Asha Ayyanar: ಕೂಲ್‌ ಹುಡುಗಿಗೆ ಖುಷಿ ಕೊಟ್ಟ ನೆಗೆಟಿವ್‌ ರೋಲ್

By ಪ್ರಿಯಾ ದೊರೆ

'ಭಾಗ್ಯಲಕ್ಷ್ಮಿ' ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು, ತಾಂಡವ್‌ ಹಾಗೂ ಭಾಗ್ಯಳ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ತಾಂಡವ್‌ನನ್ನು ಬೈಯುತ್ತಾ, ಭಾಗ್ಯಳಿಗೆ ಅಯ್ಯೋ ಎನ್ನುತ್ತಲೇ ಧಾರಾವಾಹಿಯನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿದ್ದು, ಕುಸುಮಾ ನಡೆಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಇದ್ದರೆ, ಇಂತಹ ಅತ್ತೆ ಇರಬೇಕು. ನ್ಯಾಯದ ಕಡೆ ಮಾತನಾಡಬೇಕು ಎನ್ನುತ್ತಿದ್ದಾರೆ.

ಭಾಗ್ಯ ಓದುವುದಕ್ಕೆ ವೀಕ್ಷಕರು ಸಪೋರ್ಟ್‌ ಮಾಡುತ್ತಿದ್ದು, ಶ್ರೇಷ್ಠಾಳ ಸೊಕ್ಕು ಮುರಿಯಲು ಕಾಯುತ್ತಿದ್ದಾರೆ. ಗುಂಡಣ್ಣನ ಮುದ್ದು ಮಾತುಗಳಿಗೆ ಮರುಳಾಗಿರುವ ವೀಕ್ಷಕರು ತನ್ವಿಯ ಹಠಕ್ಕೆ ಕೋಪ ಮಾಡಿಕೊಂಡಿದ್ದಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯು ಇತರೆ ಸೀರಿಯಲ್‌ಗಳಿಗಿಂತಲೂ ಕೊಂಚ ಡಿಫರೆಂಟ್‌ ಆಗಿದೆ. ಹಲವರು ಭಾಗ್ಯಳನ್ನು ತಮ್ಮ ಮನೆಯ ಹೆಣ್ಣು ಮಗಳಂತೆ ನೋಡುತ್ತಿದ್ದು, ಅವಳ ಕಷ್ಟಗಳಿಗೆ ಮಿಡಿಯುತ್ತಿದ್ದಾರೆ.

Bhagyalaksmi serial Fame Actress Asha Ayyanar Biography and Career

ಇತ್ತ ಪೂಜಾ ಹಾಗೂ ಅವರ ತಾಯಿಯ ನಡೆಯನ್ನು ಇಷ್ಟ ಪಡದ ಪ್ರೇಕ್ಷಕರು, ನೇರವಾಗಿ ಪೂಜಾ ಪಾತ್ರ ನಿರ್ವಹಿಸುತ್ತಿರುವ ನಟಿ ಆಶಾ ಅಯ್ಯನರ್‌ ಅವರಿಗೆ ಚೀಮಾರಿ ಹಾಕುತ್ತಿದ್ದಾರೆ. ಆದರೂ, ಬೇಸರ ಮಾಡಿಕೊಳ್ಳದ ನಟಿ ನೆಗೆಟಿವ್‌ ರೋಲ್‌ನಿಂದ ಆಶಾ ಈಗ ಚಿರಪರಿಚಿತಳಾಗಿದ್ದಾಳೆ. ನಿಧಾನವಾಗಿ ಜನಪ್ರಿಯರಾಗುತ್ತಿದ್ದಾರೆ.

Bhagyalaksmi serial Fame Actress Asha Ayyanar Biography and Career

ಎಲ್ಲರಿಂದ ಬೈಗುಳ ಪಡೆಯುತ್ತಿರುವ ಪಾತ್ರ

ಹೌದು ಕಲರ್ಸ್‌ ಕನ್ನಡದಲ್ಲಿ ಮೂಡಿ ಬರುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗಂತೂ ಭಾಗ್ಯ ಓದಲು ಶುರು ಮಾಡಿರುವುದು ಪ್ರತಿಯೊಬ್ಬರನ್ನು ಸೆಳೆಯುತ್ತಿದೆ. ಇನ್ನು ಇದೇ ಧಾರಾವಾಹಿಯಲ್ಲಿ ನಟಿ ಆಶಾ ಅಯ್ಯನರ್‌ ಅವರು ಪೂಜಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಎರಡು ಧಾರಾವಾಹಿಯಾಗಿ ಭಾಗ ಆಗಿರುವ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಸೂಪರ್‌ ಹಿಟ್‌ ಆಗಿದೆ.

