ಗೌತಮಿಯಂತೆ ರಾಧಾಗೂ ಸ್ವಪ್ನ ಕೃಷ್ಣ ಕಡೆಯಿಂದ ಬ್ರೇಕ್ ಸಿಗುತ್ತಾ?

By ಎಸ್ ಸುಮಂತ್

ಸ್ವಪ್ನ ಕೃಷ್ಣ ಕಿರುತೆರೆಯ ಅದ್ಭುತ ನಿರ್ದೇಶಕಿ. ಮಹಿಳಾ ಕಥೆಗಳನ್ನ ಎಣೆಯುವುದರಲ್ಲಿ ನಂಬರ್ ಒನ್. ಈಗಾಗಲೇ 'ಸತ್ಯ' ಎಂಬ ಧಾರಾವಾಹಿಯನ್ನ ತೆರೆಗೆ ತಂದು, ಎಷ್ಟೆಲ್ಲಾ ಹೆಸರು ಮಾಡಿದ್ದಾರೆಂಬುದನ್ನ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಯಾಕಂದ್ರೆ ಅದೇ ಧಾರಾವಾಹಿಯಿಂದ ಗೌತಮಿ ಜಾಧವ್‌ಗೆ ಬ್ರೇಕ್ ಸಿಕ್ಕಿದ್ದು. ಸುಮಾರು ವರ್ಷಗಳ ಕಾಲ ರಂಜಿಸಿದ ಧಾರಾವಾಹಿ, ಸತ್ಯ ಆಗಿ ವಿಭಿನ್ನ ಗೆಟಪ್‌ನಲ್ಲಿ ಗೌತಮಿ ಮಿಂಚಿದರು. ಕಿರುತೆರೆ ವೀಕ್ಷಕರಿಗೆ ಟಾಮ್ ಬಾಯ್ ಆಗಿ ಇಷ್ಟವೂ ಆದ್ರು. ಒಂದು ಮನೆ ನಡೆಸುವ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಕಂಡಳು. ಇದೀಗ ಸ್ವಪ್ನ ಕೃಷ್ಣ ಮತ್ತೊಬ್ಬರಿಗೆ ಬ್ರೇಕ್ ಕೊಡಲು ಹೊರಟಿದ್ದಾರೆ.

ರಾಧಾ ಭಗವತಿ ಈಗಾಗಲೇ ಮಲ್ಲಿಯಾಗಿ ಎಲ್ಲರಿಗೂ ಚಿರಪರಿಚಿತ. ಮಲ್ಲಿ ತೀರಾ ಇನೊಸೆಂಟ್ ಹುಡುಗಿ. ಈಗ ಮಲ್ಲಿಯನ್ನ ಖಡಕ್ ಲಾಯರ್ ಮಾಡಿರೋದು ಇದೇ ಸ್ವಪ್ನ ಕೃಷ್ಣ. ಕಥೆಯ ಮೇಲೆ ನಿರೀಕ್ಷೆಯೂ ಇದೆ. ಹೀಗಾಗಿ 'ಭಾರ್ಗವಿ LLB' ಬಗ್ಗೆ ಕಾಯುವಿಕೆ ಜಾಸ್ತಿಯಾಗಿದೆ.

Bhargavi LLB kannada serial actress Radha eyeing on big break

ಭಾರ್ಗವಿಯಾಗಿ ರಾಧಾ ಎಂಟ್ರಿ

ಕಲರ್ಸ್ ಕನ್ನಡದಲ್ಲಿ ಈಗಾಗಲೇ ಹಲವು ಹೊಸ ಧಾರಾವಾಹಿಗಳು ಆರಂಭವಾಗಿವೆ. ಅದರ ನಡುವೆ ಇನ್ನೊಂದು ಹೊಸ ಧಾರಾವಾಹಿ‌ ನಾಳೆಯಿಂದ ಶುರುವಾಗುತ್ತಿದೆ. ಅದೇ 'ಭಾರ್ಗವಿ LLB'. ನಾಳೆಯಿಂದ ಪ್ರತಿ ದಿನ ಸಂಜೆ 8.30ಕ್ಕೆ ಶುರು. ಈ ಧಾರಾವಾಹಿ ಮೂಲಕ ರಾಧಾ ಭಗವತಿ ಖಡಕ್ ಆಗಿ ಎಂಟ್ರಿ ಕೊಡ್ತಿದ್ದಾರೆ.

