Bhagyalakshmi: ಕುಸುಮಾರನ್ನು ಕೆರಳಿಸಿದ ಸುನಂದಾ: ಮತ್ತೆ ಸಂಕಷ್ಟದಲ್ಲಿ ತಾಂಡವ್
ಕುಸುಮಾ ಕೆಳಗೆ ಬಿದ್ದಮೇಳೇ ಮೇಲೆ ಶ್ರೇಷ್ಠ ಪೋಷಕರು ತಾಂಡವ್ ಮನೆಗೆ ಹೋಗೋದು ಬೇಡ ಎಂದು ನಿರ್ಧಾರ ಮಾಡಿದ್ದರು. ಇನ್ನು ಶ್ರೇಷ್ಠ, ಧರ್ಮರಾಜ್ ಬಳಿ ಫೋನ್ ಕಿತ್ತುಕೊಂಡು ಆಂಟಿಗೆ ಸಣ್ಣದೊಂದು ಗಾಯವಾಗಿದೆ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸುತ್ತೇನೆ ನೀವೇನು ಬರೋದು ಬೇಡ ಎಂದು ಹೇಳಿದಳು.
ಬೈದ್ರು ನೀನು ನಾಟಕ ಮಾಡುತ್ತಲೇ ಇದ್ದೀಯಾ? ಗಂಡನ ಮನೆಗೆ ಹೋಗಬಾರದು ಎಂದು ಶ್ರೇಷ್ಠಾಗೆ ಕುಸುಮಾ ಬೈಯ್ಯುತ್ತಲೇ ಇದ್ದಾರೆ. ಶ್ರೇಷ್ಠಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ಆದರೆ ಅದು ಆಗುತ್ತಿಲ್ಲ.

ಭಾಗ್ಯ ತವರು ಮನೆಯಲ್ಲಿ ಇದ್ದು ತಂದೆ ತಾಯಿ ಭಾಗ್ಯಗೆ ಬುದ್ಧಿಮಾತು ಹೇಳುತ್ತಿದ್ದಾರೆ. ನೀನೊಬ್ಬಳೇ ಎಲ್ಲವನ್ನು ಅನುಭವಿಸುವ ರೀತಿ ಆಯಿತು, ಮಗಳೇ ನೀನು ಹೀಗೆ ಕಷ್ಟ ಪಡುವುದನ್ನ ನೋಡಲು ಆಗುತ್ತಿಲ್ಲ ಎಂದು ಸುನಂದಾ ಕಣ್ಣೀರು ಹಾಕಿದ್ದಾಳೆ.
ಭಾಗ್ಯ, ಅಮ್ಮ ಯಾವುದೇ ಕಷ್ಟ ಇಲ್ಲ ನಾನು ಎಲ್ಲವನ್ನು ಸಂಬಾಳಿಸುತ್ತೇನೆ. ನೀನು ಯಾವುದರ ಬಗ್ಗೆಯೂ ಚಿಂತೆ ಮಾಡಬೇಡ ನಾನು ಯಾವುದೇ ಕಾರಣಕ್ಕೂ ಗಂಡನ ಮನೆ ಬಿಟ್ಟು ಬರುವುದಿಲ್ಲ ಎಂದು ಅಮ್ಮನಿಗೆ ಅಭಯವನ್ನು ನೀಡಿದ್ದಾಳೆ. ಭಾಗ್ಯ ಮಾತನ್ನು ಕೇಳಿದ ತಂದೆ ತಾಯಿಗೆ ಸ್ಪಲ್ಪ ಸಮಾಧಾನವಾಗಿದೆ.
