Bhagyalakshmi: ಅಮ್ಮ ಬಂದ್ರೆ ಏನು ಮಾಡೋದು ಎಂದು ಭಯ ಪಟ್ಟ ತಾಂಡವ್?!

By ಶೃತಿ ಹರೀಶ್ ಗೌಡ

ಕುಸುಮಾ, ಧರ್ಮರಾಜ್ ಇಬ್ಬರನ್ನು ನೋಡಿ ಶ್ರೇಷ್ಠಾಗೆ ಮಾತೇ ಹೊರಡುತ್ತಿಲ್ಲ. ಇದಕ್ಕೆ ಕುಸುಮಾ ಏನೇ ಶಾಕಾಂಬರಿ ನಮ್ಮನ್ನು ನೋಡಿ ಮಾತನಾಡಿಸುತ್ತಿಲ್ಲ ಎಂದಿದ್ದಾಳೆ. ಶ್ರೇಷ್ಠ ಆಂಟಿ ನಿಮ್ಮಿಬ್ಬರನ್ನ ನೋಡಿ ತುಂಬಾ ಶಾಕ್ ಆಯಿತು ಎಂದು ಹೇಳಿದ್ದಾಳೆ. ಏನು ಶಾಕ್ ಆಯ್ತಾ? ನಿನ್ನ ಮದುವೆ ಸುಸೂತ್ರವಾಗಿ ಮಾಡಿಸಬೇಕು ಅಂದುಕೊಂಡ್ರೆ ನೀನು ಹಿಂಗತ್ತೀಯಾ ಎಂದು ಕುಸುಮಾ ಜೋರು ಮಾಡಿದ್ದಾಳೆ.

ಇದೇ ವೇಳೆ ಕಾವ್ಯಳರ ಅಮ್ಮ ನಾವು ಬರುತ್ತೇವೆ ಎಂದಿದ್ದಕ್ಕೆ ನಮ್ಮನ್ನು ಬೇಡ ಎಂದಳು. ಈಗ ಈ ರೀತಿ ಮಾತನಾಡುತ್ತಿದ್ದಾಳೆ ನೋಡಿ ಎಂದಿದ್ದಾರೆ. ನಾನು ಬಂದಿದ್ದೀನಲ್ಲ ಎಲ್ಲವನ್ನು ಸರಿ ಮಾಡುತ್ತೇನೆ ಎಂದು ಕುಸುಮಾ ಕಾರ್ ಡ್ರೈವರ್‌ಗೆ ಹುಡುಗನ ಮನೆ ಗೊತ್ತಾ ಎಂದಿದ್ದಕ್ಕೆ ಆತ ಗೊತ್ತಿದೆ ನೀವು ಬನ್ನಿ ಎಂದಿದ್ದಾನೆ. ಎಲ್ಲರೂ ಕಾರಿನಲ್ಲಿ ಕುಸುಮಾ ಮನೆಯ ಕಡೆಗೆ ಹೊರಟಿದ್ದಾರೆ.‌

bhagyalakshmi-serial

ಶ್ರೇಷ್ಠಾ ಹಾಗೂ ಕಾವ್ಯಗೆ ತುಂಬಾ ಟೆನ್ಶನ್ ಶುರುವಾಗಿದೆ. ಏನಪ್ಪಾ ಇದು, ಇವರನ್ನೇ ಕರೆದುಕೊಂಡು ಇವರ ಮನೆಯ ಕಡೆ ನಾವು ಹೋಗುತ್ತಿದ್ದೆವಲ್ಲ. ತಾಂಡವ್‌ ನನ್ನನ್ನೇ ಮದುವೆಯಾಗುತ್ತಿರುವುದು ಎಂಬುದು ಏನಾದರೂ ಗೊತ್ತಾದರೆ ಈ ಕುಸುಮಾ ಆಂಟಿ ಸತ್ತೇ ಹೋಗುತ್ತಾರೆ ಎಂದು ಯೋಚನೆ ಮಾಡುತ್ತಾ ಇದ್ದಾಳೆ. ಕುಸುಮಾ ಮಾತ್ರ ಶ್ರೇಷ್ಠ ಹಾಗೂ ಶ್ರೀವರ ಅವರ ಜೊತೆಯಲ್ಲಿ ತನ್ನ ಮನೆಗೆ ಹೋಗುತ್ತಾ ಇದ್ದಾಳೆ.

ತಾಂಡವ್‌ಗೆ ಶುರುವಾಯ್ತು ಟೆನ್ಶನ್

ಅಪ್ಪ, ಅಮ್ಮಾ ಈಗ ಶ್ರೇಷ್ಠ ಫ್ಯಾಮಿಲಿಯ ಜೊತೆ ಇಲ್ಲಿಗೆ ಬಂದರೆ ಏನು ಮಾಡೋದು ಎಂದು ಇತ್ತ ತಾಂಡವ್ ಯೋಚನೆ ಮಾಡುತ್ತಿದ್ದಾನೆ. ಅಮ್ಮ ಹಾಗೂ ಅಪ್ಪ ಇಬ್ಬರೂ ಹೊರಗಡೆ ಹೋಗಿದ್ದಾರೆ. ಆದರೆ ಯಾವ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿಲ್ಲ, ಅವರು ಏನಾದರೂ ನಮ್ಮ ಮನೆಗೆ ಶ್ರೇಷ್ಠ ಜೊತೆಯಲ್ಲಿ ಬಂದರೆ ಕೆಲಸ ಕೆಟ್ಟು ಹೋಗುತ್ತದೆ ಅಂದುಕೊಂಡಿದ್ದಾನೆ.

