Bhavana Ramanna: 'ರಾಮಾಚಾರಿ' ಧಾರಾವಾಹಿಯಿಂದ ಹೊರಬಂದ ಕಾರಣ ಹೇಳಿದ ನಟಿ ಭಾವನಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಮಾಚಾರಿ ಸೀರಿಯಲ್‌ನಲ್ಲಿ ಒಳ್ಳೆ ಟ್ವಿಸ್ಟ್ ಅಂಡ್ ಟರ್ನಿಂಗ್ ನಡೆಯುತ್ತಿದೆ. ನಾರಾಯಣಚಾರ್ಯರ ಮನೆಗೆ ಕಾದಿದ್ದ ಗ್ರಹಚಾರಗಳು ಬಿಟ್ಟು ಹೋಗಿವೆ. ಆದರೆ ಹೊಸದೊಂದು ಸಮಸ್ಯೆ ಶುರುವಾಗಿದೆ. ನಾರಾಯಣಚಾರ್ಯರಿಗೆ ಮತ್ತೊಂದು ಸಂಬಂಧವಿದೆ ಎಂಬುದನ್ನು ತಿಳಿದಿದ್ದ ವೈಶಾಖ ತನಗೆ ಬೇಕಾದಂತೆ ಆಡಿಸುತ್ತಿದ್ದಳು. ಮನೆಯನ್ನು ಸ್ಮಶಾನ ಮಾಡುವುದಕ್ಕೆ ಹೊರಟಿದ್ದಳು. ಆದರೆ ಕಿಟ್ಟಿಯಿಂದ ಆ ನರಕದ ದಿನಗಳು ತಪ್ಪಿವೆ.
ವೈಶಾಖಾಗೆ ಹೆಚ್ಚು ಬೆಂಬಲ ಕೊಟ್ಟಿದ್ದು ಮಾನ್ಯತಾ. ಶ್ರೀಮಂತಿಕೆಗಾಗಿಯೇ ಬದುಕಿದ ಮಾನ್ಯತಾ, ಮಗಳು ಮಿಡಲ್ ಕ್ಲಾಸ್ ಹುಡುಗನನ್ನು ಮದುವೆಯಾಗಿದ್ದನ್ನು ಸಹಿಸಲಿಲ್ಲ. ಮಗಳೇ ಬದಲಾದರೂ ಮಾನ್ಯತಾ ಒಪ್ಪಲಿಲ್ಲ. ಮಗಳನ್ನ ಹೇಗಾದರೂ ಮಾಡಿ ರಾಮಾಚಾರಿಯಿಂದ ದೂರ ಮಾಡುವುದಕ್ಕೇನೆ ಪ್ರಯತ್ನ ಪಟ್ಟಳು. ಆದರೆ ಅದು ಸಕ್ಸಸ್ ಆಗಲಿಲ್ಲ. ಮಾನ್ಯತಾ ಪಾತ್ರವನ್ನು ಮೊದಲು ಭಾವನಾ ನಿರ್ವಹಿಸಿದ್ದರು. ಆ ಪಾತ್ರವನ್ನು ಬಿಟ್ಟಿದ್ದೇಕೆ ಎಂಬುದನ್ನು ನ್ಯೂಸ್ ಫಸ್ಟ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಅನುಬಂಧದ ಬಗ್ಗೆ ಖುಷಿ ಪಟ್ಟ ಭಾವನಾ
ಕಲರ್ಸ್ ಕನ್ನಡ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಗಿದ್ದು, ಇಡೀ ಕಲರ್ಸ್ ಕನ್ನಡ ತಂಡದವರನ್ನು ಒಟ್ಟಿಗೆ ಸೇರಿಸಿ, ಅನುಬಂಧ ಅವಾರ್ಡ್ ನಡೆಸಿದೆ. ಈ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ಭಾವನಾ ರಾಮಣ್ಣ ಕೂಡ ಭಾಗಿಯಾಗಿದ್ದರು. ಅನುಬಂಧ ಅವಾರ್ಡ್ ಬಗ್ಗೆ ಖುಷಿಪಟ್ಟಿದ್ದು, 'ಅನುಬಂಧವಾಗಿದೆ.. ಅನುಬಂಧ ಬೆಳೀತಾ ಇದೆ.. ಸಾಕಷ್ಟು ವರ್ಷಗಳ ಸಂಬಂಧ ಇದು.ಇಷ್ಟು ವರ್ಷಗಳಾದರೂ ಆ ಅನುಬಂಧ ಹಾಗೇ ಉಳಿದಿರುವುದು ಸಂತಸದ ವಿಚಾರ' ಎಂದಿದ್ದಾರೆ.
