Bhagyalakshmi: ಅಳಿಯನ ಮನೆಯಲ್ಲಿ ಸುನಂದಾ: ತಾಂಡವ್ ಗುಟ್ಟು ರಟ್ಟಾಗುತ್ತಾ?
ಶ್ರೇಷ್ಠಾ ತಂದೆ ತರುಣ್ ಮನೆಗೆ ಹೋಗೋಣ ಇನ್ನು ಅರ್ಧ ಗಂಟೆಯಲ್ಲಿ ನಾವಿಬ್ಬರು ತರುಣ್ ಮನೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ. ಆದರೆ ಶ್ರೇಷ್ಠಾಗೆ ಇದ್ಯಾವುದೂ ಇಷ್ಟವಿಲ್ಲ. ಯಾಕೆಂದರೆ ಆಕೆ ತಾಂಡವ್ ಮನೆಗೆ ಕರೆದುಕೊಂಡು ಹೋಗಬೇಕಾಗಿದೆ. ಬಾಡಿಗೆ ತಂದೆ ತಾಯಿಯ ಮನೆ ಎಲ್ಲಿದೆ ಅನ್ನೋದು ಶ್ರೇಷ್ಠಾಗೂ ಗೊತ್ತಿಲ್ಲ, ಅದಕ್ಕೆ ಗಾಬರಿಯಾಗಿದ್ದಾಳೆ.
ಶ್ರೀವರ ನಾವು ಅವರ ಮನೆಗೆ ಹೋಗಿ ಮದುವೆ ಮಾತುಕತೆ ಮುಗಿಸಿ ಬಂದಾಗಷ್ಟೇ, ನಿನ್ನ ಮದುವೆ ಅವರ ಜೊತೆ ಸಾಧ್ಯ, ಇಲ್ಲದಿದ್ದರೆ ನನ್ನ ಜೊತೆ ಊರಿಗೆ ಬಾ ಎಂದಿದ್ದಾರೆ. ತಾಂಡವ್ ಪಶ್ಚಾತಾಪದಿಂದ ಬೇಯುತ್ತಿದ್ದು ತಂದೆ ತಾಯಿಯನ್ನ ತಬ್ಬಿಕೊಂಡು ಅತ್ತಿದ್ದಾನೆ.

ಭಾಗ್ಯಗೆ ತಾಂಡವ್ ನಡೆ ಹೊಸದಾಗಿ ಕಾಣಿಸುತ್ತಿದ್ದು ಅನುಮಾನ ಬಂದಿದೆ. ಪೂಜಾ, ತಾಂಡವ್ ಮನೆಯಲ್ಲಿ ಇದ್ದಾಳೆ. ತನ್ನ ಅಮ್ಮನಿಗೆ ಎಲ್ಲಾ ಅಪ್‌ಡೇಟ್ ಕೊಡುತ್ತಿದ್ದಾಳೆ. ಸುನಂದಾಗೆ ತುಂಬಾನೇ ಅನುಮಾನ ಬಂದಿದ್ದು ನನ್ನ ಅಳಿಯ ಬೇರೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ ಅನ್ನೋದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಅತ್ತೆ ಮೇಲೆ ತಾಂಡವ್‌ಗೆ ಕೋಪ
ಈ ಕಡೆ ಶ್ರೇಷ್ಠಾಗೆ ತಾನು ತಪ್ಪು ಮಾಡಿಕೊಂಡಿದ್ದೇನೆ ಎಂದು ಅನಿಸುತ್ತಿದೆ. ಯಾಕೆಂದರೆ ಈಗ ಅವರ ತಂದೆ, ತರುಣ್ ಮನೆಗೆ ಹೋಗೋಣ ಎಂದಿರುವುದು ಗೊಂದಲಕ್ಕೆ ದೂಡಿದೆ. ಇನ್ನು ಸುನಂದಾ, ಭಾಗ್ಯ ಮನೆಗೆ ಬಂದಿದ್ದಾಳೆ. ತಾಂಡವ್‌ಗೆ ಅತ್ತೆ ಬಂದಿರುವುದು ತುಂಬಾ ಕೋಪ ತರಿಸಿದೆ. ಇವರು ಯಾಕೆ ಇಲ್ಲಿಗೆ ಬಂದರು? ನಿನ್ನೆ ಅಷ್ಟೆಲ್ಲಾ ಹೇಳಿದರೂ ಸಹ ಈಗ ಮನೆಗೆ ಬಂದು ರಾಮಾಯಣ ಮಾಡುತ್ತಿದ್ದಾರೆ ಎಂದುಕೊಂಡಿದ್ದಾನೆ.