ಭಾಗ್ಯಳ ತಂಗಿಯಾಗಿ ಪೂಜಾ

ಭಾಗ್ಯಲಕ್ಷ್ಮಿ ಅಕ್ಕನ ಕಥೆಯನ್ನು ಹೇಳುತ್ತಿದ್ದರೆ, ಲಕ್ಷ್ಮೀಬಾರಮ್ಮದಲ್ಲಿ ತಂಗಿಯ ಕಥೆ ಸಾಗುತ್ತಿದೆ. ಇನ್ನು ಪೂಜಾ, ಭಾಗ್ಯಳ ತಂಗಿ ಆಗಿದ್ದು, ಲಕ್ಷ್ಮಿಯ ದೊಡ್ಡಪ್ಪನ ಮಗಳು. ಸದಾ ಲಕ್ಷ್ಮಿ ಮೇಲೆ ಕಿಡಿಕಾರುವ ಪೂಜಾ ಅವರ ನಿಜ ಜೀವನದ ಬಗ್ಗೆ ಹಲವರಿಗೆ ಕುತೂಹಲವಿದೆ. ಹಾಗಾದರೆ, ಆಶಾ ಅವರು ಓದಿದ್ದು, ಬೆಳೆದಿದ್ದು ಎಲ್ಲಿ ಎಂಬುದನ್ನು ನೋಡೋಣ ಬನ್ನಿ.

ಖುಷಿ ಕೊಟ್ಟ ನೆಗೆಟಿವ್‌ ರೋಲ್

ನಟಿ ಆಶಾ ಅಯ್ಯನರ್‌ ಅವರು 'ಮೂರುಗಂಟು' ಹಾಗೂ 'ರಾಧಾರಮಣ' ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಆದರೆ, ಈಗ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಹಾಗೂ 'ಲಕ್ಷ್ಮೀಬಾರಮ್ಮ' ಧಾರಾವಾಹಿ ಅವರಿಗೆ ಹೆಸರು ತಂದುಕೊಟ್ಟಿದೆ. ಸದಾ ಲಕ್ಷ್ಮೀ ಅನ್ನು ಪೂಜಾ ಗೋಳಾಡಿಸುತ್ತಿರುತ್ತಾರಳೆ. ಇದರಿಂದ ಅಭಿಮಾನಿಗಳು ನೇರವಾಗಿ ಆಶಾ ಅವರಿಗೆ ಬೈಯುತ್ತಾರಂತೆ.

ಆಶಾ ಅವರಿಗೂ ಇದೆಲ್ಲಾ ಖುಷಿ ತಂದು ಕೊಟ್ಟಿದೆ. ಧಾರಾವಾಹಿಯಲ್ಲಿ ನೆಗೆಟಿವ್‌ ರೋಲ್‌ ಪ್ಲೇ ಮಾಡುತ್ತಿರುವ ಆಶಾ ಅವರು ಮೂಲತಃ ದಾವಣಗೆರೆಯವರು. ಸೆಂಟ್‌ ಜಾನ್ಸ್‌ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಆಶಾ ಅಯ್ಯನರ್‌ ಅವರು ಸಕ್ರಿಯರಾಗಿದ್ದಾರೆ.

ಹೆಚ್ಚು ರೀಲ್ಸ್ ಮಾಡುವ ಸುಂದರಿ

ಇನ್ನು ಆಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಸೀರೆಯಲ್ಲಿ ವಿವಿಧ ರೀತಿಯಲ್ಲಿ ಮೇಕಪ್ ಮಾಡಿಕೊಂಡು ರೀಲ್ಸ್ ಮಾಡುತ್ತಿರುತ್ತಾರೆ. ಈಗಂತೂ ಧಾರಾವಾಹಿ ತಂಡದೊಂದಿಗೆ ಅತಿ ಹೆಚ್ಚು ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ.

ವಿಧವಿಧವಾಗಿ ಹಲವು ಥೀಮ್‌ಗಳಲ್ಲಿ ರೀಲ್ಸ್ ಮಾಡುವ ಆಶಾ ಅಯ್ಯನರ್, ಸಕತ್ ಕಾಮಿಡಿ ಮಾಡುತ್ತಾರಂತೆ. ಪೂಜಾ ಪಾತ್ರಕ್ಕೂ ನಿಜ ಜೀವನದ ಆಶಾ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆಯಂತೆ.

More from Filmibeat

English summary
Bhagyalaksmi serial Fame Actress Asha Ayyanar Biography and Career. here is details about Asha Ayyanar small screen and personal life. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X