ಡ್ರೋನ್ - ಗಿಲ್ಲಿ ; ಆಯ್ಕೆ ಹೇಳಿ ಹಾರ ಹಾಕಿ ಅಂದ್ರೆ ಇಬ್ಬರ ಹಾರ್ಟ್ ಗೂ ಪಠಾಕಿ ಇಟ್ರು ಗಗನಾ..!
ಭರ್ಜರಿ ಬ್ಯಾಚುಲರ್-2 ಶೋನಲ್ಲಿ ಗಗನಾಗೋಸ್ಕರ ಗಿಲ್ಲಿ ನಟ ಹಾಗೂ ಡ್ರೋನ್ ಪ್ರತಾಪ್ ಕಿತ್ತಾಡೋದನ್ನ ನೋಡಿನೇ ಇರ್ತೀವಿ. ಅದರಲ್ಲೂ ಗಗನಾ ಇರೋದು ಡ್ರೋನ್ ಪ್ರತಾಪ್ ಜೋಡಿಯಾಗಿಯೇ ಆದರೂ ಗಿಲ್ಲಿ ನಟ ತನ್ನ ಪ್ರಾಪರ್ಟಿ ಎಂಬಂತೆ ಆಗಾಗ ಬಂದು ಬಿಡುತ್ತಾರೆ. ಹಾಗಂತ ಡ್ರೋನ್ ಪ್ರತಾಪ್ ಬಿಟ್ಟು ಕೊಡುವುದಕ್ಕೆ ರೆಡಿ ಇಲ್ಲ.
ಸವಾಲಿಗೆ ಸವಾಲು ಎಂಬಂತೆ ಡ್ರೋನ್ ಪ್ರತಾಪ್ ನಿಲ್ಲುತ್ತಾರೆ. ಗಗನಾರನ್ನ ಮಾತ್ರ ಬಿಟ್ಟು ಕೊಡಲ್ಲ. ಏನೇ ತೊಡೆ ತಟ್ಟಿದರು, ಏನೇ ಸವಾಲನ್ನ ಹಾಕಿದರು ಅಷ್ಟೇ. ಗಗನಾ ಎಂದಿಗೂ ಎಂದೆಂದಿಗೂ ಡ್ರೋನ್ ಪ್ರತಾಪ್ ಪ್ರಾಪರ್ಟಿ. ಇಂದು ಗಗನಾ ಅವರ ಮನೆಯವರೆಲ್ಲಾ ಇಂದು ಭರ್ಜರಿ ಬ್ಯಾಚುಲರ್ ಗೆ ಬಂದು ತನ್ನ ಮಗಳ ಜೋಡಿಯ ಪರೀಕ್ಷೆಯನ್ನ ಮಾಡ್ತಾ ಇದಾರೆ. ಆದರೆ ನಡುವಲ್ಲಿ ಗಿಲ್ಲಿ ಎಂಟ್ರಿ ಆಗೋದಾ..!

ಇಂಪ್ರೆಸ್ ಮಾಡಲು ಪ್ರಯತ್ನ
ಡ್ರೋನ್ ಪ್ರತಾಪ್ ಅರಿಶಿನ - ಕುಂಕುಮ ಹಿಡಿದು ಬಂದು, ಮಾವಯ್ಯ ಮಾವಯ್ಯ ಐ ಲವ್ ಯೂ ಮಾವಯ್ಯ ಅಂತ ಹಾಡಿಕೊಂಡು ಬಂದಿದ್ದಾರೆ. ಅತ್ತೆಗೆ ಅರಿಶಿನ ಕುಂಕುಮ ನೀಡಿದ್ದಾರೆ. ಗಗನಾ ಸಂಬಂಧಿಕರಿಂದ ಡ್ರೋನ್ ಪ್ರತಾಪ್‌ಗೆ ಪ್ರಶ್ನೆಗಳ ಸುರಿಮಳೆಯೇ ಸುರಿದಿದೆ. ನೀವೂ ಮದುವೆ ಆಗುವ ಹುಡುಗಿಗೆ ಅಡುಗೆ ಮಾಡಿ ಅಂರೀರಾ ಅಥವಾ ನೀವೆ ಮಾಡಿಕೊಡ್ತೀರಾ ಎಂದಾಗ, ಒಂದೆರಡು ಸಲ ನಾನೇ ಮಾಡಿಕೊಡ್ತೀನಿ, ಮೂರನೇ ಸಲ ಅಡುಗೆ ಮಾಡುವುದೇಗೆ ಎಂಬುದನ್ನ ಕಲಿಸ್ತೇನೆ ಎಂದಿದ್ದಾರೆ. ಇನ್ನೊಬ್ಬರು ಹಿರಿಯರು ಅವಳು ಮನೆಯಲ್ಲಿದ್ದಾಗ ಊಟ ಮಾಡಿಸ್ತೀನಿ, ನೀವೂ ಅದೇ ರೀತಿ ಮಾಡಿಸ್ತೀರಾ ಎಂದಾಗ, ಪ್ರೀತಿಯಿಂದ ಒಂದೆರಡು ಸಲ ಮಾಡ್ಸೋಣಾ ಬಿಡಿ ಎಂದಿದ್ದಾರೆ.
