"ಯಕ್ಷಗಾನ ನನಗೆ ಕೇವಲ ಒಂದು ಕಲೆಯಷ್ಟೇ ಅಲ್ಲ. ನನ್ನ ಪಾಲಿಗೆ ಅದೊಂದು ಪವಿತ್ರ ಆಚರಣೆ"; ಭೂಮಿ ಶೆಟ್ಟಿ

By ಅನಿತಾ ಬನಾರಿ

ಕನ್ನಡದ ಕಿರುತೆರೆ ನಟಿ ಭೂಮಿ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ತಮ್ಮ ಅಮೋಘ ನಟನೆ, ಸುಂದರವಾದ ಮಾತುಗಳಿಂದಲೇ ಫೇಮಸ್ ಆಗಿರುವ ಇವರು ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಅದೇನಪ್ಪ ಅಂದ್ರೆ ಭೂಮಿ ಶೆಟ್ಟಿ ಯಕ್ಷಗಾನದ ವೇಷ ತೊಟ್ಟು ವೇದಿಕೆಯ ಮೇಲೆ ಮಿಂಚಿದ್ದಾರೆ. ಲವಕುಶ ಯಕ್ಷಗಾನದಲ್ಲಿ ಸೀತೆಯ ಪಾತ್ರವನ್ನು ಮಾಡಿದ ಭೂಮಿ ಎಲ್ಲರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದ್ದ 'ಕಿನ್ನರಿ' ಧಾರಾವಾಹಿಯಿಂದ ಕನ್ನಡಿಗರ ಮನೆಗೆದ್ದಿದ್ದ ನಟಿ ನಂತರ ಕಾಲಿಟ್ಟಿದ್ದು ತೆಲುಗು ಕಿರುತೆರೆಗೆ. ತೆಲುಗಿನ 'ನಿನ್ನೆ ಪೆಳ್ಳಾಡತಾ' ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಅಭಿನಯಿಸಿರುವ ಭೂಮಿ ಶೆಟ್ಟಿ ಬಿಗ್ ಬಾಸ್ 7ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ವೀಕ್ಷಕರನ್ನು ರಂಜಿಸುವಲ್ಲಿ, ಆಟಗಳನ್ನು ಗೆಲ್ಲುವಲ್ಲಿ ಸಖತ್ತಾಗಿ ಫೈಟ್ ನೀಡುತ್ತಿದ್ದ ನಟಿಯನ್ನು ಪ್ರೇಕ್ಷಕರು ನೋಡಿ ಖುಷಿಪಟ್ಟಿದ್ದರು. ಜೊತೆಗೆ ಆ ಸೀಸನ್ 4ನೇ ರನ್ನರ್ ಅಪ್ ಆಗಿ ಈಕೆ ಕಾಣಿಸಿಕೊಂಡಿದ್ದರು.

Bhoomi Shetty performed Yakshagana and said is not just an art form its rituals for me

ಬಿಗ್ ಬಾಸ್ ಅಂಗಳದಿಂದ ಹೊರಬಂದ ಮೇಲಂತೂ ಭೂಮಿ ಶೆಟ್ಟಿಗೆ ಹಲವಾರು ಅವಕಾಶಗಳು ಒದಗಿ ಬಂದವು. 'ಅತ್ತರಿಂಟ್ಲೋ ಅಕ್ಕ ಚೆಲ್ಲೆಲ್ಲು' ತೆಲುಗು ಧಾರಾವಾಹಿಯಲ್ಲಿ ಈಕೆ ಬಣ್ಣ ಹಚ್ಚಿದ್ದರು. ಇನ್ನು ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡ 'ಇಕ್ಕಟ್' ಸಿನಿಮಾದಲ್ಲಿ ಈಕೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಭೂಮಿ ಶೆಟ್ಟಿ ಅವರ ಮೊದಲ ಸಿನಿಮಾವೂ ಹೌದು. ಇನ್ನು ತೆಲುಗಿನ 'ಶರತುಲು ವರ್ತಿಸ್ತಾಯಿ' ಸಿನಿಮಾದಲ್ಲಿಯೂ ಈಕೆ ನಟಿಸಿದ್ದಾರೆ.

ಮತ್ತೆ ಒಂದಷ್ಟು ಸಮಯವನ್ನು ವಿದೇಶದಲ್ಲಿ ಕಳೆದ ನಟಿ ಪ್ರಪಂಚದ ಬೇರೆ ಬೇರೆ ಸ್ಥಳಗಳನ್ನು ಅನ್ವೇಷಣೆ ಮಾಡುವುದರಲ್ಲಿ ಖುಷಿ ಕಂಡಿದ್ದರು. ಸದ್ಯ ಭಾರತದಲ್ಲಿರುವ ನಟಿ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವ ಮಧ್ಯೆ ಯಕ್ಷಗಾನದ ಪಾತ್ರವನ್ನು ಮಾಡುವುದರೊಂದಿಗೆ ಮತ್ತೊಮ್ಮೆ ಟ್ರೆಂಡ್ ನಲ್ಲಿದ್ದಾರೆ.

