'ಕರ್ಣ'ನಿಗೆ ಭವ್ಯಾ ಗೌಡ ಕಂಟಕ ಆಗಿದ್ಹೇಗೆ ? ಧಾರಾವಾಹಿ ಪ್ರಸಾರವಾಗದಿರಲು ನೈಜ ಕಾರಣವೇನು ?

ಕರ್ಣ ಕುಂತಿ ಪುತ್ರನಾದರೂ ಸೂತ ಪುತ್ರನೆಂದು ಬೆಳೆದ. ದಾನಕ್ಕೆ ಹೆಸರಾದ. ಅರ್ಜುನನಿಗಿಂತ ಶಕ್ತಿಶಾಲಿ ಎಂದು ಕರೆಯಲ್ಪಟ್ಟ ಕರ್ಣ ತಾನು ಮಾಡದ ತಪ್ಪಿಗೆ ಸಂದರ್ಭಕ್ಕೆ ಬಲಿಯಾದ. ಇದು ದ್ವಾಪರ ಯುಗದ ಕರ್ಣನ ಕಥೆಯಾದರೆ ಈ ಕಲಿಯುಗದ ಕರ್ಣನ ಕಥೆ ಕೂಡ ಭಿನ್ನವೇನು ಅಲ್ಲ. ಹೌದು. ಕಿರುತೆರೆಯ ಪ್ರೇಮಿಗಳಿಗೆ ತಿಳಿದಿರುವಂತೆ ಇಂದಿನಿಂದ { ಜೂನ್ 16 } ಜೀ ಕನ್ನಡದಲ್ಲಿ ಕರ್ಣ ಧಾರಾವಾಹಿ ಪ್ರಸಾರವಾಗಬೇಕಿತ್ತು.

ಕಿರಣ್ ರಾಜ್.. ನಮ್ರತಾ ಗೌಡ ಮತ್ತು ಭವ್ಯಾ ಗೌಡ ಅಭಿನಯದ ಈ ಧಾರಾವಾಹಿ ನೋಡಲು ಒಂದು ವರ್ಗದ ಪ್ರೇಕ್ಷಕರ ಬಣ ಕಾತುರದಿಂದ ಕಾಯುತ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ಧಾರಾವಾಹಿಯ ಪ್ರಸಾರವನ್ನು ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ತಂಡ ತಡೆ ಹಿಡಿಯಿತು. ಕರ್ಣನ ಪ್ರಸಾರವನ್ನು ಅನಿರ್ದಿಷ್ಟಾವಧಿ ಮುಂದೂಡಿತು.

Bhavya Gowda s prior contract causes delay for Zee Kannada s Karna premiere

ಏಕಾಏಕಿ ನಡೆದ ಈ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಕೂಡ ಹುಟ್ಟು ಹಾಕಿತ್ತು. ಧಾರಾವಾಹಿ ಪ್ರಸಾರವಾಗದಿರಲು ಭವ್ಯಾ ಗೌಡ ಅವರೇ ಕಾರಣ ಎನ್ನುವ ಮಾತು ಕೇಳಿ ಬಂತು. ಭವ್ಯಾ ಗೌಡ ಏಕಾಏಕಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂದು ಕೂಡ ಹೇಳಲಾಯ್ತು.

ಆದರೆ, ವಾಸ್ತವದಲ್ಲಿ ಧಾರಾವಾಹಿ ನಿಲ್ಲಲು ಭವ್ಯಾ ಗೌಡ ಅವರೇ ಕಾರಣ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಹೌದು ಅಸಲಿಗೆ ಎಲ್ಲರಿಗೆ ಗೊತ್ತಿರುವಂತೆ ಭವ್ಯಾ ಗೌಡ ಬಿಗ್ ಬಾಸ್ ನ ಮಾಜಿ ಸ್ಫರ್ಧಿ. ಕೊನೆಯವರೆಗೆ ಭವ್ಯಾ ಗೌಡ ಮನೆಯಲ್ಲಿ ಉಳಿದಿದ್ದರು. ಇಂಥಾ ಭವ್ಯಾ ಗೌಡ ಬಿಗ್ ಬಾಸ್ ನಂತರ ಬಾಯ್ಸ್ ವರ್ಸಸ್ ಗಲ್ಸ್೯ ಎಂಬ ಕಾರ್ಯಕ್ರಮದಲ್ಲಿ ಭಾಗವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಆಗಲಿಲ್ಲ.

ಇನ್ನೂ ಸಾಮಾನ್ಯವಾಗಿ ಒಂದು ವಾಹಿನಿ ಜೊತೆ ಗುರುತಿಸಿಕೊಂಡವರು ಕೆಲ ಒಪ್ಪಂದಗಳನ್ನು ‌ಮಾಡಿಕೊಂಡಿರುತ್ತಾರೆ. ಆ ಒಪ್ಪಂದ ಪೂರ್ಣಗೊಳ್ಳುವರೆಗೆ ಬೇರೆ ವಾಹಿನಿ ಕಡೆ ಇವರು ಮುಖ ಹಾಕುವಂತೆ ಇಲ್ಲ.

