Bhagyalakshmi: ಸುನಂದ ಬ್ಯಾಗಲ್ಲಿ ಮತ್ತೆರಡು ಗ್ರೀಟಿಂಗ್ ಕಾರ್ಡ್..? ಕುಸುಮಾಗೆ ಗೊತ್ತಾಗುತ್ತಾ ಮಗನ ಕಳ್ಳಾಟ..?

By ಶೃತಿ ಹರೀಶ್ ಗೌಡ

ಸುನಂದಾಗೆ ತನ್ನ ಅಳಿಯನ ಮೇಲಿದ್ದ ನಂಬಿಕೆ ಸತ್ತು ಹೋಗಿದೆ. ತನ್ನ ಅಳಿಯನನ್ನ ದೇವರು ಎಂದು ಪೂಜೆ ಮಾಡುತ್ತಿದ್ದಳು. ಆದರೆ ಅವನು ಶ್ರೇಷ್ಠಾ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾನೆ ಅನ್ನೋದು ತಿಳಿದು ನನ್ನ ಮಗಳ ಬಾಳಿಗೆ ಬಂದು ಯಾಕೆ ಮೋಸ ಮಾಡಿದೆ ಎಂದು ಕೇಳಿದ್ದಾಳೆ. ಇದಕ್ಕೆ ತಾಂಡವ್ ಧೈರ್ಯವಾಗಿಯೇ ಉತ್ತರ ನೀಡಿದ್ದಾನೆ.

ಅತ್ತೆ ಮುಖದ ಮೇಲೆ ಎಸೆದ ಗ್ರೀಟಿಂಗ್ ಕಾರ್ಡ್‌ಗಳನ್ನು ಸಹ ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಿದ್ದಾನೆ. ಗ್ರೀಟಿಂಗ್ ಕಾರ್ಡ್ ಕೇಳಿದಾಗ ನಿಮಗೆ ಸಾಕ್ಷಿ ಬೇಕಿತ್ತು ತಾನೇ ಅದೆಲ್ಲವನ್ನು ನಾನು ಸುಟ್ಟು ಹಾಕಿದ್ದೇನೆ. ಹೋಗಿ ಅಮ್ಮನ ಬಳಿ ಈಗ ಹೇಳಿ ಅವರು ಸಾಕ್ಷಿ ಕೇಳುತ್ತಾರೆ. ನಿಮ್ಮ ಬಳಿ ಯಾವುದೇ ಸಾಕ್ಷಿಗಳು ಇಲ್ಲ ಎಂದು ತನ್ನ ಇನ್ನೊಂದು ಮುಖ ತೋರಿಸಿದ್ದಾನೆ. ನನ್ನ ಮಗಳ ಮೇಲೆ ಮನಸ್ಸು ಇಲ್ಲ ಎಂಬುದನ್ನೇ ಕೇಳಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿದೆ. ಇದೇ ಅಮಲಿನಲ್ಲಿ ಸುನಂದ ಮನೆಗೆ ಹೋಗಿದ್ದಾಳೆ. ಮನೆಗೆ ಹೋಗಿ ಜೋರಾಗಿ ತನ್ನ ಗಂಡನ ಮುಂದೆ ತನ್ನ ನೋವು ತೋಡಿಕೊಂಡಿದ್ದಾಳೆ.

Bhagyalakshmi serial Written Update on september 4th episode

ಈ ಕಡೆ ತಾಂಡವ್ ಮನೆಗೆ ಬಂದಿದ್ದು ಕುಸುಮಾಗೆ ಯಾಕೋ ಮಗನ ಮೇಲೆ ಅನುಮಾನ ಬಂದಿದೆ. ನೀನು ಆಫೀಸಿಗೆ ಹೋಗಿ ಬರುತ್ತೇನೆ ಎಂದು ಹೇಳಿ ದೇವಸ್ಥಾನಕ್ಕೆ ಯಾಕೆ ಬಂದಿದ್ದೆ ಎಂದು ಪ್ರಶ್ನೆ ಕೇಳಿದ್ದಾಳೆ. ತಾಂಡವ್ ಏನು ಹೇಳಬೇಕು ಎಂದು ತೋಚದೇ ಕಂಗಾಲಾಗಿದ್ದಾನೆ. ಬೆಳಗ್ಗೆಯಿಂದ ಸುಳ್ಳನ್ನೇ ಹೇಳಿ ಈಗ ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಶ್ರೇಷ್ಠ ಹುಡುಗನನ್ನ ನಾನು ನೋಡಲಿಲ್ಲ ನಾನು ಹೋಗುವಷ್ಟರಲ್ಲಿ ಅಲ್ಲಿಂದ ಹೊರಟು ಹೋಗಿದ್ದನು ಎಂದು ಕತೆ ಕಟ್ಟಿದ್ದಾನೆ. ಅವನು ನಮ್ಮ ಆಫೀಸಿನಲ್ಲಿ ಕೆಲಸ ಮಾಡುವುದು ಸಹ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.

