Bhagyalakshmi: ಭಂಡತನದಿಂದ ಸಾಕ್ಷಿ ಸುಟ್ಟು ಹಾಕಿದ ತಾಂಡವ್: ಹಾಳಾಯಿತು ಶ್ರೇಷ್ಠ ಪ್ಲ್ಯಾನ್
ಶ್ರೇಷ್ಠ ಕರೆದುಕೊಂಡು ಬಂದಿದ್ದ ಡೂಪ್ಲಿಕೇಟ್ ಅಪ್ಪ ಅಮ್ಮನಿಗೆ ಕುಸುಮಾ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ಇವರು ನಮ್ಮ ಯಜಮಾನರ ಮೈಮೇಲೆ ನೋಟನ್ನ ಎಸೆದು ಇಲ್ಲಿಗೆ ಬಂದಿದ್ದಾರೆ. ಇವರೇ ಇಂತಹ ಸಂಸ್ಕಾರವಂತರಾದರೆ ಇವರ ಮಗ ಭಲೆ ಕಳ್ಳ ಎನಿಸುತ್ತದೆ ಎಂದಿದ್ದಾಳೆ. ನಾಲ್ಕಾರು ಕಡೆ ವಿಚಾರಿಸಿ ಮದುವೆ ಮಾಡಿ ಎಂದು ಕುಸುಮಾ ಎಚ್ಚರಿಕೆ ಕೊಟ್ಟಿದ್ದಾಳೆ.
ಶ್ರೇಷ್ಠ ಆ ತಂದೆ ಶ್ರೀವಾರಿಯ ಬಳಿ ಧರ್ಮರಾಜ್ ಇದನ್ನೇ ಹೇಳುತ್ತಿದ್ದಾನೆ. ನನಗೆ ಯಾಕೋ ಇದು ಸರಿ ಕಾಣಿಸುತ್ತಿಲ್ಲ ಇವರನ್ನು ನೋಡಿದರೆ ಈ ರೀತಿ, ಇವರ ಮಗ ಸ್ಥಳದಿಂದಲೇ ಪರಾರಿಯಾಗಿದ್ದಾನೆ. ನೀವು ಯಾವುದಕ್ಕೂ ಸಹ ಸ್ವಲ್ಪ ಹುಷಾರಾಗಿ ಮದುವೆ ಮಾಡಿ ಎಂದು ಧರ್ಮರಾಜ್ ತಿಳಿ ಹೇಳಿದ್ದಾರೆ. ಧರ್ಮರಾಜ್ ಆ ರೀತಿ ಹೇಳುತ್ತಿದ್ದಂತೆ ಶ್ರೇಷ್ಠ ತಂದೆ ಇವರು ಮೊದಲಿನಿಂದಲೂ ಇದೇ ರೀತಿ ಮಾಡುತ್ತಾ ಬಂದಿದ್ದಾರೆ.

4 ವರುಷವಾಯಿತು ಇವರಿಬ್ಬರು ಲವ್ ಮಾಡಲು ಶುರು ಮಾಡಿ. ನಮ್ಮನ್ನು ಭೇಟಿಯಾಗು ಎಂದರೆ ಹುಡುಗ ಸಹ ಒಪ್ಪಿರಲಿಲ್ಲ. ನನಗೂ ಯಾಕೋ ಇವರ ಮೇಲೆ ತುಂಬಾ ಅನುಮಾನವಿದೆ, ನನ್ನ ಮಗಳು ಒಪ್ಪಿದಳು ಎಂಬ ಒಂದೇ ಕಾರಣಕ್ಕೆ ನಾವು ಬೆಂಗಳೂರಿನವರೆಗೂ ಬಂದಿದ್ದೇವೆ. ನಮಗೆ ಈ ಸಂಬಂಧ ಇಷ್ಟವೇ ಇಲ್ಲ ಎಂದು ಶ್ರೇಷ್ಠ ತಂದೆ ಹೇಳಿದ್ದಾರೆ. ತಾಂಡವ್ ಹೋಗಿ ಒಳ್ಳೆಯ ಕೆಲಸ ಮಾಡಿದ ಎಂದು ಶ್ರೇಷ್ಠ ಯೋಚನೆ ಮಾಡುತ್ತಾ ಇದ್ದಾಳೆ.
ಅಳಿಯನಿಗೆ ಸುನಂದಾ ಪ್ರಶ್ನೆ
ತಾಂಡವ್ ಬಳಿ ಸುನಂದಾ ನನ್ನ ಮಗಳ ಜೀವನದಲ್ಲಿ ಯಾಕೆ ಇಂತಹ ಆಟವಾಡುತ್ತಿದ್ದೀರಾ? ಮನೆಯಲ್ಲಿ ಹೆಂಡತಿ ಇದ್ದು ಅಕ್ರಮ ಸಂಬಂಧ ಇಟ್ಟುಕೊಳ್ಳುವ ಪರಿಸ್ಥಿತಿ ನಿಮಗೇನು ಬಂದಿತ್ತು? ಎಂದೆಲ್ಲ ಕೇಳುತ್ತಿದ್ದಾಳೆ. ತಾಂಡವ್‌ಗೆ ಏನು ಮಾತನಾಡಬೇಕು ಎಂದು ತಿಳಿಯುತ್ತಿಲ್ಲ, ಸುಮ್ಮನೆ ನಿಂತುಕೊಂಡಿದ್ದಾನೆ. ನೀವು ಮಾಡಿರುವ ಕೆಲಸಕ್ಕೆ ನನ್ನ ಎದೆ ಹೊಡೆದುಕೊಳ್ಳುವುದೊಂದೇ ಬಾಕಿ, ನನ್ನ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಗುತ್ತಿದೆ ಎಂದು ಸುನಂದಾ ಕಣ್ಣೀರು ಹಾಕುತ್ತಿದ್ದಾಳೆ.