ಅಪ್ಪನ ಶತ್ರುಗಳ ವಿರುದ್ಧ ಸೇಡು

ಈ ಧಾರಾವಾಹಿಯಲ್ಲಿ ಭಾರ್ಗವಿ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ಅಮ್ಮನಿಗೆ ಇಷ್ಟವಿಲ್ಲದೆ ಇದ್ದರೂ, ಅಪ್ಪನಿಗಾಗಿ ವಕೀಲಿ ವೃತ್ತಿ‌ ಶುರು ಮಾಡಿದ್ದಾಳೆ. ಅಪ್ಪ ಕೂಡ ದೊಡ್ಡ ಲಾಯರ್ ಆಗಿದ್ದವರು. ಆದರೆ ಯಾವುದೋ ಕಾರಣಕ್ಕೆ, ಆದ ಅವಮಾನದಿಂದ ವಕೀಲಿ ವೃತ್ತಿ‌ ಬಿಟ್ಟ ತಂದೆಗೆ ಮತ್ತೆ ಅದೇ ಸ್ಥಾನ ಮಾನ ಕೊಡಿಸುವ ಉದ್ದೇಶ ಭಾರ್ಗವಿಯದ್ದು. ಈಗಾಗಲೇ ಫಸ್ಟ್ ಕೇಸ್ ಸಿಕ್ಕಿದೆ. ಅದರಲ್ಲಿ ಗೆದ್ದು ಬಿಟ್ಟರೆ, ಎದುರಾಳಿಯ ಸೊಕ್ಕನ್ನ ಅಡಗಿಸಿದಂತೆಯೇ‌ ಸರಿ.

ಯಾರೆಲಾ ಇದ್ದಾರೆ ಹೊಸ ಧಾರಾವಾಹಿಯಲ್ಲಿ

ಸ್ವಪ್ನ ಕೃಷ್ಣ ಧಾರಾವಾಹಿಯಲ್ಲಿ ಪಾತ್ರ ವರ್ಗ ಜೋರಾಗಿಯೇ ಇರಲಿದೆ. ಇಲ್ಲಿಯೂ ಹಾಗೇ ದೊಡ್ಡಮಟ್ಟದಲ್ಲಿದೆ. ಭಾರ್ಗವಿಯಾಗಿ ರಾಧಾ ಬಂದರೆ, ಹೀರೊ ಆಗಿ ಮನೋಜ್, ತಂದೆಯಾಗಿ ಹನುಮಂತೇಗೌಡ, ತಾಯಿಯಾಗಿ ಅರುಣ ಬಾಲರಾಜ್, ವಿಲನ್ ಆಗಿ‌ ಕೀರ್ತಿ ಬಾನು ಕಾಣಿಸಿಕೊಂಡಿದ್ದಾರೆ. ಪಾತ್ರವರ್ಗ ಕೂಡ ದೊಡ್ಡಮಟ್ಟದಲ್ಲಿಯೇ ಇದ್ದು, ಕಥೆ ಕೂಡ ಅಷ್ಟೇ ಗಟ್ಟಿತನವನ್ನ ಹೊಂದಿದೆ. ನಾಳೆಯಿಂದ ಶುರುವಾಗುತ್ತಲಿದ್ದು, ಕಿರುತೆರೆ ವೀಕ್ಷಕರ ಕಾಯುವಿಕೆಗೆ ಬ್ರೇಕ್ ಬೀಳಲಿದೆ.

ಸ್ವಪ್ನ ಕೃಷ್ಣ ಧಾರಾವಾಹಿಗೆ ಕಾತರ

ಸ್ವಪ್ನ ಕೃಷ್ಣಗೆ ಸಾಕಷ್ಟು ಹೆಸರು ತಂದುಕೊಟ್ಟ ಧಾರಾವಾಹಿ ಎಂದರೆ ಅದು 'ಸತ್ಯ'. ಅದರ ಜೊತೆ ಜೊತೆಗೇನೆ ಕಲರ್ಸ್ ಕನ್ನಡದಲ್ಲಿ 'ಅಂತರಪಟ' ಸೀರಿಯಲ್ ಕೂಡ ನಿರ್ದೇಶನ ಮಾಡುತ್ತಿದ್ದರು. ಈ ಎರಡು ಸೀರಿಯಲ್ ಸಕ್ಸಸ್ ಬಳಿಕ ಮತ್ತೆ ಕಮ್ ಬ್ಯಾಕ್ ಆಗಿದ್ದು, ಒಳ್ಳೆ ಕಥೆಯನ್ನೇ ತೆರೆ‌ಮೇಲೆ ತರುತ್ತಿದ್ದಾರೆ. ಪ್ರೋಮೋದಲ್ಲಿಯೇ ಅದಾಗಲೇ ರಾಧಾ ಫೈಟ್ ಮಾಡುವ ಸೀನ್ ಕಾಣಿಸಿದೆ. ಇದನ್ನ ನೋಡಿಯೇ ಸ್ವಪ್ನ ಕೃಷ್ಣ ಕಮ್ ಬ್ಯಾಕ್ ಎಂದು ಎಲ್ಲರೂ ಹಾರೈಸಿದ್ದಾರೆ, ಖುಷಿ ಪಟ್ಟಿದ್ದಾರೆ.

More from Filmibeat

English summary
Bhargavi LLB kannada serial today episode. Here is the details about Radha gets a break from Bhargavi LLB serial;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X