Bhagyalakshmi: ತನ್ನ ಸ್ವಾರ್ಥಕ್ಕಾಗಿ ಎಲ್ಲದಕ್ಕೂ ತಾಂಡವ್ ಸಿದ್ಧ: ಕುಸುಮಾ ಕೈಲಿ ಸಿಕ್ಕಿ ಹಾಕಿಕೊಳ್ತಾನಾ?
ತಾಂಡವ್‌ಗೆ ಹೇಳದೇ ಕುಸುಮಾ ಹಾಗೂ ಧರ್ಮರಾಜ್ , ಶ್ರೇಷ್ಠ ಪ್ರೀತಿ ಮಾಡುತ್ತಿರುವ ಹುಡುಗನ ಮನೆಗೆ ಹೊರಟು ನಿಂತಿದ್ದಾರೆ. ತಾಂಡವ್ ಹೇಗೋ ಸಂತೋಷದಿಂದ ಇದ್ದಾನೆ. ನಾನು ಏನು ಹೇಳದೆ ಮನೆಯವರೆಲ್ಲರೂ ಸಹ ಮನೆ ಖಾಲಿ ಮಾಡಿದ್ದಾರೆ. ಇನ್ನೊಂದು ಗಂಟೆ ಯಾರು ಮನೆಗೆ ಬಾರದೇ ಇದ್ದರೆ ಸಾಕು ಎಂದು ಕೊಂಡಿದ್ದಾನೆ.
ಇದೀಗ ತಾಂಡವ್ ತನ್ನ ಡೂಪ್ಲಿಕೇಟ್ ತಾಯಿಯಾಗಿ ನಟಿಸುತ್ತಿರುವ ಸುಂದರಿಗೂ ಸಹ ಫೋನ್ ಮಾಡಿ ಬೇಗನೇ ಮನೆಗೆ ರೆಡಿಯಾಗಿ ಬಾ ಶ್ರೇಷ್ಠ ತಂದೆ ತಾಯಿ ನಮ್ಮ ಮನೆಗೆ ಬರುತ್ತಿದ್ದಾರೆ ಎಂದಿದ್ದಾನೆ. ಸುಂದರಿಗೆ ಲಾಟರಿ ಹೊಡೆದ ಅನುಭವವಾಗಿದೆ. ಯಾಕೆಂದರೆ ಮಹೇಶ ಬರೋದು ಬೇಡ ಎಂದು ತಾಂಡವ್ ಹೇಳಿದ್ದಾನೆ.
ಇನ್ನು ಭಾಗ್ಯ ತನ್ನ ತಂಗಿಗೆ ಬುದ್ಧ ಹೇಳಿದ್ದಾಳೆ. ನಾನು ಯಾವುದೇ ಕಾರಣಕ್ಕೂ ನನ್ನ ಗಂಡನ ಮನೆ ಬಿಟ್ಟು ಬರಲ್ಲ ಎಂದಿದ್ದಾಳೆ. ಅಲ್ಲಿಂದ ನನ್ನ ಅಸ್ಥಿಯನ್ನು ಮಾತ್ರ ತೆಗೆದುಕೊಂಡು ಬನ್ನಿ. ನಾನು ಏನೇ ಆದರೂ ನನ್ನ ಗಂಡನ ಮನೆಯಲ್ಲೇ ಇರುತ್ತೇನೆ ಎಂದು ಭಾಗ್ಯ ಹೇಳಿದ್ದಾಳೆ.

ತಾಂಡವ್ ತನ್ನ ಸ್ವಾರ್ಥಕ್ಕಾಗಿ ಎಲ್ಲರನ್ನೂ ಮನೆಯಿಂದ ಹೊರಗೆ ಕಳುಹಿಸಿದ್ದಾನೆ ತನ್ವಿಗೆ ಪಿಜ್ಜಾವನ್ನು ಆರ್ಡರ್ ಮಾಡಿ ತರಿಸಿಕೊಟ್ಟಿದ್ದಾನೆ. ತನ್ವಿಗೆ ಮೊದಲೇ ಪಿಜ್ಜಾ ಎಂದರೆ ಅಲರ್ಜಿಯಾಗುತ್ತದೆ. ಈಗ ತನ್ನ ಸ್ವಾರ್ಥಕ್ಕಾಗಿ ಮಗಳು ಒಬ್ಬಳನ್ನೇ ರೂಮ್‌ನಲ್ಲಿ ಬಿಟ್ಟು ಬಾಗಿಲು ಹಾಕಿದ್ದಾನೆ.
