'ಬಿಗ್ ಬಾಸ್' ಮನೆಯೊಳಗೆ ಈ 'ಕಾಮಿಡಿ ಕ್ವೀನ್' ಹೋಗೋದು ಪಕ್ಕಾ.!

By Harshitha

ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್-12' ಶುರುವಾಗಲು ಕೇವಲ ಹತ್ತು ದಿನಗಳು ಮಾತ್ರ ಬಾಕಿ ಉಳಿದಿವೆ. ಸೆಪ್ಟೆಂಬರ್ 16 ರಿಂದ ಕಲರ್ಸ್ ವಾಹಿನಿಯಲ್ಲಿ 'ಬಿಗ್ ಬಾಸ್-12' ಪ್ರಸಾರ ಆಗಲಿದೆ.

ಸಾಮಾನ್ಯವಾಗಿ 'ಬಿಗ್ ಬಾಸ್' ಮನೆಯೊಳಗೆ ಯಾರೆಲ್ಲಾ ಹೋಗ್ತಾರೆ ಅಂತ ವೀಕ್ಷಕರಿಗೆ ಪಕ್ಕಾ ಆಗುವುದೇ ಕಾರ್ಯಕ್ರಮದ ಲಾಂಚ್ ದಿನ. ಅಲ್ಲಿಯವರೆಗೂ ಗುಸುಗುಸು, ಪಿಸುಪಿಸು ಇದ್ದದ್ದೇ.

ಆದ್ರೆ, ಈ ಬಾರಿ ಹಾಗಾಗಿಲ್ಲ.! ಕಾಮಿಡಿ ಕ್ವೀನ್ ಭಾರತಿ ಸಿಂಗ್ ಹಾಗೂ ಅಕೆಯ ಪತಿ 'ಬಿಗ್ ಬಾಸ್' ಮನೆಯೊಳಗೆ ಹೋಗುವುದು ಪಕ್ಕಾ ಅಂತ ಸ್ವತಃ ಸಲ್ಮಾನ್ ಖಾನ್ ಘೋಷಿಸಿಬಿಟ್ಟಿದ್ದಾರೆ.

ಮೊನ್ನೆಯಷ್ಟೇ ಗೋವಾದಲ್ಲಿ 'ಬಿಗ್ ಬಾಸ್-12' ಪತ್ರಿಕಾಗೋಷ್ಟಿ ನಡೆಯಿತು. ಈ ವೇಳೆ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರ ಮುಂದೆ 'ಭಾರತಿ ಸಿಂಗ್ ಹಾಗೂ ಹರ್ಷ್' ದಂಪತಿಯನ್ನ ಸಲ್ಮಾನ್ ಖಾನ್ ಪರಿಚಯಿಸಿದರು.

ಹೇಳಿ ಕೇಳಿ 'ಬಿಗ್ ಬಾಸ್-12'ನಲ್ಲಿ 'ವಿಚಿತ್ರ ಜೋಡಿ' ಕಾನ್ಸೆಪ್ಟ್ ಇದೆ. ಹೀಗಾಗಿ, ಭಾರತಿ ಸಿಂಗ್ ಮತ್ತು ಪತಿ ಈ ಸಾರಿ ಇರಲೇಬೇಕು ಅಂತ 'ಬಿಗ್ ಬಾಸ್' ಭಾರಿ ಸಂಭಾವನೆ ಕೊಟ್ಟು ಒಪ್ಪಿಸಿದ್ದಾರಂತೆ. ಮುಂದೆ ಓದಿರಿ....

ಯಾರೀ ಭಾರತಿ ಸಿಂಗ್.?

ಯಾರೀ ಭಾರತಿ ಸಿಂಗ್.?

ಪಂಜಾಬ್ ಮೂಲದ ಭಾರತಿ ಸಿಂಗ್ ಸ್ಟಾಂಡ್ ಅಪ್ ಕಾಮಿಡಿಯನ್. 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್-4' ನಲ್ಲಿ ರನ್ನರ್ ಅಪ್ ಆದ ಭಾರತಿ ಸಿಂಗ್ 'ಕಾಮಿಡಿ ಸರ್ಕಸ್' ಸರಣಿಯಲ್ಲಿ ಭಾಗವಹಿಸಿ ವೀಕ್ಷಕರ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದರು. ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ, ನಿರೂಪಕಿಯಾಗಿ ಕಾಣಿಸಿಕೊಂಡಿರುವ ಭಾರತಿ ಸಿಂಗ್ ಇದೀಗ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗುತ್ತಿದ್ದಾರೆ.

ಪತಿ ಜೊತೆಗೆ 'ಬಿಗ್ ಬಾಸ್' ಮನೆಯಲ್ಲಿ ಭಾರತಿ ಸಿಂಗ್

ಪತಿ ಜೊತೆಗೆ 'ಬಿಗ್ ಬಾಸ್' ಮನೆಯಲ್ಲಿ ಭಾರತಿ ಸಿಂಗ್

ಪತಿ ಹರ್ಷ್ ಜೊತೆಗೆ ಭಾರತಿ ಸಿಂಗ್ 'ಬಿಗ್ ಬಾಸ್' ಮನೆಯೊಳಗೆ ಕಾಲಿಡಲಿದ್ದಾರೆ. ಹಾಗ್ನೋಡಿದ್ರೆ, ಭಾರತಿ ಸಿಂಗ್ ಹಾಗೂ ಹರ್ಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇನ್ನೂ ಒಂದು ವರ್ಷ ಕೂಡ ತುಂಬಿಲ್ಲ. ಆಗಲೇ, ಈ ಜೋಡಿ 'ಬಿಗ್ ಬಾಸ್' ಮನೆಗೆ ಹೋಗಲು ನಿರ್ಧರಿಸಿದೆ.