ತಾಂಡವ್ ಸುಂದರಿಗೆ ಹಣ ಕೊಟ್ಟು ನೀನು ಮನೆಗೆ ಹೋಗು ಎಂದಿದ್ದಾನೆ. ಇದೇ ವೇಳೆ ಮೇಲೆ ರೂಮಿನಲ್ಲಿ ಸೌಂಡ್ ಬಂದಿದ್ದು ಯಾರು ಮನೆಯಲ್ಲಿ ಇರೋದು ಎಂದು ಕೇಳಿದಾಗ ನನ್ನ ಮಗಳು ಎಂದು ಬಾಯ್ ತಪ್ಪಿ ತಾಂಡವ್ ಅಂದಿದ್ದಾನೆ. ಏನು ನಿನಗೆ ಮದುವೆ ಆಗಿದ್ಯಾ? ಎಂದು ಸುಂದರಿ ಕೇಳಿದಾಗ ತಾಂಡವ್ ಏನೋ ಒಂದು ಉತ್ತರ ಹೇಳಿ ಅವಳನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಸುಂದರಿ ದೇವರ ಮನೆಯಲ್ಲಿದ್ದ ಬೆಳ್ಳಿಯ ಸಾಮಾನುಗಳನ್ನೆಲ್ಲ ಕದ್ದುಕೊಂಡು ಹೋಗಿದ್ದಾಳೆ.

ಬೀಗರನ್ನು ಕೆರಳಿಸಿದ ಸುನಂದಾ
ಕುಸುಮಾ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ಭಾಗ್ಯಗೆ ವಿಷಯ ತಿಳಿದಿದೆ. ಕೂಡಲೇ ತನ್ನ ತಾಯಿ ಸುನಂದ ಹಾಗೂ ತಂಗಿ ಪೂಜಾ ಜೊತೆಯಲ್ಲಿ ಆಸ್ಪತ್ರೆಗೆ ಬಂದಿದ್ದಾಳೆ. ಇದೇ ವೇಳೆ ಸುನಂದಾ, ಕುಸುಮರನ್ನ ಕೆರಳಿಸುವ ರೀತಿ ಮಾತನಾಡಿದ್ದಾರೆ. ಸುನಂದಾ ನೀವು ಆ ರೀತಿಯಲ್ಲ ನನ್ನ ಮಗನ ಬಗ್ಗೆ ಮಾತನಾಡಬೇಡಿ, ನನ್ನ ರಾಜ ಯಾವತ್ತಿದ್ದರೂ ರಾಜಾನೇ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸುನಂದಾ ಅಂದು ತಾಂಡವ್ ಗ್ರೀಟಿಂಗ್ಸ್ ಕಾರ್ಡ್‌ಗಳನ್ನು ಸುಟ್ಟು ಹಾಕಿದ್ದನ್ನ ನೆನಪಿಸಿಕೊಂಡಿದ್ದಾಳೆ.
ಚಿಂತೆಗೆ ಬಿದ್ದ ಕುಸುಮಾ
ನನ್ನ ತಾಯಿಗೆ ನನ್ನ ಮೇಲೆ ಅಪಾರವಾದ ನಂಬಿಕೆ ಇದೆ. ತನ್ನ ಮಗ ಯಾವುದೇ ಸುಳ್ಳನ್ನು ಹೇಳೋದಿಲ್ಲ ಎಂದು ನಂಬಿದ್ದಾರೆ ಎಂದು ಹೇಳಿದ್ದು ನಾನು ಸಾಕ್ಷಿ ಇಲ್ಲದೇ ಯಾವುದನ್ನು ಮಾತನಾಡಬಾರದು ಎಂದು ಸುನಂದಾ ಅಂದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬೀಗರನ್ನು ಕೆರಳಿಸಿದ್ದಾರೆ, ನಿಮ್ಮ ಮಗ ಎಲ್ಲಿಗೆ ಹೋದ? ತಾಯಿಗೆ ಹುಷಾರಿಲ್ಲ, ಎಂದರೂ ಅವನು ಏನು ಮಾಡುತ್ತಿದ್ದಾನೆ. ಇಲ್ಲಿಗೆ ಬಂದಿಲ್ಲ ಎಲ್ಲವನ್ನು ನನ್ನ ಮಗಳೇ ಮಾಡುತ್ತಿದ್ದಾಳೆ ಎಂದು ಕೋಪದಿಂದ ನುಡಿದಿದ್ದಾಳೆ. ಸುನಂದಾಳ ಈ ಮಾತುಗಳು ಕುಸುಮಾಳನ್ನು ಅವರನ್ನು ಕೆರಳಿಸಿವೆ.