ತಾಂಡವ್ ತಬ್ಬಿಬ್ಬು
ನೀವು ಮಳ್ಳನ ರೀತಿಯಲ್ಲಿ ಇಂತಹ ಕೆಲಸ ಮಾಡಿದ್ದೀರಾ ಇದೇನಾದರೂ ನನ್ನ ಮಗಳಿಗೆ ಗೊತ್ತಾದರೆ ಅವಳು ಕೂಡ ಎದೆ ಹೊಡೆದುಕೊಂಡು ಸತ್ತು ಹೋಗುತ್ತಾಳೆ ಎಂದು ಸುನಂದಾ ಹೇಳಿದ್ದಾಳೆ. ನಾನು ಅಳಿಯ ಅಳಿಯ ಎಂದುಕೊಂಡು ನಿಮ್ಮನ್ನ ತಲೆಯ ಮೇಲೆ ಇಟ್ಟುಕೊಂಡು ಪೂಜಿಸುತ್ತಿದ್ದೆ. ಆದರೆ ನೀವು ಮಾಡಿದ್ದಾದರೂ ಏನು? ಯಾಕೆ ಈ ರೀತಿ ಮಾಡಿದ್ದೀರಿ? ಎಂದು ಅಳಿಯನನ್ನು ಸುನಂದ ಕೇಳುತ್ತಾ ಇದ್ದಾಳೆ. ತಾಂಡವ್ ಬಳಿ ಯಾವ ಪ್ರಶ್ನೆಗೂ ಸಹ ಉತ್ತರವಿಲ್ಲ.
ಸಾಕ್ಷ್ಯ ನಾಶ ಮಾಡಿದ ತಾಂಡವ್
ಶ್ರೇಷ್ಠಾ ಕೊಟ್ಟಿರುವ ಗ್ರೀಟಿಂಗ್ ಕಾರ್ಡ್‌ಗಳನ್ನು ತಾಂಡವ್ ಮುಖದ ಮೇಲೆ ಸುನಂದಾ ಎಸೆದಿದ್ದಾಳೆ. ಯಾಕೆ ಈ ರೀತಿ ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾಳೆ. ಇದೇ ವೇಳೆ ಸುನಂದಾ ಮಾತನಾಡುತ್ತಿದ್ದರೆ ತಾಂಡವ್ ಆ ಎಲ್ಲಾ ಗ್ರೀಟಿಂಗ್ ಕಾರ್ಡ್‌ಗಳನ್ನು ಸಹ ಸುಟ್ಟು ಹಾಕಿದ್ದಾನೆ. ನಂತರ ಅತ್ತೆ ನಾನೇನು ಮಾಡಿದೆ ಎಂದು ನೀವು ಈ ರೀತಿ ಪ್ರಶ್ನೆ ಕೇಳುತ್ತಿದ್ದೀರಿ? ಎಂದು ಹೇಳಿದ್ದಾನೆ. ನಾನು ನಿಮ್ಮ ಮುಖದ ಮೇಲೆ ಎಸೆದ ಕಾರ್ಡ್‌ಗಳೇ ಇದಕ್ಕೆಲ್ಲ ಸಾಕ್ಷಿ ಎಂದಾಗ ಎಲ್ಲಿದೆ ಅತ್ತೆ ಸಾಕ್ಷಿ ಎಂದು ತಾಂಡವ್ ಕೇಳಿದ್ದಾನೆ.
ನಾನು ನಿಮ್ಮ ಮುಖದ ಮೇಲೆ ಎಸೆದಾಗ ನೀವು ಹಿಂದೆಗಡೆ ಬಚ್ಚಿಟ್ಟುಕೊಂಡಿದ್ದೀರಲ್ಲ ಅದರಲ್ಲಿ ಎಲ್ಲಾ ಸಾಕ್ಷಿ ಇದೆ. ನಾನು ಅದೆಲ್ಲವನ್ನು ತೆಗೆದುಕೊಂಡು ಹೋಗಿ ನಿಮ್ಮ ತಾಯಿಯ ಬಳಿ ನ್ಯಾಯ ಕೇಳುತ್ತೇನೆ ಎಂದು ಸುನಂದಾ ಹೇಳಿದ್ದಾಳೆ. ಅತ್ತೆ ಅದು ಎಲ್ಲಿದೆ ಎಂದು ಹುಡುಕುತ್ತೀರಾ? ಎಂದು ತಾನು ಬೆಂಕಿ ಹಚ್ಚಿದ್ದನ್ನ ತೋರಿಸಿದ್ದಾನೆ. ಅಳಿಯ ಮಾಡಿದ ಕೆಲಸಕ್ಕೆ ಸುನಂದಾಗೆ ಶಾಕ್ ಆಗಿದೆ. ಈಗ ಸುನಂದಾ ಬಳಿ ಯಾವುದೇ ಸಾಕ್ಷಿ ಇಲ್ಲ ಯಾವ ರೀತಿಯಲ್ಲಿ ತನ್ನ ಮಗಳ ಜೀವನಕ್ಕೆ ನ್ಯಾಯ ಒದಗಿಸುತ್ತಾಳೆ ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











