Bharti Singh Baby Boy: ಗಂಡು ಮಗುವಿಗೆ ಜನ್ಮ ನೀಡಿದ ಕಾಮಿಡಿ ಕಾರ್ಯಕ್ರಮದ ನಿರೂಪಕಿ ಭಾರತಿ ಸಿಂಗ್

ಹಾಸ್ಯ ಕಲಾವಿದೆ, ಕಾಮಿಡಿ ಕ್ವೀನ್, ನಿರೂಪಕಿ ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಈ ಖುಷಿ ವಿಚಾರವನ್ನು ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಈ ಸುದ್ದಿ ಕೇಳಿ ಸಂತಸಗೊಂಡಿದ್ದಾರೆ. ಮಗುವನ್ನು ನೋಡುವ ಕಾತುರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೇ ಹಲವರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಹರ್ಷ್ ಲಿಂಬಾಚಿಯಾ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, " ಇಟ್ಸ್ ಎ ಬಾಯ್ " ಎಂದು ಬರೆದುಕೊಂಡಿದ್ದಾರೆ.

ಭಾರತಿ ಸಿಂಗ್ ಮಗು ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಈ ವಿಚಾರ ಮುಟ್ಟಿಸಿರುವ ಹರ್ಷ್ ಲಿಂಬಾಚಿಯಾ ಕೂಡ ಪತ್ನಿಗೆ ಸುಗಮವಾಗಿ ಪ್ರಸವ ಆಗಿರೋದಕ್ಕೆ ಸಂತಸಗೊಂಡಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಭಾರತಿ ಸಿಂಗ್ ಪ್ರೆಗ್ನೆನ್ಸಿಯ ಸಂತಸದ ಫೊಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾರೀ ಸುದ್ದಿಯಾಗಿದ್ದರು. "ಆನೆ ವಾಲೇ ಬೇಬಿ ಕಿ ಮಮ್ಮಿ"(ಬರಲಿರುವ ಮಗುವಿನ ತಾಯಿ) ಎಂದು ಬರೆದುಕೊಳ್ಳುವ ಮೂಲಕ ಸುಂದರ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಶೀರ್ಷಿಕೆ ಕಂಡು ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಆದಷ್ಟು ಬೇಗ ಮಗು ಆಗಮನವಾಗಲಿ ಎಂದು ಹರಸಿದ್ದರು. ಅದರಂತೆ ಈಗ ಹೊಸ ಅತಿಥಿಯ ಆಗಮನ ವಾಗಿದ್ದು, ಇಡೀ ಕುಟುಂಬ ಸಂತಸಗೊಂಡಿದ್ದಾರೆ.

ಹೆರಿಗೆ ದಿನದ ಕೊನೆವರೆಗೂ ಸೆಟ್‌ಗೆ ಹೋಗಿ ಕೆಲಸ

ಹೆರಿಗೆ ದಿನದ ಕೊನೆವರೆಗೂ ಸೆಟ್‌ಗೆ ಹೋಗಿ ಕೆಲಸ

ಜನಪ್ರಿಯ ಶೋಗಳನ್ನು ನಿರೂಪಣೆ ಮಾಡುವ ಭಾರತಿ ತುಂಬು ಗರ್ಭಿಣಿಯಾಗಿದ್ದಾಗಲೂ ಕೆಲಸವನ್ನು ಮರೆತಿರಲಿಲ್ಲಾ. ಹೆರಿಗೆ ದಿನದ ಕೊನೆ ಕೊನೆ ವರೆಗೂ ಸೆಟ್‌ಗೆ ಹೋಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಕೆಲಸ ಯಾಕೆ ಮಾಡುತ್ತಿದ್ದೀರಿ ಎಂದು ಕೇಳಿದವರಿಗೆ ಹೆರಿಗೆವರೆಗೂ ನಾನು ಆ್ಯಕ್ಟಿವ್ ಆಗಿರಲು ಬಯಸುತ್ತೇನೆ. ಹೀಗಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು ಭಾರತಿ ಸಿಂಗ್.

