'ಭಾರ್ಗವಿ ಎಲ್‌ಎಲ್‌ಬಿ'ಯ ಅಮೃತಾ ಉಪ್ಪಾರ್ ನಟನಾ ಜರ್ನಿ ಶುರುವಾಗಿದ್ದು ಹೇಗೆ?
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡವೂ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯು ಸ್ತ್ರೀ ಪ್ರಧಾನವಾಗಿದ್ದು, ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ.
'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲಿ ಎಂಎಲ್‌ಎ ಶಕ್ತಿ ಪ್ರಸಾದ್ ಮಗಳು ವಂದನಾ ಪಾತ್ರದಲ್ಲಿ ನಟಿಸುತ್ತಿರುವ ಬೆಡಗಿಯ ಹೆಸರು ಅಮೃತಾ ಉಪ್ಪಾರ್. ನಾಯಕ ಮನೋಜ್‌ನ ಮದುವೆಯಾಗುವ ಹುಡುಗಿಯಾಗಿ ತೆರೆಯ ಮೇಲೆ ನಟಿಸುತ್ತಿರುವ ಅಮೃತಾ ನಟನೆಯ ಮೂಲಕ ಮನ ಸೆಳೆದಿದ್ದಾರೆ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೌರಿಪುರದ ಗಯ್ಯಾಳಿಗಳು' ಧಾರಾವಾಹಿಯಲ್ಲಿ ಮೇಕಪ್ ಮಾಲಿನಿ ಆಗಿ ಅಭಿನಯಿಸಿದ್ದ ಅಮೃತಾ ನಂತರ ಬದಲಾದುದು ಕನ್ನಿಕಾಳಾಗಿ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಕನ್ನಿಕಾ ಆಗಿ ನಟಿಸಿದ ಈಕೆ ಮೊದಲ ಬಾರಿಗೆ ಖಳನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಮುಂದೆ ಕಾರಣಾಂತರಗಳಿಂದ ಕನ್ನಿಕಾ ಪಾತ್ರದಿಂದ ಹೊರಬಂದ ಈಕೆ ಇದೀಗ ವಂದನಾ ಆಗಿ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ.
ತಮ್ಮ ಸಹಜ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿರುವ ಅಮೃತಾ ಉಪ್ಪಾರ್ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಪದವಿಯ ಬಳಿಕ ಎರಡು ವರ್ಷಗಳ ಕಾಲ ಮುದ್ರಣ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಿದ ಈಕೆ ನಂತರ ದೃಶ್ಯ ಮಾಧ್ಯಮದಲ್ಲೂ ಕಾರ್ಯನಿರ್ವಹಿಸಿದರು. ನಂತರ ನಿರೂಪಕಿಯಾಗಿ ಭಡ್ತಿ ಪಡೆದ ಅಮೃತಾ ತಮ್ಮ ಮಾತಿನ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಕ್ಲಬ್'ನ ನಿರೂಪಣೆ ಮಾಡಿದ್ದ ಈಕೆ ಸಿನಿಮಾದಲ್ಲಿಯೂ ನಟನಾ ಛಾಪನ್ನು ಮೂಡಿಸಿದ್ದಾರೆ.
ಹಾಗೇ ಒಳ್ಳೆ ಹುಡುಗ ಪ್ರಥಮ್ ನಟನೆಯ ಸಿನಿಮಾದಲ್ಲಿ ನಟಿಸಿರುವ ಈಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಿಚ್ಚಿ ಗಿಲಿಗಿಲಿ ಸೀಸನ್ 2' ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡಿದ್ದಲ್ಲದೇ, ನವಿರಾದ ಹಾಸ್ಯದ ಮೂಲಕ ಪ್ರತಿವಾರವೂ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿದ್ದರು.

ನಟನೆಯ ಹೊರತಾಗಿ ಸಂಗೀತ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವ ಅಮೃತಾ ಉಪ್ಪಾರ್ ಸಕಲಾಕಲಾವಲ್ಲಭೆ ಎಂದರೆ ತಪ್ಪಾಗಲಾರದು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿಯನ್ನು ಪಡೆದಿರುವ ಅಮೃತಾ ಹಾರ್ಮೋನಿಯಂನಲ್ಲಿ ಜ್ಯೂನಿಯರ್ ಪದವಿ ಪಡೆದಿದ್ದಾರೆ. ಚಿತ್ರಕಲೆಯಲ್ಲಿಯೂ ಪರಿಣಿತಿ ಪಡೆದಿರುವ ಅಮೃತಾ ಉಪ್ಪಾರ್ ಒಂದು ಬಾರಿ ನಟಿಯಾಗಬೇಕು ಎಂದು ಬಯಸಿದ್ದರು.
ಅದರ ಹೊರತಾಗಿ ಧಾರಾವಾಹಿಯಲ್ಲಿ ನಟಿಸುತ್ತಾರೆ, ರಿಯಾಲಿಟಿ ಶೋವಿನಲ್ಲಿ ಭಾಗವಹಿಸುತ್ತಾರೆ ಎಂದು ಆಕೆ ಯಾವತ್ತೂ ಅಂದುಕೊಂಡಿರಲಿಲ್ಲ. ಇದೀಗ ಆಕಸ್ಮಿಕವಾಗಿ ನಟನೆಗೆ ಕಾಲಿಟ್ಟು, ಕಿರುತೆರೆ, ರಿಯಾಲಿಟಿ ಶೋಗಳಲ್ಲಿ ಕಮಾಲ್ ಮಾಡುವ ಈಕೆ ಆಡಿಶನ್‌ಗಳಲ್ಲಿ ಭಾಗವಹಿಸುತ್ತಿರುವಾಗಲೇ ನಟನೆಯ ಕುರಿತು ಕಲಿತುಕೊಂಡವರು. ಸದ್ಯ ವಂದನಾ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅಮೃತಾ ಉಪ್ಪಾರ ಇಂದು ನಟನಾ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಆಕೆಯ ಅಪ್ಪ, ಅಮ್ಮ ನೀಡಿದ ಪ್ರೋತ್ಸಾಹ, ಬೆಂಬಲವೇ ಕಾರಣ.


Click it and Unblock the Notifications











