Bhagyalakshmi: ಭಾಗ್ಯ ಎದುರು ತಾಂಡವ್ ನಾಟಕ ಬಯಲಾಗುತ್ತಾ? ಮತ್ತೇನು ಸಂಚು ಮಾಡ್ತಾನೆ?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ರೋಚಕ ತಿರುವು ಪಡೆದುಕೊಂಡಿದೆ. ಅದೇನೆಂದರೆ ತಾಂಡವ್ ನಾಟಕ ಭಯಲಾಗುವ ಒಂದು ಸನ್ನಿವೇಶ ಒದಗಿ ಬಂದಿದೆ. ಆದರೆ ತಾಂಡವ್ ನಾಟಕ ಬಯಲಾಗುತ್ತಾ? ಇಲ್ಲ ಮತ್ತೇನಾದರೂ ಪ್ಲಾನ್‌ ಮಾಡುತ್ತಾನಾ? ಎಂಬುದೇ ಕುತೂಹಲ ಕೆರಳಿಸಿದೆ.

ತನ್ವಿ ಭಾಗ್ಯಗೆ ಫೋನ್ ಮಾಡಿ ಪಪ್ಪಾ ರೂಂ ಲಾಕ್ ಮಾಡಿಕೊಂಡು ಎಲ್ಲೋ ಹೋಗಿದ್ದಾರೆ. ತುಂಬಾ ಹೊತ್ತಾಯಿತು ಬಂದು ಬಾಗಿಲನ್ನು ತೆಗೆಯುತ್ತಿಲ್ಲ, ನೀನಾದರೂ ಬಾ ಎಂದು ಅಮ್ಮನಿಗೆ ಫೋನ್ ಮಾಡಿ ಕೇಳಿಕೊಂಡಿದ್ದಾಳೆ. ಭಾಗ್ಯ ಗಾಬರಿಯಿಂದ ಆಸ್ಪತ್ರೆಯಿಂದ ಮನೆಗೆ ಓಡೋಡಿ ಮನೆಗೆ ಬಂದಿದ್ದಾಳೆ.

bhagyalakshmi-serial

ಭಾಗ್ಯ ಬಂದವಳೇ ಮನೆಯ ಕಾಲಿಂಗ್ ಬೆಲ್‌ ಹೊತ್ತಿದ್ದಾಳೆ. ಇದಕ್ಕೂ ಮೊದಲು ಶ್ರೇಷ್ಠ ಕುಟುಂಬದವರು ಟೀ ಕುಡಿದು ತಾಂಡವ್ ಬಳಿ ನಾವು ಮನೆಯನ್ನು ಒಮ್ಮೆ ನೋಡಬಹುದಾ ಎಂದು ಕೇಳಿಕೊಂಡಿದ್ದರು. ಇದಕ್ಕೆ ತಾಂಡವ್ ಅಂಕಲ್ ನೋಡಬಹುದು ಎಂದು ಹೇಳಿದ್ದನು. ಇನ್ನು ಯಾರಪ್ಪ ಬೆಲ್ ಮಾಡುತ್ತಾ ಇರೋರು ಎಂದು ತಾಂಡವ್‌ಗೆ ಭಯವಾಗಿದೆ. ಕೂಡಲೇ ಶ್ರೇಷ್ಠ ತಂದೆ ತಾಯಿಯನ್ನು ಮೇಲೆಲ್ಲ ನೋಡಿಕೊಂಡು ಬನ್ನಿ ಎಂದು ಕಳುಹಿಸಿದ್ದಾನೆ. ತಾಂಡವ್‌ಗೆ ತನ್ವಿ ರೂಮ್‌ನಲ್ಲಿ ಇರುವುದು ಸಹ ಮರೆತು ಹೋಗಿದೆ.

ಮನೆಯ ಕಾಲಿಂಗ್ ಬೆಲ್ ಸದ್ದಾಗಿದ್ದೆ ತಡ ತಾಂಡವ್ ಎದೆಯಲ್ಲಿ ಢವ ಢವ ಶುರುವಾಗಿದೆ. ಏನಪ್ಪಾ ಇದು ಯಾರಪ್ಪ ಮನೆಗೆ ಬಂದ್ರು ನಾನೇನಾದರೂ ಈಗ ಸಿಕ್ಕಿ ಬಿದ್ದರೆ ನನ್ನ ಗತಿ ಅಷ್ಟೇ ಎಂದು ಭಯಭೀತನಾಗಿದ್ದಾನೆ. ಭಾಗ್ಯ ಎರಡು ಮೂರು ಸಲ ಕಾಲಿಂಗ್ ಬೆಲ್ ಹೊತ್ತಿದರೂ ಸಹ ತಾಂಡವ್ ಬಾಗಿಲು ತೆಗೆಯುವ ಗೋಜಿಗೆ ಹೋಗಿಲ್ಲ. ಗರ ಬಡಿದವನ ರೀತಿ ಏನು ಮಾಡಬೇಕು ಎಂಬುದು ತಿಳಿಯದೇ ನಿಂತುಕೊಂಡಿದ್ದಾನೆ. ಭಾಗ್ಯ ಕಾಲಿಂಗ್ ಬೆಲ್ ಮಾಡಿ ಸುಸ್ತಾಗಿ ತನ್ನ ಬಳಿ ಇರುವ ಡೂಪ್ಲಿಕೇಟ್ ಕೀ ಬಳಸಿ ಬಾಗಿಲು ತೆಗೆದಿದ್ದಾಳೆ.