ವಿಲನ್ ಪಾತ್ರದಲ್ಲಿ ಭಾವನಾ
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮನೆಯಲ್ಲೂ ಖಳ ನಾಯಕಿ ಇದ್ದಾರೆ, ನಾರಾಯಣಾಚಾರ್ಯರ ಮನೆಯಲ್ಲೂ ಶತ್ರು ಇದ್ದಾಳೆ. ಚಾರು ಮನೆಯಲ್ಲಿ ಅವರ ಅಮ್ಮನೇ ಶತ್ರು ಎಂಬುದೇ ಶಾಕಿಂಗ್ ವಿಚಾರ. ಮಗಳು ಸ್ಟೇಟಸ್ ಮೆಂಟೈನ್ ಮಾಡಬೇಕು ಎಂದೆಲ್ಲಾ ಆಸೆ ಇತ್ತು ಮಾನ್ಯತಾಗೆ. ಈ ಮಾನ್ಯತಾ ಪಾತ್ರವನ್ನು ಈ ಮೊದಲು ನಟಿ ಭಾವನಾ ರಾಮಣ್ಣ ನಿಭಾಯಿಸಿದ್ದರು. ಆ ಪಾತ್ರಕ್ಕೆ ಪಕ್ಕಾ ಹೇಳಿಮಾಡಿಸಿದಂತೆ ಇದ್ದರು.

ಆ ಪಾತ್ರವನ್ನು ಭಾವನಾ ಬಿಟ್ಟಿದ್ದೇಕೆ?
ಸ್ವಲ್ಪ ಸಮಯ ಮಾತ್ರ ಭಾವನಾ ಇದ್ದದ್ದು. ಬಳಿಕ ಆ ಪಾತ್ರದಿಂದ ಹೊರ ನಡೆದಿದ್ದರು. ಇದೀಗ ಅನುಬಂಧ ಅವಾರ್ಡ್‌ನಲ್ಲಿ ನ್ಯೂಸ್ ಫಸ್ಟ್ ಜೊತೆಗೆ ಮಾತನಾಡಿದ ಭಾವನಾ ಸೀರಿಯಲ್‌ನಿಂದ ಹೊರ ಬಂದಿದ್ದು ಯಾಕೆ ಎಂಬುದನ್ನು ಹೇಳಿದ್ದಾರೆ. 'ಸೀರಿಯಲ್ ತುಂಬಾ ಚೆನ್ನಾಗಿತ್ತು. ಪಾತ್ರ ತುಂಬಾ ಚೆನ್ನಾಗಿತ್ತು. ಕಲರ್ಸ್ ಕನ್ನಡದವರಿಗೂ ನಾನು ಧನ್ಯವಾದ ಹೇಳಬೇಕು. ರಾಮಚಾರಿ ಸೀರಿಯಲ್ ನನ್ನ ಫಸ್ಟ್ ಕಿರುತೆರೆ ಧಾರಾವಾಹಿ. ಸಮ್ ಟೆಕ್ನಿಕಲ್ ಪ್ರಾಬ್ಲಮ್‌ನಿಂದ ಹೊರಗೆ ಬಂದೆ. ನೋಡೋಣ ಪ್ಲ್ಯಾನ್ ನಡೀತಾ ಇದೆ. ಮತ್ತೆ ಕಲರ್ಸ್ ಕನ್ನಡದಲ್ಲಿ ಬರುತ್ತೀನಿ' ಎಂದಿದ್ದಾರೆ.
ಹಸು ಸಾಕುತ್ತಿರುವ ಭಾವನಾ
ಹಳ್ಳಿಯಲ್ಲಿಯೇ ಹಸು ಸಾಕುವವರ ಸಂಖ್ಯೆ ಕಡಿಮೆ. ಆದ್ರೆ ನಟಿ ಭಾವನಾ ಸಿಟಿಯಲ್ಲಿ ಹಸು ಸಾಕಿದ್ದಾರೆ. ಭಾವನಾ ಸಾಕಿರುವ ಹಸುವಿನಿಂದ ದಿನಕ್ಕೆ ಏಳು ಲೀಟರ್ ಹಾಲು ಸಿಗುತ್ತದೆಯಂತೆ. ಅದರ ಹೆಸರು ಗೌರಿ. ಅಕ್ಕಪಕ್ಕದವರಿಗೂ ಭಾವನಾ ಅವರೇ ಹಾಲನ್ನು ನೀಡುತ್ತಾರೆ. ಭಾವನಾ ಅವರ ಮನೆಯಲ್ಲಿ ಗಟ್ಟಿ ಮೊಸರು, ಪನ್ನೀರು ಎಲ್ಲವನ್ನು ಅವರ ಹಸು ನೀಡುವ ಹಾಲಿನಿಂದಾನೇ ತಯಾರು ಮಾಡುತ್ತಾರೆ. ದಿನಕ್ಕೆ ಏಳು ಲೀಟರ್ ಎಂದರೆ ಮನೆಯೊಂದಕ್ಕೆ ಹೆಚ್ಚಾಗುತ್ತೆ. ಹೀಗಾಗಿ ಅಕ್ಕಪಕ್ಕದ ಮನೆಯವರಿಗೂ ಭಾವನಾ ತಮ್ಮ ಹಸುವಿನ ಹಾಲನ್ನು ಕೊಡುತ್ತಾರೆ. ಅದೊಂಥರ ಗುಡ್ ಫೀಲಿಂಗ್ ಅಂತಾರೆ.


Click it and Unblock the Notifications











