ಮಲಯಾಳಂ ಚಿತ್ರರಂಗದ ಕಡೆಗೆ ಪಯಣ ಬೆಳೆದ 'ಬ್ರಹ್ಮಗಂಟು' ಧಾರಾವಾಹಿಯ ಈ ನಟ ಯಾರು ಗೊತ್ತೇ?
ಕಿರುತೆರೆಯಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ಭರತ್ ಬೋಪಣ್ಣ ಇದೀಗ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 'ಮಿಷನ್: ಅಧ್ಯಾಯ 1' ಚಿತ್ರದೊಂದಿಗೆ ತಮಿಳಿನಲ್ಲಿ ನಟಿಸಿದ ನಂತರ ಈಗ ಅರುಣ್ ಡಿ ಜೋಸ್ ಅವರ ಮಲಯಾಳಂ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ.
ಹೌದು, 'ಬ್ರಹ್ಮಗಂಟು' ಧಾರಾವಾಹಿಯ ಲಕ್ಷ್ಮಣ್ ಆಲಿಯಾಸ್ ಲಕ್ಕಿ ಖ್ಯಾತಿಯ ಭರತ್ ಬೋಪಣ್ಣ ಮಾಲಿವುಡ್‌ಗೆ ಕಾಲಿಡಲು ಉತ್ಸುಕರಾಗಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಹಂಚಿಕೊಂಡ ಅವರು ಇತ್ತೀಚೆಗೆ ತೆರೆಕಂಡ 'ಮಂಜುಮ್ಮೆಲ್ ಬಾಯ್ಸ್' ಮತ್ತು 'ಆವೇಶಂ'ನಂತಹ ಚಲನಚಿತ್ರಗಳು ಎಲ್ಲಾ ಕಡೆಯಿಂದ ಪ್ರಶಂಸೆಗಳನ್ನು ಪಡೆಯುತ್ತಿದೆ. ಮಲಯಾಳಂ ಚಿತ್ರರಂಗ ಅಂದಿನಿಂದ ಇಂದಿನ ತನಕವೂ ಅಭೂತಪೂರ್ವವಾಗಿ ಬೆಳೆಯುತ್ತಲೇ ಬಂದಿದೆ. ಇಂತಹ ಚಿತ್ರರಂಗವನ್ನು ಪ್ರವೇಶಿಸಲು ನಾನು ಕೂಡ ಸಂತೋಷಗೊಂಡಿದ್ದೇನೆ.

'ಪ್ರೇಮಲು' ಸಿನಿಮಾ ಒಂದೆರಡು ನಟರು ಕೂಡ ನನ್ನೊಂದಿಗೆ ನಟಿಸಲಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಕಾತರನಾಗಿದ್ದೇನೆ ಎನ್ನುತ್ತಾ ಭರತ್ ಬೋಪಣ್ಣ ಸಂತಸ ವ್ಯಕ್ತಪಡಿಸಿದ್ದರು.
ಇದರೊಂದಿಗೆ ನಿಜ ಜೀವನಕ್ಕೆ ಹತ್ತಿರವಾಗುವ ಪಾತ್ರಗಳ ಕುರಿತಂತೆ ಮಾತನಾಡಿದ ನಟ "ಪ್ರೇಕ್ಷಕರು ಪ್ರಬುದ್ಧರಾಗಿದ್ದಾರೆ ಮತ್ತು ಎಲ್ಲಾ ವಿಧದಲ್ಲಿಯೂ ಪಾತ್ರಗಳನ್ನು, ಸಿನಿಮಾಗಳನ್ನು ವಿಶ್ಲೇಷಿಸುತ್ತಾರೆ. ಹಾಗಾಗಿ ನಾನು ಕೂಡ ಪಾತ್ರಗಳನ್ನು ಆಯ್ಕೆ ಮಾಡುವಾಗ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇನೆ" ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಯುವ ನಟರಿಗೆ ಅವಕಾಶಗಳು ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ ಅನ್ಯ ಭಾಷೆಯ ಆಫರ್‌ಗಳು ನಮಗೆ ಮುಂದುವರಿಯಲು ದಾರಿ ಮಾಡಿಕೊಡುತ್ತದೆ ಎಂಬುದನ್ನು ಹಂಚಿಕೊಂಡರು.
ಅಲ್ಲದೆ ಭರತ್ ಬೋಪಣ್ಣ ಅವರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಆಸಕ್ತಿಯಿದೆಯಂತೆ. ಇಲ್ಲಿಯದೇ ನಟನಾಗಿ, ಮಾತೃಭಾಷೆಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ತಿಳಿದುಕೊಂಡು ಕನ್ನಡ ಭಾಷೆಯ ಆಸೆಯನ್ನು ಕೈ ಬಿಡಲಾಗದು ಎನ್ನುವ ನಟ ಸದ್ಯ 'ಚುಕ್ಕಿಯ ಮೂಗುತ್ತಿ' ಎಂಬ ಹೊಸ ಕನ್ನಡ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ.


Click it and Unblock the Notifications











