ ತಾಂಡವ್ ಮೇಲೆ ಹಿಡಿತ ಸಾಧಿಸುತ್ತಾ ಇದ್ದಾಳೆ.

ತಂದೆಯ ಹಾದಿಯನ್ನ ತುಳಿದ ತನ್ವಿ

ಭಾಗ್ಯ ತನ್ವಿಯ ಬಳಿ ಬಂದು ನೀನು ನನ್ನ ಜೊತೆ ಚೆನ್ನಾಗಿಯೇ ಇದ್ದುಕೊಂಡು ಒಳಗೊಳಗೆ ಇಂತಹ ಕೆಲಸವನ್ನು ಮಾಡಿದ್ದೀಯಾ ಎಂದು ಬೈದಿದ್ದಾಳೆ. ಇದೇ ವೇಳೆ ಭಾಗ್ಯ ಬಂದರೆ ಹೊಡೆಯುತ್ತಾಳೆ ಎಂದುಕೊಂಡ ತನ್ವಿ ವಾಹನಗಳ ಮಧ್ಯೆ ಓಡಿ ಹೋಗಿದ್ದಾಳೆ, ಕೊನೆಗೂ ತನ್ವಿಯನ್ನು ಹಿಡಿದುಕೊಂಡಿರುವ ಭಾಗ್ಯ ಅಮ್ಮನ ಮಾತನ್ನು ಕೇಳದೆ ಇಲ್ಲಿ ತನಕ ಓಡಿಬಂದಿಯಲ್ಲ ಅಪಘಾತ ಏನಾದರೂ ಆಗಿದ್ದರೆ ಯಾರು ಗತಿ ಎಂದು ಹೊಡೆದಿದ್ದಾಳೆ. ತನ್ವಿ ಅಮ್ಮ ಬಿಡಮ್ಮ ನೋವಾಗುತ್ತಿದೆ ಎಂದು ಕೇಳಿಕೊಂಡಿದ್ದಾಳೆ. ಆದರೂ ಸಹ ಭಾಗ್ಯ, ತನ್ವಿ ಮಾಡಿರುವ ಕೆಲಸಕ್ಕೆ ಕೋಪದಿಂದ ಗರಂ ಆಗಿದ್ದಾಳೆ.

Bhagyalakshmi-kannada-serial

ಭಾಗ್ಯಗೆ ಶಾಕ್ ಕೊಟ್ಟ ಮಗಳು

ನಿನಗೆ ಸುಳ್ಳು ಹೇಳಲು ಯಾರು ಕಲಿಸ್ತಿದ್ರು? ಇಷ್ಟು ದಿನ ನನ್ನ ಜೊತೆಗೆ ಚೆನ್ನಾಗಿ ಇದ್ದುಕೊಂಡು ಒಳ್ಳೆಯವಳ ರೀತಿ ನಾಟಕ ಮಾಡಿ ಕೊಂಡು ಈಗ ಕಾಂಪಿಟೇಶನ್‌ಗೆ ನನ್ನ ಹೆಸರನ್ನ ಕೊಟ್ಟು ಬಂದಿದ್ಯಾ? ಯಾಕೆ ಎಂದು ಜೋರಾಗಿ ಕೇಳಿದ್ದಾಳೆ.‌ ತನ್ವಿ ಅಮ್ಮ ನಾನು ಒಬ್ಬಳೇ ಸುಳ್ಳು ಹೇಳುತ್ತಿರುವ ರೀತಿ ಮಾತನಾಡುತ್ತಾ ಇದ್ದೀಯಲ್ಲಾ?‌ ಅಪ್ಪ ಅದೆಷ್ಟು ಸುಳ್ಳು ಹೇಳಿದರು ನೀನು ಯಾಕೆ ಮಾತನಾಡುವುದಿಲ್ಲ ಎಂದಿದ್ದಾಳೆ. ಇದಕ್ಕೆ ಭಾಗ್ಯ ಶಾಕ್ ಆಗಿದ್ದಾಳೆ. ನನ್ನ ಬಳಿ ಏನು ಸುಳ್ಳನ್ನ ಹೇಳಿದ್ದಾರೆ ಎಂಬ ಹುಳ ಭಾಗ್ಯ ತಲೆಯನ್ನು ಕೊರೆಯುತ್ತಾ ಇದೆ.

ಶ್ರೇಷ್ಠಾ ಮಾತಿಗೆ ತಾಂಡವ್ ಬೇಸರ

ಮನೆ ಮಾಲೀಕರು, ತಾಂಡವ್ ಬಗ್ಗೆ ಕೇಳಿದ್ದಾರೆ. ಇವರು ಯಾಕೆ ಬಂದಾಗಿನಿಂದಲೂ ಏನು ಮಾತು ಆಡುತ್ತಿಲ್ಲ ಎಂದಿದ್ದಾರೆ. ಇದಕ್ಕೆ ಶ್ರೇಷ್ಠ ಇವರಿಗೆ ಸಂಕೋಚದ ಸ್ವಭಾವ ಎಂದು ಸುಳ್ಳು ಹೇಳಿದ್ದಾಳೆ. ನನಗೆ ಇವರಿಬ್ಬರೇ ಸರಿ ತಾಂಡವ್‌ನನ್ನು ಚೆನ್ನಾಗಿ ಸರಿದಾರಿಗೆ ತರುತ್ತಾರೆ ಎಂದು ಮನೆಯ ಮಾಲೀಕರ ವರ್ತನೆಯ ಬಗ್ಗೆ ಶ್ರೇಷ್ಠ ಖುಷಿ ಪಟ್ಟಿದ್ದಾಳೆ. ಆದರೆ ತಾಂಡವ್‌ ಮಾತ್ರ ಶ್ರೇಷ್ಠ ವರ್ತನೆಗೆ ಬೇಸರವನ್ನು ಮಾಡಿಕೊಂಡಿದ್ದಾನೆ.

More from Filmibeat

English summary
Bhagyalakshmi Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X