bhagyalakshmi-serial

ತಾಂಡವ್‌ಗೆ ಭಾಗ್ಯ ಪ್ರಶ್ನೆ

ದಿಢೀರನೆ ಭಾಗ್ಯ ಮನೆಯೊಳಗೆ ಬಂದಿದ್ದನ್ನ ನೋಡಿದ ತಾಂಡವ್ ಗಾಬರಿಯಾಗಿದ್ದಾನೆ‌. ಭಾಗ್ಯ ನೀನು ಆಸ್ಪತ್ರೆಯಿಂದ ಇಲ್ಲಿಗೆ ಏಕೆ ಬಂದೆ? ಎಂದು ಕೇಳಿದ್ದಾನೆ. ತನ್ವಿಯನ್ನು ನೀವು ರೂಮ್ ನಲ್ಲಿ ಲಾಕ್ ಮಾಡಿದ್ದೀರಂತಲ್ಲ ಅವಳು ಫೋನ್ ಮಾಡಿದ್ಲು. ಪಪ್ಪಾ ರೂಂನಲ್ಲಿ ಲಾಕ್ ಮಾಡಿ ನನ್ನನ್ನ ಹೋಗಿದ್ದಾರೆ ಎಂದು ಅದಕ್ಕಾಗಿ ನಾನು ಓಡೋಡಿ ಬಂದೆ ಎಂದು ಹೇಳಿದ್ದಾಳೆ. ಸಂದರ್ಭದಲ್ಲಿ ತಾಂಡವ್‌ಗೆ ತನ್ವಿಯನ್ನು ರೂಮ್ ಒಳಗಡೆ ಲಾಕ್ ಮಾಡಿರುವುದು ಗೊತ್ತಾಗಿದೆ. ಅಯ್ಯೋ ಅವರೇನಾದರೂ ತನ್ವಿ ಇರುವ ರೂಮ್‌ಗೆ ಹೋದರೆ ಏನು ಗತಿ. ನನ್ನ ಬಂಡವಾಳವೆಲ್ಲ ಬಯಲಾಗುತ್ತದೆ ಎಂದು ತಾಂಡವ ಟೆನ್ಶನ್‌ನಲ್ಲಿ ಇದ್ದಾನೆ.

ತಾಂಡವ್‌ಗೆ ಡವಡವ

ಈ ಕಡೆ ಟೀ ಕಪ್ ನೋಡಿದ ಭಾಗ್ಯ ಮನೆಗೆ ಯಾರು ಬಂದಿದ್ದರು ಎಂದು ತಾಂಡವ ಬಳಿ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ತಾಂಡವ ಮೀಟಿಂಗ್ ಇತ್ತು ಬಂದಿದ್ದರು. ನಾನೇ ಅವರಿಗೆ ಟೀ ಮಾಡಿ ಕೊಟ್ಟೆ ಎಂದು ಹೇಳಿದ್ದಾನೆ. ಕೊನೆಗೆ ಭಾಗ್ಯ ಮೇಲಕ್ಕೆ ಹೋದರೆ ಸಿಕ್ಕಿ ಬೀಳುತ್ತೇನೆ ಎಂದುಕೊಂಡು ನನಗೆ ಒಂದು ಲೋಟ ಕಾಫಿ ಮಾಡಿ ಕೊಡು ಎಂದು ಕೇಳಿದ್ದಾನೆ‌. ಇದೇ ಸಂದರ್ಭದಲ್ಲಿ ಭಾಗ್ಯ ನೀವು ತನ್ವಿನ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದೀರಾ ಎಂದು ಗೊತ್ತಾಗುತ್ತಿದೆ. ಮೊದಲು ಅವಳನ್ನು ನೋಡಿ ನಂತರ ನಿಮಗೆ ಕಾಫಿ ಮಾಡಿಕೊಡುತ್ತೇನೆ ಎಂದು ತನ್ವಿ ಇರುವ ರೂಮಿಗೆ ಹೋಗಿದ್ದಾಳೆ.

ಶ್ರೇಷ್ಠಾಗೆ ಫೋನ್ ಮಾಡಿದ ತಾಂಡವ್

ಭಾಗ್ಯ ಬಂದಿದ್ದನ್ನ ತಿಳಿಸಲು ತಾಂಡವ್, ಶ್ರೇಷ್ಠಾಗೆ ಫೋನ್ ಮಾಡಿದ್ದಾನೆ. ಇದೇ ಸಂದರ್ಭದಲ್ಲಿ ಶ್ರೇಷ್ಠ ತಾಯಿ ಯಶೋಧ ನೀನು ಎಷ್ಟು ಸಲ ತರುಣ್ ಮನೆಗೆ ಬಂದಿದ್ದೀಯಾ? ಎಂದು ಕೇಳುತ್ತಾಳೆ. ಇದಕ್ಕೆ ಶ್ರೇಷ್ಠ ಹಬ್ಬಕ್ಕೆ ಕರೆದಾಗಲೆಲ್ಲ ನಾನು ಬಂದಿದ್ದೇನೆ ಎಂದು ಅಮ್ಮನ ಬಳಿ ಹೇಳುತ್ತಿದ್ದಾಳೆ. ತಾಂಡವ್ ರೂಮ್‌ನ್ನು ಶ್ರೇಷ್ಠಾ ತಂದೆ ತಾಯಿ ನೋಡುತ್ತಾ ಇರುವಾಗ ತಾಂಡವ್, ಶ್ರೇಷ್ಠಾಗೆ ಫೋನ್ ಮಾಡಿದ್ದಾನೆ. ಈ ಸಲವಾದರೂ ಭಾಗ್ಯ ಕೈಗೆ ತಾಂಡವ್ ಸಿಕ್ಕಿ ಬೀಳ್ತಾನಾ? ಎಂಬುವುದೇ ಕುತೂಹಲಕಾರಿಯಾಗಿದೆ.

More from Filmibeat

English summary
Bhagyalakshmi kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X