Bhagyalakshmi: ಹಳ್ಳ ಹಿಡಿದ 'ನಾನು ಭಾಗ್ಯ' ಅಭಿಯಾನ: ತಾಂಡವ್ - ಶ್ರೇಷ್ಠ ಮೇಲುಗೈ

By ಎಸ್ ಸುಮಂತ್

ರಿಯಲ್ ಲೈಫ್‌ನಲ್ಲಿ ಯಾರದ್ದೇ ಜೀವನದಲ್ಲಿ ಆಗಲಿ ಕಷ್ಟಗಳು ಬಂದರೆ, ಅದನ್ನು ಮೆಟ್ಟಿ ನಿಲ್ಲವೂ ಶಕ್ತಿ ಬಂದು ಬಿಟ್ಟರೆ ಮತ್ತೆ ಯಾವುದೇ ಕಷ್ಟಗಳು ಬಂದರೂ ಮತ್ತೆ ಕುಗ್ಗುವುದಿಲ್ಲ. ಆದರೆ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಹಾಗಾಗಲಿಲ್ಲ. ಎಲ್ಲವೂ ಉಲ್ಟಾ ಆಯ್ತು. ಭಾಗ್ಯಾಳನ್ನ ತಾಂಡವ್ ಅವಮಾನಿಸಿದ್ದು ಕಡಿಮೆ ಏನು ಅಲ್ಲ. ಎಲ್ಲವನ್ನು ಮೆಟ್ಟಿ ನಿಂತು ತಾಂಡವ್‌ನ ಕಂಟ್ರೋಲ್‌ಗೆ ತರುವ ಹಂತಕ್ಕೆ ಬೆಳೆದಳು. ಆದರೆ ಈಗ ಮತ್ತೆ ಅದೇ ರಾಗ ಅದೇ ಹಾಡು ಎಂಬಂತಾಗಿದೆ.

ಧಾರಾವಾಹಿ ಹೊರ ಜಗತ್ತಿಗೆ ಸ್ಪೂರ್ತಿಯಾಗುವ ಸಮಯಕ್ಕೆ ಕಲರ್ಸ್ ಕನ್ನಡದ ವತಿಯಿಂದ 'ನಾನು ಭಾಗ್ಯಾ' ಎಂಬ ಅಭಿಯಾನವನ್ನು ಶುರು ಮಾಡಿದರು. ಅಲ್ಲಿಂದ ಭಾಗ್ಯಾ ಹೊಸ ಅಧ್ಯಾಯ ಆರಂಭವಾಗಿತ್ತು. ಭಾಗ್ಯಾಳ ದುಡಿಮೆ, ಮನೆ ನಡೆಸುವ ಜವಾಬ್ದಾರಿ, ಮಕ್ಕಳ ಪ್ರೀತಿ ಈ ಎಲ್ಲವೂ ಸರಿಯಾಗಿತ್ತು. ತಾಂಡವ್ ನೂ ಕಂಟ್ರೋಲ್ ಗೆ ತರುವ ಪಯಣವೂ ಆರಂಭವಾಗಿತ್ತು. ಆದರೆ ಅದ್ಯಾಕೋ ಏನೋ ಇದ್ದಕ್ಕಿದ್ದ ಹಾಗೇ ಮತ್ತೆ ಹಳೆ ಚಾಳಿಗೆ ತಿರುಗಿದೆ.

Bhagyalakshmi Written Update on February 15th episode Naanu Bhagya campaign failed

ಮಗಳನ್ನು ಸೆಳೆಯುವ ಪ್ರಯತ್ನ

ತಾಂಡವ್ ಹೊಸದೊಂದು ಪ್ಲ್ಯಾನ್ ಮಾಡಿದ್ದಾನೆ. ಮೊದಲು ಮನೆಯವರಿಂದೆಲ್ಲಾ ಭಾಗ್ಯಾಳನ್ನ ದೂರ ಮಾಡಬೇಕು. ತಾಂಡವ್ ಸರಿ ಇದ್ದಾನೆ, ಭಾಗ್ಯಾ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂಬ ಭಾವನೆ ಹುಟ್ಟಬೇಕು. ಆ ರೀತಿ ಪ್ಲ್ಯಾನ್ ಮಾಡಿರುವ ತಾಂಡವ್, ಈಗ ಮಗಳನ್ನ ತನ್ನತ್ತ ಸೆಳೆದುಕೊಳ್ಳುತ್ತಿದ್ದಾನೆ. ಅವಳ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾನೆ. ಸರ್ಪೈಸ್ ಕೊಟ್ಟು ತನ್ವಿಗೆ ಹತ್ತಿರವಾಗಿದ್ದಾನೆ.

