ಚಿತ್ರದುರ್ಗದ ಗಗನಾಗಾಗಿ ಮಂಡ್ಯ ಹುಡುಗರ ಕಿತ್ತಾಟ!

By ಎಸ್ ಸುಮಂತ್

ಜೀ ಕನ್ನಡದಲ್ಲಿ 'ಭರ್ಜರಿ ಬ್ಯಾಚುಲರ್' ಶೋ ಮತ್ತೆ ಶುರುವಾಗಿ ಮನರಂಜನೆಯನ್ನ ನೀಡುತ್ತಾ ಇದೆ. ಮೊದಲ ಸೀಸನ್ ಗೆದ್ದ ಮೇಲೆ ಎರಡನೇ ಸೀಸನ್ ಕೂಡ ಅದ್ದೂರಿಯಾಗಿ‌ ಮೂಡಿ ಬರ್ತಾ ಇದೆ. ತೀರ್ಪುಗಾರರಾಗಿ ರವಿಚಂದ್ರನ್ ಹಾಗೂ ರಚಿತಾ ರಾಮ್ ಕೂತಿದ್ದು, ಬ್ಯಾಚುಲರ್ ಗಳ ರೋಧನೆಗೆ ನಕ್ಕು ನಕ್ಕು ಸುಸ್ತಾಗಿದ್ದಾರೆ. ಭರ್ಜರಿ ಬ್ಯಾಚುಲರ್ ಶೋನಲ್ಲಿ ಎಲ್ಲರಿಗೂ ಒಂದೊಂದು ಜೋಡಿ ಇದೆ‌. ಆದರೆ ಗಗನಾಗಾಗಿ ಇಬ್ಬರ ಕಿತ್ತಾಟ ನಡೆಯುತ್ತಲೆ ಇದೆ.

ಯುಗಾದಿ ಹಬ್ಬದ ಸಂಭ್ರಮದಲ್ಲಿ ಒಂದಷ್ಟು ಮನರಂಜನೆಯನ್ನು ನೀಡುವುದಕ್ಕಾಗಿ ಜೀ ಕನ್ನಡ ವಾಹಿನಿ ಹಲವು ಕಾರ್ಯಕ್ರಮವನ್ನ‌ ಮಾಡಿದೆ. ಅದರಲ್ಲಿ ಭರ್ಜರಿ ಬ್ಯಾಚುಲರ್ ಕಾರ್ಯಕ್ರಮ ಕೂಡ ವಿಶೇಷವಾಗಿ ಮಾಡಲಾಗಿದೆ‌. ಇಂದು ಅದರ ಪ್ರೋಮೋ ಬಿಟ್ಟಿದ್ದು, ಗಿಲ್ಲಿ ನಟ ಹಾಗೂ ಪ್ರತಾಪ್ ಕಾಮಿಡಿ ಮಸ್ತ್ ಆಗಿದೆ.

Bharjari bachelors-2 Gilli Nata and drone prathap fought for Gagana

ಡೈಲಾಗ್‌ಗಳ ಸುರಿಮಳೆ

ಗಿಲ್ಲಿ ನಟ ಸ್ಟೇಜ್‌ಗೆ ಬರ್ತಾನೆ ಒಂದು ಕೈಲಿ ಹೆಲಿಕಾಪ್ಟರ್, ಮತ್ತೊಂದು ಕೈನಲ್ಲಿ ಡ್ರೋನ್ ಹಿಡಿದು ಬಂದರು. ಗಗನಾ ಬಳಿ ಬಂದು ನಾನಿನ್ನ ಬಿಡಲಾರೆ ಅನ್ನೋ ಡೈಲಾಗ್ ಹೊಡೆದರು. ಬಳಿಕ ಡ್ರೋನ್ ಪ್ರತಾಪ್ ಗೆ ಟಾಂಟ್ ಕೊಟ್ಟ ಗಿಲ್ಲಿ, ಡ್ರೋನ್ ಎಷ್ಟೇ ವೀಕ್ ಆದರೂನು ಬ್ಯಾಟರಿ ವೀಕ್ ಆದ್ಮೇಲೆ ಕೆಳಗಡೆ ಬರಲೇಬೇಕು. ನಿನ್ನ ಬ್ಯಾಟರಿ ವೀಕ್ ಆಗಿದೆ ತಗೊ. ಪ್ರತಾಪು ನೀನಿನ್ನು ಪಾಪು ಸೈಡ್ ನಲ್ಲಿದ್ರೆ ಸೇಫು. ಬೇಸಿಕಲಿ, ಟೆಂಪರರಿಲಿ, ಫಿಸಿಕಲಿ, ಮೆಂಟಲಿ, ಟೋಟಲಿ, ಒಟ್ನಲ್ಲಿ ಈ ಗಗನಾಗೆ ಜೋಡಿಯಾಗಿರ್ಗಾನೆ ಅಂದ್ರೆ ಈ ಗಿಲ್ಲಿ ಮಾತ್ರ ಅಂತ ಡೈಲಾಗ್ ಹೊಡೆದಿದ್ದಾರೆ.