ಈ ಒಪ್ಪಂದವನ್ನು ಭವ್ಯಾ ಗೌಡ ಮುರಿದಿದ್ದಾರೆ ಎನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾತು. ಈ ಹಿನ್ನೆಲೆ ಆ ವಾಹಿನಿಯವರು ಕರ್ಣನ ವಿರುದ್ದ ತಡೆಯಾಜ್ಞೆ ತಂದಿದ್ದಾರೆ ಹೀಗಾಗಿಯೇ ಕರ್ಣನ ಮೊದಲ ದಿನದ ಆಟಕ್ಕೆ ಬ್ರೇಕ್ ಹಾಕಲಾಗಿದೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.

ಇನ್ನು ಭವ್ಯಾ ಗೌಡ ವಿಚಾರವಾಗಿ ಕೋರ್ಟ್‌ನಿಂದ ಸ್ಟೇ ಬಂದ ಕಾರಣ ಅವರಿಗೆ ಸಂಬಂಧಿಸಿದ 'ಕರ್ಣ' ಧಾರಾವಾಹಿಯ ಪ್ರೋಮೋಗಳನ್ನ ಡಿಲೀಟ್ ಮಾಡಲಾಗಿದೆ. ಭವ್ಯಾ ಗೌಡ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲ ಕರ್ಣನಿಗೆ ಸಂಬಂಧಿಸಿದ ಫೋಸ್ಟ್ ಗಳನ್ನು ತೆಗೆದು ಹಾಕಿದ್ದಾರೆ.

ಸಹಜವಾಗಿ ಇದೆಲ್ಲದರಿಂದ ಕರ್ಣ ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ ಅಪಾರವಾದ ನಷ್ಟವಾಗಿದೆ. ಶ್ರುತಿ ನಾಯ್ಡು ಅವರ ಮುಂದಿನ ನಡೆ ಏನು ? ಕರ್ಣ ಈ ಕಾನೂನು ಸಮರದಲ್ಲಿ ಗೆಲ್ತಾನಾ ? ಗೆದ್ದರೆ ಪ್ರಸಾರವಾಗುವುದು ಯಾವಾಗ ಎನ್ನುವುದಕ್ಕೆ ಉತ್ತರ ಶೀಘ್ರದಲ್ಲೇ ಸಿಗುವ ನಿರೀಕ್ಷೆ ಇದೆ

ಸದ್ಯ ಈ ಪ್ರಕರಣ ಕೋರ್ಟ್​ನಲ್ಲಿದೆ. ಅಲ್ಲಿ ಇತ್ಯರ್ಥವಾದ ಬಳಿಕ ಧಾರಾವಾಹಿಯು ಪ್ರಸಾರ ಆರಂಭಿಸಬಹುದು ಎನ್ನಲಾಗುತ್ತಿದೆ.

ಇನ್ನು ಭವ್ಯಾ ಗೌಡ ವಿಚಾರವಾಗಿ ಕೋರ್ಟ್‌ನಿಂದ ಸ್ಟೇ ಬಂದ ಕಾರಣ ಅವರಿಗೆ ಸಂಬಂಧಿಸಿದ 'ಕರ್ಣ' ಧಾರಾವಾಹಿಯ ಪ್ರೋಮೋಗಳನ್ನ ಡಿಲೀಟ್ ಮಾಡಲಾಗಿದೆ. ಭವ್ಯಾ ಗೌಡ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲ ಕರ್ಣನಿಗೆ ಸಂಬಂಧಿಸಿದ ಫೋಸ್ಟ್ ಗಳನ್ನು ತೆಗೆದು ಹಾಕಿದ್ದಾರೆ.

ಸಹಜವಾಗಿ ಇದೆಲ್ಲದರಿಂದ ಕರ್ಣ ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ ಅಪಾರವಾದ ನಷ್ಟವಾಗಿದೆ. ಶ್ರುತಿ ನಾಯ್ಡು ಅವರ ಮುಂದಿನ ನಡೆ ಏನು ? ಕರ್ಣ ಈ ಕಾನೂನು ಸಮರದಲ್ಲಿ ಗೆಲ್ತಾನಾ ? ಗೆದ್ದರೆ ಪ್ರಸಾರವಾಗುವುದು ಯಾವಾಗ ಎನ್ನುವುದಕ್ಕೆ ಉತ್ತರ ಶೀಘ್ರದಲ್ಲೇ ಸಿಗುವ ನಿರೀಕ್ಷೆ ಇದೆ.

More from Filmibeat

English summary
Premiere of Zee Kannada's Karna postponed! Learn why Bhavya Gowda's existing commitments led to the pushback for the new Kannada serial. Read the full story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X