ಭಾರಿ ಸಂಭಾವನೆ

ಭಾರಿ ಸಂಭಾವನೆ

ವರದಿಗಳ ಪ್ರಕಾರ, ಭಾರತಿ ಸಿಂಗ್ ಹಾಗೂ ಹರ್ಷ್ ದಂಪತಿಗೆ ವಾರಕ್ಕೆ 50 ಲಕ್ಷ ರೂಪಾಯಿ ಸಂಭಾವನೆ ಕೊಡಲು 'ಬಿಗ್ ಬಾಸ್' ಒಪ್ಪಿಗೆ ಕೊಟ್ಟಿದ್ದಾರಂತೆ. ವಾರಕ್ಕೆ ಅರ್ಧ ಕೋಟಿ ಸಿಗುವ ಅವಕಾಶ ಸಿಕ್ಕಾಗ, ಯಾರಾದರೂ ಇಲ್ಲ ಅಂತಾರಾ.? ಅದಕ್ಕೆ ಹಿಂದು ಮುಂದು ನೋಡದೆ ಭಾರತಿ-ಹರ್ಷ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಡ್ಯಾನಿ ಡಿ-ಮಹಿಕಾ ಬಿಟ್ಟರೆ, ಇವರಿಗೆ ಹೆಚ್ಚು.!

ಡ್ಯಾನಿ ಡಿ-ಮಹಿಕಾ ಬಿಟ್ಟರೆ, ಇವರಿಗೆ ಹೆಚ್ಚು.!

ಮೂಲಗಳ ಪ್ರಕಾರ, ಪೋರ್ನ್ ಸ್ಟಾರ್ ಡ್ಯಾನಿ ಡಿ ಹಾಗೂ ವಿವಾದಾತ್ಮಕ ನಟಿ ಮಹಿಕಾ ಶರ್ಮಾ ಜೋಡಿಗೆ ವಾರಕ್ಕೆ 95 ಲಕ್ಷ ನೀಡುವ ಡೀಲ್ ಆಗಿದ್ಯಂತೆ. ಈ ಜೋಡಿಯನ್ನ ಹೊರತು ಪಡಿಸಿದರೆ, ಭಾರತಿ ಸಿಂಗ್-ಹರ್ಷ್ ದಂಪತಿಗೆ ಹೆಚ್ಚು ಸಂಭಾವನೆ (50 ಲಕ್ಷ) ಸಿಗುತ್ತಿರುವುದು.

ದೀಪಿಕಾ ಕಕ್ಕರ್ ಗೆ 15 ಲಕ್ಷ.!

ದೀಪಿಕಾ ಕಕ್ಕರ್ ಗೆ 15 ಲಕ್ಷ.!

ಇನ್ನೂ ಕಿರುತೆರೆ ನಟಿ ದೀಪಿಕಾ ಕಕ್ಕರ್ ಗೆ ವಾರಕ್ಕೆ 15 ಲಕ್ಷ ಕೊಡಲು 'ಬಿಗ್ ಬಾಸ್' ಮುಂದಾಗಿದ್ದಾರಂತೆ. ವಾರಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿರುವ ಇವರೆಲ್ಲಾ 'ಬಿಗ್ ಬಾಸ್' ಮನೆಯಲ್ಲಿ ಏನೇನ್ ಮಾಡ್ತಾರೋ, ಏನೋ.?!

ದುಡ್ಡಿಗಾಗಿ ಒಪ್ಪಿಕೊಂಡೆ ಎನ್ನುವ ಭಾರತಿ ಸಿಂಗ್.!

ದುಡ್ಡಿಗಾಗಿ ಒಪ್ಪಿಕೊಂಡೆ ಎನ್ನುವ ಭಾರತಿ ಸಿಂಗ್.!

''ನಾನು ಮದುವೆ ಆದಾಗಿನಿಂದಲೂ, ಎಲ್ಲಾ ಬಿಲ್ ಗಳನ್ನು ಕಲರ್ಸ್ ವಾಹಿನಿ ನೋಡಿಕೊಂಡಿದೆ. ದುಡ್ಡಿಗಾಗಿಯೇ ನಾನು 'ಬಿಗ್ ಬಾಸ್' ಮಾಡಲು ಒಪ್ಪಿಕೊಂಡೆ'' ಎನ್ನುತ್ತಾರೆ ಕಾಮಿಡಿ ಕ್ವೀನ್ ಭಾರತಿ ಸಿಂಗ್.

ಶೋ ಗೆಲ್ಲಬೇಕು.!

ಶೋ ಗೆಲ್ಲಬೇಕು.!

''ಬಿಗ್ ಬಾಸ್' ಮನೆಯೊಳಗೆ ನಾನು ಕೋಪ ಮಾಡಿಕೊಳ್ಳಲ್ಲ. ನನ್ನ ಪತಿ ಹರ್ಷ್ ಗೆ ತುಂಬಾ ಕೆಲಸಗಳಿವೆ. ಹೀಗಾಗಿ, ಅವರು ಎಲಿಮಿನೇಟ್ ಆದರೂ, ನಾನು ಮಾತ್ರ ಶೋನ ಗೆಲ್ಲಬೇಕು ಎಂದುಕೊಂಡಿದ್ದೇನೆ'' ಎನ್ನುತ್ತಾರೆ ಭಾರತಿ ಸಿಂಗ್.

More from Filmibeat

English summary
Bharti Singh and Harsh has been offered a huge amount to participate in Bigg Boss 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X