ಪ್ರತಾಪ್ ಶಕ್ತಿ ಪ್ರದರ್ಶನ
ಗಗನಾ ಅವರ ಸಂಬಂಧಿಕರಲ್ಲಿಯೇ ಒಬ್ಬರು ಗಗನಾಗೇನಾದ್ರೂ ಕಾಲು ನೋವಿದ್ದರೆ ಅವರನ್ನು ಎತ್ತಿಕೊಂಡು ಹೋಗುವ ಶಕ್ತಿ ನಿಮ್ಮಲ್ಲಿ ಇದೆಯಾ ಎಂದು ಕೇಳಿದ್ದಷ್ಟೇ, ದಿಢೀರನೇ ಹೋಗಿ ಗಗನಾರನ್ನ ಎತ್ತಿಕೊಂಡ ಪ್ರತಾಪ್, ಒಂದೆರೆಡು ರೌಂಡು ತಿರುಗಿದರು. ಬಳಿಕ ತರಹೇವಾರಿಯಾಗಿ ರೌಂಡ್ ಹಾಕಿದರು. ಇದನ್ನ ನೋಡಿ ನಿರಂಜನ್ ಅಂತು ಎಂಜಾಯ್ ಮಾಡಿದ್ರು. ಅಲ್ಲಿ ರವಿಚಂದ್ರನ್ ಅವರು ಕೂಡ ಬಿದ್ದು ಬಿದ್ದು ನಕ್ಕಿದರು.
ತನಗೆ ತಾನೇ ಮೋಸ
ಪ್ರತಾಪ್ ಜೊತೆಗೆ ಯುದ್ಧಕ್ಕೆ ನಿಂತ ಗಿಲ್ಲಿ ನಟ, ತನ್ನದೇ ಆದ ಪ್ರಾಪರ್ಟಿಗಳನ್ನ ತರಿಸಿದರು. ಅದುವೇ ಹಾರ. ಗಗನಾ ಕಡೆಯವರಿಗೆ ಎಲ್ಲರಿಗೂ ಹಾರ ನೀಡಿದರು. ಅವರಿಗೆ ಯಾರು ಇಷ್ಟ ಎಂಬುದನ್ನು ಹಾರ ಹಾಕುವ ಮೂಲಕ ಹೇಳಬೇಕು ಎಂಬ ಟಾಸ್ಕ್ ನೀಡಿದರು. ಒಬ್ಬೊಬ್ಬರೆ ಬಂದರು ಹಾರಗಳನ್ನ ಹಾಕಿದರು. ಅದರಲ್ಲಿ ಗಿಲ್ಲಿಗೆ ಬಿದ್ದಿದ್ದು ಕೇವಲ ಎರಡು ಹಾರ.
ಅಡ್ಡಗೋಡೆ ಮೇಲೆ ದೀಪ
ಡ್ರೋನ್ ಪ್ರತಾಪ್‌ಗೆ ಐದು ಹಾರ ಬಿದ್ದರೆ ಗಿಲ್ಲಿಗೆ ಬಿದ್ದದ್ದು ಎರಡೇ. ಇಬ್ಬರು ಕಾಯ್ತಾ ಇದ್ದದ್ದು ಗಗನಾ ಉತ್ತರಕ್ಕಾಗಿ. ಗಗನಾ ಕೈಗೂ ಒಂದು ಹಾರವನ್ನು ಕೊಡಲಾಗಿತ್ತು. ಹೀಗಾಗಿ ಗಗನಾ ಹಾಕುವುದೇ ಲೆಕ್ಕ, ಬೇರೆ ಯಾರದ್ದು ಇಲ್ಲ ಎಂದು ಕಾಯುತ್ತಿದ್ದವರಿಗೆ, ಹಾರ ಹಿಡಿದು ಬಂದ ಗಗನಾ ನಿರಾಸೆ ಮಾಡಿದ್ದಾರೆ. 'ನನಗೆ ಇಬ್ಬರು ಅಷ್ಟೊಂದು ಇಂಪ್ರೆಸ್ ಮಾಡಿಲ್ಲ. ಅವರೇ ಒಂಥರ ಆದ್ರೆ ಇವರೇ ಒಂಥರ. ಇಂಪ್ರೂವ್ ಆಗ್ಬೇಕಿದೆ ಡ್ರೋನ್ ಪ್ರತಾಪ್. ಹಾಗಾಗಿ ಈ ಹಾರ ನನ್ನಲ್ಲಿಯೇ ಉಳಿದಿದೆ ಎಂದು ನಿರಾಸೆ ಮಾಡಿದ್ದಾರೆ.


Click it and Unblock the Notifications











