ಝೀ ಟಿವಿಯಲ್ಲಿ ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ಪ್ರಸಾರ
ವೀಕೆಂಡ್ ಬಂತು ಅಂದರೆ ಸಾಕು ಅದೆಷ್ಟೋ ಟಿವಿ ವೀಕ್ಷಕರು ಒಂದೊಳ್ಳೆ ಸಿನಿಮಾವನ್ನು ಕುಟುಂಬ ಸದಸ್ಯರೊಟ್ಟಿಗೆ ಕುಳಿತು ನೋಡುವುದಕ್ಕೆ ಉತ್ಸುಕರಾಗಿರುತ್ತಾರೆ. ಕೊರೊನಾ ಹಾವಳಿ ಹೀಗಾಗಿ ಹೊರಗೆ ಮಾಲ್ ಥಿಯೇಟಎರ್‌ಗಳಲ್ಲಿ ಹೋಗಿ ಸಿನಿಮಾ ನೋಡುವಂತ ರಿಸ್ಕ್ ಬೇಡ, ಮನೆಯಲ್ಲೇ ಒಂದು ಸಿನಿಮಾ ನೋಡಿ ಟೈಮ್ ಪಾಸ್ ಮಾಡಿದರೇ ಉತ್ತಮ ಅನ್ನೋದು ಹಲವರ ಅಭಿಪ್ರಾಯ. ಹೀಗಾಗಿ ಕನ್ನಡದ ಪ್ರಖ್ಯಾತ ಎಂಟರ್‌ಟೈನ್‌ಮೆಂಟ್ ಚಾನೆಲ್‌ಗಳಲ್ಲಿ ಯಾವ ಸಿನಿಮಾ ಪ್ರಸಾರ ಆಗುತ್ತೆ, ಎಷ್ಟು ಗಂಟೆಗೆ ನೋಡಬಹುದು ಅಂದುಕೊಳ್ಳುತ್ತಿರುವವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.
Recommended Video
ಇವತ್ತು ಭಾನುವಾರ, ಒಂದೊಳ್ಳೆ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗಲೇ ಬೇಕು. ಅದರಂತೆ ಬಹುನಿರೀಕ್ಷೀತ, ಈಗಾಗಲೇ ಥಿಯೇಟರ್‌ನಲ್ಲಿ ರಿಲೀಸ್ ಆಗಿ, ಓಟಿಟಿಯಲ್ಲೂ ಮ್ಯಾಜಿಕ್ ಮಾಡಿದ ಸಿನಿಮಾ ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಇಂದು ಸಂಜೆ 7 ಗಂಟೆಗೆ ಮನೆ ಮನೆಗೆ ಭಜರಂಗಿ 2 ಎಂಟ್ರಿ ಕೊಡುತ್ತಿದ್ದು, ವೀಕ್ಷಕರು ಕೂಡ ಈ ಸಿನಿಮಾವನ್ನು ತಪ್ಪದೇ ನೋಡಬೇಕು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.
ಹೌದು, ಹ್ಯಾಟ್ರಿಕ್ ಹೀರೋ ಶಿವವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾ ಬಿಡುಗಡೆಗೂ ಮುನ್ನವೇ ಬೇಜಾನ್ ಟಾಕ್ ಕ್ರಿಯೇಟ್ ಮಾಡಿತ್ತು. ಅಕ್ಟೋಬರ್ 29ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟ ಭಜರಂಗಿ-2ಯನ್ನು ಅಭಿಮಾನಿಗಳು ಅದ್ಧೂರಿಯಿಂದ ಸ್ವಾಗತಿಸಿದರು. ಆದ್ರೆ ಅದೇ ದಿನ ಪುನೀತ್ ನಿಧನದ ಸುದ್ದಿ ಬರಸಿಡಿಲಿನಂತೆ ಚಿತ್ರರಂಗಕ್ಕೆ ಎರಗಿತ್ತು. ಹೀಗಾಗಿ ಕೆಲ ದಿನ ಚಿತ್ರದ ಪ್ರದರ್ಶನ ನಿಲ್ಲಿಸಲಾಗಿತ್ತು. ಕೆಲ ದಿನದ ನಂತರ ಮತ್ತೆ ಬಿಡುಗಡೆಯಾದ ಭಜರಂಗಿ-2ಗೆ ಅಷ್ಟಾಗಿ ರೆಸ್ಪಾನ್ಸ್ ಸಿಗಲಿಲ್ಲ. ಆದರೆ ಕನ್ನಡ ಚಿತ್ರಪ್ರೇಮಿಗಳು ಒಳ್ಳೆಯ ಚಿತ್ರವನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಡಿಸೆಂಬರ್ 23ರಿಂದ ಭಜರಂಗಿ 2'ಚಿತ್ರವನ್ನು ಜೀ5 ಓಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು. ಭಜರಂಗಿ2 ಒಟಿಟಿಗೆ ಬಿಡುಗಡೆಯಾಗಿ ಮೂರೇ ದಿನದಲ್ಲಿ ಹಳೆಯ ರೆಕಾರ್ಡ್‌ಗಳನ್ನು ಪೀಸ್ ಪೀಸ್ ಮಾಡಿ, ಓಟಿಟಿಯಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

ಝೀ 5 ಓಟಿಟಿಯಲ್ಲೂ ಸಿನಿಮಾ ಉತ್ತಮ ವೀಕ್ಷಣೆ ಕಂಡಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಭಜರಂಗಿ-2 ಓಟಿಟಿಗೆ ಬಂದ ಮೂರೇ ದಿನಗಳಲ್ಲಿ 5 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ಪಡೆದುಕೊಂಡು ಮೆಚ್ಚುಗೆ ಪಡೆದಿತ್ತು. ಈ ಮೂಲಕ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಕಂಡ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಭಜರಂಗಿ 2 ಪಾತ್ರವಾಗಿತ್ತು. ಇದು ಭಜರಂಗಿ ಬಳಗಕ್ಕೆ ಹಾಗೂ ಶಿವಣ್ಣ ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ. ಹೀಗೆ ಓಟಿಟಿಯಲ್ಲಿ ಬೆರಗು ಮೂಡಿಸಿದ ಸಿನಿಮಾ ಇದೀಗ ಟೆಲಿವಿಷನ್‌ಗೂ ಎಂಟ್ರಿ ಕೊಡುತ್ತಿದೆ.



Click it and Unblock the Notifications











