"ನಮ್ಮ ಸಂಸಾರ ದೊಡ್ಡದಾಗುತ್ತಿದೆ" ಎಂದು ಸಿಹಿ ಸುದ್ದಿ ಕೊಟ್ಟ ಈ ಸೆಲೆಬ್ರಿಟಿ ಕಪಲ್ ಬಗ್ಗೆ ಗೊತ್ತೇ?

By ಅನಿತಾ ಬನಾರಿ

'ಚರಣದಾಸಿ', 'ಸುಬ್ಬಲಕ್ಷ್ಮಿ ಸಂಸಾರ','ರಕ್ಷಾ ಬಂಧನ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡ ನಟ ಭವಾನಿಸಿಂಗ್ ಅವರು ಇದೀಗ ತಂದೆಯಾಗುತ್ತಿದ್ದಾರೆ. ಇವರ ಪತ್ನಿ ಪಂಕಜ ಶಿವಣ್ಣ ಅವರು ಕೂಡ ಧಾರಾವಾಹಿ ನಟಿಯಾಗಿದ್ದು ಇದೀಗ ಇಬ್ಬರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಬಗ್ಗೆ ಭವಾನಿ ಸಿಂಗ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿರುವ ಈ ಜೋಡಿ ಆ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, "ನಮ್ಮ ಸಂಸಾರ ದೊಡ್ಡದಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

Bhavani Singh Pankaj Shivanna couple is expecting their first child

ಅಂದಹಾಗೆ 'ಚರಣದಾಸಿ' ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟ ನಟ ಭವಾನಿ ಸಿಂಗ್ ಅವರು ತದ ನಂತರ ಎರಡು ಮೂರು ಧಾರಾವಾಹಿಗಳಲ್ಲಿ ನಾಯಕ ನಟನಾಗಿ ನಟಿಸಿದ್ದರು. ನಟಿ ಪಂಕಜ ಶಿವಣ್ಣ ಅವರು 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿ ಮೂಲಕ ಭವಾನಿ ಸಿಂಗ್ ಅವರಿಗೆ ಪರಿಚಯವಾದರು.

ಮುಂದೆ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಬರಲಾಯಿತು. 2019 ರಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಹಳಷ್ಟು ದಿನಗಳ ಕಾಲ ತಮ್ಮ ಪ್ರೀತಿಯನ್ನು ಗೌಪ್ಯವಾಗಿ ಇಟ್ಟಿದ್ದ ಇವರು ಎಂಗೇಜ್ಮೆಂಟ್ ಮೂಲಕ ತಮ್ಮ ರಿಲೇಶನ್‌ಶಿಪ್ ಬಗ್ಗೆ ಬಹಿರಂಗಪಡಿಸಿದ್ದರು.

Bhavani Singh Pankaj Shivanna couple is expecting their first child

ಇದೀಗ ಹೆಚ್ಚು ಕಮ್ಮಿ ಐದು ವರ್ಷಗಳ ನಂತರ ಈ ಜೋಡಿ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು, ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ ಬಹಳ ಸಂಭ್ರಮದಿಂದ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಭವಾನಿ ಸಿಂಗ್ ಅವರ ಅಭಿಮಾನಿಗಳು ಫಾಲೋವರ್ಸ್ ಶುಭ ಹಾರೈಸಿದ್ದಾರೆ.

ಅಂದಹಾಗೆ ಸದ್ಯಕ್ಕೆ ನಟ ಭವಾನಿ ಸಿಂಗ್ ಆಗಲಿ ಅಥವಾ ನಟಿ ಪಂಕಜ ಶಿವಣ್ಣ ಅವರಾಗಲಿ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಇವರು ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅದನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Bhavani Singh and Pankaj Shivanna gave the sweet news. TV couple is expecting a child after five years of marriage:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X