bhagyalakshmi-serial

ಮುಂದೇನಾಗುತ್ತೆ ಎನ್ನುವ ಕುತೂಹಲ

ಶ್ರೇಷ್ಠ ಕಾರಿನಲ್ಲಿ ಕೂತು ಇದೇನಪ್ಪಾ ಕುಸುಮಾ ಆಂಟಿ ಜೊತೆಯೇ ಅವರ ಮನೆಗೆ ನಾನು ಹೋಗುತ್ತಿದ್ದೇನೆ. ಅವರಿಗೆ ಸತ್ಯ ತಿಳಿದರೆ ಅವರಂತೂ ಎದೆ ಹೊಡೆದುಕೊಂಡು ಸತ್ತೇ ಹೋಗುತ್ತಾರೆ. ಈಗ ಏನಾದರೂ ಒಂದು ಮಾಡಬೇಕು ಎಂದು ಯೋಚನೆ ಮಾಡುತ್ತಾ ಇದ್ದಾಳೆ. ಹೇಗಾದರೂ ಮಾಡಿ ತಾಂಡವ್‌ಗೆ ಈ ವಿಷಯ ತಿಳಿಸಬೇಕು ಎಂದುಕೊಂಡಿದ್ದಾಳೆ. ಕುಸುಮಾ ಹಾಗೂ ಧರ್ಮರಾಜ್ ಇಬ್ಬರೂ ಶ್ರೀವರ ಅವರ ಜೊತೆಗೆ ಇದ್ದು ಅವರ ಮನೆಗೆ ಹೋಗುತ್ತಾರಾ ಅಥವಾ ಇಲ್ವ ಎಂಬುದು ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.

ಅಕ್ಕ ಪಕ್ಕದವರಿಗೆ ಭಾಗ್ಯ ಪಾಠ

ಭಾಗ್ಯ ಮನೆಗೆ ಬಂದಿದ್ದಾಳೆ ಎಂದು ಮಾತನಾಡಿಸಲು ಅಕ್ಕ ಪಕ್ಕದವರು ಬಂದಿದ್ದಾರೆ. ಇದೇ ವೇಳೆ ಭಾಗ್ಯಳ ಬಳಿ ಯಾವುದೋ ವಿಚಾರ ಮಾತನಾಡಿದ್ದಾರೆ. ಭಾಗ್ಯಗೆ ಇದು ಇಷ್ಟವಾಗಲಿಲ್ಲ. ಇನ್ನು ಕೋಪಗೊಂಡ ಭಾಗ್ಯ ಮನುಷ್ಯನಿಗೆ ಯಾವುದರಲ್ಲೂ ಸಹ ನೆಮ್ಮದಿ ಅನ್ನುವುದೇ ಇಲ್ಲ. ಹುಟ್ಟಿನಿಂದ ಸಾಯುವವರೆಗೂ ಹೆಣ್ಣಾದವಳು, ಒಂದಲ್ಲ ಒಂದು ಸಂಕೋಲೆಯ ಒಳಗೆ ಬದುಕು ಸಾಗಿಸಬೇಕಾಗಿದೆ ಎಂದು ಹೇಳಿದ್ದಾಳೆ. ಚಳಿ ಬಂದರೆ ಕೆಟ್ಟ ಚಳಿ ಎನ್ನುತ್ತಾರೆ. ಬೇಸಿಗೆ ಬಂದರೆ ಬಿಸಿಲು ಎನ್ನುತ್ತಾರೆ. ಮಳೆಗಾಲ ಬಂದರೆ ಮಳೆ ಎನ್ನುತ್ತಾರೆ. ಈ ಮನುಷ್ಯರು ಮೆಚ್ಚುವ ವಸ್ತು ಈ ಭೂಮಿಯ ಮೇಲೆ ಇಲ್ಲ ಎಂದು ಹೇಳಿದ್ದಾಳೆ.

ಭಾಗ್ಯ ಮಾತು ಕೇಳಿ ಸುನಂದಾಗೆ ಸಂತಸ

ಗಂಡನ ಮನೆಯಲ್ಲಿ ಇದ್ದರೆ ಗಂಡನ ಮನೆಯಲ್ಲಿ ಇದ್ದಾಳೆ ಎನ್ನುತ್ತಾರೆ. ಅಥವಾ ಗಂಡನನ್ನ ಬಿಟ್ಟು ತವರಿಗೆ ಬಂದರೆ ಪ್ರತಿದಿನವೂ ಆಡಿಕೊಳ್ಳುತ್ತಾರೆ. ಹೆಣ್ಣು ಮಗಳು ಹುಟ್ಟಿದ ದಿನದಿಂದ ಸಾಯುವ ತನಕ ಯಾವುದಾದರೂ ಒಂದು ಸಂಕೋಲೆಯಲ್ಲಿಯೇ ಬದುಕನ್ನ ನಡೆಸಬೇಕಾಗಿದೆ. ಅದು ಸಹ ನಾಲ್ಕು ಜನರು ಏನು ಅಂದುಕೊಳ್ಳುತ್ತಾರೋ ಎಂದು ನೆನೆದು ಜೀವನ ಸಾಗಿಸಿ ಬಿಡುತ್ತಾಳೆ ಎಂದು ಭಾಗ್ಯ ಅಕ್ಕಪಕ್ಕದ ಮನೆಯವರಿಗೆ ಪಾಠ ಮಾಡಿದ್ದಾಳೆ. ಭಾಗ್ಯದ ಮಾತುಗಳನ್ನ ಕೇಳುತ್ತಿರುವ ಸುನಂದ ಹಾಗೂ ಆಕೆ ಆ ಗಂಡನಿಗೆ ಬಹಳ ಖುಷಿಯಾಗುತ್ತಿದೆ.

More from Filmibeat

English summary
Bhagyalakshmi kannada serial today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X