Bhagyalakshmi: ಪದೇ ಪದೆ ಮನೆಯವರ ಕೋಪಕ್ಕೆ ಗುರಿಯಾಗುತ್ತಿರುವ ತಾಂಡವ್: ಸೀರೆ ವಿಚಾರ ಸಮಸ್ಯೆ ತರುತ್ತಾ?

By ಶೃತಿ ಹರೀಶ್ ಗೌಡ

ತಾಂಡವ್ ನಾಸೀಬು ಯಾಕೋ ಸರಿಯಾಗಿ ಇಲ್ಲ. ಶ್ರೇಷ್ಠ ಸಹವಾಸ ಮಾಡಿದಾಗಿನಿಂದ ಒಂದಲ್ಲ ಒಂದು ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಾ ಇದ್ದಾನೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಎಂದರೆ ಈಗ ಮತ್ತೆ ಸುಂದರಿಯನ್ನು ಭೇಟಿಯಾಗಲು‌‌ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ.

ತಾಂಡವ್ ಅಮ್ಮನ ಕೋಪಕ್ಕೆ ಗುರಿಯಾಗಿದ್ದನು. ಅಮ್ಮನನ್ನ ಹೇಗಾದರೂ ಮಾಡಿ ಒಲಿಸಿಕೊಳ್ಳಬೇಕು ಎಂದು ಕುಸುಮಾ ಹಿಂದೆ ಮುಂದೆ ಸುಳಿದಾಡುತ್ತಾ ಇದ್ದಾನೆ. ಆದರೆ ಕುಸುಮಾಗೆ ತಮ್ಮ ಮಗನ ಮೇಲೆ ಇನ್ನೂ ಸಹ ಕೋಪ ಹೋಗಿಲ್ಲ, ತಮ್ಮ ಸೊಸೆ ಭಾಗ್ಯ ಕೈಯಲ್ಲೇ ಸೇವೆ ಮಾಡಿಸಿಕೊಳ್ಳುತ್ತಾ ಇದ್ದಾಳೆ. ಭಾಗ್ಯ ಸಹ ಅತ್ತೆಯ ಸೇವೆ ಮಾಡುತ್ತಿದ್ದಾಳೆ.

bhagyalakshmi-kannada-serial

ಅತ್ತೆ ಸೊಸೆ ಮಾತನಾಡುವ ವೇಳೆ ನನ್ನದೊಂದು ಕಾಟನ್ ಸೀರೆ ಸಿಗುತ್ತಿಲ್ಲ ನೀನು ಏನಾದರೂ ನೋಡಿದ್ಯಾ? ಎಂದು ಕುಸುಮಾ ಕೇಳಿದ್ದಾಳೆ. ಇದಕ್ಕೆ ಭಾಗ್ಯ ಅತ್ತೆ ನೀವೇ ತಾನೇ ಬಟ್ಟೆಯನ್ನೆಲ್ಲ ಮಡಚಿ ಬೀರುಗೆ ಇಟ್ಟುಕೊಳ್ಳುವುದು. ಬಟ್ಟೆಗಳ ಜೊತೆ ಎಲ್ಲೋ ನೀವು ಮಡಚಿ ಇಟ್ಟಿರಬೇಕು, ಒಮ್ಮೆ ನೋಡಿ ಎಂದಿದ್ದಾಳೆ. ಆದರೆ ಕುಸುಮಾ ನನಗೆ ಆ ಸೀರೆ ಸಿಗುತ್ತಿಲ್ಲ ಎಂದು ಹೇಳಿದ್ದಾಳೆ.

ಸೀರೆ ವಿಚಾರ ಚರ್ಚೆ ವೇಳೆ ತಾಂಡವ್ ಸಹ ಬಂದಿದ್ದಾನೆ. ತಾಂಡವ್‌ಗೆ ಈಗ ಮತ್ತೆ ಭಯ ಶುರುವಾಗಿದೆ. ಈ ಸುಂದರಿಯಿಂದಾಗಿ ಎಷ್ಟೆಲ್ಲಾ ಕೆಲಸ ಕೆಡುತ್ತಿದೆ. ಇವಳೋ ಇವಳ ಕೆಲಸವೋ ನಾನು ಹೇಗಾದರೂ ಮಾಡಿ ಸೀರೆಯನ್ನು ಮನೆಗೆ ತರಬೇಕು ಎಂದು ಯೋಚನೆ ಮಾಡುತ್ತಾ ಇದ್ದಾನೆ.

ಸೀರೆ ಹೇಗೆ ತರುವುದು ಎಂಬ ಟೆನ್ಶನ್ನಲ್ಲಿ ತಾಂಡವ್

ಈಗ ತಾಂಡವ್ ಮತ್ತೊಂದು ಸಂಕಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾನೆ. ಆ ಸುಂದರಿ ಬಳಿ ಇರುವ ಸೀರೆಯನ್ನು ಯಾವ ರೀತಿ ತರಿಸಿಕೊಳ್ಳುವುದು ಎಂದು ಯೋಚನೆ ಮಾಡುತ್ತಿದ್ದಾನೆ. ಇದಕ್ಕಾಗಿ ಮಹೇಶ್‌ಗೆ ಕಾಲ್ ಮಾಡಿ ಆ ಸೀರೆ ತರಿಸಿಕೊಳ್ಳಬೇಕು ಎಂದುಕೊಂಡಿದ್ದಾನೆ. ಮಹೇಶ್‌ಗೆ ಕಾಲ್ ಮಾಡಿದರೆ ಸುಮ್ಮನೆ ಸಮಸ್ಯೆಯಾಗುತ್ತದೆ ಈಗ ನಾನು ಏನನ್ನು ಮಾಡಲಿ ಎಂಬ ಚಿಂತೆ ತಾಂಡವ್‌ನನ್ನು ಕಾಡುತ್ತಿದೆ.