ಪಾರ್ಟಿಯಲ್ಲಿ ಜೋಕರ್ ಆದ ಭಾಗ್ಯಾ

ತನಗೆ ಕಷ್ಟವಾದರೂ ಮಕ್ಕಳನ್ನ ಖುಷಿಯಾಗಿಡಬೇಕೆಂಬುದು ಭಾಗ್ಯಾಳ ಆಸೆ. ಹೀಗಾಗಿಯೇ ತನ್ವಿಯ ಹುಟ್ಟುಹಬ್ಬಕ್ಕೆ ಹಣ ಹೊಂದಿಸಲು ಒಂದು ದಿನದ ಕೆಲಸಕ್ಕೆ ಹೋಗಿದ್ದಾಳೆ. ಅದು ಜೋಕರ್ ವೇಷ ತೊಟ್ಟು, ಮನರಂಜನೆ ನೀಡಬೇಕಿರುವುದು. ಆ ಕಾರ್ಯಕ್ರಮ ಯಾರದೆಂಬುದು ಮಾತ್ರ ಭಾಗ್ಯಾಳಿಗೆ ಗೊತ್ತಿಲ್ಲ. ಕೇಕ್ ಮೇಲೆ ಹೆಸರು ನೋಡಿದಾಗಲೂ ಇದು ತನ್ವಿ ಬರ್ತ್ ಡೇ ಪಾರ್ಟಿ, ಆ ಪಾರ್ಟಿಯನ್ನ ತಾಂಡವ್ - ಶ್ರೇಷ್ಠಾ ಮಾಡ್ತಾ ಇರೋದು ಅಂತ ಅರ್ಥ ಆಗಿದ್ದು.

ಭಾಗ್ಯಾಳನ್ನ ಒಂಟಿ ಮಾಡುವ ಪ್ಲ್ಯಾನ್?

ನಿರ್ದೇಶಕರ ಪ್ಲ್ಯಾನ್ ಆದ್ರೂ ಏನು ಎಂಬ ಪ್ರಶ್ನೆ ವೀಕ್ಷಕರಿಗೆ ಶುರುವಾಗಿದೆ. ಯಾಕಂದ್ರೆ ಭಾಗ್ಯಾಳಿಂದ ತಾಂಡವ್ ಒಬ್ಬೊಬ್ಬರನ್ನೇ ತನ್ನತ್ತ ಸೆಳೆದುಕೊಳ್ಳುತ್ತಿದ್ದಾನೆ. ಇಡೀ ಕುಟುಂಬ ಭಾಗ್ಯಾಳ ಪರವಾಗಿ ಇತ್ತು. ಅಂದು ತಾಂಡವ್ ಒಂಟಿಯಾಗಿದ್ದ. ಈಗ ನಿರ್ದೇಶಕರ ತಲೆಯಲ್ಲಿ ಭಾಗ್ಯಾಳನ್‌ ಒಂಟಿಯಾಗಿ ನಿಲ್ಲಿಸಿ, ಕಥೆಯಲ್ಲಿ ಟ್ವಿಸ್ಟ್ ಕೊಡೋದಾ ಅಂತ.

ಗಟ್ಟಿ ಹೆಣ್ಣಾಗಿ ಕಂಡಿದ್ದ ಭಾಗ್ಯಾ

ಈಗ 'ಭಾಗ್ಯಲಕ್ಷ್ಮೀ' ಧಾರಾವಾಹಿ ನೋಡುವ ಹೆಣ್ಣು ಮಕ್ಕಳಿಗೆ ಏನು ಅನ್ನಿಸಬಹುದು. ಓ ನಾವೆಷ್ಟೇ ಸ್ಟ್ರಾಂಗ್ ಆದ್ರೂ ಮತ್ತೆ ಕಷ್ಟಗಳು ಬರುತ್ತವೆ. ಗಂಡನೇ ಮುಖ್ಯ. ನಾವೂ ಯಾವ ಪ್ರಯತ್ನವನ್ನು ಮಾಡದೆ ಅವರೇಳಿದಂತೆ ಇದ್ದು ಬಿಡೋಣಾ ಅನ್ನಿಸಲ್ವಾ. ಬಿಕಾಸ್ ನಾನು ಭಾಗ್ಯ ಅಭಿಯಾನ ಶುರುವಾದಾಗ ಭಾಗ್ಯಾ ಗಟ್ಟಿ ಹೆಣ್ಣಾಗಿ ಕಂಡಳು. ಗಂಡ ಕೊಟ್ಟ ಕಷ್ಟವನ್ನೆಲ್ಲ ಅನುಭವಿಸಿ, ಕಲ್ಲಲ್ಲಿ ಕೆತ್ತಿದ್ದ ಶಿಲೆಯಾಗಿ‌ ನಿಂತಿದ್ದಳು. ಪ್ರೀತಿಯೇ ಇಲ್ಲದ ಗಂಡನಿಗಾಗಿ ಭಾವನೆಗಳನ್ನೇ ಮರೆತಿದ್ದಳು. ಮಕ್ಕಳಿಗಾಗಿ ಗಂಡನನ್ನ ಸರಿ ದಾರಿಗೆ ತರಲು ಪ್ರಯತ್ನ ನಡೆಸಿದ್ದಳು. ಆ ಭಾಗ್ಯಾಳೆ ಮುಂದುವರೆದಿದ್ದರೆ ಒಂದಷ್ಟು ಹೆಣ್ಣು ಮಕ್ಕಳು ಧೈರ್ಯ ಮಾಡ್ತಾ ಇದ್ರು ಅನ್ಸುತ್ತೆ.

More from Filmibeat

English summary
Bhagyalakshmi serial today episode. Here is the details about What happened to the I Am Bhagya campaign?
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X