ಶ್ರೇಷ್ಠ ಎಲ್ಲರ ಮೇಲೂ ಉರಿದು ಬೀಳುತ್ತಿದ್ದಾಳೆ. ಯಾಕೆಂದರೆ ಗಂಡಿನ ಮನೆಗೆ ನಾಲ್ಕರಿಂದ ಐದು ಜನ ಹೋಗೋದು ವಾಡಿಕೆ. ಇಲ್ಲಿ ನೋಡಿದರೆ ಇಷ್ಟೊಂದು ಜನರು ಬರ್ತಾರಾ ಅಂದುಕೊಂಡಿದ್ದಾಳೆ. ಕಾವ್ಯ ಅಮ್ಮ ಶ್ರೇಷ್ಠಾಗೆ ಬೈದಿದ್ದಾರೆ. ಸುಮ್ಮನೆ ನಡಿ, ನಿನ್ನ ಪ್ರಿಯತಮನ ಮುಖವಾಡ ಕಳಚಿ ಬೀಳಲಿದೆ ಎಂದು ಅಂದಿದ್ದಾರೆ. ಶ್ರೇಷ್ಠ ಇದೆಲ್ಲದರಿಂದ ಪಾರಾದರೆ ಸಾಕು ಎಂದುಕೊಂಡಿದ್ದಾಳೆ. ಇಷ್ಟೇನಾ ಬರೋದು ಅಕ್ಕಪಕ್ಕದವರನ್ನು ಕರೆದುಕೊಂಡು ಹೋಗೋಣ ಎಂದಿದ್ದಾಳೆ. ಇನ್ನಿಬ್ಬರು ಬರುತ್ತಾರೆ ಎಂದು ತಂದೆ ಶ್ರೀವರ ಹೇಳಿದ್ದಾರೆ.

ಫೋಟೋ ತೆಗೆದಿಟ್ಟ ತಾಂಡವ್
ತಾಂಡವ್ ಮನೆಗೆ ಬಾಡಿಗೆ ತಾಯಿ ಸುಂದರಿ ಬಂದಿದ್ದಾಳೆ. ಇದೇ ವೇಳೆ ತಾಂಡವ್ ಅವರ ಬಳಿ ನೀನು ಹೆಚ್ಚಿಗೆ ಮಾತನಾಡಬೇಡ. ಚುಟುಕಾಗಿ ಉತ್ತರಿಸಬೇಕು, ಅರ್ಧ ಗಂಟೆಯಲ್ಲಿ ಅವರು ಜಾಗ ಖಾಲಿ ಮಾಡುವಂತೆ ಆಗಬೇಕು ಎಂದೆಲ್ಲಾ ಹೇಳುತ್ತಿದ್ದಾನೆ. ಇದೇ ವೇಳೆ ಸುಂದರಿಗೆ ತಾಂಡವ್ ಮನೆಯಲ್ಲಿರುವ ಬೆಳ್ಳಿ ಸಾಮಾನುಗಳ ಮೇಲೆ ಕಣ್ಣು ಬಿದ್ದಿದೆ. ತಾಂಡವ್ ತನ್ನ ಸ್ವಾರ್ಥಕ್ಕಾಗಿ ತನ್ವಿಯನ್ನ ರೂಮಿನೊಳಗೆ ಕೂಡಿ ಹಾಕಿದ್ದಾನೆ. ಅವಳಿಗೆ ನೀರು ಕುಡಿಯಬೇಕು ಎನಿಸಿದಾಗ ಡೋರ್ ಓಪನ್ ಮಾಡಿದಾಗ ತಾಂಡವ್‌ಗೆ ಕಾಲ್ ಮಾಡಿ ಭಯ ವ್ಯಕ್ತಪಡಿಸಿದ್ದಾಳೆ.
