Bhagyalakshmi: ಭಾಗ್ಯಗೆ ತಾಂಡವ್ ಮೇಲೆ ಅನುಮಾನ: ಪ್ರಾಯಶ್ಚಿತ್ತ ಪಡುತ್ತಿರುವ ತಾಂಡವ್
ಶ್ರೇಷ್ಠಾ ಬಂದು ಕುಸುಮಾ ಎದುರು ಜೋರಾಗಿ ಮಾತನಾಡುತ್ತಿದ್ದಾಳೆ. ನನ್ನ ಮದುವೆ ನನ್ನ ನಿರ್ಧಾರ ಎಂದೆಲ್ಲ ಹೇಳುತ್ತಿದ್ದಾಳೆ. ನಾನು ಅದೇ ಹುಡುಗನನ್ನ ಮದುವೆಯಾಗುವುದು ನೀವು ಅಡ್ಡಿ ಪಡಿಸಬೇಡಿ ಎಂದಿದ್ದಾಳೆ. ಇದಕ್ಕೆ ಮೊದಲು ಕುಸುಮಾ ನಾನು ಆ ಹುಡುಗನನ್ನ ಮದುವೆಯಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಭಾಗ್ಯ ಅತ್ತೆಗೆ ಒಂದು ಐಡಿಯಾವನ್ನು ಕೊಟ್ಟಿದ್ದು ನಾನು ನಿನ್ನ ಮದುವೆಗೆ ಅಡ್ಡಿಪಡಿಸುವುದಿಲ್ಲ ನೀನು ಅದೇ ಹುಡುಗನನ್ನು ಮದುವೆಯಾಗು ಎಂದಿದ್ದಾರೆ. ಕುಸುಮಾ ಮಾತು ಕೇಳಿ ಶ್ರೇಷ್ಠಗೆ ತುಂಬಾ ಖುಷಿಯಾಗಿದೆ. ಆಂಟಿ ನೀವು ನನ್ನ ಮದುವೆಗೆ ಯಾವುದೇ ಕಾರಣಕ್ಕೂ ಅಡ್ಡಿ ಪಡಿಸುವುದಿಲ್ಲ ಅಲ್ವಾ? ಎಂದು ಕೇಳಿದ್ದಾಳೆ. ಇದಕ್ಕೆ ಕುಸುಮಾ ನೀನು ಆ ಕಳ್ಳರ ಫ್ಯಾಮಿಲಿಯನ್ನೇ ಮದುವೆಯಾಗು ನಮ್ಮದೇನು ಅಭ್ಯಂತರವಿಲ್ಲ ನಿನ್ನ ಮದುವೆಗೆ ನಾವೇ ಸಪೋರ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಶ್ರೇಷ್ಠಾ ತಂದೆಗೆ ಕರೆ ಮಾಡಿದ ಕುಸುಮಾ ನಿಮ್ಮ ಮಗಳನ್ನು ಅವಳು ಪ್ರೀತಿ ಮಾಡಿದ ಹುಡುಗನಿಗೆ ಕೊಟ್ಟು ಮದುವೆ ಮಾಡಿ, ಅವಳು ನಮ್ಮ ಮನೆಗೆ ಬಂದು ರಾದ್ಧಾಂತವನ್ನು ಮಾಡಿದ್ದಾಳೆ ಎಂದು ಹೇಳಿದ್ದಾರೆ. ಈ ಬೆಳವಣಿಗೆ ಶಾಕ್ ನೀಡಿದೆ. ಶ್ರೀವರ ಅವರು ಅವಳಿಗೆ ಬುದ್ಧಿ ಇಲ್ಲ ನಾನು ಅವಳನ್ನ ಊರಿಗೆ ಕರೆದುಕೊಂಡು ಹೋಗುತ್ತೇನೆ ಆ ಹುಡುಗನಿಗಂತೂ ಮದುವೆ ಮಾಡೋದಿಲ್ಲ ಎಂದು ಹೇಳಿದ್ದಾರೆ.
ಭಾಗ್ಯ ಹಾಗೂ ಕುಸುಮ ಇಬ್ಬರು ಸೇರಿ ಮಾಡಿರುವ ಪ್ಲಾನ್ ಬೇರೆಯದ್ದೇ ಆಗಿದೆ. ಶ್ರೇಷ್ಠಾ ಹೋದ ನಂತರ ಈ ಪ್ಲಾನ್ ಬಗ್ಗೆ ಕುಸುಮಾ, ಶ್ರೇಷ್ಠ ತಂದೆಯ ಬಳಿ ಹೇಳಬಹುದು. ಸದ್ಯಕ್ಕೆ ಹುಡುಗನ ಬಗ್ಗೆ ತಿಳಿದುಕೊಳ್ಳಲು ಈ ರೀತಿ ಮಾಡಿದ್ದಾರೆ.