ನಾನೇ ಸೀರೆಯನ್ನು ಆ ಸುಂದರಿಗೆ ಕೊಟ್ಟೆ ಅನ್ನೋದು ಗೊತ್ತಾದರೆ ನನ್ನನ್ನು ಅಮ್ಮ ಸುಮ್ಮನೆ ಬಿಡುವುದಿಲ್ಲ ಎಂದು ಭಯಭೀತನಾಗಿದ್ದಾನೆ. ಸುಂದರಿಯ ಕಳ್ಳತನದ ಅಧ್ಯಾಯ ಮುಗಿಯಿತು ಎಂದು ಕೊಂಡರೆ ಹೋಗಿ ಬಂದು ಸುಂದರಿಯಿಂದ ಸಮಸ್ಯೆ ಎದುರಾಗುತ್ತಲೇ ಇದೆ. ನಾನು ಏನು ಮಾಡಿದ್ದನೋ ತಿಳಿಯುತ್ತಿಲ್ಲ ನನಗಂತೂ ಸ್ವಲ್ಪವೂ ಸಹ ನೆಮ್ಮದಿ ಇಲ್ಲ ಎಂದು ಬೇಸರಿಸಿಕೊಂಡಿದ್ದಾನೆ.

ಕಾಣೆಯಾದ ಕುಸುಮಾ ಸೀರೆ

ಕುಸುಮಾ ಸೀರೆ ಕಾಣೆಯಾಗಿದ್ದು ಕುಸುಮಾಗೆ ಜೀವವೇ ಹೋದಂತೆ ಆಗಿದೆ. ಇದಕ್ಕಾಗಿ ಕುಸುಮಾ ಮಗನ ಮೇಲೆ ಬೇಸರ ಮಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಸುನಂದ ಹಾಗೂ ಪೂಜಾ ಇದು ಕಳ್ಳಿಯ ಕೆಲಸವೇ ಆಗಿದೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಭಾಗ್ಯ ಹೌದು ಅತ್ತೆ ಇದು ಕಳ್ಳಿಯ ಕೆಲಸವೇ ಎಂದು ಹೇಳಿದ್ದಾಳೆ. ಆದರೆ ತಾಂಡವ್ ಮಾತ್ರ ಕಳ್ಳಿ ಯಾಕೆ ಸೀರೆಯನ್ನ ಕದ್ದುಕೊಂಡು ಹೋಗುತ್ತಾಳೆ ಎಂದು ಹೇಳಿದ್ದಾನೆ.

ಕಳ್ಳಿಯ ಮೇಲೆ ಆಪಾದನೆ

ಕುಸುಮಾ ಕೂಡ ತಮ್ಮ ಮಗನ ಮೇಲೆ ಅನುಮಾನ ವ್ಯಕ್ತಪಡಿಸಿದ್ದು ನೀನೇ ಏನಾದರೂ ಆ ಕಳ್ಳಿಯನ್ನು ಮನೆಗೆ ಕರೆದಿದ್ಯಾ? ಎಂದು ಕೇಳಿದ್ದಾಳೆ. ಇದಕ್ಕೆ ತಾಂಡವ್ ಅಮ್ಮ ಏನು ಹೇಳುತ್ತಿದ್ದೀರಾ? ನಾನು ಯಾಕೆ ಕಳ್ಳಿಯನ್ನ ಮನೆಗೆ ಕರೆಯಲಿ? ನಿಮಗೆ ನನ್ನ ಮೇಲೆ ಅನುಮಾನ ಯಾಕೆ ಎಂದು ಹೇಳಿದ್ದಾನೆ.

ಪೂಜಾ ಹಾಗೂ ಸುನಂದಾ ಬಿಡುತ್ತಿಲ್ಲ. ಇನ್ನೂ ಸಹ ಕಳ್ಳಿ ಪೊಲೀಸ್ ಸ್ಟೇಷನ್‌ನಲ್ಲಿ ಇದ್ದಾಳೆ. ‌ನಾವು ಪೊಲೀಸ್ ಸ್ಟೇಷನ್‌ಗೆ ಹೋಗಿ ವಿಚಾರಿಸೋಣ ಎಂದು ಹೇಳಿದ್ದಾರೆ. ಇದಕ್ಕೆ ಕುಸುಮಾ ಸಹಮತವು ಸಿಕ್ಕಿದೆ. ಭಾಗ್ಯ ಸಹ ನಾನು ಕೇಳಿದ ಪ್ರಶ್ನೆಯನ್ನೇ ಅತ್ತೆ ಕೇಳುತ್ತಿದ್ದಾರೆ, ಉತ್ತರ ಕೊಡಿ ಎಂದು ತಾಂಡವ್‌ಗೆ ಕೇಳಿದ್ದಾಳೆ. ಆದರೆ ತಾಂಡವ್ ಭಾಗ್ಯಳ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾನೆ.

More from Filmibeat

English summary
Bhagyalakshmi Kannada serial today Epiode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X