Bharjari Bachelors-2: ರವಿಚಂದ್ರನ್ ಹಾಡಿಗೆ ಹೆಜ್ಜೆ ಹಾಕಿ ಮರ್ಯಾದೆ ಕಳೆದ ಹುಲಿ ಕಾರ್ತಿಕ್

By ಎಸ್ ಸುಮಂತ್

'ಭರ್ಜರಿ ಬ್ಯಾಚುಲರ್' ಶೋನಲ್ಲಿ ವರ ಪರೀಕ್ಷೆ ನಡೀತಾ ಇದೆ. ಎಲ್ಲಾ ಹೆಣ್ಣು ಮಕ್ಕಳ ಪೋಷಕರು ವರ ಪರೀಕ್ಷೆಗೆ ಬಂದಿದ್ದಾರೆ. ತಮ್ಮ ಮಗಳ ಜೋಡಿಗೆ ಏನೆಲ್ಲಾ ಗುಣಗಳು ಇರಬೇಕು ಎಂಬುದನ್ನು ಒತ್ತಿ ಹೇಳುತ್ತಿದ್ದಾರೆ. ಮಗಳನ್ನ ಕೊಡಬೇಕಾ, ಬೇಡವಾ ಎಂಬುದನ್ನು ತಿಳಿಸುತ್ತಿದ್ದಾರೆ. ಅದರಲ್ಲೂ ಪೋಷಕರನ್ನ ಇಂಪ್ರೆಸ್ ಮಾಡುವುದಕ್ಕೆ ಬ್ಯಾಚುಲರ್ಸ್ ಸಿಕ್ಕಾಪಟ್ಟೆ ಟ್ರಿಕ್ಸ್ ಬಳಸುತ್ತಿದ್ದಾರೆ. ಆದರೂ ಇಂಪ್ರೆಸ್ ಆಗೋದು ಕಷ್ಟವಾಗಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಬ್ಯಾಚುಲರ್ ಬಾಯ್ಸ್‌ ತಮ್ಮ ಪಾಟ್ನರ್‌ನ ಇಂಪ್ರೆಸ್ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದರು. ಅವರಿಗೆ ಇಷ್ಟವಾದದ್ದೆಲ್ಲವನ್ನು ನೀಡಿ, ಇಂಪ್ರೆಸ್ ಮಾಡಿದ್ದರು. ಹುಲಿ ಕಾರ್ತಿಕ್, ಗಾರ್ಮೆಂಟ್ಸ್‌ನಲ್ಲೆಲ್ಲಾ ಕೆಲಸ ಮಾಡಿದ್ದರು. ಇದೀಗ ಅವರ ಕುಟುಂಬದವರನ್ನ ಇಂಪ್ರೆಸ್ ಮಾಡಬೇಕಿದೆ.

Bharjari Bachelors- 2 Huli karthika worst dance for ravichandran song

ಹುಲಿ ಮುಂದೆ ಫ್ಯಾಮಿಲಿ

ಇಂದಿನ ವರ ಪರೀಕ್ಷೆಗೆ ಧನ್ಯಶ್ರೀ ಕುಟುಂಬವೇ ನೆರೆದಿತ್ತು. ಈ ವೇಳೆ ಬಹಳ ಭಕ್ತಿಯಿಂದ ಬಂದಂತಹ ಹುಲಿ ಕಾರ್ತಿಕ್, ಕೈಯಲ್ಲಿ ಹೂಗಳನ್ನು ಹಿಡಿದುಕೊಂಡು ಬಂದರು. ಧನ್ಯಶ್ರೀ ಅವರ ತಂದೆ ಕಾಲಿಗೆ ಬಿದ್ದು, ಹೂಗಳನ್ನ ಪಾದಕ್ಕೆ ಹಾಕಿ ನಮಸ್ಕರಿಸಿದರು. ಬಳಿಕ ಅವರ ತಾಯಿಯ ಪಾದಕ್ಕೂ ಹೂಗಳನ್ನ ಹಾಕಿದರು. ಬಳಿಕ ಎಲ್ಲರ ಮೇಲೂ ಹೂಗಳನ್ನ ಚೆಲ್ಲಿದರು. ಧನ್ಯಶ್ರೀ ಫೋಷಕರನ್ನ ಇಂಪ್ರೆಸ್ ಮಾಡುವುದಕ್ಕೆ ಎಷ್ಟು ಸಾಧ್ಯವೋ ಅಷ್ಟನ್ನು ಟ್ರೈ ಮಾಡಿದ್ದಾರೆ. ಇದೆಲ್ಲವನ್ನು ನೋಡಿ ಧನ್ಯಶ್ರೀ ಅಂತು ನಕ್ಕು ನಕ್ಕು ಸುಸ್ತಾಗಿದ್ದಾರೆ. ಕಡೆಗೆ ಪ್ಲೇಟ್ ನಲ್ಲಿ ಉಳಿದಿದ್ದ ಹೂವನ್ನು ಧನ್ಯಶ್ರೀ ಮೇಲೆ ಹಾಕಿದ್ದಾರೆ. ಎಲ್ಲರನ್ನು ದೇವರಂತೆ ಫೀಲ್ ಮಾಡಿದ್ದಾರೆ. ಎಲ್ಲರ ಕಾಲಿಗೂ ನಮಸ್ಕಾರ ಮಾಡಿ, ಒಬ್ಬೊಬ್ಬರು ದೇವತೆ ಇದ್ದಂತೆ ಇದಾರೆ ಎಂದು ಹೊಗಳಿದ್ದಾರೆ.