ಪಶ್ಚಾತಾಪದಲ್ಲಿ ಬೇಯುತ್ತಿರುವ ತಾಂಡವ್
ಇತ್ತ ತಾಂಡವ್‌ಗೆ ತಾನು ಹೆಂಡತಿಗೆ ಮೋಸ ಮಾಡುತ್ತಿರುವುದು ಬೇಸರವನ್ನು ತರಿಸಿಲ್ಲ, ಬದಲಿಗೆ ತಂದೆ ತಾಯಿಗೆ ನಾನು ಮೋಸ ಮಾಡುತ್ತಿದ್ದೇನೆ ಎನ್ನುವುದು ಬಹಳ ಕಾಡುತ್ತಿದೆ. ಇದಕ್ಕಾಗಿ ತಾಂಡವ್ ಕನಸಿನಲ್ಲೂ ಕನವರಿಸುತ್ತಾ ಇದ್ದಾನೆ. ಇನ್ನೂ ಎದ್ದವನೇ ಮಧ್ಯರಾತ್ರಿಯಲ್ಲಿ ತಂದೆ ತಾಯಿ ಮಲಗಿದ್ದ ರೂಂಗೆ ಓಡಿ ಹೋಗಿ ಕುಸುಮಾಳನ್ನ ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾನೆ. ಕುಸುಮಾ ಕೂಡ ಮಗನನ್ನು ಸಮಾಧಾನ ಮಾಡುತ್ತಿದ್ದಾಳೆ. ರಾಜ ಏನಾಯ್ತು? ಯಾಕೆ ಈ ರೀತಿ ಆಡುತ್ತಿದ್ದೀಯಾ? ಕಟ್ಟ ಕನಸು ಬಿತ್ತಾ ಎಂದು ಸಮಾಧಾನಿಸುತ್ತಿದ್ದಾರೆ.
ನನ್ನ ಕ್ಷಮಿಸಿ ಎಂದ ತಾಂಡವ್
ಹೌದು ಅಮ್ಮ ಕೆಟ್ಟ ಕನಸು ಬಿತ್ತು, ನೀವಿಬ್ಬರು ಇನ್ನೂ ಆರೋಗ್ಯವಾಗಿ ಚೆನ್ನಾಗಿ ಇರಬೇಕು ಎಂದು ತನ್ನ ತಂದೆ ತಾಯಿಗೆ ತಾಂಡವ್ ಹೇಳಿದ್ದಾನೆ. ಇದೇ ವೇಳೆ ಕುಸುಮಾ ಮಗ ನನ್ನ ಸಮಾಧಾನ ಮಾಡಿ ಹೋಗು ಮಲಗಿಕೋ ಏನು ಆಗೋದಿಲ್ಲ ಎಂದು ಕಳಿಸಿದ್ದಾಳೆ. ತನ್ನ ತಂದೆ ತಾಯಿಯನ್ನು ನೋಡಿ ನನ್ನನ್ನ ಕ್ಷಮಿಸಿಬಿಡಿ ಯಾರನ್ನು ತಂದೆ-ತಾಯಿ ಎಂದು ಬಿಟ್ಟೆ. ನಿಮ್ಮನ್ನು ನೋಡುತ್ತಿದ್ದರೆ ನನ್ನ ಹೊಟ್ಟಿಗೆ ಬೆಂಕಿ ಬಿದ್ದಂತೆ ಆಗುತ್ತಿದೆ. ಶ್ರೇಷ್ಠ ಸಹವಾಸ ಮಾಡಿ ಇಷ್ಟೆಲ್ಲಾ ಆಯಿತು ಇನ್ನೆರಡು ದಿನ ಶ್ರೇಷ್ಠ ಕೈಗೆ ಸಿಗಬಾರದು ಎಂದು ತಾಂಡವ್ ಅಂದುಕೊಂಡಿದ್ದಾನೆ.
ತಾಂಡವ್ ಮೇಲೆ ಭಾಗ್ಯಗೆ ಅನುಮಾನ
ಇನ್ನು ತಾಂಡವ್ ನಿದ್ರೆಯಲ್ಲಿ ಕನವರಿಸಿ ಓಡೋಡಿ ಅಮ್ಮನನ್ನು ತಬ್ಬಿ ಕೊಂಡಿದ್ದನ್ನು ಭಾಗ್ಯ ನೋಡುತ್ತಾ ಇದ್ದಾಳೆ. ಇವರಿಗೆ ಏನೋ ಆಗಿದೆ ಅದಕ್ಕಾಗಿ ಈ ರೀತಿಯಲ್ಲಿ ಆಡುತ್ತಾ ಇದ್ದಾರೆ ಎನ್ನುವ ಅನುಮಾನ ಶುರುವಾಗಿದೆ. ಯಾವತ್ತು ಈ ರೀತಿ ಆಡದವರು ಇವತ್ತು ಯಾಕೆ ಈ ರೀತಿ ಆಡುತ್ತಿದ್ದಾರೆ. ಈ ರೀತಿ ಆಡುವುದಕ್ಕೆ ಯಾವುದಾದರೂ ಒಂದು ಬಲವಾದ ಕಾರಣ ಇದ್ದೇ ಇರುತ್ತೆ. ಇವರ ಬೆನ್ನ ಹಿಂದೆ ಏನೋ ನಡೆದಿದೆ ಇದಕ್ಕಾಗಿ ಇಷ್ಟೊಂದು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಭಾಗ್ಯ ಅಂದುಕೊಂಡಿದ್ದಾಳೆ. ತನ್ನ ಗಂಡ ಯಾಕೆ ಈ ರೀತಿ ಆಡುತ್ತಿದ್ದಾನೆ ಎಂದು ಭಾಗ್ಯ ಕಂಡುಹಿಡಿಯುತ್ತಾಳಾ? ನೋಡಬೇಕಾಗಿದೆ.


Click it and Unblock the Notifications