ಆದಷ್ಟು ಬೇಗ ನಿಮ್ಮ ಮಗುವನ್ನು ನಮಗೂ ತೋರಿಸಿ

ಆದಷ್ಟು ಬೇಗ ನಿಮ್ಮ ಮಗುವನ್ನು ನಮಗೂ ತೋರಿಸಿ

ಇನ್ನೂ ಭಾರತಿ ಸಿಂಗ್‌ಗೆ ಗಂಡು ಮಗು ಜನಿಸಿದ ಸುದ್ದಿ ಕೇಳುತ್ತಿದ್ದಂತೆ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರೆಲ್ಲರೂ ಭಾರತಿ ಮತ್ತು ಹರ್ಷ್‌ಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳು ಸಹ ಕಮೆಂಟ್ ಮೂಲಕ ಭಾರತಿ ಮತ್ತು ಹರ್ಷ್‌ಗೆ ಶುಭಾಶಯ ತಿಳಿಸುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕೆಲ ಅಭಿಮಾನಿಗಳು ಆದಷ್ಟು ಬೇಗ ನಿಮ್ಮ ಮಗುವನ್ನು ನಮಗೂ ತೋರಿಸಿ. ಮಗುವಿಗೆ ಯಾವ ಹೆಸರು ಇಡುತ್ತೀರಿ ಎಂದು ಕುತೂಹಲದಿಂದ ಕೇಳುತ್ತಿದ್ದಾರೆ.

ಈ ರೀತಿ ಸುದ್ದಿಗೆ ಭಾರತಿ ಸಿಂಗ್ ಬೇಸರ

ಈ ರೀತಿ ಸುದ್ದಿಗೆ ಭಾರತಿ ಸಿಂಗ್ ಬೇಸರ

ಕೆಲ ದಿನಗಳ ಹಿಂದೆ ಭಾರತಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸುಳ್ಳು ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ರೀತಿ ಸುದ್ದಿಗೆ ಭಾರತಿ ಸಿಂಗ್ ಬೇಸರ ಹೊರ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ಭಾರತಿ ಸಿಂಗ್, ನಾನಿನ್ನೂ ತಾಯಿಯಾಗಿಲ್ಲ. ಈ ಸುದ್ದಿ ಸುಳ್ಳು. ಈ ರೀತಿಯ ಫೇಕ್ ನ್ಯೂಸ್ ನಂಬಿ ನನ್ನ ಆಪ್ತರು ನನಗೆ ಶುಭಾಶಯದ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಹೇಳಿದ್ದರು. ಸದ್ಯ ನಾನು ಖತ್ರಾ ಖತ್ರಾ ಸೆಟ್‌ ನಲ್ಲಿದ್ದೇನೆ. 15 ನಿಮಿಷಗಳ ವಿರಾಮ ಸಿಕ್ಕಿದ್ದರಿಂದ ನಾನು ಲೈವ್ ಬಂದಿದ್ದೇನೆ. ನಾನು ಇನ್ನೂ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.

Recommended Video

KGF 2| ವಿದೇಶದಲ್ಲಿ ಹೇಗಿದೆ ನೋಡಿ 'ಕೆಜಿಎಫ್2' ಟಿಕೆಟ್ ಬುಕ್ಕಿಂಗ್ ಕ್ರೇಝ್! | Filmibeat Kannada
ಮಗು ತುಂಬಾ ತಮಾಷೆಯ ಸ್ವಭಾವದ್ದಾಗಿರುತ್ತೆ

ಮಗು ತುಂಬಾ ತಮಾಷೆಯ ಸ್ವಭಾವದ್ದಾಗಿರುತ್ತೆ

ಇದೇ ಸಮಯದಲ್ಲಿ ತಮ್ಮ ಡೆಲಿವರಿ ಬಗ್ಗೆ "ನನಗೆ ಭಯವಿದೆ. ನನ್ನ ಡೆಲಿವರಿಯ ಅಂತಿಮ ದಿನಾಂಕ ಹತ್ತಿರದಲ್ಲಿದೆ. ನಾನು ಮತ್ತು ಹರ್ಷ್ ಮಗುವಿನ ಬಗ್ಗೆ ಮಾತನಾಡುತ್ತಲೇ ಇದ್ದೇವೆ. ಅದು ಹೇಗಿರುತ್ತದೆ? ಆದರೆ ಮಗು ತುಂಬಾ ತಮಾಷೆಯ ಸ್ವಭಾವ ಹೊಂದಿರುವುದು ಖಚಿತ. ಏಕೆಂದರೆ ನಾವಿಬ್ಬರೂ ತುಂಬಾ ತಮಾಷೆಯಗಿರುತ್ತವೆ" ಎಂದು ಹೇಳಿದ್ದರು. ಅದರಂತೆ ಇದೀಗ ಮಗುವಿನ ಜನನವಾಗಿದ್ದು, ಹಲವಾರು ಕಡೆಯಿಂದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ ಫ್ಯಾನ್ಸ್.

More from Filmibeat

English summary
Bharti Singh, Haarsh Limbachiyaa welcomed their first baby. Here is more details about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X