100 ಸಂಚಿಕೆ ಪೂರೈಸಿದ 'ಸೀತಾರಾಮ' ಧಾರಾವಾಹಿ: ನಟಿ ಪೂಜಾ ಲೋಕೇಶ್ ಹೇಳಿದ್ದೇನು ಗೊತ್ತಾ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯು ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿದೆ. 'ಸೀತಾರಾಮ' ಧಾರಾವಾಹಿಯಲ್ಲಿ ನಾಯಕ ರಾಮನ ಚಿಕ್ಕಮ್ಮ ಭಾರ್ಗವಿಯಾಗಿ ಅಭಿನಯಿಸುತ್ತಿರುವ ಪೂಜಾ ಲೋಕೇಶ್ ಅವರು ಈ ಸಂತಸದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ನಿಮ್ಮ ಎಲ್ಲರ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.

"ಭಾರ್ಗವಿ ಪಾತ್ರದಿಂದಾಗಿ ನಾನು ಮಗದೊಮ್ಮೆ ಕ್ಯಾಮೆರಾ ಎದುರಿಸುವಂತೆ ಆಯಿತು. ಮಾತ್ರವಲ್ಲ ಭಾರ್ಗವಿ ಪಾತ್ರವನ್ನು ನೀವು ಕೂಡಾ ಮೆಚ್ಚಿಕೊಂಡಿದ್ದೀರಿ. ನೀವು ನನ್ನ ಮೇಲೆ ತೋರಿರುವಂತಹ ಪ್ರೀತಿಗೆ ನಾನು ಸದಾ ಚಿರ ಋಣಿ" ಎಂದು ಬರೆದುಕೊಂಡಿರುವ ಪೂಜಾ ಲೋಕೇಶ್ 'ಸೀತಾರಾಮ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುತ್ತಿದ್ದಾರೆ. ಸಹಜ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ಪೂಜಾ ಲೋಕೇಶ್ ಕಿರುತೆರೆ ವೀಕ್ಷಕರ "ನೆಚ್ಚಿನ ಖಳನಟಿ".

Bhargavi fame Pooja Lokesh shared his happiness about Seetharama serial completed 100 episodes

ಇತ್ತೀಚೆಗಷ್ಟೇ ನಡೆದ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ನೆಚ್ಚಿನ ಖಳನಟಿ ಪ್ರಶಸ್ತಿ ಪಡೆದುಕೊಂಡ ಪೂಜಾ ಲೋಕೇಶ್ "ಅವಾರ್ಡ್ ಕೈಗೆ ಬಂದಾಯ್ತು.. ತುಂಬಾ ಖುಷಿನೂ ಆಯ್ತು. ಹಾಗೇ ಎಮೋಷನಲ್ ಕೂಡಾ ಆಯ್ತು. ನನ್ನ ಮೊದಲ ಥ್ಯಾಂಕ್ಸ್ ಪ್ರೇಕ್ಷಕರಿಗೆ. ನೀವು ವೋಟ್ ಮಾಡಿ ನನ್ನನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದಗಳು. ಅವಾರ್ಡ್ ಬಂದಿರುವುದು ಒಂದು ಎನರ್ಜಿ ಡ್ರಿಂಕ್ ಕುಡಿದ ಹಾಗೇ ಆಗಿದೆ. ಹುಮ್ಮಸ್ಸು ಜಾಸ್ತಿ ಆಗಿದೆ. ಇನ್ನು ಚೆನ್ನಾಗಿ ಕೆಲಸ ಮಾಡಿ ಇನ್ನಷ್ಟು ಅವಾರ್ಡ್ ಪಡೆದುಕೊಳ್ಳಬೇಕು ಎಂಬ ಆಸೆ ಆಗಿದೆ. ಥ್ಯಾಂಕ್ಯೂ" ಎಂದು ಹೇಳಿಕೊಂಡಿದ್ದಾರೆ.

ಅಂದ ಹಾಗೇ ಪೂಜಾ ಸಿನಿಮಾ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡು ಮುಂದೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಪೂಜಾ ಲೋಕೇಶ್‌ಗೆ ಕನ್ನಡ ಕಿರುತೆರೆ ಹೊಸತು ಹೊರತು ಕಿರುತೆರೆಯಲ್ಲ. ತಮಿಳಿನ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಂಗುಮಮ್' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಪೂಜಾ ಲೋಕೇಶ್ 'ಕಲ್ಕಿ', 'ಸೆಲ್ವಿ', 'ಅಂಜಲಿ', 'ಗೀತಾಂಜಲಿ', 'ಮಹಾಭಾರತಂ' ಹೀಗೆ ಸಾಲು ಸಾಲು ತಮಿಳು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Bhargavi fame Pooja Lokesh shared his happiness about Seetharama serial completed 100 episodes

ಜೊತೆಗೆ ತೆಲುಗಿನ ಸ್ಟಾರ್ ವಿಜಯ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿ ನಂ 1' ಸೀಸನ್ 1ರ ಸ್ಪರ್ಧಿಯಾಗಿದ್ದ ಈಕೆ ವಿನ್ನರ್ ಆಗಿಯೂ ಹೊರಹೊಮ್ಮಿದ್ದರು. ಮಾತ್ರವಲ್ಲದೇ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿಚನ್ ಸೂಪರ್ ಸ್ಟಾರ್' ಸೀಸನ್ 1ರ ಸ್ಪರ್ಧಿಯಾಗಿದ್ದ ಈಕೆ ಅಲ್ಲೂ ಕೂಡಾ ವಿನ್ನರ್ ಆಗಿ ಗುರುತಿಸಿಕೊಂಡಿದ್ದರು. ಇನ್ನು ಕಲರ್ಸ್ ತಮಿಳು ವಾಹಿನಿಯ ಗೇಮ್ ಶೋ 'ಪೊಟ್ಟಿಕು ಪೊಟ್ಟಿ'ಯ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಈಕೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು.

'ಸೀತಾರಾಮ' ಧಾರಾವಾಹಿಯಲ್ಲಿ ನೆಗೆಟಿವ್ ಜೊತೆಗೆ ಪಾಸಿಟಿವ್ ಪಾತ್ರವನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಪೂಜಾ ಲೋಕೇಶ್ ಕಿರುತೆರೆಗೆ ಕಾಲಿಟ್ಟ ಕಡಿಮೆ ಅವಧಿಯಲ್ಲಿಯೇ ವೀಕ್ಷಕರ ಮನ ಸೆಳೆದಿದ್ದಾರೆ ಎಂಬುದಕ್ಕೆ ಅವರು ಪಡೆದ ನೆಚ್ಚಿನ ಖಳನಟಿ ಪ್ರಶಸ್ತಿಯೇ ಸಾಕ್ಷಿ.

More from Filmibeat

English summary
Bhargavi fame Pooja Lokesh shared his happiness about Seetharama serial completed 100 episodes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X