ಸುನಂದ ಬ್ಯಾಗಲ್ಲಿ ಗ್ರೀಟಿಂಗ್ ಕಾರ್ಡ್

ಸುನಂದಾ ತನ್ನ ಮನೆಗೆ ಬಂದು ತಾಂಡವ್ ಮಾಡಿದ ಮೋಸದ ಬಗ್ಗೆ ತನ್ನ ಗಂಡನ ಬಳಿ ಹೇಳುತ್ತಾ ಇದ್ದಾಳೆ. ಆ ಪಾಪಿ ಅಳಿಯನಿಗೆ ನನ್ನ ಮಗಳು ಎಂದರೆ ಇಷ್ಟವಿಲ್ಲವಂತೆ. ಅದಕ್ಕೆ ಬೇರೆ ಅವರ ಜೊತೆ ಸಂಬಂಧ ಇರಿಸಿಕೊಂಡಿದ್ದೇನೆ ಎಂದು ನನ್ನ ಮುಂದೆ ಹೇಳಿದ ಎಂದು ಸುನಂದಾ ಗೋಳಾಡುತ್ತಾ ಇದ್ದಾಳೆ. ಅವಳು ಅವನ ಅಮ್ಮನಿಗೆ ಮಾತ್ರ ಸೊಸೆಯಂತೆ ನನಗೆ ಹೆಂಡತಿ ಅಲ್ಲ ನಾನು ನಾಟಕ ಮಾಡುತ್ತಾ ಬದುಕು ನಡೆಸುತ್ತಿದ್ದೇನೆ ಎಂದು ಹೇಳಿದ ಎಂದು ಸುನಂದ ಗೋಳಾಡಿದ್ದಾಳೆ.

Bhagyalakshmi serial Written Update on september 4th episode

ನ್ಯಾಯ ಕೇಳೋಣ ಎಂದ ಸುನಂದಾ

ನಾನು ಕೊಟ್ಟಂತಹ ಗ್ರೀಟಿಂಗ್ ಕಾರ್ಡ್‌ಗಳನ್ನು ಅಲ್ಲೇ ಬೂದಿ ಮಾಡಿಬಿಟ್ಟ. ಸಾಕ್ಷಿಗೆ ಎಂದು ಅದು ಮಾತ್ರ ಇತ್ತು. ಈಗ ನಾನು ಏನು ಮಾಡಲಿ ಎಂದು ತನ್ನ ಬ್ಯಾಗನ್ನ ನೋಡಿದ ಸುನಂದಾಗೆ 2 ಗ್ರೀಟಿಂಗ್ ಕಾರ್ಡ್ ಸಿಕ್ಕಿವೆ. ತನ್ನ ಗಂಡನ ಬಳಿ ಹಿಡಿದು ನೋಡಿ ಎಲ್ಲಾ ಗ್ರೀಟಿಂಗ್ ಕಾರ್ಡ್‌ಗಳನ್ನು ಅವನ ಮುಖದ ಮೇಲೆ ಎಸೆದಾಗ ಇವೆರಡು ಉಳಿದುಕೊಂಡಿವೆ ಎಂದು ತೋರಿಸಿದ್ದಾಳೆ. ನಮಗೆ ಸಾಕ್ಷಿಗೆ ಇವೆರಡೇ ಸಾಕು ಬಾ ಹೋಗಿ ನಾವು ನಮ್ಮ ಮಗಳ ಪರವಾಗಿ ನ್ಯಾಯ ಕೇಳೋಣ ಎಂದು ಸುನಂದಾ ಗಂಡನಿಗೆ ಹೇಳಿದ್ದಾಳೆ.

ಕುಸುಮಾ ಏನ್ ಮಾಡ್ತಾಳೆ?

ಸುನಂದಾ ತಮ್ಮ ಅಳಿಯ ಮಾಡಿರುವ ಘನಂದಾರಿ ಕೆಲಸದ ಬಗ್ಗೆ ಕುಸುಮಾ ಬಳಿ ಹೇಳಿದರೆ ಆಕೆ ಏನು ಮಾಡುತ್ತಾಳೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ತನ್ನ ಮಗನ ಮೇಲೆ ಅಗಾಧವಾದ ನಂಬಿಕೆ ಇಟ್ಟಿರುವ ಕುಸುಮಾಗೆ ಯಾವ ರೀತಿ ಆಘಾತವಾಗುತ್ತದೆ ಎಂಬುದನ್ನು ನೋಡಬೇಕು ಎಂದು ಪ್ರೇಕ್ಷಕರು ಕಾಯುತ್ತಾ ಇದ್ದಾರೆ.

ಭಾಗ್ಯ ನಂಬುತ್ತಾಳೆ

ಮಗನ ಮೇಲಿರುವ ಕುರುಡು ಪ್ರೀತಿಯಿಂದ ಕುಸುಮಾ ನಂಬದಿದ್ದರೂ ಸಹ ಭಾಗ್ಯ ಅದು ನಿಜ ಎಂದು ನಂಬುತ್ತಾಳೆ ಎಂಬುವುದು ವೀಕ್ಷಕರ ವಾದವಾಗಿದೆ. ತನ್ನ ಗಂಡ ಏನು ಎಂಬುದು ಭಾಗ್ಯಗೆ ಚೆನ್ನಾಗಿ ಗೊತ್ತಿದೆ. ತಾಂಡವ್ ನಾಟಕ ಆಡುವುದನ್ನು ಭಾಗ್ಯ ಚೆನ್ನಾಗಿಯೇ ನೋಡಿದ್ದಾಳೆ, ಹಾಗಾಗಿ ಮುಂದೆ ಈ ಕಥೆ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.

More from Filmibeat

English summary
Bhagyalakshmi serial Written Update on september 4th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X