ತಾಂಡವ್ ಭರ್ಜರಿ ಪ್ಲ್ಯಾನ್ಸ
ಮನೆಯಲ್ಲಿರುವ ಫೋಟೋಗಳನ್ನೆಲ್ಲಾ ತಾಂಡವ್ ತೆಗೆಯುತ್ತಾ ಇದ್ದಾನೆ. ಹೆಣ್ಣಿನ ಕಡೆಯವರಿಗೆ ಯಾವುದೇ ರೀತಿಯಲ್ಲಿ ಅನುಮಾನ ಬಾರದ ರೀತಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾನೆ. ಶ್ರೇಷ್ಠಾಗೋಸ್ಕರ ತಾಂಡವ್ ಈ ತೊಂದರೆ ತೆಗೆದುಕೊಳ್ಳುತ್ತಾ ಇದ್ದಾನೆ. ಈ ಕಡೆ ಭಾಗ್ಯ ತನ್ನ ತಾಯಿಯ ಮನೆಯಲ್ಲಿ ಇದ್ದಾಳೆ. ಈ ನಡುವೆ ತಾಂಡವ್, ಶ್ರೇಷ್ಠ ಮನೆಯವರಿಗೋಸ್ಕರ ಎಲ್ಲಾ ಅರೇಂಜ್ಮೆಂಟ್ ಮಾಡಿಕೊಳ್ಳುತ್ತಾ ಇದ್ದಾನೆ.
ಕುಸುಮಾ ನೋಡಿ ಶ್ರೇಷ್ಠ ಶಾಕ್
ಇನ್ನಿಬ್ಬರು ನಮ್ಮ ಜೊತೆಗೆ ಗಂಡಿನ ಮನೆಗೆ ಇನ್ನಿಬ್ಬರು ಬರುತ್ತಾರೆ ಎಂದಾಗ ಯಾರು ಅವರು ಎಂದು ಶ್ರೇಷ್ಠ ಕೇಳಿದ್ದಾಳೆ. ಇದಕ್ಕೆ ಶ್ರೀವರ ನಮಗೆ ಬೇಕಾದ ಇಬ್ಬರು ಬರುತ್ತಿದ್ದಾರೆ. ಮುಂದೆ ಹೋಗಿ ಕಾರನ್ನು ನಿಲ್ಲಿಸು ಎಂದಿದ್ದಾರೆ. ಶ್ರೇಷ್ಠ, ಕುಸುಮಾ ಹಾಗೂ ಅವರ ಗಂಡ ಧರ್ಮರಾಜ್ ಅವರನ್ನ ನೋಡಿದ ಕೂಡಲೇ ಶಾಕ್ ಆಗಿದ್ದಾಳೆ.
ಸಿಕ್ಕಿ ಬೀಳ್ತಾನ ತಾಂಡವ್?
ಈ ಕಡೆ ತಾಂಡವ್ ತನ್ನ ಮಗಳನ್ನು ರೂಂನಲ್ಲಿ ಲಾಕ್ ಮಾಡಿ ಹೆಣ್ಣಿನ ಮನೆಯವರಿಗೆ ತಮ್ಮ ಫ್ಯಾಮಿಲಿಯ ಯಾವುದೇ ಫೋಟೋ ಕಾಣಿಸಬಾರದು ಎಂದು ಎಲ್ಲವನ್ನು ಬಚ್ಚಿಡುವ ಕೆಲಸ ಮಾಡಿದ್ದಾನೆ. ಏನಾದರೂ ಕುಸುಮಾಗೆ ತನ್ನ ಮಗನೇ ಶ್ರೇಷ್ಠಳನ್ನು ಮದುವೆಯಾಗುತ್ತಿರುವವನು ಎಂದು ಗೊತ್ತಾದರೆ ಕುಸುಮಾ ಮಾತ್ರ ತನ್ನ ಮಗನನ್ನ ಸುಮ್ಮನೆ ಬಿಡುವುದಿಲ್ಲ.


Click it and Unblock the Notifications