ಅಮ್ಮನಿಗೆ ಜೋರಾಗಿ ಗದರಿದ ಭಾಗ್ಯ
ಎಲ್ಲರೂ ತಿಂಡಿ ತಿಂದು ಮುಗಿಸಿ ಹಾಲ್‌ಗೆ ಬಂದಿದ್ದಾರೆ. ಈ ವೇಳೆ ಸುನಂದಾ ಇಷ್ಟು ದಿನ ಕತ್ತಲೆಯಲ್ಲಿ ಕಣ್ಣ ಮುಚ್ಚಾಲೆ ಆಟ ನಡೆಯುತ್ತಿತ್ತು. ಅದನ್ನೆಲ್ಲ ನಾನು ಬಹಿರಂಗ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ. ನಾನು ಸುಮ್ಮನೆ ಇದ್ದರೆ ಇವರು ಜೋರಾಗಿಯೇ ಮಾತನಾಡುತ್ತಾರೆ, ಹೇಗಾದರೂ ಮಾಡಿ ಇವರ ಬಾಯಿ ಮುಚ್ಚಿಸಬೇಕು ಎಂದು ಅತ್ತೆ ನೀವು ನಿಮ್ಮ ಅಳಿಯನ ಮನೆಗೆ ಬಂದು ಈ ರೀತಿಯೆಲ್ಲ ಮಾತನಾಡುತ್ತಿರುವುದು ಶೋಭೆ ತರುವುದಿಲ್ಲ ಎಂದಿದ್ದಾನೆ.
ಸುಮ್ಮನಾಗದ ಸುನಂದಾ
ಭಾಗ್ಯಗೂ ಸಹ ತಾಂಡವ್ ಬಗ್ಗೆ ಸುನಂದಾ ಮಾತನಾಡುತ್ತಿರುವುದು ಸ್ವಲ್ಪವೂ ಸಹ ಇಷ್ಟವಾಗಿಲ್ಲ. ಅಮ್ಮ ಏನು ಅಳಿಯನ ಬಗ್ಗೆ ಈ ರೀತಿಯಲ್ಲ ಮಾತನಾಡುತ್ತಿದ್ದೀಯಲ್ಲ ಏನಾಗಿದೆ? ನಿನಗೆ ಎಂದು ಕೇಳಿದ್ದಾಳೆ. ಮಕ್ಕಳಿಗೂ ಸಹ ತನ್ನ ತಂದೆ ಎಂತಹ ಘನ ಕಾರ್ಯ ಮಾಡಿದ್ದಾನೆ ಎಂಬುದು ತಿಳಿಯಲಿ ಎಂದು ಸುನಂದಾ ಎಂದಿದ್ದಾಳೆ. ಬೀಗರ ಮನೆಗೆ ಬಂದು ಯಾವ ರೀತಿ ನಡೆದುಕೊಳ್ಳಬೇಕು ಎಂಬುದು ನಿಮಗೆ ಗೊತ್ತಿಲ್ವಾ ಎಂದು ತಾಂಡವ್ ಕೇಳಿದ್ದಾನೆ.
ತಾಂಡವ್ ಗುಟ್ಟು ರಟ್ಟು
ತಾಂಡವ್ ಮೇಲೆ ಸುನಂದಾ ಉರಿದು ಬೀಳುತ್ತಿರುವುದನ್ನು ನೋಡಿ ಏನಾಯಿತು ಎಂದು ಎಲ್ಲರೂ ಕೇಳಿದ್ದಾರೆ. ಹೆಂಡತಿಯ ಮೇಲೆ ಪ್ರೀತಿ ಇಲ್ಲದವನು ಏನು ತಾನೇ ಮಾಡಿಯಾನು? ಇನ್ನೊಬ್ಬಳ ಜೊತೆಗೆ ಸಂಬಂಧ ಇರಿಸಿಕೊಂಡಿದ್ದಾನೆ ಎಂದಿದ್ದಾಳೆ. ನೀವು ಮೊದಲು ನಿಮ್ಮ ಮನೆಯ ಕಾವಲಿ ತೂತನ್ನ ಮುಚ್ಚಿಕೊಳ್ಳಿ ಆನಂತರ ದೋಸೆ ಮುಚ್ಚುವಿರಂತೆ ಎಂದು ಕುಸುಮಾಗೆ ಸುನಂದಾ ಹೇಳಿದ್ದಾಳೆ.
ತಾಂಡವ್ ಗಪ್‌ಚುಪ್
ಸುನಂದಾ ಮಾತು ಕೇಳಿದ ಕುಸುಮಾಗೆ ಆಕಾಶದ ಮೇಲೆ ಬಿದ್ದಂತೆ ಆಗಿದೆ ನನ್ನ ಮಗ ಈ ರೀತಿಯಲ್ಲ ಮಾಡುವುದಿಲ್ಲ ಎಂದು ಅವರು ಮಗನನ್ನ ಸಮರ್ಥನೆ ಮಾಡಿಕೊಳ್ಳುತ್ತಾ ಇದ್ದಾರೆ. ಅತ್ತೆಯ ಮಾತನ್ನು ಕೇಳಿ ಇವರು ನಿನ್ನೆ ಕೊಟ್ಟಿದ್ದನ್ನು ಮರೆತಿಲ್ಲ ಸುಮ್ಮನೆ ಬಂದು ಅಮ್ಮನ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಾ ಇದ್ದಾರೆ ಎಂದು ತಾಂಡವ್ ಸುಮ್ಮನೆ ನಿಂತುಕೊಂಡಿದ್ದಾನೆ.


Click it and Unblock the Notifications











