'ಮಜಾ ಭಾರತ' ಶೋನಿಂದ ಭೂಮಿ ಶೆಟ್ಟಿ ಔಟ್: ಕಾರಣವೇನು?

ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ಭೂಮಿ ಶೆಟ್ಟಿ, ಇನ್ಮುಂದೆ ಮಜಾ ಭಾರತದ ಭಾಗವಾಗಿರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.

Recommended Video

ಕನ್ನಡದ ಮಜಾ ಭಾರತ ಬಿಟ್ಟು ತೆಲುಗಿಗೆ ಹಾರಿದ ಭೂಮಿ ಶೆಟ್ಟಿ | Filmibeat Kannada

ನಟಿ ಭೂಮಿ ಶೆಟ್ಟಿ ಧಾರಾವಾಹಿಯಿಂದ ಹೊರ ಬಂದ ಬಳಿಕ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಮನೆಯಲ್ಲಿದ್ದು ಪ್ರೇಕ್ಷಕರನ್ನು ರಂಜಿಸಿದ್ದ ಭೂಮಿ ಶೆಟ್ಟಿ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಮಜಾ ಭಾರತ ಕಾಮಿಡಿ ಶೋ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಮೊದಲ ಬಾರಿಗೆ ವೇದಿಕೆ ಮೇಲೆ ನಿಂತು ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದ ಭೂಮಿ ಶೆಟ್ಟಿ ಜನರ ಮೆಚ್ಚುಗೆ ಸಹ ಗಳಿಸಿದ್ದರು. ಆದರೀಗ ದಿಢೀರ್ ಅಂತ ಶೋನಿಂದ ಹೊರಹೋಗುವ ನಿರ್ಧಾರ ತೆಗೆದುಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಭೂಮಿ ಶೆಟ್ಟಿ ಹೇಳಿದ್ದೇನು?

ಭೂಮಿ ಶೆಟ್ಟಿ ಹೇಳಿದ್ದೇನು?

ಮಜಾ ಭಾರತದಿಂದ ಹೊರಬಂದ ಬಗ್ಗೆ ಭೂಮಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಧಿಕೃತವಾಗಿ ಇದು ನನ್ನ ಕೊನೆಯ ಮಜಾ ಭಾರತದ ಎಪಿಸೋಡ್. ನಿವೆಲ್ಲರೂ ನನ್ನ ನಿರೂಪಣೆಯನ್ನು ಎಂಜಾಯ್ ಮಾಡಿದ್ದೀರಿ ಎಂದು ಭಾವಿಸಿದ್ದೇನೆ. ನಾನು ಒಂದು ನಿಲುವನ್ನು ತೆಗೆದುಕೊಳ್ಳಲು ಬಯಸಿದ್ದೇನೆ. ನಿಮ್ಮೆಲ್ಲರ ಬೆಂಬಲ ಹೀಗೆ ಮುಂದುವರೆಯಲಿ. ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ಧಾರಾವಾಹಿ ಲೋಕಕ್ಕೆ ಭೂಮಿ ಶೆಟ್ಟಿ ರಿ ಎಂಟ್ರಿ

ಧಾರಾವಾಹಿ ಲೋಕಕ್ಕೆ ಭೂಮಿ ಶೆಟ್ಟಿ ರಿ ಎಂಟ್ರಿ

ಭೂಮಿ ಶೆಟ್ಟಿ ಮಜಾ ಭಾರತ ಶೋನಿಂದ ಹೊರಬರಲು ಕಾರಣ ಧಾರಾವಾಹಿ. ಹೌದು, ಧಾರಾವಾಹಿ ಲೋಕ ಭೂಮಿ ಶೆಟ್ಟಿಯನ್ನು ಕೈ ಬೀಸಿ ಕರೆಯುತ್ತಿದೆ. ಹಾಗಾಗಿ ಭೂಮಿ ಮತ್ತೆ ಧಾರಾವಾಹಿಗೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಭೂಮಿ ಕಾಣಿಸಿಕೊಳ್ಳುತ್ತಿರುವುದು ಕನ್ನಡ ಧಾರಾವಾಹಿಯಲ್ಲಲ್ಲ, ತೆಲುಗು ಧಾರಾವಾಹಿಯಲ್ಲಿ. ಈ ಮೂಲಕ ಭೂಮಿ ಶೆಟ್ಟಿ ಮತ್ತೆ ತೆಲುಗು ಕಿರುತೆರೆ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ತೆಲುಗಿನ 'ಅತ್ತರಿಂಟ್ಲೋ ಅಕ್ಕ ಚೆಲ್ಲೆಲ್ಲು' ಧಾರಾವಾಹಿಯಲ್ಲಿ ಭೂಮಿ

ತೆಲುಗಿನ 'ಅತ್ತರಿಂಟ್ಲೋ ಅಕ್ಕ ಚೆಲ್ಲೆಲ್ಲು' ಧಾರಾವಾಹಿಯಲ್ಲಿ ಭೂಮಿ

ಭೂಮಿ ಶೆಟ್ಟಿ ತೆಲುಗಿನ 'ಅತ್ತರಿಂಟ್ಲೋ ಅಕ್ಕ ಚೆಲ್ಲೆಲ್ಲು' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಚೈತ್ರಾ ರೈ ಪಾತ್ರದ ಬಿಟ್ಟುಹೋದ ಪಾತ್ರದಲ್ಲಿ ಭೂಮಿ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಧಾರಾವಾಹಿ ಜೊತೆಗೆ ಚೊಚ್ಚಲ ಸಿನಿಮಾದಲ್ಲೂ ಮಿಂಚಲು ಭೂಮಿ ಶೆಟ್ಟಿ ಸಜ್ಜಾಗಿದ್ದಾರೆ.

ಈ ಮೊದಲೇ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದ ಭೂಮಿ

ಈ ಮೊದಲೇ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದ ಭೂಮಿ

ಅಂದಹಾಗೆ ಭೂಮಿ ಶೆಟ್ಟಿ ತೆಲುಗು ಕಿರುತೆರೆ ಲೋಕ ಹೊಸದೇನಲ್ಲ. ಈ ಮೊದಲು ಸಹ ಕನ್ನಡದ 'ಕಿನ್ನರಿ' ಧಾರಾವಾಹಿ ಮುಗಿಯುತ್ತಿದ್ದಂತೆ ತೆಲುಗಿನ ಕಡೆ ಮುಖ ಮಾಡಿದ್ದರು. 'ನಿನ್ನೆ ಪೆಳ್ಳಡತಾ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಆದರೆ ಬಿಗ್ ಬಾಸ್ ಸೀಸನ್ 7ಗಾಗಿ ಧಾರಾವಾಹಿಯಿಂದ ಹೊರ ಬಂದಿದ್ದರು. ಇದೀಗ ಮತ್ತೆ ತೆಲುಗು ಕಿರುತೆರೆ ಕಡೆ ಮುಖ ಮಾಡಿದ್ದಾರೆ.

English summary
Bigg Boss Fame Bhoomi Shetty walk out from Majaa Bharatha Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X