ತೊಡೆ ತಟ್ಟಿದ ಡ್ರೋನ್

ಡ್ರೋನ್ ಸುಮ್ಮನೆ ಇರ್ತಾರಾ. ಮೊದಲೇ ಗಗನಾಗೋಸ್ಕರ ಸಿಕ್ಕಾಪಟ್ಟೆ ಪರಿಪಾಟಲು ಪಟ್ಟಿದ್ದಾರೆ. ಗಗನಾಳನ್ನ ಇಂಪ್ರೆಸ್ ಮಾಡೋದಕ್ಕಾಗಿ ಹೆಲಿಕಾಪ್ಟರ್ ಬೇರೆ ತರಿಸಿದ್ದರು. ಈಗ ಗಿಲ್ಲಿ ಹಾರಿಸಿಕೊಂಡು ಹೋಗುವುದಕ್ಕೆ ಬಿಡ್ತಾರಾ. ಅದಕ್ಕೆ ಅವಾಜ್ ಹಾಕಿದ್ದಾರೆ. ಓ ಕಳೆದ ಬಾರಿ ಬ್ಯಾಟರಿ ವೀಕ್ ಆಗಿ ಯಶಸ್ವಿನಿ ಇಲ್ಲಿಗೆ ಬಂದ್ರಲ್ಲ ಹಾಗ. ನೀವೂ ಡೈಲಾಗ್ ಹೊಡೆದ್ರೆ ಮಾತ್ರ ಸೌಂಡು, ಸುಮ್ಮನೆ ಬಂದು ಹಿಂಗೆ ನಾನು ತೊಡೆ ತಟ್ಟಿದರೆ ಸೌಂಡು ಕಣಲೋ ಎಂದು ತೊಡೆ ತಟ್ಟಿ ನಿಂತಿದ್ದಾರೆ.

ಯಾರಿಗೆ ಒಲಿಯುತ್ತಾರೆ ಗಗನಾ

ಗಗನಾಗೆ ಸದ್ಯಕ್ಕೆ ಭರ್ಜರಜ ಬ್ಯಾಚುಲರ್ ಶೋನಲ್ಲಿ ಡ್ರೋನ್ ಪ್ರತಾಪ್ ಅವರಿಗೇನೆ ಜೋಡಿಯಾಗಿರೋದು. ಆದರೆ ಕಳೆದ ಬಾರಿಯ ಭರ್ಜರಿ ಬ್ಯಾಚುಲರ್ ನಿಂದಾನು ಗಿಲ್ಲಿ ನಟ ಗಗನಾಗೆ ಇಂಪ್ರೆಸ್ ಮಾಡುವ ಪ್ರಯತ್ನ ಮಾಡ್ತಾನೇ ಇದಾರೆ. ಯಶಸ್ವಿನಿ ಇದ್ರು ಕೂಡ ಗಗನಾ ಹಿಂದೆ ಬಿದ್ದಿದ್ದರು. ಈಗ ಡ್ರೋನ್ ಪ್ರತಾಪ್ ಗೆ ಸ್ಪರ್ಧೆಯೊಡ್ಡಿದ್ದಾರೆ. ಗಗನಾ ಯಾರನ್ನ ಆಯ್ಕೆ ಮಾಡಿಕೊಳ್ತಾರೆ ನೋಡಬೇಕು. ಸದ್ಯ ಪ್ರೋಮೊ ಅಂತೂ ಸಖತ್ ವೈರಲ್ ಆಗ್ತಿದೆ. ವೀಕೆಂಡ್ ಶೋ ವೀಕ್ಷಿಸುವವರಿಗೆ ಭರ್ಜರಿ ಮನರಂಜನೆ ಕಾದಿದೆ.

ಚಿತ್ರದುರ್ಗದ ಹುಡುಗಿ ಹಿಂದೆ ಮಂಡ್ಯ ಬಾಯ್ಸ್

ಗಗನಾ ಮೂಲತಃ ಕೋಟೆನಾಡು ಚಿತ್ರದುರ್ಗದ ಹುಡುಗಿ. ಮಹಾನಟಿ ಮೂಲಕ ಖ್ಯಾತಿ ಪಡೆದವರು. ಇದೀಗ ಗಗನಾಗಾಗಿ ಮಂಡ್ಯದ ಯುವಕರು ಕಿತ್ತಾಟ ಶುರು ಮಾಡಿದ್ದಾರೆ. ಗಿಲ್ಲಿ ನಟ ಕೂಡ ಮಂಡ್ಯ ಭಾಗದವರು ಡ್ರೋನ್ ಪ್ರತಾಪ್ ಕೂಡ ಮಂಡ್ಯ ಭಾಗದವರೇ. ಆದರೆ ಗಗನಾ ಅವರನ್ನ ಇಂಪ್ರೆಸ್ ಮಾಡ್ತಾ ಇರೋದು ಮಾತ್ರ ಡ್ರೋನ್ ಪ್ರತಾಪ್ ಅವರೇ‌. ಹೆಲಿಕಾಪ್ಟರ್ ಅನ್ನೇ ಕರೆಸಿ ಸುತ್ತಾಡಿಸಿದ್ದರು. ಆದರೆ ಗಿಲ್ಲಿ ತನ್ನ ಪ್ರಾಪರ್ಟಿಗಳಿಂದಾನೇ ನಕ್ಕು ನಲಿಸುತ್ತಾರೆ. ಹೀಗಾಗಿ ಈ ಜೋಡಿ ಹೆಚ್ಚು ಮೋಡಿ ಮಾಡುತ್ತಿದೆ. ಗಗನಾ ಒಬ್ಬರಿಗಾಗಿ ಇಬ್ಬರು ಹುಡುಗರ ಕಾಳಗ ನಡೆಯುತ್ತಿದೆ.

More from Filmibeat

English summary
Zee Kannada reality show barjari bachelor-2 Written Update; Here is the details about Pratap and Gilli fight over Gagan
Read more about: kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X