Bhoomi Shetty performed Yakshagana and said is not just an art form its rituals for me

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತಂತೆ ವಿಡಿಯೋಗಳನ್ನು ಶೇರ್ ಮಾಡಿರುವ ನಟಿ. ತಾನು ಪ್ರತಿಭಾವಂತ ಯಕ್ಷಗಾನ ಕಲಾವಿದೆಯೂ ಹೌದು ಎನ್ನುವುದನ್ನು ಎಲ್ಲರಿಗೂ ಗೊತ್ತು ಮಾಡಿದ್ದಾರೆ. ಕರಾವಳಿ ಕುಂದಾಪುರದ ಹುಡುಗಿಯಾಗಿರುವ ಕಾರಣದಿಂದಲೂ ಯಕ್ಷಗಾನ ಇವರಿಗೆ ಸುಲಭವಾಗಿ ಕರಗತವಾಗಿದೆ. ಯಕ್ಷಗಾನದಲ್ಲಿ ಬಣ್ಣ ಹಚ್ಚುತ್ತಿರುವ, ಸಂಭಾಷಣೆಯನ್ನು ಹೇಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ನಟಿ "ಯಕ್ಷಗಾನವು ನನಗೆ ಕೇವಲ ಒಂದು ಕಲಾಪ್ರಕಾರವಲ್ಲ. ನನ್ನ ಪಾಲಿಗೆ ಅದೊಂದು ಪವಿತ್ರ ಆಚರಣೆ. ನಾನು ಪ್ರತಿ ವರ್ಷ ಹೆಮ್ಮೆಯಿಂದ ಆಚರಿಸುವ ಸಂಪ್ರದಾಯವಾಗಿದೆ. ಈ ವರ್ಷ ಇನ್ನೂ ವಿಶೇಷವಾಗಿತ್ತು. ಇದು ನನ್ನ ಪ್ರಯಾಣದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸಿದಂತಾಗಿದೆ. ನಾನು ಮೊದಲ ಬಾರಿ ಸ್ತ್ರೀ ವೇಷವನ್ನು ಮಾಡಿದ್ದೇನೆ. 'ಲವಕುಶ' ಯಕ್ಷಗಾನದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದೇನೆ. ಯಕ್ಷಗಾನ ನನ್ನ ಹೃದಯಕ್ಕೆ ಹತ್ತಿರವಾದ ವಿಷಯ. ನನಗೆ ಸಾಧ್ಯವಾದಷ್ಟು ನಾನು ಈ ಕಲೆಯ ಸೇವೆಯನ್ನು ಭಕ್ತಿಯಿಂದ ಮುಂದುವರಿಸುತ್ತೇನೆ. ಅದರಿಂದ ಸಿಗುವ ಸ್ಪೂರ್ತಿಯನ್ನು ಹೆಮ್ಮೆಯಿಂದ ಮುಂದುವರಿಸುತ್ತೇನೆ. ಎಂದೆಂದಿಗೂ ಕೃತಜ್ಞನಾಗಿರುತ್ತೇನೆ" ಎಂದಿದ್ದಾರೆ.

ಕಿರುತೆರೆ, ಸಿನೆಮಾ ಮಾತ್ರವಲ್ಲದೆ ಹಲವಾರು ಉತ್ತಮ ಕಿರು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಕನ್ನಡಿಗರ ಮನ ಗೆದ್ದಿರುವ ನಟಿ ಇದೀಗ ಯಕ್ಷಗಾನದಲ್ಲೂ ಗೆದ್ದಿದ್ದಾರೆ. ಫಿಟ್ ಆಗಿರುವುದಕ್ಕೋಸ್ಕರ ಒಂದು ದಿನವೂ ತಪ್ಪದೇ ವರ್ಕೌಟ್ ಆಡುವ ಭೂಮಿ ತಮ್ಮ ಹವ್ಯಾಸಗಳನ್ನು ಕಾಪಾಡಿಕೊಳ್ಳುವುದರಲ್ಲೂ ಅಷ್ಟೇ ಫಿಟ್ ಆಗಿರುತ್ತಾರೆ.

More from Filmibeat

English summary
Bhoomi Shetty performed Yakshagana and said is not just an art form its rituals for me;
Read more about: actress yakshagana sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X