ಮಾವ ಎಂದ ಹುಲಿ

ನಮ್ಮ ಮನೆಯ ಅಳಿಯ ಆಗುವವನಿಗೆ ತರಿಕೆರೆ ಬಗ್ಗೆ ಏನಾದ್ರೂ ಗೊತ್ತೇನಪ್ಪ ಎಂದು ಧನ್ಯಶ್ರೀ ಅವರ ತಂದೆ ಕೇಳಿದ ಕೂಡಲೇ ಹುಲಿ ಕಾರ್ತಿಕ್, ತರಿಕೆರೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಮಾವ ಎಂದಿದ್ದಾರೆ. ಮಾವ ಎಂದ ಕೂಡಲೇ ಎಲ್ಲರೂ ಚೀರಿದ್ದಾರೆ. ಇನ್ನು ಮಾವ ಆಗಿಲ್ಲ. ಇಲ್ಲಿ ವರಾನ್ವೇಷಣೆ ನಡೆಯುತ್ತಾ ಇದೆ ಅಷ್ಟೇ ಎಂದಿದ್ದಾರೆ. ಹುಲಿ ಕಾರ್ತಿಕ್ ಯಾಮಾರಿಸೋದರಲ್ಲಿ ಮುಂದೆ ಅನ್ನೋದ‌ನ್ನ ಪ್ರೂವ್ ಮಾಡಿದ್ದಾರೆ. ಎಲ್ಲ ಸರಿ ಅತ್ತೆ ಎಲ್ಲಿ ಎಂದಾಕ್ಷಣಾ ಧನ್ಯಶ್ರೀ ಅವರ ತಾಯಿ ಕೈ ಎತ್ತಿದ್ದಾರೆ. ಏನಮ್ಮ ನೀನು ಒಪ್ಕೊ.ಮಡೆ ಬಿಟ್ಯಾ ಎಂಬ ಪ್ರಶ್ನೆ ಮಗಳದ್ದು.

ರವಿಚಂದ್ರನ್ ಸಾಂಗ್‌ಗೆ ಹೆಜ್ಜೆ

ಬಂದಿದ್ದ ಧನ್ಯಶ್ರೀ ಮಾವ ಒಂದು ಪ್ರಶ್ನೆ ಮಾಡಿದ್ದಾರೆ. ನನ್ನ ಸೊಸೆಯನ್ನ ಯಾವ ಹೀರೋ ಥರ ನೋಡ್ಕೊಳ್ತೀರಾ. ಇಲ್ಲಿ ರವಿಚಂದ್ರನ್ ಸರ್ ಕೂಡ ಇದಾರೆ ಅಂತ. ಆಗ ರಚಿತಾ ರಾಮ್, ರವಿ ಸರ್ ಥರ ಹೇಗೆ ಮುದ್ದು ಮಾಡ್ತೀಯಾ ಎಂದು ಕೇಳಿದಾಗ ಬಂಗಾರದ ಗೊಂಬೆ ನಿನ್ನ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

Bharjari Bachelors- 2 Huli karthika worst dance for ravichandran song

ಹಿಂಗಾ ಮಾಡೋದು ಡ್ಯಾನ್ಸ್

ರವಿಚಂದ್ರನ್ ಹಾಡು ಅಂದ್ರೆ ಕೇಳ್ಬೇಕಾ. ಅಲ್ಲೊಂದು ಪ್ರೀತಿ ಇರುತ್ತೆ, ರೊಮ್ಯಾನ್ಸ್ ಇರುತ್ತೆ. ಆದರೆ ರವಿಚಂದ್ರನ್ ಹಾಡಿಗೆ ಹೆಜ್ಜೆ ಹಾಕಿದ ಹುಲಿ ದೂರ ದೂರ ನಿಂತು ಡ್ಯಾನ್ಸ್ ಮಾಡುತ್ತಿದ್ದರು. ಇದನ್ನ ಧನ್ಯಶ್ರೀ ಸಹಿಸಲಿಲ್ಲ. ದೂರ ದೂರ ನಿಂತು ಡ್ಯಾನ್ಸ್ ಮಾಡ್ತಾರೆ. ಮುಟ್ಟಲೇ ಇಲ್ಲ ನನ್ನ ಎಂದಾಗ, ರವಿ ಸರ್, ನಾಚಿಕೆ ಆಗ್ಬೇಕು ಕಣಲೇ ನಿಂಗೆ. ಹುಡುಗಿನೇ ಹತ್ತಿರ ಬಾ ಅಂದ್ರು ನೀನು ದೂರ ಓಡ್ತೀಯಲ್ಲ. ನೀನ್ಯಾರೋ ಲೋ ನೀನು ನನ್ನ ಹೆಸರನ್ನೇ ಹಾಳು ಮಾಡ್ತೀಯಾ ಎಂದು ರಚಿತಾ ರಾಮ್ ಜೊತೆಗೆ ಅದೇ ಹಾಡಿಗೆ ಸ್ಟೆಪ್ ಹಾಕಿ ತೋರಿಸಿದ್ದಾರೆ.

More from Filmibeat

English summary
Here is the details about huli Karthik did an worst dance to a romantic song;
Read more about: sandalwood serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X