ನನ್ನ ತಂದೆಯ ಒಂದು ಫೋಟೋ ಕೂಡ ಇಲ್ಲ; ಭಾರ್ತಿ ಸಿಂಗ್ ನೋವಿನ ಕಥೆ
ನಟಿ, ಡಾನ್ಸರ್, ಕಾಮಿಡಿ ಸ್ಟಾರ್ ಭಾರ್ತಿ ಸಿಂಗ್ ಸದಾ ನಗುತ್ತಾ, ನಗಿಸುತ್ತಾ ಇರುತ್ತಾರೆ. ಭಾರ್ತಿ ಸಿಂಗ್ ಕಾಮಿಡಿ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಭಿಮಾನಿಗಳ ಮುಖದಲ್ಲಿ ಸದಾ ನಗು ತರಿಸುವ ಭಾರ್ತಿ ಸಿಂಗ್ ತನ್ನ ನಿಜ ಜೀವನದಲ್ಲಿ ತುಂಬಾ ನೋವನ್ನು ಹೊಂದಿದ್ದಾರೆ, ತುಂಬಾ ಕಷ್ಟಪಟ್ಟಿದ್ದಾರೆ.
ಭಾರ್ತಿ ಸಿಂಗ್ ಇದುವರೆಗೂ ಬಹಿರಂಗ ಪಡಿಸಿದ ತನ್ನ ಜೀವನದ ನೋವಿನ ಕಥೆಯನ್ನು ಈಗ ಬಿಚ್ಚಿಟ್ಟಿದ್ದಾರೆ. ನಿರೂಪಕ ಮನೀಶ್ ಪಾಲ್ ಜೊತೆಗಿನ ಚಾಟ್ ಶೋನಲ್ಲಿ ಭಾರ್ತಿ ಸಿಂಗ್ ತನ್ನ ಜೀವನದ ಕೆಲವು ಘಟನೆಗಳನ್ನು ತೆರೆದಿಟ್ಟಿದ್ದಾರೆ. ಪತಿ ಹರ್ಷ್ ತನ್ನ ಜೀವನವನ್ನು ಹೇಗೆ ಬದಲಾಯಿತು ಮತ್ತು ತಾನು ಹಿಂದೆದೂ ಅನುಭವಿಸಿದ ಪ್ರೀತಿ ಮತ್ತು ಬೆಂಬಲವನ್ನು ಪತಿ ನೀಡಿದ ವಿಚಾರವನ್ನು ಹೇಳಿದ್ದಾರೆ.
ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಭಾರ್ತಿ ಸಿಂಗ್, ತಂದೆಯನ್ನು ಫೋಟೋವನ್ನು ಸಹ ಮನೆಯಲ್ಲಿ ಇಟ್ಟುಕೊಂಡಿಲ್ಲವಂತೆ. ತಂದೆಯ ಪ್ರೀತಿ ಇಲ್ಲ, ಸಹೋದರ ಪ್ರೀತಿ ಬೆಂಬಲ ಕೂಡ ಸಿಗದೆ ಬೆಳೆದ ಭಾರ್ತಿ ಸಿಂಗ್, ಪತಿ ಹರ್ಷ್ ಜೀವನಕ್ಕೆ ಎಂಟ್ರಿ ಕೊಡುವ ವರೆಗೂ ಪುರಷರ ಪ್ರೀತಿ ಹೇಗಿರುತ್ತೆ ಎನ್ನುವುದನ್ನು ನೋಡಿರಲಿಲ್ಲ ಎಂದು ಭಾವುಕರಾಗಿದ್ದಾರೆ.

"ನನ್ನ ಜೀವನದಲ್ಲಿ ನಾನು ನನ್ನ ತಾಯಿನ್ನು ಮಾತ್ರ ಹೊಂದಿದ್ದೇನೆ. ನಾನು ಎಂದಿಗೂ ನನ್ನ ತಂದೆಯನ್ನು ಭೇಟಿ ಮಾಡಿಲ್ಲ. ಏಕೆಂದರೆ ಅವರು ನಿಧನಹೊಂದಿದಾಗ ನನಗೆ 2 ವರ್ಷ. ಮನೆಯಲ್ಲಿ ಅವರ ಒಂದು ಫೋಟೋ ಕೂಡ ಇಲ್ಲ. ನಾನು ಅವರ ಫೋಟೋವನ್ನು ಹಾಕಲು ಬಿಡುವುದಿಲ್ಲ. ನನ್ನ ಸಹೋದರಿ ಮತ್ತು ಸಹೋದರರು ತಂದೆ ಪ್ರೀತಿ ಅನುಭವಿಸಿದ್ದಾರೆ" ಎಂದು ಭಾವುಕರಾಗಿದ್ದಾರೆ.
"ಆದರೆ ನನಗೆ ನನ್ನ ಸಹೋದರನ ಪ್ರೀತಿಯನ್ನು ನೋಡಲು ಆಗಲಿಲ್ಲ. ಅವರೆಲ್ಲ ಅವರ ಜೀವನದಲ್ಲಿ ಬ್ಯುಸಿಯಾಗಿದ್ದರು. ಆದರೆ ಈಗ ನನ್ನ ಗಂಡನಿಂದ ನಾನು ಎಲ್ಲವನ್ನು ಪಡೆದುಕೊಂಡಿದ್ದೇನೆ. ಗಂಡನ ಪ್ರೀತಿಯಿಂದ ಮನುಷ್ಯ ಎಷ್ಟು ಕಾಳಜಿ, ಪ್ರೀತಿ ತೋರುತ್ತಾನೆ ಎಂದು ಅರಿತುಕೊಂಡೆ" ಎಂದು ಭಾರ್ತಿ ಸಿಂಗ್ ಹೇಳಿದ್ದಾರೆ.

ಈ ವಿಡಿಯೋವನ್ನು ಮನೀಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, "ನಿಮ್ಮನ್ನು ನಗಿಸುವ ಜನರು ತುಂಬಾ ಆಳವಾದ ನೋವನ್ನು ಮರೆ ಮಾಚುತ್ತಿರುತ್ತಾರೆ. ಅಂತವರು ಭಾರ್ತಿ ಸಿಂಗ್ ಕೂಡ. ನಗಿಸುವ ರಾಣಿ, ತುಂಬಾ ಕಷ್ಟಪಟ್ಟಿದ್ದಾರೆ. ಮತ್ತು ತುಂಬಾ ಜನಕ್ಕೆ ಸಂತೋಷ ನೀಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿಗೆ ಭಾರ್ತಿ ಸಿಂಗ್ ಮೇಲೆ ಡ್ರಗ್ಸ್ ಜಾಲದ ನಂಟು ಆರೋಪ ಕೇಳಿಬಂದಿತ್ತು. ಈ ಸಂಬಂಧ ಭಾರ್ತಿ ಸಿಂಗ್ ಎನ್ ಸಿ ಬಿ ವಿಚಾರಣೆಗೂ ಹಾಜರಾಗಿದ್ದರು. ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಭಾರ್ತಿ ಸಿಂಗ್ ಡಾನ್ಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದರು.


Click it and Unblock the Notifications