ತಾಂಡವ್‌ಗೆ ಫೋನ್ ಮಾಡಿದ ಶ್ರೇಷ್ಠಾ
ಸುನಂದಾ ಆಸ್ಪತ್ರೆಗೆ ಬಂದಾಗ ಶ್ರೇಷ್ಠ ತಂದೆ ತಾಯಿಯನ್ನ ನೋಡಿದ್ದಾಳೆ. ಇವರು ಯಾರು ಎಂದಾಗ ಇವರೇ ಶ್ರೇಷ್ಠ ತಂದೆ ತಾಯಿ ಎಂದು ಹೇಳಿದ್ದಾರೆ. ಗಂಡು ನೋಡುವ ಶಾಸ್ತ್ರಕ್ಕೆ ಹೋಗುತ್ತಿದ್ದೆವು, ಆಗ ಈ ರೀತಿ ಆಯಿತು ಎಂದಾಗ ಸುನಂದಾ ಇಂತಹ ಒಳ್ಳೆಯ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸಬಾರದು. ನೀವು ಗಂಡು ನೋಡುವ ಶಾಸ್ತ್ರಕ್ಕೆ ಹೋಗಿ ಎಂದು ಹೇಳಿದ್ದಾರೆ. ಸುನಂದಾ ಮಾತಿನಂತೆ ಶ್ರೇಷ್ಠ ತಂದೆ ತಾಯಿ ನಾವು ತರುಣ್ ಮನೆಗೆ ಹೋಗೋಣ ಎಂದು ಶ್ರೇಷ್ಠ ಬಳಿ ಹೇಳಿದ್ದಾರೆ. ಪ್ಲ್ಯಾನ್ ಎಲ್ಲವೂ ತಲೆಕೆಳಗಾಗಿದ್ದು ನೆನಪಾಗಿ ಶ್ರೇಷ್ಠಾಗೆ ಬೇಸರವಾಗಿದೆ.
ಮತ್ತೆ ಟೆನ್ಷನ್‌ನಲ್ಲಿ ತಾಂಡವ್
ಕೂಡಲೇ ತಾಂಡವ್‌ಗೆ ಫೋನ್ ಮಾಡಿ ನಾವು ಮತ್ತೊಂದು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದೇವೆ, ಇಲ್ಲಿ ಎಲ್ಲವೂ ನನ್ನ ಕೈಮೀರಿ ಹೋಗಿದೆ. ನಿಮ್ಮ ಮನೆಗೆ ನಾವೆಲ್ಲರೂ ಬರುತ್ತಿದ್ದೇವೆ ಎಂದಿದ್ದಾಳೆ. ಅಷ್ಟರಲ್ಲಿ ನಾನು ಸುಂದರಿಯನ್ನು ಸಹ ಕಳುಹಿಸಿದ್ದೇನೆ, ಈಗ ಎಲ್ಲವನ್ನು ಯಾವ ರೀತಿ ಮೆಂಟೇನ್ ಮಾಡೋದು ಎಂದು ತಾಂಡವ್ ಕೇಳಿದ್ದಾನೆ. ಶೇಷ್ಠ ತಂದೆ ಶ್ರೀವರ ಫೋನ್ ಕಿತ್ತುಕೊಂಡು ನೀನು ಯಾವುದನ್ನು ಅರೇಂಜ್ ಮಾಡಬೇಕು, ದಯವಿಟ್ಟು ಯಾವುದನ್ನು ಅರೆಂಜ್ ಮಾಡಬೇಡ. ನಿನ್ನ ತಂದೆ ತಾಯಿ ನೀಟಾಗಿದ್ದರೆ ಅಷ್ಟೇ ಸಾಕು ಎಂದಿದ್ದಾರೆ. ಈಗ ಮತ್ತೊಂದು ಸಮಸ್ಯೆಗೆ ತಾಂಡವ್ ಸಿಕ್ಕಿ ಹಾಕಿಕೊಂಡಿದ್ದಾನೆ.


Click it and Unblock the Notifications











